ಟ್ವಿಟರ್‌ನಲ್ಲಿ ಪ್ರೊಫೈಲ್ ಅನ್ನು ಬ್ಲಾಕ್‌ ಮಾಡುವುದು ಹೇಗೆ?

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ವಿಟರ್‌ ಕೂಡ ಒಂದಾಗಿದೆ. ಟ್ವಿಟರ್, ಮೂಲಕ ನೀವು ಎಲ್ಲಿದ್ದರೂ ಜನರೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆಯುವ ವಿಚಾರವನ್ನ ಕ್ಷಣಾರ್ಧದಲ್ಲಿ ವೈರಲ್‌ ಆಗಿ ಬಿಡುತ್ತೆ. ಅಷ್ಟರ ಮಟ್ಟಿಗೆ ಟ್ವಿಟರ್‌ ತನ್ನ ಪ್ರಭಾವವನ್ನು ಬೀರಿದೆ. ಇನ್ನು ಟ್ವಿಟರ್‌ನಲ್ಲಿ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ಕಾರಣ, ನಿಮ್ಮ ಟ್ವಿಟ್ಟರ್ ಫೀಡ್ ಅನಗತ್ಯ ಪೋಸ್ಟ್‌ಗಳು ಮತ್ತು ಟ್ವೀಟ್‌ಗಳಿಂದ ತುಂಬಿರಬಹುದು. ಇಂತಹ ಟ್ವಿಟರ್ ಖಾತೆಯನ್ನು ನಿರ್ಬಂಧಿಸುವುದು ಹೇಗೆ ಅನ್ನುವ ಗೊಂದಲ ಇದ್ದೆ ಇರುತ್ತೆ?

ಸೊಶೀಯಲ್‌

ಹೌದು, ಸೊಶೀಯಲ್‌ ಮೀಡಿಯಾ ಇವತ್ತು ತುಂಬಾನೆ ಸ್ಟ್ರಾಂಗ್‌ ಇದೆ. ಅಷ್ಟೇ ಅಲ್ಲ ಸೋಶೀಯಲ್‌ ಮೀಡಿಯಾದಲ್ಲಿ ಎಷ್ಟು ಉಪಯುಕ್ತವೋ ಅಷ್ಟೇ ಅನುಪಯುಕ್ತ ಕಿರಿಕಿರಿಗಳು ಕೂಡ ಕೆಲವೊಮ್ಮೆ ಎದುರಾಗುತ್ತವೆ. ಟ್ವಿಟರ್‌ ಕೂಡ ಇದಕ್ಕೆ ಹೊರತಾಗಿಲ್ಲ. ಕೆಲವೊಮ್ಮೆ ಟ್ವಿಟರ್‌ನಲ್ಲಿ ಅನಗತ್ಯ ಪೋಸ್ಟ್‌ಗಳು ಮತ್ತು ಟ್ವೀಟ್‌ಗಳಿಂದ ತುಂಬಿರುತ್ತವೆ. ಅಪರಿಚಿತ ಅಕೌಂಟ್‌ಗಳಿಂದ ನಿಮಗೆ ಸ್ಪ್ಯಾಮ್‌ ಬರಬಹುದು. ಇಂತಹ ಅಕೌಂಟ್‌ಗಳನ್ನ ನಿರ್ಬಂಧಿಸ ಬೇಕಾಗುತ್ತದೆ. ಆದರೆ ಇತರ ಬಳಕೆದಾರರನ್ನು ನಿಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ನಿರ್ಬಂಧಿಸಲು ಮತ್ತು ಅನ್‌ಬ್ಲಾಕ್‌ ಮಾಡುವುದಕ್ಕೆ ಅವಕಾಶವಿದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಟ್ವಿಟ್ಟರ್

ಇನ್ನು ನೀವು ನಿಮ್ಮ ಟ್ವಿಟ್ಟರ್ ಖಾತೆಯ ಮೇಲೆ ಮಾತ್ರ ಹಿಡಿತ ಸಾಧಿಸಬಹುದು, ಅದನ್ನು clean ಮಾಡಿಕೊಳ್ಳ ಬೇಕಾಗುತ್ತದೆ. ಇದರಿಂದಾಗಿ ನೀವು ಸ್ಪ್ಯಾಮ್ ಟ್ವೀಟ್‌ಗಳು, ಪೋಸ್ಟ್‌ಗಳು ಮತ್ತು ಡಿಎಂಗಳಿಂದ ದೂರವಿರಬೇಕಾಗುತ್ತದೆ. ಆದರೂ ಕೆಲವೊಮ್ಮೆ ನಿಮ್ಮ ಟ್ವೀಟ್‌ ಫಿಡ್‌ಗಳಲ್ಲಿ ಅನಗತ್ಯ ಪೋಸ್ಟ್‌ಗಳು ತುಂಬಿಕೊಳ್ಳುತ್ತವೆ. ಅಪರಿಚಿತ ಖಾತೆಗಳಿಂದ ಸ್ಪ್ಯಾಮ್‌ಗಳ ಬಂದರೆ, ಅವುಗಳನ್ನ ಅನ್‌ಬ್ಲ್ಯಾಕ್‌ ಮಾಡಬೇಕಾಗುತ್ತದೆ. ಅಷ್ಟಕ್ಕೂ ಟ್ವಿಟರ್‌ ಪ್ರೊಪೈಲ್‌ ಅನ್ನು ಅನ್‌ಬ್ಲಾಕ್ ಮಾಡುವುದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಟ್ವಿಟರ್ ಅಪ್ಲಿಕೇಶನ್‌ನಲ್ಲಿ ಪ್ರೊಫೈಲ್ ಅನ್ನು ಬ್ಲಾಕ್‌ ಮಾಡುವುದು ಹೇಗೆ?

ಟ್ವಿಟರ್ ಅಪ್ಲಿಕೇಶನ್‌ನಲ್ಲಿ ಪ್ರೊಫೈಲ್ ಅನ್ನು ಬ್ಲಾಕ್‌ ಮಾಡುವುದು ಹೇಗೆ?

ಹಂತ:1 ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಟ್ವಿಟರ್ ಅಪ್ಲಿಕೇಶನ್ ಪ್ರಾರಂಭಿಸಿ.
ಹಂತ:2 ನೀವು ನಿರ್ಬಂಧಿಸಲು ಬಯಸುವ ಪ್ರೊಫೈಲ್‌ಗೆ ಭೇಟಿ ನೀಡಿ, ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ. ಅಲ್ಲಿ ಬ್ಲಾಕ್ ಅನ್ನು ಆರಿಸಿ.
ಹಂತ:3 ಬ್ಲಾಕ್‌ ಮಾಡಿದ ನಂತರ ಏನಾಗಬಹುದು ಎಂಬ ಎಚ್ಚರಿಕೆಯೊಂದಿಗೆ ಕ್ರಿಯೆಯನ್ನು ದೃಡೀಕರಿಸಲು ನಿಮ್ಮನ್ನು ಕೇಳಲಾಗುತ್ತದೆ. ಖಚಿತಪಡಿಸಲು ಬ್ಲಾಕ್ ಅನ್ನು ಟ್ಯಾಪ್ ಮಾಡಿ.
ಹಂತ:4 ಈಗ ಟ್ವಿಟ್ಟರ್ ಖಾತೆ ಬ್ಲಾಕ್‌ ಆಗುತ್ತದೆ.

ಪ್ರೊಫೈಲ್

ಇನ್ನು ಟ್ವಿಟರ್ ಪ್ರೊಫೈಲ್ ಅನ್ನು ನಿರ್ಬಂಧಿಸುವುದರಿಂದ ನಿರ್ದಿಷ್ಟ ಖಾತೆಗಳನ್ನು ಸಂಪರ್ಕಿಸುವುದನ್ನು ನಿರ್ಬಂಧಿಸಲು, ಅವರ ಟ್ವೀಟ್‌ಗಳನ್ನು ನೋಡುವುದರಲ್ಲಿ ಮತ್ತು ಅವುಗಳನ್ನು ಅನುಸರಿಸಲು ನಿಮಗೆ ಸಹಾಯ ಮಾಡುತ್ತದೆ. ನೀವು ನಿರ್ಬಂಧಿಸಿರುವ ಖಾತೆಗಳು ನಿಮ್ಮನ್ನು ಅನುಸರಿಸಲು ಸಾಧ್ಯವಿಲ್ಲ, ಮತ್ತು ನೀವು ನಿರ್ಬಂಧಿಸಿದ ಖಾತೆಯನ್ನು ಅನುಸರಿಸಲು ನಿಮಗೂ ಕೂಡ ಸಾಧ್ಯವಾಗುವುದಿಲ್ಲ. ಆದರೆ ನೀವು ಬ್ಲಾಕ್‌ ಮಾಡಿರುವ ಅಕೌಂಟ್‌ ಪಟ್ಟಿಯನ್ನು ವೀಕ್ಷಿಸಲು ಮತ್ತು ನಿರ್ವಹಿಸಲು ಟ್ವಿಟರ್ ನಿಮಗೆ ಸುಲಭಗೊಳಿಸುತ್ತದೆ.

ಪ್ರೊಫೈಲ್ ಅನ್ನು ಅನ್‌ಬ್ಲಾಕ್‌ ಮಾಡುವುದು ಹೇಗೆ?

ಪ್ರೊಫೈಲ್ ಅನ್ನು ಅನ್‌ಬ್ಲಾಕ್‌ ಮಾಡುವುದು ಹೇಗೆ?

ಹಂತ:1 ಟ್ವಿಟರ್‌ನ ಮೇಲಿನ ಎಡ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ಟ್ವಿಟರ್ ಸೆಟ್ಟಿಂಗ್‌ಗಳಿಗೆ ಹೋಗಿ.
ಹಂತ:2 ನಂತರ ಹೆಲ್ಫ್‌ ಸೆಂಟರ್‌ ಮೇಲಿರುವ ಸೆಟ್ಟಿಂಗ್ಸ್‌ ಮತ್ತು ಗೌಪ್ಯತೆಯನ್ನು ಟ್ಯಾಪ್ ಮಾಡಿ.
ಹಂತ:3 ಗೌಪ್ಯತೆ ಮೆನು ಪ್ರವೇಶಿಸಲು ಗೌಪ್ಯತೆ ಮತ್ತು ಸುರಕ್ಷತೆಯನ್ನು ಆರಿಸಿ ಅಲ್ಲಿ ನೀವು ನಿರ್ಬಂಧಿಸಿರುವ ಟ್ವಿಟರ್ ಖಾತೆಗಳನ್ನು ವೀಕ್ಷಿಸಬಹುದು ಮತ್ತು ನಿರ್ವಹಿಸಬಹುದಾಗಿದೆ.

Best Mobiles in India

English summary
Twitter, one of the most used social networking websites, lets you connect with people no matter where you are, but having a huge number of users on Twitter, chances are your Twitter feed might be filled up with unnecessary posts and tweets.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X