ಫೋನ್‌ ಕಳೆದುಹೋದಾಗ Google Pay ಮತ್ತು Paytm ಅಕೌಂಟ್‌ ಬ್ಲಾಕ್‌ ಮಾಡುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಯುಪಿಐ ಪಾವತಿ ಅಪ್ಲಿಕೇಶನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಡಿವೆ. ಅದರಲ್ಲೂ ಪೇಟಿಎಂ, ಗೂಗಲ್‌ ಪೇ, ಫೋನ್‌ಪೇ ಅಪ್ಲಿಕೇಶನ್‌ಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಒಂದು ವೇಳೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ ಕಳೆದುಕೊಂಡರೆ ಫೋನ್‌ನಲ್ಲಿರುವ ಪೇಟಿಎಂ, ಗೂಗಲ್‌ಪೇ ದುರ್ಬಳಕೆ ಆಗದಂತೆ ಆಡೋದು ಹೇಗೆ ಅನ್ನೊ ಚಿಂತೆ ಇರುತ್ತದೆ. ನಿಮ್ಮ ಗೂಗಲ್‌ ಪೇ ಅಥವಾ ಪೇಟಿಎಂ ಖಾತೆಯನ್ನು ಲಾಕ್ ಮಾಡಲು ನೀವು ಪಾಸ್‌ಕೋಡ್ ಬಳಸುವ ಮೂಲಕ ಬೇರೆಯವರ ಕೈಗೆ ನಿಮ್ಮ ಡೇಟಾ ಸಿಗದಂತೆ ಮಾಡುವುದಕ್ಕೆ ಕ್ರಮಕೈಗೊಳ್ಳಬೇಕಾಗುತ್ತದೆ.

ಸ್ಮಾರ್ಟ್‌ಫೋನ್‌

ಹೌದು, ನಿಮ್ಮ ಸ್ಮಾರ್ಟ್‌ಫೋನ್‌ ಕಳೆದು ಹೋದಾಗ ಬೇರೆಯವರು ನಿಮ್ಮ ಗೂಗಲ್‌ಪೇ, ಪೇಟಿಎಂ ಅಕೌಂಟ್‌ ಬಳಸದಂತೆ ತಡೆಯುವುದು ಅವಶ್ಯಕವಾಗಿದೆ. ಬೇರೆಯವರು ನಿಮ್ಮ ಯುಪಿಐ ಪಾವತಿ ಅಪ್ಲಿಕೇಶನ್‌ಗಳನ್ನ ಅನಲಾಕ್‌ ಮಾಡದಂತೆ ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನೀವು ನಿಮ್ಮ ಡಿಜಿಟಲ್ ಪಾವತಿ ಖಾತೆಗಳನ್ನು ರಿಮೋಟ್ ಆಗಿ ತೆಗೆದುಹಾಕುವುದಕ್ಕೆ ಕೆಲವು ಮಾರ್ಗಗಳಿವೆ. ಹಾಗಾದ್ರೆ ಕಳೆದುಹೋದ ಸ್ಮಾರ್ಟ್‌ಫೋನ್‌ನಲ್ಲಿರುವ ನಿಮ್ಮ ಯುಪಿಐ ಪಾವತಿ ಅಪ್ಲಿಕೇಶನ್‌ಗಳನ್ನು ಬ್ಲಾಕ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಿಮ್ಮ ಕಳೆದುಹೋದ ಸ್ಮಾರ್ಟ್‌ಫೋನ್‌ನಲ್ಲಿ Paytm ಖಾತೆಯನ್ನು ರಿಮೋವ್‌ ಮಾಡುವುದು ಹೇಗೆ?

ಪೇಟಿಎಂ ಅಕೌಂಟ್‌ ಬಳಸುವ ಬಳಕೆದಾರರು ಎಲ್ಲಾ ಡಿವೈಸ್‌ಗಳಿಂದ ಸುಲಭವಾಗಿ ಲಾಗ್‌ಔಟ್‌ ಮಾಡಬಹುದು. ಇದಕ್ಕಾಗಿ ನೀವು ನಿಮ್ಮ ಖಾತೆಯ ಪಾಸ್‌ವರ್ಡ್ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದರ ಮೂಲಕ ನಿಮ್ಮ Paytm ಖಾತೆಗೆ ಲಿಂಕ್ ಆಗಿರುವ ಎಲ್ಲಾ ಡಿವೈಸ್‌ಗಳಿಂದ ಲಾಗ್ ಔಟ್ ಮಾಡಬಹುದು. ಅದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ನಿಮ್ಮ ಕಳೆದುಹೋದ ಸ್ಮಾರ್ಟ್‌ಫೋನ್‌ನಲ್ಲಿ Paytm ಖಾತೆಯನ್ನು ರಿಮೋವ್‌ ಮಾಡುವುದು ಹೇಗೆ?

ನಿಮ್ಮ ಕಳೆದುಹೋದ ಸ್ಮಾರ್ಟ್‌ಫೋನ್‌ನಲ್ಲಿ Paytm ಖಾತೆಯನ್ನು ರಿಮೋವ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಇನ್ನೊಂದು ಮೊಬೈಲ್‌ನಲ್ಲಿ Paytm ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಿ
ಹಂತ:2 ನಂತರ ಲಾಗ್ ಇನ್ ಮಾಡಿ.
ಹಂತ:3 ಈಗ, ಪರದೆಯ ಮೇಲಿನ ಎಡಭಾಗದಲ್ಲಿ ಇರುವ ಹ್ಯಾಂಬರ್ಗರ್ ಮೆನುವಿನ ಮೇಲೆ ಟ್ಯಾಪ್ ಮಾಡಿ.
ಹಂತ:4 ಇದರಲ್ಲಿ ನೀವು "ಪ್ರೊಫೈಲ್ ಸೆಟ್ಟಿಂಗ್ಸ್" ಟ್ಯಾಬ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
ಹಂತ:5 ಇಲ್ಲಿ "ಭದ್ರತೆ ಮತ್ತು ಗೌಪ್ಯತೆ" ಅನ್ನು ಕ್ಲಿಕ್ ಮಾಡಿರಿ.
ಹಂತ:6 ನಂತರ "ಮ್ಯಾನೇಜ್ ಅಕೌಂಟ್ಸ್ ಆನ್ ಆಲ್ ಡಿವೈಸ್‌" ಆಯ್ಕೆಯನ್ನು ಟ್ಯಾಪ್ ಮಾಡಬೇಕಾಗುತ್ತದೆ.
ಹಂತ:7 ಒಮ್ಮೆ ನೀವು ಅದರ ಮೇಲೆ ಟ್ಯಾಪ್ ಮಾಡಿದ ನಂತರ, ಅಪ್ಲಿಕೇಶನ್ ಸಂದೇಶವನ್ನು ಪ್ರದರ್ಶಿಸುತ್ತದೆ, ಅದು ಎಲ್ಲಾ ಡಿವೈಸ್‌ಗಳಿಂದ ಲಾಗ್ ಔಟ್ ಮಾಡುವ ಬಗ್ಗೆ ನಿಮಗೆ ಖಚಿತವಾಗಿದೆಯೇ ಎಂದು ಕೇಳುತ್ತದೆ. ನಂತರ ನೀವು ಅದಕ್ಕೆ ಅನುಗುಣವಾಗಿ "ಹೌದು" ಅಥವಾ "ಇಲ್ಲ" ಒತ್ತಿರಿ.

ಅಕೌಂಟ್‌

ಇದಲ್ಲದೆ ನೀವು ನಿಮ್ಮ ಕಳೆದು ಹೋದ ಡಿವೈಸ್‌ನಲ್ಲಿರುವ ಪೇಟಿಎಂ ಅಕೌಂಟ್‌ ಬ್ಲಾಕ್‌ ಮಾಡಲು Paytm ಸಹಾಯವಾಣಿಗೆ ಕರೆ ಮಾಡಬಹುದು. ಪೇಟಿಎಂ ಸಹಾಯವಾಣಿ ಸಂಖ್ಯೆಯಾದ "01204456456" ಅನ್ನು ಡಯಲ್ ಮಾಡುವ ಮೂಲಕ ನಿಮ್ಮ ಸಮಸ್ಯೆಯನ್ನು ತಿಳಿಸಬಹುದು. ನಿಮ್ಮ ಪ್ರಶ್ನೆಯ ಕುರಿತು ನಿಮಗೆ ಹಲವಾರು ಆಯ್ಕೆಗಳನ್ನು ನೀಡಲಾಗುತ್ತದೆ, ಇದರಲ್ಲಿ ನೀವು "ಕಳೆದುಹೋದ ಫೋನ್" ಆಯ್ಕೆಯನ್ನು ಆರಿಸಬೇಕಾಗುತ್ತದೆ. ಇದರ ನಂತರ, ಬೇರೆ ಸಂಖ್ಯೆಯನ್ನು ನಮೂದಿಸುವ ಆಯ್ಕೆಯನ್ನು ಆರಿಸಿ ಮತ್ತು ನಂತರ ನಿಮ್ಮ ಕಳೆದುಹೋದ ಫೋನ್ ಸಂಖ್ಯೆಯನ್ನು ನಮೂದಿಸಿ. ನಂತರ ನೀವು ಎಲ್ಲಾ ಸಾಧನಗಳಿಂದ ಲಾಗ್ ಔಟ್ ಮಾಡಬಹುದು.

Paytm ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವುದು ಹೇಗೆ?

Paytm ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವುದು ಹೇಗೆ?

ನೀವು ಎಲ್ಲಾ ಡಿವೈಸ್‌ಗಳಿಂದ ಪೇಟಿಎಎಂ ಅಕೌಂಟ್‌ ಅನ್ನು ಲಾಗ್ ಔಟ್ ಮಾಡಿದ ನಂತರ Paytm ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಇದರಲ್ಲಿ '24×7 ಸಹಾಯವನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಪೇಟಿಎಂ ಅಕೌಂಟ್‌ ಅನ್ನು ತಾತ್ಕಾಲಿಕವಾಗಿ ಸಸ್ಪೆಂಡ್‌ ಮಾಡಬಹುದು. ಇದಕ್ಕಾಗಿ ನೀವು ಪೇಟಿಎಂ ಹೆಲ್ಪ್‌ಲೈನ್‌ನಲ್ಲಿ "ವಂಚನೆಯನ್ನು ವರದಿ ಮಾಡಿ" ಆಯ್ಕೆಮಾಡಿ, ನೀವು ಬಯಸಿದ ವರ್ಗವನ್ನು ಕ್ಲಿಕ್ ಮಾಡಬೇಕಾಗುತ್ತದೆ. ಈಗ, ನಮಗೆ ಸಂದೇಶ ಕಳುಹಿಸಿ ಬಟನ್ ಅನ್ನು ಕ್ಲಿಕ್ ಮಾಡಿ ಹಾಗೂ ನಿಮ್ಮ ಅಕೌಂಟ್‌ ಮಾಲೀಕತ್ವದ ಒಂದು ಪುರಾವೆಯನ್ನು ಸಲ್ಲಿಸಿ, ನಂತರ Paytm ಎರಡು ಬಾರಿ ಪರಿಶೀಲಿಸುತ್ತದೆ. ನಂತರ ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್‌ ಮಾಡುತ್ತದೆ.

ನಿಮ್ಮ ಕಳೆದುಹೋದ ಫೋನ್‌ನಿಂದ ಗೂಗಲ್‌ಪೇ ಅಕೌಂಟ್‌ ಬ್ಲಾಕ್‌ ಮಾಡುವುದು ಹೇಗೆ?

ನಿಮ್ಮ ಕಳೆದುಹೋದ ಫೋನ್‌ನಿಂದ ಗೂಗಲ್‌ಪೇ ಅಕೌಂಟ್‌ ಬ್ಲಾಕ್‌ ಮಾಡುವುದು ಹೇಗೆ?

ಇನ್ನೊಂದು ಸ್ಮಾರ್ಟ್‌ಫೋನ್‌ನಿಂದ ನಿಮ್ಮ ಎಲ್ಲಾ ಡೇಟಾವನ್ನು ಡಿಲೀಟ್‌ ಮಾಡಿದರೆ ಸಾಕು ನಿಮ್ಮ ಗೂಗಲ್‌ಪೇ ಅಕೌಂಟ್‌ ಬ್ಲಾಕ್‌ ಆಗಲಿದೆ. ಇದಕ್ಕಾಗಿ ನೀವು ನಿಮ್ಮ Android ಫೋನ್ ಡೇಟಾವನ್ನು "android.com/find" ಗೆ ಹೋಗಿ ಮತ್ತು ನಿಮ್ಮ Google ಖಾತೆಗೆ ಸೈನ್ ಇನ್ ಮಾಡುವ ಮೂಲಕ ಡೇಟಾವನ್ನು ಡಿಲೀಟ್‌ ಮಾಡಬಹುದು.
ಇದಲ್ಲದೆ Google Pay ಬಳಕೆದಾರರು 18004190157 ಅನ್ನು ಡಯಲ್ ಮಾಡುವ ಮೂಲಕ "ಇತರ ಸಮಸ್ಯೆಗಳು" ಆಯ್ಕೆಯನ್ನು ಆಯ್ಕೆ ಮಾಡಬಹುದು. ನಿಮ್ಮ Google ಖಾತೆಯನ್ನು ನಿರ್ಬಂಧಿಸಲು ಸಹಾಯ ಮಾಡುವ ತಜ್ಞರೊಂದಿಗೆ ಮಾತನಾಡಲು ನೀವು ನಂತರ ಆಯ್ಕೆಯನ್ನು ಆಯ್ಕೆ ಮಾಡಬಹುದು. ಹೀಗೆ ಮಾಡುವ ಮೂಲಕ ನಿಮ್ಮ ಗೂಗಲ್‌ಪೇ ಅಕೌಂಟ್‌ ಅನ್ನು ಡಿಲೀಟ್‌ ಮಾಡಬಹುದಾಗಿದೆ.

Google Pay ನಲ್ಲಿ ಇಮೇಲ್ ID ಅನ್ನು ಬದಲಾಯಿಸುವುದು ಹೇಗೆ?

Google Pay ನಲ್ಲಿ ಇಮೇಲ್ ID ಅನ್ನು ಬದಲಾಯಿಸುವುದು ಹೇಗೆ?

ಹಂತ 1: ಸೆಟ್ಟಿಂಗ್ಸ್‌ ಅಪ್ಲಿಕೇಶನ್ ತೆರೆಯಿರಿ> ಅಪ್ಲಿಕೇಶನ್‌ಗಳು> ಮ್ಯಾನೇಜ್‌ ಆಪ್ಸ್‌ > ಗೂಗಲ್ ಪೇ ತೆರೆಯಿರಿ
ಹಂತ 2: ಕ್ಲಿಯರ್‌ ಡೇಟಾ ಆಯ್ಕೆಯನ್ನು ಆರಿಸಿ. ನಿಮ್ಮ ಫೋನ್‌ಗೆ ಅನುಗುಣವಾಗಿ ಈ ಹಂತವು ಬದಲಾಗಬಹುದು ಎಂಬುದನ್ನು ಗಮನಿಸಿ. ಹಂತ 3: ಡೇಟಾವನ್ನು ತೆರವುಗೊಳಿಸಿದ ನಂತರ Google Pay ಅಪ್ಲಿಕೇಶನ್ ತೆರೆಯಿರಿ. ಇಲ್ಲಿ, Google Pay ಅಪ್ಲಿಕೇಶನ್ ಅನ್ನು ಮೊದಲಿನಿಂದಲೂ ಬಳಸಲು ನಿಮಗೆ ಅವಕಾಶ ಸಿಗುತ್ತದೆ. ಪ್ರಾರಂಭಿಸಲು, ನಿಮ್ಮ ಬ್ಯಾಂಕಿನೊಂದಿಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ನಮೂದಿಸಬೇಕಾಗಿದೆ.
ಹಂತ 4: ಮುಂದೆ, ನಿಮ್ಮ ಫೋನ್ ಸ್ವಯಂಚಾಲಿತವಾಗಿ ನಿಮ್ಮ Google Pay ಖಾತೆಗೆ ಸಂಪರ್ಕಗೊಂಡಿರುವ Gmail ವಿಳಾಸಗಳನ್ನು ತೋರಿಸುತ್ತದೆ. ನೀವು ಅದನ್ನು ಬದಲಾಯಿಸಲು ಬಯಸಿದರೆ, ಅದನ್ನು ಮಾಡಲು ಇಲ್ಲಿ ಅವಕಾಶ ದೊರೆಯಲಿದೆ.
ಹಂತ 5:ಇಲ್ಲಿ ಎಡಿಟ್‌ ಬಟನ್ ಆಯ್ಕೆಮಾಡಿ ಮತ್ತು ಇಮೇಲ್ ಐಡಿ ಬದಲಾಯಿಸಿ. Change Google Account' > Add Account > enter the new email ID. ಈ ಮೂಲಕ ನಿಮ್ಮ ಗೂಗಲ್‌ ಪೇ ಖಾತೆಯಲ್ಲಿ ಇಮೇಲ್‌ ಐಡಿಯನ್ನು ಬದಲಾಯಿಸಬಹುದಾಗಿದೆ.

Best Mobiles in India

Read more about:
English summary
There are ways to remotely remove or block your Google Pay and Paytm accounts, so let's take a look at how you can do that.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X