ಅಕೌಂಟ್ ಹ್ಯಾಕ್ ಆದರೆ ಬ್ಯಾಂಕ್‌ ಹೊಣೆ ಹೋರುತ್ತಾ..? ಆರ್‌ಬಿಐ ನಿಯಮ ಏನೇಳುತ್ತೆ..?

By Lekhaka
|

ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯು ಸೈಬರ್ ಕ್ರೈಮ್ ಅಟ್ಯಾಕ್ ಗೆ ಬಲಿಯಾದರೆ ಅಂದರೆ ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಯಾವುದೇ ವ್ಯಕ್ತಿ ಪಾಸ್ ವರ್ಡ್ ಕದ್ದು ಆನ್ ಲೈನ್ ಮೂಲಕ ಕದ್ದರೆ ಅದಕ್ಕೆ ಯಾರು ಹೊಣೆ?

How to pay tax online in simple steps - GIZBOT KANNADA

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ಇಂತಹ ಅವ್ಯವಹಾರದ ಸಂದರ್ಬದಲ್ಲಿ ಹೊಣೆಗಾರಿಕೆ ಯಾರದ್ದು ಎಂಬ ಬಗೆಗಿನ ವ್ಯಾಪ್ತಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕಳೆದ ವರ್ಷವೇ ಒಂದು ನಿಯಮಾವಳಿಗಳನ್ನು ಹೊರಡಿಸಿತ್ತು. ಆ ಮೂಲಕ ಡಿಜಿಟಲ್ ಅವ್ಯವಹಾರ ಹೆಚ್ಚುವ ಘಟನೆಗಳ ವಿರುದ್ಧ ನಾಗರೀಕ ಸುರಕ್ಷತೆಯನ್ನು ಅದು ಸ್ಥಾಪಿಸಿತ್ತು.

ಅಕೌಂಟ್ ಹ್ಯಾಕ್ ಆದರೆ ಬ್ಯಾಂಕ್‌ ಹೊಣೆ ಹೋರುತ್ತಾ..? ಆರ್‌ಬಿಐ ನಿಯಮ ಏನೇಳುತ್ತೆ..?


2017-18 ರ ವಾರ್ಷಿಕ ವರದಿಯ ಪ್ರಕಾರ, ಆರ್ ಬಿಐ ಅನಧಿಕೃತವಾಗ ಬ್ಯಾಂಕಿಂಕ್ ಟ್ರಾನ್ಸ್ಯಾಕ್ಷನ್ ಕುರಿತಂತೆ ಗ್ರಾಹಕರ ಹೊಣೆಗಾರಿಕೆಯನ್ನು ಸೀಮಿತಗೊಳಿಸುವ ಬಗ್ಗೆ ಕೆಲವು ಸೂಚನೆಯನ್ನು ನೀಡಿದೆ.

ಅದರಲ್ಲಿರುವ ಪ್ರಮುಖ ಅಂಶಗಳು ಇವು:

. ಶೂನ್ಯ ಹೊಣೆಗಾರಿಕೆ

ಗ್ರಾಹಕನ ನಿರ್ಲಕ್ಷದಿಂದಾಗಿ ಒಂದು ವೇಳೆ ನಷ್ಟ ಉಂಟಾಗಿದ್ದರೆ ಆಗ ಗ್ರಾಹಕನೇ ಸಂಪೂರ್ಣ ಹೊಣೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ.

. ಸೀಮಿತ ಹೊಣೆಗಾರಿಕೆ

ಒಂದು ವೇಳೆ ಈ ಸಮಸ್ಯೆ ಬ್ಯಾಂಕ್ ಕಡೆಯಿಂದ ಆಗಿದ್ದಲ್ಲಿ ಗ್ರಾಹಕ ಯಾವುದೇ ನಷ್ಟವನ್ನು ಅನುಭವಿಸಬೇಕಾಗಿಲ್ಲ ಮತ್ತು ಒಂದು ವೇಳೆ ಬ್ಯಾಂಕ್ ಕಡೆಯಿಂದಲೂ ಈ ಸಮಸ್ಯೆ ತಲೆದೋರದೆ, ಗ್ರಾಹಕನ ಕಡೆಯಿಂದಲೂ ಅಲ್ಲದೆ, ಸಮಸ್ಯೆ ಸಿಸ್ಟಂನಿಂದ ಆಗಿದ್ದರೆ ಗ್ರಾಹಕ ಅದನ್ನು ಬ್ಯಾಂಕಿಗೆ 3 ದಿನದ ಬ್ಯಾಂಕ್ ವರ್ಕಿಂಗ್ ದಿನಗಳಲ್ಲಿ ತಿಳಿಸಬೇಕಾಗುತ್ತದೆ ಮತ್ತು ಯಾವ ರೀತಿಯ ಅನಧಿಕೃತ ಟ್ರಾನ್ಸ್ಯಾಕ್ಷನ್ ನಡೆದಿದೆ ಎಂಬುದನ್ನು ವಿವರಿಸಬೇಕಾಗುತ್ತದೆ.

ಅಕೌಂಟ್ ಹ್ಯಾಕ್ ಆದರೆ ಬ್ಯಾಂಕ್‌ ಹೊಣೆ ಹೋರುತ್ತಾ..? ಆರ್‌ಬಿಐ ನಿಯಮ ಏನೇಳುತ್ತೆ..?


. ಬೋರ್ಡ್ ಅನುಮೋದನೆ ನೀತಿಯಂತೆ ಹೊಣೆಗಾರಿಕೆ

ಒಂದು ವೇಳೆ ಅನಧಿಕೃತ ವ್ಯವಹಾರದ ಬಗ್ಗೆ ಗ್ರಾಹಕ 7 ವರ್ಕಿಂಗ್ ದಿನಗಳ ಒಳಗೆ ವರದಿ ಮಾಡಿದಲ್ಲಿ,ಬ್ಯಾಂಕಿನ ಬೋರ್ಡ್ ಅಂಗೃಕೃತ ನೀತಿಯಂತೆ ಗ್ರಾಹಕರ ಬಾಧ್ಯತೆಯನ್ನು ನಿರ್ಧರಿಸಲಾಗುತ್ತದೆ.ಗ್ರಾಹಕರು ತಿಳಿಸಿದ ದಿನಾಂಕದಿಂದ, ಗ್ರಾಹಕರ ಖಾತೆಗೆ ಅನಧಿಕೃತ ಎಲೆಕ್ಟ್ರಾನಿಕ್ ವ್ಯವಹಾರವು ನಡೆದ ದಿನಗಳಿಂದ ಹಿಡಿದು 10 ದಿನಗಳಲ್ಲಿ ಬ್ಯಾಂಕ್ ಕ್ರೆಡಿಟ್ ನ್ನು ನೀಡಬೇಕಾಗುತ್ತದೆ.ಗ್ರಾಹಕ ನೀಡಿದ ದೂರನ್ನು ಬ್ಯಾಂಕ್ ಸ್ವೀಕರಿಸಿ ಅದನ್ನು ಪರಿಹರಿಸಬೇಕು ಮತ್ತು ಗ್ರಾಹಕನಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು.

Best Mobiles in India

English summary
How much is the bank liable if your account gets hacked? Here's what RBI says. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X