ಪೇರೆಂಟಲ್ ಕಂಟ್ರೋಲ್ ನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಅಳವಡಿಸಿಕೊಳ್ಳುವುದು ಹೇಗೆ?

|

ಸ್ಮಾರ್ಟ್ ಫೋನ್ ಗಳು ನಮ್ಮ ಜೀವನದ ಗತಿಯನ್ನು ನಿರ್ಧರಿಸುವ ವಸ್ತುಗಳಾಗಿ ಬಿಟ್ಟಿವೆ. ಅದು ನಮ್ಮ ದೈನಂದಿನ ಜೀವನದ ಬಹುಮುಖ್ಯ ಅಂಗವಾಗಿ ಪರಿಣಮಿಸಿದೆ. ದಿನನಿತ್ಯದ ಹಲವು ಕೆಲಸ ಕಾರ್ಯಗಳಿಗೆ ನಾವು ಸ್ಮಾರ್ಟ್ ಫೋನ್ ಗಳನ್ನು ಅವಲಂಬಿಸಿ ಬಿಟ್ಟಿದ್ದೇವೆ. ಅದಿಲ್ಲದೆ ಇರಲು ಸಾಧ್ಯವಿಲ್ಲ ಎಂಬಂತ ಪರಿಸ್ಥಿತಿ ಹಲವರದ್ದು. ಯುವ ಪೀಳಿಗೆಯ ಮಂದಿ ಮತ್ತು ಮಕ್ಕಳು ಸ್ಮಾರ್ಟ್ ಫೋನ್ ಗಳಲ್ಲಿ ಬೇರೆಬೇರೆ ಅಪ್ಲಿಕೇಷನ್ ಗಳನ್ನು ಓಪನ್ ಮಾಡುವುದು ಮತ್ತು ವಿಚಾರಗಳನ್ನು ತಿಳಿದುಕೊಳ್ಳಲು ಗಂಟೆಗಟ್ಟಲೆ ಸ್ಮಾರ್ಟ್ ಫೋನ್ ಹಿಡಿದು ಕುಳಿತು ಸಂತೋಷ ಪಡುತ್ತಾರೆ. ಆದರೆ ಒಬ್ಬ ಜವಾಬ್ದಾರಿ ಇರುವ ಪೋಷಕರು, ಆನ್ ಲೈನ್ ನಲ್ಲಿ ಎದುರಾಗಬಹುದಾದ ಸಂಕಷ್ಟಗಳ ಬಗ್ಗೆ ಅರಿತಿರಬೇಕು ಮತ್ತು ಮಕ್ಕಳು ಆನ್ ಲೈನ್ ಇರುವಾಗ ಆಗಬಹುದಾದ ತೊಂದರೆಗಳ ಬಗ್ಗೆ ಅವರಿಗೆ ಸರಿಯಾದ ಅರಿವು ಮೂಡಿಸಬೇಕು.

ಪೇರೆಂಟಲ್ ಕಂಟ್ರೋಲ್ ನ್ನು ಸ್ಮಾರ್ಟ್ ಫೋನ್ ನಲ್ಲಿ ಅಳವಡಿಸಿಕೊಳ್ಳುವುದು ಹೇಗೆ?


ವೇಗವಾಗಿ ಬೆಳೆಯುತ್ತಿರುವ ಟೆಕ್ನಾಲಜಿಯಲ್ಲಿ, ನೀವು ನಿಮ್ಮ ಮಕ್ಕಳು ಸ್ಮಾರ್ಟ್ ಫೋನ್ ಬಳಸಿ ಇಂಟರ್ ನೆಟ್ ಬಳಕೆ ಮಾಡುವಾಗ ಹಿಡಿತದಲ್ಲಿಡಬಹುದಾದ ಕೆಲವು ಅನುಕೂಲಕರವಾದ ಆಯ್ಕೆಗಳಿವೆ. ಆಂಡ್ರಾಯ್ಡ್ OS ನಲ್ಲಿ “ parental control” ಅನ್ನುವ ಆಯ್ಕೆಯು ಇನ್ ಬಿಲ್ಡ್ ಆಗಿಯೇ ಬರುತ್ತದೆ. “ parental control” ಪೋಷಕರು ನಿಯಂತ್ರಿಸಬಹುದಾದ ಕೆಲವು ಆಯ್ಕೆಗಳು. ಈ ಮೂಲಕ ನಿಮ್ಮ ಮಗು ಯಾವುದೇ ಸಮಸ್ಯೆಯನ್ನು ಸ್ಮಾರ್ಟ್ ಫೋನ್ ಬಳಸಿ ತಂದೊಡ್ಡದಿರುವಂತೆ ಕಾಪಾಡಿಕೊಳ್ಳಬಹುದು.

ಆಂಡ್ರಾಯ್ಡ್ ಫೋನ್ ಗಳಲ್ಲಿ “ parental control” ನ್ನು ಹೇಗೆ ಸೆಟ್ಟಿಂಗ್ ಮಾಡಬೇಕು ಎಂಬ ಬಗ್ಗೆ ಸಂಪೂರ್ಣ ವಿವರ ಇದೆ. ಮುಂದೆ ಓದಿ..

• . ಹಂತ 1 – ನಿಮ್ಮ ಮಗುವಿನ ಸ್ಮಾರ್ಟ್ ಫೋನ್ ಬಳಕೆಯನ್ನು ಹಿಡಿತದಲ್ಲಿಡಲು, ಮೊದಲು ಮಾಡಬೇಕಾಗಿರುವುದು ಒಂದು ಯುಜರ್ ಅಕೌಂಟ್ ನ್ನು ಆಕೆಯ ಅಥವಾ ಆತನ ಹೆಸರಿನಲ್ಲಿ ತೆರೆಯಬೇಕು. ಅದಕ್ಕಾಗಿ ಸೆಟ್ಟಿಂಗ್ಸ್ ಮೆನುವಿಗೆ ತೆರಳಿ

• ಹಂತ 2- ನಂತರ ಕೆಳಗೆ “User and Accounts” ಅನ್ನುವ ಆಯ್ಕೆ ಇರುತ್ತೆ. ಅದನ್ನು ಒತ್ತಿ ಮತ್ತು ಅದರಲ್ಲಿ “Add User” ಆಯ್ಕೆಯನ್ನು ಟ್ಯಾಪ್ ಮಾಡಿ.

• ಹಂತ 3 - ಹೊಸ ಅಕೌಂಟ್ ತಯಾರಿಸಲು “Set Up Now” ಆಯ್ಕೆಯನ್ನು ಟ್ಯಾಪ್ ಮಾಡಿ. ನಿಮ್ಮನ್ನು ENTER ಮಾಡಲು ಕೇಳಲಾಗುತ್ತೆ. ನೀವೇ ಸೆಟ್ಟಿಂಗ್ ಮಾಡುತ್ತಿರುವುದು ಎಂದು ತಿಳಿಯಲು ನಿಮ್ಮ ಪಾಸ್ ವರ್ಡ್ ಅಥವಾ ಅನ್ ಲಾಕ್ ಪ್ಯಾಟರ್ನ್ ಹಾಕಬೇಕಾಗುತ್ತದೆ.

• ಹಂತ 4 - ಸ್ಕ್ರೀನ್ ನಲ್ಲಿ ಬರುವ ಪ್ರಾಂಪ್ಟ್ಸ್ ಗಳನ್ನು ಫಾಲೋ ಮಾಡಿ. ನಿಮ್ಮ ಮಗುವಿನ ಗುಗಲ್ ಅಕೌಂಟ್ ಈಗಾಗಲೇ ಇದ್ದರೆ, ಅದರ ವಿವರವನ್ನು ಅಲ್ಲಿ ಬರೆಯರಿ , ಒಂದು ವೇಳೆ ಇಲ್ಲದೇ ಇದ್ದರೆ ಹೊಸ ಗೂಗಲ್ ಅಕೌಂಟ್ ತಯಾರಿಸಲು “More Options” ನ್ನು ಟ್ಯಾಪ್ ಮಾಡಿ ಬೇಕಾಗಿರುವ ಮಾಹಿತಿಯನ್ನು ಒದಗಿಸಿ.

• ಹಂತ 5 - ಆನ್ ಸ್ಕ್ರೀನ್ ಪ್ರಾಂಪ್ಟ್ ಗಳನ್ನು ಫಾಲೋ ಮಾಡಿ, ನಿಮ್ಮ ಮತ್ತು ನಿಮ್ಮ ಮಗುವಿನ ಅಕೌಂಟಿಗೆ ಬೇಕಾಗಿರುವ ಆಯ್ಕೆಗಳನ್ನು ಸೆಲೆಕ್ಟ್ ಮಾಡಿ ಮತ್ತ ಬೇಡದೆ ಇರುವುದನ್ನು ಅನ್ ಸೆಲೆಕ್ಟ್ ಮಾಡಿ.

• ಹಂತ 6- ಈಗ ನೀವು ನಿಮ್ಮ ಮಗುವನ್ನು ಯಾವೆಲ್ಲ ಸ್ಮಾರ್ಟ್ ಫೋನಿನ ಕೆಲಸಗಳಲ್ಲಿ ನಿಯಂತ್ರಿಸಬೇಕು ಎಂಬುದನ್ನು ಆಯ್ಕೆ ಮಾಡುವ ಮೂಲಕ ಸ್ಮಾರ್ಟ್ ಫೋನ್ ನ ಹಲವು ವೈಶಿಷ್ಟ್ಯಗಳಲ್ಲಿ ಮಕ್ಕಳು ತೊಡಗುವುದನ್ನು ಕಂಟ್ರೋಲ್ ಮಾಡಬಹುದು.


ಕಂಟೆಂಟ್ ಗಳನ್ನು ಫಿಲ್ಟರ್ ಮಾಡುವ ಅವಕಾಶವೂ ಇರುತ್ತೆ. ಅದನ್ನು ಹೇಗೆ ಮಾಡುವುದು ಎಂಬುದನ್ನು ಇಲ್ಲಿ ತಿಳಿಯಿರಿ.

• ಯೂಸರ್ ಅಕೌಂಟ್ ತೆರೆಯಿರಿ, ಯಾವುದನ್ನು ನೀವು ನಿಯಂತ್ರಿಸಬೇಕು ಎಂದುಕೊಂಡಿದ್ದೀರಿ ಅದನ್ನು ಪ್ರವೇಶಿಸಿ

• ಈಗ ಪ್ಲೇ ಸ್ಟೋರ್ ತೆರೆದು, ಸೆಟ್ಟಿಂಗ್ಸ್ ಮಾಡಲು Parental Control ಆಯ್ಕೆಯನ್ನು ಸೆಲೆಕ್ಟ್ ಮಾಡಿ.

• ಈಗ ಪೇರೆಂಟಲ್ ಕಂಟ್ರೋಲ್ ಸ್ವಿಚ್ ನ್ನು ಆನ್ ಮಾಡಿ ಹೊಸ ಪಿನ್ ನ್ನು ಸೆಟ್ ಮಾಡಿ.

• ಈಗ ನೀವು ಯಾವೆಲ್ಲ ಕಂಟೆಂಟ್ ಗಳನ್ನು ಮಕ್ಕಳು ಆಕ್ಸಿಸ್ ಮಾಡಬಹುದು ಎಂದುಕೊಳ್ಳುತ್ತೀರೋ ಅದನ್ನು ಪುನಃ ಸೆಟ್ ಮಾಡಬಹುದಾಗಿರುತ್ತೆ.

ಖರೀದಿಸುವುದನ್ನು ನಿಯಂತ್ರಿಸುವುದು

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

1. ಯಾವ ಯ್ಯೂಸರ್ ಅಕೌಂಟ್ ನಲ್ಲಿ ನೀವು ನಿಯಂತ್ರಿಸಬೇಕು ಎಂದುಕೊಂಡಿದ್ದೀರಿ ಅದನ್ನು ತೆರೆಯಿರಿ.

2. ಈಗ ಪ್ಲೇ ಸ್ಟೋರ್ ತೆರೆಯಿರಿ ಮತ್ತು ಅಲ್ಲಿ ಸೆಟ್ಟಿಂಗ್ ಆಪ್ಷನ್ ನ್ನು ಆಯ್ಕೆ ಮಾಡಿ

3. Require authentication for purchases ಅನ್ನುವ ಆಯ್ಕೆಯನ್ನು ಆಯ್ಕೆ ಮಾಡಿ.

4. “For all Purchases”. ಅನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಪ್ರತಿ ಖರೀದಿಯಲ್ಲೂ ನೀವು ಈಗ ಪಾಸ್ ವರ್ಡ್ ನ್ನು ಹಾಕಬೇಕಾಗುತ್ತದೆ.

. ಅನಧಿಕೃತ ಆಪ್ ಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

• ನಿಮ್ಮ ಸೆಟ್ಟಿಂಗ್ಸ್ ಮೆನುವಿನಲ್ಲಿ ಸೆಕ್ಯುರಿಟಿ ಆಯ್ಕೆಯನ್ನು ತೆರೆಯಿರಿ

• ಮೂರನೇ ವ್ಯಕ್ತಿಗಳ ಆಪ್ಸ್ ಗಳನ್ನು “Unknown Sources” ಆಯ್ಕೆಯನ್ನು ಸೆಲೆಕ್ಟ್ ಮಾಡುವ ಮುಖಾಂತರ ನಿಷ್ಕ್ರಿಯಗೊಳಿಸಬಹುದು. ನೀವು ನಿಮ್ಮ ಮಕ್ಕಳು ಸ್ಮಾರ್ಟ್ ಫೋನ್ ಬಳಸದೆ ಇರುವುದು ಮಾಡುವುದು ಕಷ್ಟವಾಗಿರಬಹುದು. ಆದರೆ, ಅಗತ್ಯವಿಲ್ಲದ ವಿಚಾರದಲ್ಲಿ ಅವರು ಮೂಗು ತೂರಿಸಿ, ಮೊಬೈಲ್ ನ ಹಾಳುಮಾಡುವುದನ್ನು ಖಂಡಿತ ನಿಯಂತ್ರಿಸಬಹುದಾಗಿದೆ. ಆ ನಿಟ್ಟಿನಲ್ಲಿ ಸರಿಯಾದ ಸೆಟ್ಟಿಂಗ್ಸ್ ಮಾಡಿಕೊಳ್ಳುವುದು ಮುಖ್ಯವಾಗಿರುತ್ತೆ.

Best Mobiles in India

English summary
How to set up parental controls on your smartphone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X