ಗೂಗಲ್ ನಿಮ್ಮ ಜಾಡು ಹಿಡಿಯುವುದನ್ನು ತಪ್ಪಿಸುವುದು ಹೇಗೆ..?

By GizBot Bureau
|

ನೀವು ಲೋಕೇಷನ್ ಹಿಸ್ಟರಿಯನ್ನು ಆಫ್ ಮಾಡಿದ್ದರೂ ಸಹ ಗೂಗಲ್ ನಿಮ್ಮ ಲೋಕೇಷನ್ ಗಳನ್ನು ಸೇವ್ ಮಾಡಿಕೊಳ್ಳುತ್ತಿದೆ. ಇದನ್ನು ನೀವು ನಿರ್ಭಂದಿಸಲು ಸಾಧ್ಯವಾಗುವದಿಲ್ಲ. ಈ ಹಿನ್ನಲೆಯಲ್ಲಿ ನಿಮ್ಮ ಯಾವುದೇ ಡೇಟಾವನ್ನು ಗೂಗಲ್ ಸ್ಟೋರ್ ಮಾಡಿಕೊಳ್ಳದ ಹಾಗೇ ಮಾಡುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಗೂಗಲ್ ನಿಮ್ಮ ಲೋಕೆಷನ್ ಅನ್ನು ಜಿಯೋ ಲಾಜಿಲಕ್ ಮ್ಯಾಪ್, ಸೆಲ್ ಫೋನ್ ಟವರ್ ಸೇರಿದಂತೆ ವಿವಿಧ ಮೂಲಗಳಿಂದ ಸಂಗ್ರಹಿಸುತ್ತದೆ ಎನ್ನಲಾಗಿದೆ. ಇದರಿಂದಾಗಿ ನೀವು ಎಲ್ಲಿದ್ದೀರಾ ಎಂಬುದನ್ನು ಗೂಗಲ್ ತಿಳಿದುಕೊಳ್ಳುತ್ತದೆ.

 ಗೂಗಲ್ ನಿಮ್ಮ ಜಾಡು ಹಿಡಿಯುವುದನ್ನು ತಪ್ಪಿಸುವುದು ಹೇಗೆ..?

ಟ್ರಾಕಿಂಗ್ ತಡೆಯುವುದು ಹೇಗೆ..?

ಇದಕ್ಕಾಗಿ ನೀವು ಮೊದಲಿಗೆ ನಿಮ್ಮ ಬ್ರೌಸರ್ ನಲ್ಲಿ myactivity.google.comಗೆ ಲಾಗ್ ಇನ್ ಆಗಿರಿ. ನಂತರದಲ್ಲಿ ನೀವು ಮೆನು ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರದಲ್ಲಿ ಆಕ್ಟಿವಿಟಿ ಕಂಟ್ರೋಲ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರದಲ್ಲಿ ವೆಬ್ ಮತ್ತು ಆಪ್ ಆಕ್ಟಿವಿಟಿಯ ಮೇಲೆ ಹಾಗೂ ಲೋಕೆಷನ್ ಹಿಸ್ಟರಿ ಆಯ್ಕೆಯ ಮೇಲೆ ಕಿಕ್ ಮಾಡಿ. ಇದರಿಂದಾಗಿ ನಿಮ್ಮ ಗೂಗಲ್ ಆಕೌಂಟ್ ನಿಮ್ಮ ಮಾಹಿತಿಯನ್ನು ಸ್ಟೋರ್ ಮಾಡಿಕೊಳ್ಳುವುದಿಲ್ಲ.

ಮಾದರಿಯಲ್ಲಿ ನೀವು ಸೆಟ್ಟಿಂಗ್ಸ್ ಅನ್ನು ಬದಲಾವಣೆ ಮಾಡಿದ ಸಂದರ್ಭದಲ್ಲಿ ಕೆಲವು ಸೇವೆಗಳು ವರ್ಕ್ ಆಗುವುದಿಲ್ಲ ಎನ್ನಲಾಗಿದೆ. ಉದಾಹರಣೆಗೆ ಗೂಗಲ್ ಅಸಿಸ್ಟೆಂಟ್, ಡಿಜಿಟಲ್ ಕನ್ಗೆರಿ, ಗೂಗಲ್ ಹೋಮ್ ಸ್ಮಾರ್ಟ್ ಸ್ಪೀಕರ್ ಗಳು ವರ್ಕ್ ಆಗುವುದಿಲ್ಲ ಎನ್ನಲಾಗಿದೆ.

iOSಗಳಲ್ಲಿ ಮಾಡಿಕೊಳ್ಳುವುದು ಹೇಗೆ.?

ನೀವು ಗೂಗಲ್ ಮ್ಯಾಪ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದರೆ ಇದಕ್ಕದಾಗಿ ನೀವು ಆಪ್ ನಲ್ಲಿಯೇ ಬದಲಾವಣೆಯನ್ನು ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಸೆಟ್ಟಿಂಗ್ಸ್ ನಲ್ಲಿ ಹೋಗಿ ಪ್ರೈವಸಿ, ಲೋಕೇಷನ್ ಸರ್ವಿಸ್ ಮೇಲೆ ಕ್ಲಿಕ್ ಮಾಡುವ ಮೂಲಕ ಬದಲಾವಣೆಯನ್ನು ಮಾಡಿಕೊಳ್ಳಬಹುದಾಗಿದೆ.

ಸಫಾರಿ ಬ್ರೌಸರ್ ಅನು ಬಳಕೆ ಮಾಡಿಕೊಳ್ಳುತ್ತಿದ್ದರೇ ಇದರಲ್ಲಿಯೂ ನಿಮ್ಮ ಮಾಹಿತಿ ಸ್ಟೋರ್ ಆಗಬಾರದು ಎನ್ನುವುದಾದರೆ ಮೊದಲಿಗೆ ಸೆಟ್ಟಿಂಗ್ಸ್ನಲ್ಲಿ ಸಫಾರಿ ಮತ್ತು ಸರ್ಚ್ ಇಂಜಿನ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ. ಇದಕ್ಕಾಗಿ ಸೆಟ್ಟಿಂಗ್ಸ್ ನಲ್ಲಿ ಪ್ರೈವಸಿಯಲ್ಲಿ ಲೋಕೆಷನ್ ಸರ್ವೀಸ್ ಮೇಲೆ ಕ್ಲಿಕ್ ಮಾಡಿ. ಇದರಲ್ಲಿ ನೆವರ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.

ಗೂಗಲ್ ಮ್ಯಾಪ್ಸ್ ಮತ್ತು ಆಪಲ್ ಮ್ಯಾಪ್ಸ್ ನಲ್ಲಿ ಲೋಕೇಷನ್ ಅನ್ನು ಆಫ್ ಮಾಡಲು ಸೆಟ್ಟಿಂಗ್ಸ್ ಹೋಗಿ ಪ್ರೈವಸಿಯಲ್ಲಿ ಲೋಕೇಷನ್ ಸರ್ವೀಸ್ ಮೇಲೆ ಕ್ಲಿಕ್ ಮಾಡಿರಿ. ಇದರಿಂದಾಗಿ ಎಲ್ಲಾ ಸ್ಟೋರೆಜ್ ಗಳನ್ನು ಕಡಿತ ಮಾಡಬಹುದಾಗಿದೆ.

ಆಂಡ್ರಾಯ್ಡ್ ನಲ್ಲಿ ಹೇಗೆ..?

ಸೆಟ್ಟಿಂಗ್ಸ್ ನಲ್ಲಿ ಹೋಗಿ ಸೆಕ್ಯೂಟರಿ ಮತ್ತು ಲೋಕೇನಷ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಸ್ಕ್ರಲ್ ಡೌನ್ ಮಾಡಿದರೆ ಪ್ರೈವಸಿ ಕಾಣಿಸಿಕೊಳ್ಳಲಿದೆ. ಇದರಲ್ಲಿ ಲೋಕೇಷನ್ ಮೇಲೆ ಎಂಟರ್ ಮಾಡಿರಿ. ಆದರೆ ಆಂಡ್ರಾಯ್ಡ್ ನಲ್ಲಿ ಈ ಸೇವೆಗಳನ್ನು ಆಫ್ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ. ಆದರೆ ಇದರಲ್ಲಿ ವೇನ್ ಯೂಸಿಂಗ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬುದಾಗಿದೆ.

Best Mobiles in India

English summary
ನೀವು ಲೋಕೇಷನ್ ಹಿಸ್ಟರಿಯನ್ನು ಆಫ್ ಮಾಡಿದ್ದರೂ ಸಹ ಗೂಗಲ್ ನಿಮ್ಮ ಲೋಕೇಷನ್ ಗಳನ್ನು ಸೇವ್ ಮಾಡಿಕೊಳ್ಳುತ್ತಿದೆ. ಇದನ್ನು ನೀವು ನಿರ್ಭಂದಿಸಲು ಸಾಧ್ಯವಾಗುವದಿಲ್ಲ. ಈ ಹಿನ್ನಲೆಯಲ್ಲಿ ನಿಮ್ಮ ಯಾವುದೇ ಡೇಟಾವನ್ನು ಗೂಗಲ್ ಸ್ಟೋರ್ ಮಾಡಿಕೊಳ್ಳದ ಹಾಗೇ ಮಾಡುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X