ಫೇಕ್ ನ್ಯೂಸ್‌ಗಳನ್ನು ಮಟ್ಟಹಾಕಲು ಸೋತಿದ್ದ ಫೇಸ್‌ಬುಕ್‌ನಿಂದ ಹೊಸ 'ಐಡಿಯಾ'!

|

ಸಮಾಜದ ಶಾಂತಿ ಕದಡಿಸುವ ಹಾಗೂ ಕೋಮು ಗಲಭೆಗೆ ಕಾರಣವಾಗುವ ಫೇಕ್ ನ್ಯೂಸ್‌ಗಳು ಹರಿದಾಡದಂತೆ ತಡೆಯಲು ಫೇಸ್‌ಬುಕ್ ಹೊಸ ಐಡಿಯಾದೊಂದಿಗೆ ಬಂದಿದೆ. ತನ್ನ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳದಿರುವಂತೆ ತಡೆಯಲು ಮುಂದಾಗಿರುವ ಫೇಸ್‌ಬುಕ್ ಆಕ್ಷೇಪಾರ್ಹ ಪೋಸ್ಟ್​ಗಳನ್ನು ಅಳಿಸಿ ಹಾಕಲು ನೌಕರರನ್ನು ಸೇರಿಸಿಕೊಳ್ಳಲು ಮುಂದಾಗಿದೆ.

ಅಮೆರಿಕಾದ ಚುನಾವಣೆ ವಿವಾದ, ಭಾರತದಲ್ಲಿ ಕೋಮು ಗಲಭೆ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಪೇಸ್‌ಬುಕ್‌ನಿಂದ ಹರಿದಾಡಿದ ಫೇಕ್‌ನ್ಯೂಸ್‌ನಿಂದ ಆದಂತಹ ತೊಂದರೆಗಳನ್ನು ತಪ್ಪಿಸಲು ಫೇಸ್‌ಬುಕ್ ಪ್ರಯತ್ನ ಮಾಡುತ್ತಿದೆ.​ ಕಂಟೆಂಟ್​ ಮಾಡರೇಟರ್​ಗಳನ್ನು ನೇಮಿಸಿಕೊಳ್ಳುವ ಮೂಲಕ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಕೆಲಸಕ್ಕೆ ಫೇಸ್‌ಬುಕ್ ಕೈ ಹಾಕಿದೆ.

ಫೇಕ್ ನ್ಯೂಸ್‌ಗಳನ್ನು ಮಟ್ಟಹಾಕಲು ಸೋತಿದ್ದ ಫೇಸ್‌ಬುಕ್‌ನಿಂದ ಹೊಸ 'ಐಡಿಯಾ'!

ಯಂತ್ರಗಳಿಂದಲೇ ಎಲ್ಲವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿರುವ ಫೇಸ್​ಬುಕ್, ಈಗ ಹೊಸದೊಂದು ಆಲೋಚನೆಯನ್ನು ಹೊತ್ತು ಬಂದಿದ್ದು, ಹಾಗಾದರೆ, ಫೇಕ್ ನ್ಯೂಸ್‌ಗಳು ಹರಿದಾಡದಂತೆ ತಡೆಯಲು ಫೇಸ್‌ಬುಕ್ ತೆಗೆದುಕೊಳ್ಳುತ್ತಿರುವ ನೂತನ ಕ್ರಮ ಹೇಗಿದೆ? ಸುಳ್ಳು ಸುದ್ದಿಗಳನ್ನು ತಡೆಯಲು ಸಾಧ್ಯವೇ ಎಂಬುದನ್ನು ಮುಂದೆ ಓದಿ ತಿಳಿಯಿರಿ.

10 ಸಾವಿರ ನೌಕರರ ನೇಮಕ!

10 ಸಾವಿರ ನೌಕರರ ನೇಮಕ!

ಸುಳ್ಳು ಸುದ್ದಿಗಳು, ಮಾನಹಾನಿಯಾಗುವ ಸಂದೇಶಗಳು ಹಾಗೂ ಆಕ್ಷೇಪಾರ್ಹ ಪೋಸ್ಟ್​ಗಳನ್ನು ಗುರುತಿಸಿ, ಅವುಗಳನ್ನು ನಿಯಂತ್ರಿಸಲು ಸಲುವಾಗಿ ಇದೇ ಮೊದಲ ಬಾರಿಗೆ 10 ಸಾವಿರ ನೌಕರರನ್ನು ನೇಮಿಸಲು ಮುಂದಾಗಿದೆ ಎನ್ನುವ ಸುದ್ದಿ ಇದೀಗ ಹೊರಬಿದ್ದಿದೆ. ಇಂತಹ ಒಂದು ದೊಡ್ಡ ಯೋಜನೆಗೆ ಫೇಸ್‌ಬುಕ್ ಇದೇ ಮೊದಲ ಬಾರಿಗೆ ಕೈ ಹಾಕಿದೆ.

ಇದು ಹೇಗೆ ಸಾಧ್ಯ?

ಇದು ಹೇಗೆ ಸಾಧ್ಯ?

ಫೇಸ್‌ಬುಕ್ ಕಂಟೆಂಟ್​ ಮಾಡರೇಟರ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ನೇರವಾಗಿ ಮತ್ತು ಗುತ್ತಿಗೆ ಆಧಾರದ ಮೇಲೆ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುತ್ತಿದೆ. ಅಶ್ಲೀಲ, ಭಯೋತ್ಪಾದನೆ, ದೌರ್ಜನ್ಯ, ರಕ್ತಪಾತ, ಆತ್ಮಹತ್ಯೆಯ ಲೈವ್​ ವಿಡಿಯೋ ಮೊಲಾದವುಗಳನ್ನು ಪ್ರಕಟವಾಗದಂತೆ ಜೊತೆಗೆ ಸುಳ್ಳು ಸುದ್ದಿಗಳು ಹರಿದಾಡದಂತೆ ಮಾಡುವುದು ಇವರ ಕೆಲಸವಾಗಿದೆ.

ಉದ್ಯೋಗಾವಕಾಶ ಸೃಷ್ಟಿ

ಉದ್ಯೋಗಾವಕಾಶ ಸೃಷ್ಟಿ

ಸಾವಿರಾರು ನೌಕರರನ್ನು ನೇಮಿಸಿಕೊಳ್ಳುವ ಸಲುವಾಗಿ ಜೆನ್​ಪ್ಯಾಕ್ಟ್​ ಹೆಸರಿನ ಕಂಪೆನಿಯು ಈ ವರ್ಷ ಫೇಸ್​ಬುಕ್​ಗೆ ಕಂಟೆಂಟ್​ ಮ್ಯಾನೇಜ್ಮೇಂಟ್​ ಒದಗಿಸುವ ಗುತ್ತಿಗೆ ಪಡೆದಿದೆ. ಪ್ರಾದೇಶಿಕ ಭಾಷೆ ಬಲ್ಲವರಿಗೂ ಈಗ ಉದ್ಯೋಗಾವಕಾಶ ಸೃಷ್ಟಿಯಾಗಿದ್ದು, 50ಕ್ಕೂ ಹೆಚ್ಚು ಭಾಷೆಗಳಲ್ಲಿ ಉದ್ಯೋಗವಕಾಶಗಳನ್ನು ಫೇಸ್‌ಬುಕ್ ತೆರೆದಿದೆ.

ಸ್ವಚ್ಛತಾ ಕಾರ್ಯ ಚುರುಕು

ಸ್ವಚ್ಛತಾ ಕಾರ್ಯ ಚುರುಕು

ಸಾವಿರಾರು ನೌಕರರನ್ನು ನೇಮಿಸಿಕೊಳ್ಳುವ ಸುದ್ದಿಯ ಜೊತೆಯಲ್ಲಿಯೇ, ಫೇಸ್​ಬುಕ್​ ಈಗಾಗಲೇ 108 ಕೋಟಿಗೂ ಅಧಿಕ ಪೋಸ್ಟ್​ಗಳ ವಿರುದ್ಧ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ನಕಲಿ ಸುದ್ದಿಗಳನ್ನು ಹಬ್ಬಿಸುವ ಕೆಲಸಕ್ಕೆ ಕೈ ಹಾಕಿದ್ದ ಪೋಸ್ಟ್‌ಗಳನ್ನು ಬಹುತೇಕ ಅಳಿಸಿ ಹಾಕಿದೆ. ಇದರಲ್ಲಿ ಬರೋಬ್ಬರಿ 58 ಕೋಟಿ ನಕಲಿ ಖಾತೆಗಳೂ ಇವೆ ಎನ್ನಲಾಗಿದೆ.

ಫೇಸ್‌ಬುಕ್ ಅಧಿಕಾರಿ ಹೇಳಿದ್ದೇನು?

ಫೇಸ್‌ಬುಕ್ ಅಧಿಕಾರಿ ಹೇಳಿದ್ದೇನು?

ಫೇಸ್​ಬುಕ್​ನಲ್ಲಿ ಅವಹೆಳನಕಾರಿ ಹೇಳಿಕೆಗಳು, ಮಾನಹಾನಿ ಪೋಸ್ಟ್​ಗಳು ಹರಡುವುದು ಸಹಿಸಲಸಾಧ್ಯವಾದ ವಿಚಾರ. ಇಂತಹ ನಕಲಿ ಸುದ್ದಿಗಳನ್ನು ಹಬ್ಬಿಸುವುದು ಕಾನೂನುಬಾಹಿರ. ಇಲ್ಲಿ ಯಾವುದೇ ರೀತಿಯ ಸೆನ್ಸಾರ್​ ಇಲ್ಲದಿರುವುದು ಸಹ ಮಾರಕವಾಗಿದೆ ಎಂದು ಫೇಸ್​ಬುಕ್​ನ ಗ್ಲೋಬಲ್​ ಪಾಲಿಸಿ ಮ್ಯಾನೇಜ್ಮೆಂಟ್​ ಮುಖ್ಯಸ್ಥೆ ಮೋನಿಕಾ ಬಿಕರ್ಟ್​ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳನ್ನು ತಡೆಯಲು ಸಾಧ್ಯವೇ?

ಸುಳ್ಳು ಸುದ್ದಿಗಳನ್ನು ತಡೆಯಲು ಸಾಧ್ಯವೇ?

ಫೇಸ್​ಬುಕ್ ವೇದಿಕೆಯಲ್ಲಿ ಭಾರೀ ಪ್ರಮಾಣದಲ್ಲಿ ಸುಳ್ಳು ಸುದ್ದಿ ಹರಿದಾಡುವುದನ್ನು ಗಂಭೀರವಾಗಿ ಪರಿಗಣಿಸಿರುವ ಫೇಸ್​ಬುಕ್​, ಸ್ಥಳೀಯರನ್ನು ನೇಮಿಸಿಕೊಳ್ಳುವ ಮೂಲಕ ಈ ಸಮಸ್ಯೆಗೆ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇದು ಸುಳ್ಳು ಸುದ್ದಿಗಳನ್ನು ತಡೆಯಬಹುದಾದ ಸಾಧ್ಯತೆಗಳನ್ನು ಹೊಂದಿದ್ದರೂ, 100 ರಷ್ಟು ಸಮಸ್ಯೆ ಪರಿಹಾರ ಅಸಾಧ್ಯ ಎನ್ನುತ್ತಿವೆ ವರದಿಗಳು.

Best Mobiles in India

English summary
Facebook for the first time on Tuesday released the internal guidelines it uses to moderate content on the platform. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X