ಇಂಟರ್‌ನೆಟ್ ಹುಟ್ಟಿದ ನಂತರ ಹೇಗಿದ್ದ ಕಾಲ ಹೇಗೆ ಬದಲಾಯಿತು ನೋಡಿ!

|

ಮಾನವ ಸೃಷ್ಟಿಸಿದ ಮತ್ತು ಸಂಶೋಧಿಸಿದ ಅದ್ಭುತಗಳಲ್ಲಿ 'ಇಂಟರ್ನೆಟ್' ಕೂಡ ಒಂದು. ಇಂಟರ್‌ನೆಟ್ ಎನ್ನುವ ಅಮೂರ್ತರೂಪ ನಮ್ಮ ಮುಂದೆ ಈಗ ಬೃಹತ್ ಆಗಿ ಬೆಳೆದು ನಿಂತಿದೆ. ಇದಿಲ್ಲದೆ ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲ ಎಂಬ ಅನಿವಾರ್ಯತೆ ಸೃಷ್ಟಿಯಾಗಿದೆ. ಕೈಯಲ್ಲಿರುವ ಮೊಬೈಲ್‌ಗಳು ಬ್ರಹ್ಮಾಂಡವನ್ನೇ ತೋರಿಸಲು ಇಂಟರ್ನೆಟ್ ಕಾರಣವಾಗಿದೆ.

ಇಂಟರ್ನೆಟ್ ಎನ್ನುವುದು ಈಗ ಕೇವಲ ಶ್ರೀಮಂತರ ವೈಭವವಾಗಿಲ್ಲ. ಬಡವರ ಬಟ್ಟಲಿನ ಅಕ್ಕಿಯಾಗಿಯೂ ಬೆಳೆದು ನಿಂತಿದೆ. ಶಾಪಿಂಗ್, ಉದ್ಯೋಗ ಹುಡುಕಾಟ, ಸಂವಹನ, ಸಂಶೋಧನೆ, ಟಿಕೆಟ್ ಬುಕ್ಕಿಂಗ್, ಬ್ಯಾಂಕಿಂಗ್, ಆಟ, ನೋಟ, ಕಚೇರಿ, ಕೆಲಸ, ಮಾಹಿತಿ ಹೀಗೆ ಪ್ರಸ್ತುತ ಇಂಟರ್ನೆಟ್ ಅವಲಂಬಿಸದೇ ಇರುವ ಕ್ಷೇತ್ರವೇ ಇಲ್ಲ ಎಂದರೆ ಇದರ ಶಕ್ತಿ ಇನ್ನೆಷ್ಟಿರಬಹುದು ಅಲ್ಲವೇ.

ಇಂಟರ್‌ನೆಟ್ ಹುಟ್ಟಿದ ನಂತರ ಹೇಗಿದ್ದ ಕಾಲ ಹೇಗೆ ಬದಲಾಯಿತು ನೋಡಿ!

ಆದರೆ, ಹೀಗೆ ಒಂದು ಕ್ಷಣ ಯೋಚಿಸಿ. ಇಂಟರ್ನೆಟ್ ಬಂದ ನಂತರ ಹೇಗಿದ್ದ ಕಾಲ ಹೇಗೆ ಬದಲಾಯಿತು ನೋಡಿ? ಕೇವಲ 27 ವರ್ಷಗಳ ಹಿಂದೆ ಹುಟ್ಟಿದ ಒಂದು ಅದ್ಭುತ ಸಂಶೋಧನೆ ನಮ್ಮನ್ನು ಹೇಗೆಲ್ಲಾ ಬದಲಾವಣೆ ಮಾಡಿತು ಎಂದು ಯೋಚಿಸುತ್ತಾ ಹೋದಂತೆ, ಇಂಟರ್‌ನೆಟ್ ಸೃಷ್ಟಿಸಿ ಬದಲಾಯಿಸಿರುವ ಹಳೆಯ ನೆನಪುಗಳು ನಮಗೆ ಮೂಡುತ್ತವೆ. ಇವು ನಿಮ್ಮ ನೆನಪುಗಳು ಕೂಡ.!

ಆಲ್ಬಂ ಫೋಟೋಗಳು

ಆಲ್ಬಂ ಫೋಟೋಗಳು

ಫೋಟೋ ತೆಗೆಸಿಕೊಳ್ಳುವುದೆ ಒಂದು ಖುಷಿಯಾದರೆ ಅವುಗಳನ್ನು ಆಲ್ಬಮ್‌ನಲ್ಲಿ ಜೋಡಿಸಿಡುವುದು ಮತ್ತೊಂದು ಖುಷಿ ಎನ್ನುತ್ತಿದ್ದ ಒಂದು ಕಾಲವಿತ್ತು. ಫೋಟೋಗಳಿಗಾಗಿಯೇ ಆಲ್ಬಂ ಒಂದನ್ನು ಮಾಡಿ ಅದನ್ನು ಮನೆಗೆ ಬರುವವರಿಗೆ ತೋರಿಸುತ್ತಿದ್ದರು. ಇಗೇನಿದ್ದರೂ, ಮೊಬೈಲ್‌ಗಲ್ಲಿ ಶೇಖರಿಸಿ, ವಾಟ್ಸ್‌ಆಪ್ ಮಾಡಿದರೆ ಸಾಕು.!

ಮೊನ್ನೆ ಆಡಿಯೋ ಕ್ಯಾಸೆಟ್ ಸಿಕ್ಕಿತ್ತು.

ಮೊನ್ನೆ ಆಡಿಯೋ ಕ್ಯಾಸೆಟ್ ಸಿಕ್ಕಿತ್ತು.

ಆಡಿಯೋ ಕ್ಯಾಸೆಟ್ಸ್ ಬೇಕಿದ್ದ ಹಾಡುಗಳನ್ನು ಖಾಲಿ ಕ್ಯಾಸೆಟ್‌ಗಳಲ್ಲಿ ಸಂಗ್ರಹಿಸಿ ಕೇಳುತ್ತಿದ್ದ ಜಮಾನಾ ನಿಮಗೆ ನೆನಪಿದೆಯಲ್ಲ. ಅದೆಲ್ಲ ಈಗ ಗತವೈಭವ ಕಣ್ರಿ. ಈಗ ಆ ಸ್ಥಾನವನ್ನು ಇಂಟರ್ನೆಟ್ ಆಕ್ರಮಿಸಿಕೊಂಡಿದೆ. ಈಗ ಆಡಿಯೋ ಕೇಳಲು ಕ್ಯಾಸೆಟ್‌ಗಳೂ ಇಲ್ಲ, ಇನ್ನು ಸಿಡಿಗಳನ್ನು ನೋಡಬಹುದಾದರೂ, ಕೇಳಲು ಸಾಧ್ಯವಾಗುತ್ತಿಲ್ಲ.

‘ಇಂಟರ್ನೆಟ್’ ಗೇಮ್!

‘ಇಂಟರ್ನೆಟ್’ ಗೇಮ್!

ಮೊದಲು ಹೊರಗಡೆ ಆಟವಾಡುವ ಮಕ್ಕಳನ್ನು ತಾಯಿ ಮೈದಾನದಿಂದ ಎಳೆದು ತರಬೇಕಿತ್ತು. ಆದರೆ. ಈಗ ಮಕ್ಕಳೆಲ್ಲ ಇಂಟರ್ನೆಟ್ ಗೇಮ್‌ಗಳನ್ನು ಆಡುವುದರಲ್ಲೇ ಕಳೆದು ಹೋಗಿದ್ದಾರೆ. ಪಬ್‌ಜಿಯಂತಹ ಒಂದು ಗೇಮ್ ಮಕ್ಕಳನ್ನು ಸಹ ಕಟ್ಟಿಹಾಕಿದೆ. ಶಾಲೆಯ ಆವರಣದಲ್ಲೋ ಮಕ್ಕಳು ಆಟವಾಡದಿದ್ದರೆ ಅದು ಪರಿಪೂರ್ಣ ಬಾಲ್ಯವಾಗುತ್ತದೆಯೇ?.

ಶಾಪಿಂಗಿಗೂ ಒಂದು ಕಾಲವಿತ್ತು.

ಶಾಪಿಂಗಿಗೂ ಒಂದು ಕಾಲವಿತ್ತು.

ಶಾಪಿಂಗ್ ಒಂದು ಕಾಲವಿತ್ತು. ನಾವೇ ಮಾರುಕಟ್ಟೆಗೆ ತೆರಳು ಸಾಮಾನುಗಳನ್ನು ತರಬೇಕಾಗುತ್ತಿತ್ತು. ಆದರೆ ಈಗ ಯಾರು ಹೆಚ್ಚು ಡಿಸ್ಕೌಂಟ್ ಕೊಡುತ್ತಾರೆ, ಶೀಘ್ರವಾಗಿ ಮನಗೆ ತಂದು ತಲುಪಿಸುತ್ತಾರೆ ಎಂಬುದರ ಮೇಲೆ ಶಾಪಿಂಗ್ ನಿಂತಿದೆ. ಇದಕ್ಕೆ ಕಾರಣ ಇಂಟರ್ನೆಟ್.

ಸುದ್ದಿ ಪತ್ರಿಕೆಗಳು!

ಸುದ್ದಿ ಪತ್ರಿಕೆಗಳು!

ಬೆಳಗ್ಗೆ 5 ಗಂಟೆಗೆ ಎದ್ದು ನ್ಯೂಸ್ ಪೇಪರ್ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದ ಜನರು, ನ್ಯೂಸ್ ಪೇಪರ್ ಬಂದ ನಂತರ ದಿನವಿಡೀ ಆ ಪತ್ರಿಕೆಗಳನ್ನು ಓದುತ್ತಿದ್ದ ಕಾಲವಿತ್ತು. ಆದರೆ, ಈಗ ಎಲ್ಲ ಪತ್ರಿಕೆಗಳ ಆಪ್‌ಗಳು ಮೊಬೈಲ್‌ನಲ್ಲಿ ಬಂಧಿಯಾಗಿವೆ. ಪತ್ರಿಕೆಗಳೊಂದಿಗೆ ಆರಂಭವಾಗುತ್ತಿದ್ದ ಬೆಳಗ್ಗೆ, ಈಗ ಮೊಬೈಲ್‌ನಿಂದ ಆರಂಭವಾಗುತ್ತಿದೆ.

ಬ್ಯಾಂಕಿಂಗ್ ವ್ಯವಸ್ಥೆ!

ಬ್ಯಾಂಕಿಂಗ್ ವ್ಯವಸ್ಥೆ!

ಬ್ಯಾಂಕಿಂಗ್ ಬ್ಯಾಂಕ್‌ಗಳೆಂದರೆ ನಮ್ಮ ಕಣ್ಮುಂದೆ ಸುಳಿಯುತ್ತಿದ್ದದ್ದು ಉದ್ದನೆಯ ಜನರ ಸಾಲು. ಈಗ ಹಾಗಿಲ್ಲ. ಪ್ರತಿ ಗ್ರಾಹಕನೂ ಬ್ಯಾಂಕರ್ ಆಗಿದ್ದಾನೆ. ಬ್ಯಾಂಕಿಂಗ್ ಚಟುವಟಿಕೆಗಳನ್ನು ತಾನೇ ನಿರ್ವಹಿಸಿಕೊಳ್ಳುತ್ತಿದ್ದಾನೆ. ಬಿಲ್ ಪಾವತಿ ಬಿಲ್ ಪಾವತಿ ಸರಳಿಕೃತವಾಗಿರುವುದು ಈ ಇಂಟರ್ನೆಟ್‌ನಿಂದ. ಕುಳಿತಲ್ಲೇ ನಿಮ್ಮ ಎಲ್ಲ ಬಿಲ್‌ಗಳನ್ನು ಪಾವತಿಸಬಹುದು.!

ರೈಲು ಟಿಕೆಟ್

ರೈಲು ಟಿಕೆಟ್

ರೈಲು ಟಿಕೆಟ್‌ಗಳನ್ನು ಸರತಿ ಸಾಲಿನಲ್ಲಿ ನಿಂತು ಪಡೆಯುವುದಕ್ಕಾಗಿ ಸಾಹಸ ಮಾಡಬೇಕಿತ್ತು. ಕ್ಯೂ ಹಚ್ಚುವುದಕ್ಕಾಗಿ ಬೆಳಗ್ಗೆ ಬೇಗ ಎದ್ದು ಹೋಗಬೇಕಾದ ದಿನಗಳಿದ್ದವನ್ನು 80 ಮತ್ತು 90ನೇ ದಶಕದಲ್ಲಿನವರು ಮರೆಯಲು ಸಾಧ್ಯವೇ ಇಲ್ಲ. ಈಗ ಅದೆಲ್ಲ ಇಲ್ಲ. ಆನ್‌ಲೈನಿನಲ್ಲೇ ಎಲ್ಲವೂ ಆಗಿಹೋಗುತ್ತದೆ.

ಉದ್ಯೋಗದ ಹುಡುಕಾಟ!

ಉದ್ಯೋಗದ ಹುಡುಕಾಟ!

ಮೊದಲೆಲ್ಲ ಡಿಗ್ರಿಗಳು ಮುಗಿಯುತ್ತಿದ್ದಂತೆ ಯುವ ಜನತೆ ಪೇಪರ್‌ಗಳನ್ನು ಹರವಿಟ್ಟುಕೊಂಡು ಉದ್ಯೋಗ ಹುಡುಕಾಟ ನಡೆಸಲು ‘ಬೇಕಾಗಿದ್ದಾರೆ' ಎಂಬ ಕಾಲಂ ಹುಡುಕುತ್ತಿದ್ದರು. ಆದರೆ, ಈಗ ಕೇವಲ ಒಂದೇ ಒಂದು ಕ್ಲಿಕ್‌ನಲ್ಲಿ ನೂರಾರು ಉದ್ಯೋಗದ ಅವಕಾಶಗಳನ್ನು ಕ್ಷಣಾರ್ಧದಲ್ಲಿ ನೋಡಬಹುದು. ಅಲ್ಲಿಯೇ ಅರ್ಜಿ ಸಲ್ಲಿಸಿ ಕೆಲಸವನ್ನು ಸಹ ಗಿಟ್ಟಿಸಿಕೊಳ್ಳಬಹುದು.

ಒಲಾ, ಉಬರ್!

ಒಲಾ, ಉಬರ್!

ಒಂದು ಕಾಲದಲ್ಲಿ ಟ್ಯಾಕ್ಸಿಯಲ್ಲಿ ಒಡಾಡಿದವನೇ ಶ್ರೀಮಂತ ಎಂಬ ಮಾತಿತ್ತು. ಆದರೆ, ಈಗ ಕೇವಲ 100 ರೂಗಳಲ್ಲಿ ಟ್ಯಾಕ್ಸಿ ಪ್ರಯಾಣವನ್ನು ಯಾರು ಬೇಕಾದರೂ ಮಾಡಬಹುದು. ಇಂಟರ್‌ನೆಟ್ ಸಹಾಯದಿಂದ ಆನ್‌ಲೈನ್ ಮೂಲಕ ಟ್ಯಾಕ್ಸಿ ಬುಕ್ ಮಾಡಿಕೊಂಡರೆ ನೀವಿರುವ ಸ್ಥಳಕ್ಕೆ ಕೆಲವೇ ಕ್ಷಣಗಳಲ್ಲಿ ಕಾರು ಬಂದು ನಿಂತಿರುತ್ತದೆ.

Most Read Articles
Best Mobiles in India

English summary
The Internet has turned our existence upside down. It has revolutionized communications, to the extent that it is now our preferred medium of everyday communication.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more