ಜಿಯೋ ಫೋನ್ 2 ವನ್ನು ಫ್ಲ್ಯಾಶ್ ಸೇಲ್ ನಲ್ಲಿ ಖರೀದಿಸುವುದು ಹೇಗೆ?

By
|

ರಿಲಯನ್ಸ್ ಜಿಯೋ ತನ್ನ 4G VoLTE ನ ಸಕ್ಸಸರ್ ಫೀಚರ್ ಫೋನ್ ಜಿಯೋಫೋನ್ ನನ್ನು ಜುಲೈ ನಲ್ಲಿ ಈ ವರ್ಷ ಬಿಡುಗಡೆಗೊಳಿಸಿತ್ತು. ಅದನ್ನು ಜಿಯೋಫೋನ್ 2 ಎಂದು ನಾಮಕರಣ ಮಾಡಲಾಗಿತ್ತು.

ಜಿಯೋ ಫೋನ್ 2 ವನ್ನು ಫ್ಲ್ಯಾಶ್ ಸೇಲ್ ನಲ್ಲಿ ಖರೀದಿಸುವುದು ಹೇಗೆ?

ಕಂಪೆನಿಯ 41 ನೇ ವಾರ್ಷಿಕ ಮೀಟಿಂಗ್ ನಲ್ಲಿ ರಿಲಯನ್ಸ್ ಇಂಡಸ್ಟ್ರಿಯ ಚೇರ್ ಮೆನ್ ಆಗಿರುವ ಮುಖೇಶ್ ಅಂಬಾನಿ ಅವರು ಬಿಡುಗಡೆಗೊಳಿಸಿದ್ದರು. ಅದರ ಪ್ರಾರಂಭಿಕ ಬೆಲೆ 2,999 ರುಪಾಯಿಗೆ ನಿಗದಿ ಪಡಿಸಲಾಗಿದೆ. ಬ್ಲಾಕ್ ಬೆರ್ರಿ ಸ್ಟೈಲಿನ ಫಿಸಿಕಲ್ QWERTY ಕೀಪ್ಯಾಡ್ ನ್ನು ಇದು ಹೊಂದಿದೆ.

ಈಗ ಈ ಫೋನಿನ ಮೂರನೇ ಫ್ಲ್ಯಾಶ್ ಸೇಲ್ ಗೆ ದಿನಾಂಕ ನಿಗದಿಯಾಗಿದ್ದು ಅದು ಸೆಪ್ಟೆಂಬರ್ 6 ರಂದು ನಡೆಯಲಿದೆ. ಕೆಲವೇ ನಿಮಿಷಕ್ಕೆ ಡಿವೈಸ್ ಗಳು ಔಟ್ ಆಫ್ ಸ್ಟಾಕ್ ಆಗುವುದರಿಂದಾಗಿ ಫ್ಲ್ಯಾಶ್ ಸೇಲ್ ನಲ್ಲಿ ಮೊಬೈಲ್ ಖರೀದಿಸುವುದು ಒಂದು ಚಾಲೆಂಜಿಂಗ್ ಕೆಲಸವಾಗಿರುತ್ತದೆ. ಒಂದು ವೇಳೆ ನೀವೇನಾದರೂ ರಿಲಯನ್ಸ್ ಜಿಯೋ ಫೋನ್ 2 ವನ್ನು ಖರೀದಿಸಬೇಕು ಎಂದು ಪ್ಲಾನ್ ಮಾಡುತ್ತಿದ್ದರೆ, ಇಲ್ಲಿದೆ ನೋಡಿ ಕೆಲವು ಸರಳ ಸಲಹೆಗಳು :0


ಪ್ರಮುಖ ಅಗತ್ಯತೆಗಳು:

1.ನಿಮ್ಮ ಪಿಸಿಯಲ್ಲಿ ಅಂತರ್ಜಾಲ ಸಂಪರ್ಕ ಸರಿಯಾಗಿ ಇರಲಿ.

2.ಕಾರ್ಡ್ ಡೀಟೇಲ್ಸ್, ಅಡ್ರೆಸ್, ಪಿನ್ ಕೋಡ್ ಇತ್ಯಾದಿಗಳ ವಿವರಗಳನ್ನು ಸರಿಯಾಗಿ ಇಟ್ಟುಕೊಂಡಿರಿ.

3.ಆಟೋ ಫಿಲ್ ಎಕ್ಸ್ ಟೆನ್ಷನ್ ನ್ನು ಡೌನ್ ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ ಇಟ್ಟುಕೊಳ್ಳಿ ಇದು ವೇಗವಾಗಿ ಚೆಕ್ ಔಟ್ ಮಾಡಲು ನೆರವಾಗುತ್ತದೆ.



ಜಿಯೋ ವೆಬ್ ಸೈಟ್ ಬಳಸಿ ಹೇಗೆ ಮಾಡುವುದು:

1. ಸೇಲ್ ನಡೆಯುವ ದಿನ ಅಂದರೆ ಸೆಪ್ಟೆಂಬರ್ 6 ರಂದು ನಿಮ್ಮ ಪಿಸಿ ಮೂಲಕ 'www.jio.com’ಗೆ ತೆರಳಿ.

2. ಜಿಯೋ ಫೋನ್ 2 ಬ್ಯಾನರ್ ನಲ್ಲಿರುವ 'Get now’ ಬಟನ್ ನ್ನು ಕ್ಲಿಕ್ಕಿಸಿ.

3. ನಿಮ್ಮ ಫೋನ್ ನಂಬರ್ ನ್ನು ಎಂಟರ್ ಮಾಡಿ ಮತ್ತು 'Generate OTP’ಯನ್ನು ಕ್ಲಿಕ್ಕಿಸಿ

4. ಮುಂದಿನ ಹಂತಕ್ಕೆ ತೆರಳಲು OTPಯನ್ನು ಎಂಟರ್ ಮಾಡಿ.

5. ಆಟೋ ಫಿಲ್ ಎಕ್ಸ್ ಟೆನ್ಷನ್ ಬಳಸಿ ಎಲ್ಲಾ ಅಗತ್ಯ ವಿವರಗಳನ್ನು ಫಿಲ್ ಮಾಡಿ.

6. ಕ್ರೆಡಿಟ್ ಕಾರ್ಡ್ ಇಲ್ಲವೆ ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಇನ್ಯಾವುದೇ ಪೇಮೆಂಟ್ ಮೋಡ್ ಬಳಸಿ ಸಂಪೂರ್ಣ ಪೇಮೆಂಟ್ ಮಾಡಿ. (Rs 2,999)

7. ಒಮ್ಮೆ ಪೇಮೆಂಟ್ ಮಾಡಿ ಮುಗಿದ ನಂತರ, ನೀವು ನಮೂದಿಸಿದ ವಿಳಾಸಕ್ಕೆ ಜಿಯೋಫೋನ್ ಬಂದು ತಲುಪಲಿದೆ.



ಜಿಯೋ ಆಪ್ ಬಳಸಿ ಖರೀದಿಸುವುದು ಹೇಗೆ?

1. ನಿಮ್ಮ ಆಪ್ ಸ್ಟೋರ್ ಮೂಲಕ 'My Jio’ ಆಪ್ ನ್ನು ಡೌನ್ ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.

2.ಆಪ್ ನ್ನು ತೆರೆಯಿರಿ ಮತ್ತು ಜಿಯೋ ಫೋನ್ 2 ಬ್ಯಾನರ್ ನ್ನು ಟ್ಯಾಪ್ ಮಾಡಿ.

3. ಇದು ನಿಮ್ಮನ್ನು 'Jio.com’ ವೆಬ್ ಸೈಟ್ ಗೆ ರೀಡೈರೆಕ್ಟ್ ಮಾಡುತ್ತದೆ.

4. ಈಗ ನಿಮ್ಮ ಫೋನ್ ನಂಬರ್ ನ್ನು ಎಂಟರ್ ಮಾಡಿ ಮತ್ತು 'Generate OTP’ ಬಟನ್ ನ್ನು ಕ್ಲಿಕ್ಕಿಸಿ.

5. OTP ಯನ್ನು ಫಿಲ್ ಮಾಡಿ ಮತ್ತು 'Submit’ ಬಟನ್ ನ್ನು ಟ್ಯಾಪ್ ಮಾಡಿ.

6. ಈಗ ಶಿಪ್ಪಿಂಗ್ ಅಡ್ರೆಸ್ ನ್ನು ಎಂಟರ್ ಮಾಡಿ.

7. Rs 2,999 ನ್ನು ಡೆಬಿಟ್/ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಇತರೆ ಯಾವುದೇ ಪೇಮೆಂಟ್ ಮೆಥೆಡ್ ಮೂಲಕ ಪಾವತಿಸಿ.

8. ನಿಮ್ಮ ವಿಳಾಸಕ್ಕೆ ಫೋನ್ ತಲುಪುವವರೆಗೆ ಕಾಯಬೇಕು ಅಷ್ಟೇ.


ಆಫ್ ಲೈನ್ ಸ್ಟೋರ್ ಗಳಲ್ಲಿ ಖರೀದಿಸುವುದು ಹೇಗೆ?:

ಇದಿಷ್ಟೇ ಅಲ್ಲದೆ ಖರೀದಿಸುವ ಇಚ್ಛೆ ಉಳ್ಳವರು ಹತ್ತಿರದ ರಿಲಯನ್ಸ್ ಡಿಜಿಟಲ್ ಸ್ಟೋರ್ ಅಥವಾ ಜಿಯೋ ಸ್ಟೋರ್ ಗಳಿಗೆ ಭೇಟಿ ನೀಡಬಹುದು ಮತ್ತು ಸೇಲ್ ದಿನಾಂಕದಂದು ಸ್ಮಾರ್ಟ್ ಪೋನ್ ನ್ನು ಬುಕ್ ಮಾಡಲೂ ಬಹುದು. ಆದರೆ ನೀವಿಲ್ಲಿ ನಿಮ್ಮ ಆಧಾರ್ ಕಾರ್ಡ್ ವಿವರಣೆಯನ್ನು ವೆರಿಫಿಕೇಷನ್ ಗಾಗಿ ಒದಗಿಸಬೇಕಾಗುತ್ತದೆ.

Best Mobiles in India

English summary
How to buy JioPhone 2 during flash sale. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X