ಭಾರತದಲ್ಲಿ 'ತತ್ಕಾಲ್ ಪಾಸ್‌ಪೋರ್ಟ್‌'ಗೆ ಅರ್ಜಿ ಸಲ್ಲಿಸುವುದು ಹೇಗೆ?

|

ಭಾರತದಲ್ಲಿ ಪಾಸ್‌ಪೋರ್ಟ್‌ ಅನ್ನು ಪಡೆದುಕೊಳ್ಳಬೇಕಾದರೆ ಹೆಚ್ಚು ದಿನಗಳು ಬೇಕಾಗುತ್ತದೆ. ಇದರಿಂದ ಕೆಲವೊಮ್ಮೆ ನೀವು ಅಂದುಕೊಂಡ ಸಮಯಕ್ಕೆ ನಿಮ್ಮ ಇಂಟರ್‌ನ್ಯಾಷನಲ್‌ ಪ್ರವಾಸವನ್ನು ಮಾಡುವುದಕ್ಕೆ ನಿಮಗೆ ಸಾಧ್ಯವಾಗುವುದಿಲ್ಲ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ತನ್ನ ನಾಗರೀಕರಿಗೆ ತತ್ಕಾಲ್‌ ಪಾಸ್‌ಪೋರ್ಟ್‌ ಯೋಜನೆಯನ್ನು ಅಭಿವೃದ್ಧಿ ಪಡಿಸಿದೆ. ಇದರಿಂದ ನೀವು ಕೇವಲ 1-3 ದಿನಗಳ ಅಂತರದಲ್ಲಿ ತತ್ಕಾಲ್‌ ಪಾಸ್‌ಪೋರ್ಟ್‌ ಅನ್ನು ಪಡೆದುಕೊಳ್ಳಬಹುದಾಗಿದೆ.

ತತ್ಕಾಲ್‌

ಹೌದು, ಭಾರತ ಸರ್ಕಾರ ತತ್ಕಾಲ್‌ ಪಾಸ್‌ಪೋರ್ಟ್‌ ಯೋಜನೆಯನ್ನು ಅಭಿವೃದ್ದಿಪಡಿಸಿದೆ. ಇದರಿಂದ ನೀವು ತುಂಬಾ ದಿನಗಳು ಪಾಸ್‌ಪೋರ್ಟ್‌ಗಾಗಿ ಕಾಯುವ ಬದಲು ಕೆಲವೇ ದಿನಗಳಲ್ಲಿ ಅಂದರೆ ಕೇವಲ 1-3 ದಿನಗಳ ಅಂತರದಲ್ಲಿ ತತ್ಕಾಲ್‌ ಪಾಸ್‌ಪೋರ್ಟ್‌ ಪಡೆದುಕೊಳ್ಳಬಹುದಾಗಿದೆ. ಆದರೆ ತತ್ಕಾಲ್‌ ಅಪ್ಲಿಕೇಶನ್‌ಗಾಗಿ ಜನರಿಗೆ ಕೆಲವು ಹೆಚ್ಚುವರಿ ದಾಖಲೆಗಳು ಬೇಕಾಗುತ್ತದೆ. ಹಾಗಾದ್ರೆ ತತ್ಕಾಲ್‌ ಪಾಸ್‌ಪೋರ್ಟ್‌ ಪಡೆದುಕೊಳ್ಳಲು ಅರ್ಜಿಸಲ್ಲಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸರ್ಕಾರ

ಭಾರತ ಸರ್ಕಾರ ಪಾಸ್‌ಪೋರ್ಟ್ ಸೇವೆ ನೀಡುವುದಕ್ಕಾಗಿ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೇಶಾದ್ಯಂತ 37 ಪಾಸ್‌ಪೋರ್ಟ್ ಕಚೇರಿಗಳನ್ನು ಸ್ಥಾಪಿಸಿದೆ. ಅಲ್ಲದೆ ವಿದೇಶದಲ್ಲಿ 180 ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳ ಮೂಲಕ ಪಾಸ್‌ಪೋರ್ಟ್‌ ಅನ್ನು ಪಡದುಕೊಳ್ಳಬಹುದಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಪಾಸ್‌ಪೋರ್ಟ್ ಅರ್ಜಿ ಪ್ರಕ್ರಿಯೆಯನ್ನು ಹೆಚ್ಚು ದಿನಗಳ ಕಾಲ ನಡೆಸುತ್ತದೆ. ಇದರ ಬದಲು ನೀವು "ತತ್ಕಾಲ್ ಯೋಜನೆ" ಅಡಿಯಲ್ಲಿ ಪಾಸ್‌ಪೋರ್ಟ್‌ ಅನ್ನು ಪಡೆದುಕೊಳ್ಳಬಹುದು.

ತತ್ಕಾಲ್ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ತತ್ಕಾಲ್ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಹಂತ:1 ಮೊದಲಿಗೆ ಪಾಸ್‌ಪೋರ್ಟ್ ಸೇವಾ ಅಧಿಕೃತ ಪೋರ್ಟಲ್‌ನಲ್ಲಿ ನಿಮ್ಮನ್ನು ನೋಂದಾಯಿಸಿಕೊಳ್ಳಿ.
ಹಂತ:2 ನಂತರ ನಿಮ್ಮ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ
ಹಂತ:3 ಇದೀಗ ನಿಮಗೆ ಫ್ರೇಶ್‌ ಮತ್ತು ರಿ ಇಶ್ಯೂ ಎಂಬ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ. ಇದರಲ್ಲಿ ನಿಮಗೆ ಅನ್ವಯವಾಗುವ ಆಯ್ಕೆಯನ್ನು ಆರಿಸಿ
ಹಂತ:4 ನಂತರ ಸ್ಕೀಮ್ ಪ್ರಕಾರದಲ್ಲಿ 'ತತ್ಕಾಲ್' ಆಯ್ಕೆಯನ್ನು ಆಯ್ಕೆಮಾಡಿ
ಹಂತ:5 ಇದೀಗ ನಿಮ್ಮ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಫಾರ್ಮ್ ಅನ್ನು ಭರ್ತಿ ಮಾಡಿ
ಹಂತ:6 ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿ
ಹಂತ:7 ಇದೀಗ ಪಾವತಿ ವಿಧಾನವನ್ನು ಪೂರ್ಣಗೊಳಿಸಿ
ಹಂತ:8 ಪಾವತಿ ಮುಗಿದ ನಂತರ ಆನ್‌ಲೈನ್ ಪಾವತಿಯ ರಸೀದಿಯನ್ನು ಮುದ್ರಿಸಿ
ಹಂತ:9 ನಂತರ ನಿಮ್ಮ ಹತ್ತಿರದ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಿಕೊಳ್ಳಬಹುದು.

ಭಾರತೀಯ ಪಾಸ್‌ಪೋರ್ಟ್‌ಗೆ ಅಗತ್ಯವಾಗಿ ಬೇಕಾಗುವ ದಾಖಲೆಗಳು!

ಭಾರತೀಯ ಪಾಸ್‌ಪೋರ್ಟ್‌ಗೆ ಅಗತ್ಯವಾಗಿ ಬೇಕಾಗುವ ದಾಖಲೆಗಳು!

ವಿಳಾಸದ ಪುರಾವೆಗಾಗಿ ಅರ್ಜಿದಾರರ ಫೋಟೋ ಹೊಂದಿರುವ ಬ್ಯಾಂಕ್ ಖಾತೆಯ ಪಾಸ್‌ಬುಕ್, ಲ್ಯಾಂಡ್‌ಲೈನ್ ಅಥವಾ ಪೋಸ್ಟ್‌ಪೇಯ್ಡ್ ಮೊಬೈಲ್ ಬಿಲ್, ರೆಂಟಲ್‌ ಅಗ್ರಿಮೆಂಟ್‌, ಎಲೆಕ್ಟ್ರಿಕಲ್‌ ಬಿಲ್, ಮತದಾರರ ಗುರುತಿನ ಚೀಟಿ, ವಾಟರ್‌ ಬಿಲ್, ಕಂದಾಯ ರಶೀದಿ, ಗ್ಯಾಸ್ ಸಂಪರ್ಕದ ಪುರಾವೆ, ಆಧಾರ್ ಕಾರ್ಡ್ ದಾಖಲೆಗಳನ್ನು ನೀಡಬೇಕಾಗುತ್ತದೆ.

ಹುಟ್ಟಿದ ದಿನಾಂಕದ ಪುರಾವೆಗಾಗಿ ಬೇಕಾಗುವ ದಾಖಲೆಗಳು

ಹುಟ್ಟಿದ ದಿನಾಂಕದ ಪುರಾವೆಗಾಗಿ ಬೇಕಾಗುವ ದಾಖಲೆಗಳು

* ಆಧಾರ್ ಕಾರ್ಡ್/ಇ-ಆಧಾರ್
* PAN ಕಾರ್ಡ್
* ಭಾರತದ ಚುನಾವಣಾ ಆಯೋಗವು ನೀಡಿದ ಮತದಾರರ ಗುರುತಿನ ಚೀಟಿ
* ಡ್ರೈವಿಂಗ್‌ ಲೈಸೆನ್ಸ್‌
* ಜನನ ಪ್ರಮಾಣಪತ್ರ.
* ವರ್ಗಾವಣೆ ಪ್ರಮಾಣಪತ್ರ / ಶಾಲೆ.

ಭಾರತ

ಇನ್ನು ಭಾರತ ಸರ್ಕಾರ ದೇಶದಲ್ಲಿ ಇ-ಪಾಸ್‌ಪೋರ್ಟ್‌ ಅನ್ನು ಪರಿಚಯಿಸುವ ನಿಟ್ಟಿನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಜೊತೆಗೆ ಕೆಲಸ ಮಾಡುತ್ತಿದೆ. ಇದಕ್ಕಾಗಿ ಹೊಸ ಡೇಟಾ ಸೆಂಟರ್‌ ಮತ್ತು ನಿಯಂತ್ರಣ ಕೇಂದ್ರವನ್ನು ಪ್ರಾರಂಭಿಸಲು ಮುಂದಾಗಿದೆ. ಈ ಸೆಂಟರ್‌ಗಳನ್ನು ಪ್ರಾರಂಭಿಸಿದ ನಂತರ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯು ದೇಶದಲ್ಲಿ ಇ-ಪಾಸ್‌ಪೋರ್ಟ್‌ಗಳನ್ನು ಹೊರತರಲು ಪ್ರಾರಂಭಿಸುತ್ತದೆ ಎಂದು ವರದಿಯಾಗಿದೆ. ಅದರಂತೆ ಈ ವರ್ಷದ ಕೊನೆಯಲ್ಲಿಯೇ ದೇಶದಲ್ಲಿ ಚಿಪ್‌ ಆಧಾರಿತ ಇ-ಪಾಸ್‌ಪೋರ್ಟ್‌ಗಳು ದೊರೆಯಲಿವೆ.

ಪಾಸ್‌ಪೋರ್ಟ್‌

ಭಾರತದಲ್ಲಿ ಪ್ರಾರಂಭಿಸಲಾಗುತ್ತಿರುವ ಇ-ಪಾಸ್‌ಪೋರ್ಟ್‌ ಚಿಪ್‌ ಆಧಾರಿತವಾಗಿರುತ್ತದೆ. ಆದರೆ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಟೆಕ್‌ ಮತ್ತು ಆಟೋ ಉದ್ಯಮಗಳು ಚಿಪ್‌ ಕೊರತೆಯನ್ನು ಅನುಭವಿಸುತ್ತಿವೆ. ಭಾರತದಲ್ಲಿ ಇ-ಪಾಸ್‌ಪೋರ್ಟ್‌ ಯೋಜನೆ ಇದೇ ಕಾರಣಕ್ಕೆ ನಿಧಾನವಾಗುತ್ತಿದೆ ಎನ್ನಲಾಗಿದೆ. ಆದರೆ ಜಾಗತಿಕ ಚಿಪ್‌ ಕೊರಯೆ ಪಾಸ್‌ಪೋರ್ಟ್ ಯೋಜನೆಯ ಎರಡನೇ ಹಂತದ ನಿಯೋಜನೆ ಮತ್ತು ಅದರ ಟೈಮ್‌ಲೈನ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು TCS ಕಾರ್ಯನಿರ್ವಾಹಕರು ಹೇಳೀದ್ದಾರೆ.

Best Mobiles in India

English summary
However, tatkal passports take 1-3 days to get dispatched, and normal passports take up to 30 working days.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X