ಜಿ-ಮೇಲ್‌ ನಲ್ಲಿ ಸ್ಪ್ಯಾಮ್ ಮೆಸೆಜ್‌ ಜಾಸ್ತಿಯಾಗಿವೆಯಾ?.. ಹಾಗಿದ್ರೆ ಈ ಕೆಲಸ ಮಾಡಿ

|

ಸಾಮಾನ್ಯವಾಗಿ ನೀವು ಜಿ-ಮೇಲ್‌ ಓಪನ್‌ ಮಾಡಿದ್ರೆ ಸಾಕು ಸಾಕಷ್ಟು ಮೇಲ್‌ಗಳು ಇನ್‌ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಅದರಲ್ಲಿ ನಮಗೆ ಬೇಡವಾದ ಮೇಲ್‌ಗಳೇ ಪಾರುಪತ್ಯ ಮೆರೆದಿರುತ್ತವೆ. ಅಗತ್ಯ ಇರುವ ಸಂದೇಶವನ್ನು ನೀವು ಹುಡುಕಲು ಸಾಕಷ್ಟು ಸ್ಕ್ರೋಲ್‌ ಮಾಡಬೇಕಾಗುತ್ತದೆ. ಇದಕ್ಕಾಗಿಯೇ ಜಿ-ಮೇಲ್‌ ಈಗಾಗಲೇ ಕೆಲವು ಫೀಚರ್ಸ್‌ಗಳನ್ನು ನೀಡಿದ್ದು, ಅನವಶ್ಯಕ ಮೇಲ್‌ಗಳಿಂದ ದೂರ ಇರುವಂತೆ ಮಾಡಿದೆ. ಆದರೆ ಈ ಫೀಚರ್ಸ್‌ ಬಳಕೆ ಬಗ್ಗೆ ಕೆಲವರಿಗೆ ಅರಿವಿಲ್ಲ.

ಜಿ-ಮೇಲ್

ಹೌದು, ಸಾಮಾನ್ಯವಾಗಿ ಎಲ್ಲರೂ ಜಿ-ಮೇಲ್ ಬಳಕೆ ಮಾಡುತ್ತಾರೆ. ಯಾಕೆಂದರೆ ಯಾವುದೇ ಸಾಮಾಜಿಕ ಖಾತೆ ತೆರೆಯುವುಕ್ಕೆ ಅಥವಾ ಯಾವುದೇ ರೀತಿಯ ಅರ್ಜಿ ಸಲ್ಲಿಸಲು ಜಿ-ಮೇಲ್‌ ಕಡ್ಡಾಯವಾಗಿದೆ. ಇದರಿಂದ ಹಲವಾರು ಸಂದೇಶಗಳನ್ನು ಜಿ-ಮೇಲ್‌ ನಲ್ಲಿ ಸ್ವೀಕಾರ ಮಾಡಬಹುದು, ಕಳುಹಿಸಬಹುದು. ಅದಾಗ್ಯೂ ಬೇಡವಾದ ಸಂದೇಶಗಳು ನಿಮ್ಮ ಇನ್‌ಬಾಕ್ಸ್‌ ತುಂಬಾ ತುಂಬಿದ್ದರೆ ಅದನ್ನು ಡಿಲಿಟ್‌ ಮಾಡಲೂ ಸಹ ಅವಕಾಶ ಕಲ್ಪಿಸಲಾಗಿದೆ. ಆದರೂ ಬೇಡವಾದ ಸಂದೇಶಗಳಿಗೆ ಶಾಸ್ವತ ಕಡಿವಾಣ ಹಾಕುವ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ

ಜಿ- ಮೇಲ್‌ನಲ್ಲಿ ಹಲವು ಫೀಚರ್ಸ್‌

ಜಿ- ಮೇಲ್‌ನಲ್ಲಿ ಹಲವು ಫೀಚರ್ಸ್‌

ಜಿ-ಮೇಲ್‌ ಎಲ್ಲರಿಗೂ ಉಚಿತ ಆನ್‌ಲೈನ್ ಸೇವೆಯಾಗಿದೆ. ಈ ಮೂಲಕ ಬಳಕೆದಾರರು ಸಂದೇಶ ಸಂಗ್ರಹಣೆ ಮತ್ತು ನಿರ್ದಿಷ್ಟ ಸಂದೇಶಗಳನ್ನು ಸರ್ಚ್‌ ಮಾಡುವ ಅನುಕೂಲಕರ ಫೀಚರ್ಸ್‌ ಪಡೆಯಬಹುದು. ಈಗಂತೂ ಈ ಪ್ಲಾಟ್‌ಫಾರ್ಮ್‌ನಲ್ಲಿ ಇಮೇಲ್‌ಗಳನ್ನು ಕಳುಹಿಸುವುದು ತುಂಬಾನೇ ಸರಳವಾದ ಮಾರ್ಗವಾಗಿದೆ. ಆದರೆ, ಜಿ-ಮೇಲ್‌ ತೆರೆದಾಕ್ಷಣ ಕಾಣಿಸಿಕೊಳ್ಳುವ ಸ್ಪ್ಯಾಮ್ ಮೆಸೆಜ್‌ಗಳು ನಿಮ್ಮನ್ನು ಇರುಸು ಮುರುಸು ಮಾಡುವುದರಲ್ಲಿ ಎರಡು ಮಾತಿಲ್ಲ.

ಇಮೇಲ್ ವಿಳಾಸವನ್ನು ನಿರ್ಬಂಧಿಸಿದ್ರೆ ಏನಾಗುತ್ತೆ?

ಇಮೇಲ್ ವಿಳಾಸವನ್ನು ನಿರ್ಬಂಧಿಸಿದ್ರೆ ಏನಾಗುತ್ತೆ?

ನಿಮಗೆ ಯಾವ ಇಮೇಲ್‌ ಬೇಡವೋ ಅದನ್ನು ನಿರ್ಬಂಧಿಸಿದರೆ ಇನ್ಮುಂದೆ ಆ ಮೇಲ್‌ಗಳು ನಿಮ್ಮ ಇನ್‌ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಾಗೆಯೇ ಆ ರೀತಿಯ ಮೇಲ್‌ಗಳನ್ನು ಯಾರು ಕಳುಹಿಸುತ್ತಿದ್ದಾರೆ ಅವರನ್ನೇ ನೇರವಾಗಿ ಬ್ಲಾಕ್‌ ಮಾಡಿದಾಗ ತದನಂತರದಲ್ಲಿ ಅವರು ಕಳುಹಿಸುವ ಎಲ್ಲಾ ಮೇಲ್‌ಗಳು ಸ್ಪ್ಯಾಮ್ ಫೋಲ್ಡರ್‌ನಲ್ಲಿ ಬಂದು ಸೇರುತ್ತವೆ. ಈ ಹಂತಗಳನ್ನು ಅನುಸರಿಸುವ ಮೂಲಕ ಬೇಡವಾದ ಇಮೇಲ್‌ಗಳನ್ನು ಬ್ಲಾಕ್‌ ಮಾಡಿ.

ಹಂತ 1

ಹಂತ 1

ಮೊದಲು ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ಜಿ ಮೇಲ್‌ ಖಾತೆ ಓಪನ್‌ ಮಾಡಿ. ನಂತರ ನೀವು ನಿರ್ಬಂಧಿಸಲು ಬಯಸುವ ಕಳುಹಿಸುವವರ ಇಮೇಲ್ ಓಪನ್‌ ಮಾಡಿ. ಈ ವೇಳೆ ಅಲ್ಲಿ ಮೂರು-ಡಾಟ್ ಮೆನು ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ಹಂತ 2

ಹಂತ 2

ಇದಾದ ಬಳಿಕ ಡ್ರಾಪ್-ಡೌನ್ ಮೆನುವಿನಿಂದ ಬ್ಲಾಕ್ (ಸೆಂಡರ್‌) ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ಬೇಡವಾದ ಇಮೇಲ್‌ಗಳು ಇನ್ಮುಂದೆ ನಿಮ್ಮ ಇನ್‌ಬಾಕ್ಸ್‌ಗೆ ಸುಳಿಯುವುದಿಲ್ಲ. ಪ್ರಮುಖ ವಿಷಯ ಎಂದರೆ ಇದೇ ಮಾರ್ಗವನ್ನು ಅನುಸರಿಸುವ ಮೂಲಕ ನೀವು ಆಕಸ್ಮಿಕವಾಗಿ ನಿರ್ಬಂಧಿಸಿದ ಯಾರನ್ನಾದರೂ ಅನಿರ್ಬಂಧಿಸಬಹುದು.

ಅನ್‌ಸಬ್‌ಸ್ಕ್ರೈಬ್

ಇದರ ಹೊರತಾಗಿಯೂ ನ್ಯೂಸ್‌ ಅಥವಾ ಪ್ರಚಾರಗಳಂತಹ ಬಹಳಷ್ಟು ಮೇಲ್‌ಗಳನ್ನು ಕಳುಹಿಸುವ ಸೈಟ್‌ನಿಂದ ಇಮೇಲ್‌ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲು ನೀವು ಅನ್‌ಸಬ್‌ಸ್ಕ್ರೈಬ್ ಲಿಂಕ್ ಬಳಕೆ ಮಾಡಿಕೊಳ್ಳಬಹುದಾಗಿದೆ.

ಮಲ್ಟಿ ಮೋಡ್ ಆಯ್ಕೆ

ಮಲ್ಟಿ ಮೋಡ್ ಆಯ್ಕೆ

ಜಿ-ಮೇಲ್‌ನಲ್ಲಿ ಹಲವಾರು ಫೀಚರ್ಸ್‌ಗಳ ಜೊತೆ ಮಲ್ಟಿ ಮೋಡ್ ಆಯ್ಕೆ ಸಹ ಹೆಚ್ಚು ಬಳಕೆಯಾಗುವ ಫೀಚರ್ಸ್‌ ಆಗಿದೆ. ಅದಕ್ಕೆ ನೀವು ಮಾಡಬೇಕಿರುವುದು ಮೊದಲು ನಿಮ್ಮ ಕಂಪ್ಯೂಟರ್‌ನಲ್ಲಿ ನಿಮ್ಮ ಜಿ-ಮೇಲ್‌ ಖಾತೆಗೆ ಹೋಗಿ. ನಂತರ ಎಡಭಾಗದಲ್ಲಿ ಲಭ್ಯವಿರುವ ಕಂಪೋಸ್ ಬಟನ್ ಆಯ್ಕೆ ಮೇಲೆ ಕ್ಲಿಕ್‌ ಮಾಡಿ ಹಾಗೂ ಅಲ್ಲೇ ಕೆಳಭಾಗದಲ್ಲಿರುವ ಟೂಲ್‌ಬಾರ್‌ನಲ್ಲಿ ಲಭ್ಯವಿರುವ 'ಟರ್ನ್ ಮಲ್ಟಿ ಸೆಂಡ್ ಮೋಡ್ ಆನ್/ಆಫ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಮಲ್ಟಿ ಸೆಂಡ್‌ ಮೋಡ್‌

ಮಲ್ಟಿ ಸೆಂಡ್‌ ಮೋಡ್‌ನಲ್ಲಿ ಕಾಣಿಸಿಕೊಳ್ಳುವ 'ಟು' ವಿಭಾಗದಲ್ಲಿ 1,500 ಸ್ವೀಕೃತದಾರರನ್ನು ಹಾಗೂ 'ಸಿಸಿ' ಅಥವಾ 'ಬಿಸಿಸಿ' ವಿಭಾಗದಲ್ಲಿ ಗರಿಷ್ಠ 1 ಸ್ವೀಕೃತದಾರರನ್ನು ಆಡ್‌ ಮಾಡಬಹುದು.

Best Mobiles in India

Read more about:
English summary
How to block an email address in Gmail.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X