Subscribe to Gizbot

ಯಾರಿಗೂ ತಿಳಿದಿಲ್ಲ: ನಂಬರ್ ಸೇವ್ ಮಾಡದೆ ವಾಟ್ಸ್‌ಆಪ್ ಚಾಟ್ ಮಾಡುವುದು ಹೇಗೆ..?!

Written By:

ಸ್ಮಾರ್ಟ್‌ಫೋನಿನಲ್ಲಿ ಇರಲೇ ಬೇಕಾದ ಆಪ್ ಎನ್ನುವಷ್ಟು ಖ್ಯಾತಿಯನ್ನು ಗಳಿಸಿಕೊಂಡರುವ ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್, ಸುಮಾರು ಒಂದು ಬಿಲಿಯನ್ ಬಳಕೆದಾರರನ್ನು ಹೊಂದಿದೆ. ಭಾರತದಲ್ಲಿಯೇ ಸುಮಾರು 250 ಮಿಲಿಯನ್ ಬಳಕೆದಾರರಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ದೇಶದಲ್ಲಿ ಪೇಮೆಂಟ್ ಸೇವೆಯನ್ನು ಆರಂಭಿಸಲು ವಾಟ್ಸ್‌ಆಪ್ ಮುಂದಾಗಿದೆ.

ಯಾರಿಗೂ ತಿಳಿದಿಲ್ಲ: ನಂಬರ್ ಸೇವ್ ಮಾಡದೆ ವಾಟ್ಸ್‌ಆಪ್ ಚಾಟ್ ಮಾಡುವುದು ಹೇಗೆ..?!

ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ನಲ್ಲಿ ನೀವು ಯಾರೊಂದಿಗಾದರು ಚಾಟ್ ಮಾಡಬೇಕಾದರೆ ಅವರ ನಂಬರ್ ಅನ್ನು ಸೇವ್ ಮಾಡಿಕೊಳ್ಳಲೇಬೇಕಾಗಿದೆ. ನಂಬರ್ ಇಲ್ಲವಾದರೆ ಚಾಟ್ ಮಾಡಲು ಸಾಧ್ಯವಿಲ್ಲ ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ನಂಬರ್ ಸೇವ್ ಮಾಡಿಕೊಳ್ಳದೇ ಮೆಸೇಜ್ ಕಳುಹಿಸುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 01:

ಹಂತ 01:

ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಬ್ರೌಸರ್ ಅನ್ನು ಓಪನ್ ಮಾಡಿರಿ. ಮಾಡಿದ ನಂತರದಲ್ಲಿ ಈ ಕೆಳಗಿನ ಲಿಂಕ್ ಅನ್ನು ಸರ್ಚ್ ಮಾಡಿ.

ಹಂತ 02:

ಹಂತ 02:

ಬ್ರೌಸರ್ ನಲ್ಲಿ https://api.whatsapp.com/send?phone=XXXXXXXXXXX ಎಂದು ಹುಡುಕಿ (XXX ಜಾಗದಲ್ಲಿ ನೀವು ಚಾಟ್ ಮಾಡಬೇಕಾದ ಫೋನ್ ನಂಬರ್ ದಾಖಲಿಸಿ)

ಹಂತ 03:

ಹಂತ 03:

ಉದಾ: ನೀವು ಭಾರತೀಯ ನಂಬರ್ ನೊಂದಿಗೆ ಚಾಟ್ ಮಾಡುವವರಾದರೆ https://api.whatsapp.com/send?phone=91755501234 ಎಂದು ಟೈಪ್ ಮಾಡಿ.

ಹಂತ 04:

ಹಂತ 04:

ಇದಾದ ನಂತರದಲ್ಲಿ ಹೊಸದೊಂದು ವಾಟ್ಸ್‌ಆಪ್ ವಿಂಡೋ ಕಾಣಿಸಿಕೊಳ್ಳಲಿದ್ದು, ಅಲ್ಲಿ ಸೆಂಡ್ ಮೇಸೆಜ್ ಎನ್ನುವ ಆಯ್ಕೆಯೊಂದು ದೊರೆಯಲಿದೆ. ಅಲ್ಲಿ ಕ್ಲಿಕ್ ಮಾಡಿ.

ಹಂತ 05:

ಹಂತ 05:

ಇದಾದ ನಂತರದಲ್ಲಿ ಸ್ಟ್ರಾಟ್ ಚಾಟಿಂಗ್ ಎನ್ನುವ ವಿಂಡೋವೊಂದು ಕಾಣಿಸಿಕೊಳ್ಳಲಿದ್ದು, ನೀವು ಎಂಟ್ರಿ ಮಾಡಿದ ನಂಬರ್ ಅನ್ನು ಸೇವ್ ಮಾಡದೆ ಚಾಟ್ ಮಾಡಲು ಅವಕಾಶ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
How to send a WhatsApp chat without saving the contact. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot