ಜಿಯೋ ಫೋನ್‌ನಲ್ಲಿ Paytm ಅನ್ನು ಇನ್‌ಸ್ಟಾಲ್‌ ಮಾಡುವುದು ಹೇಗೆ?

|

ಜಿಯೋ ಭಾರತದಲ್ಲಿ ಟೆಲಿಕಾಂ ವಲಯದ ದೈತ್ಯ ಎನಿಸಿಕೊಂಡಿದೆ. ಕಡಿಮೆ ಡೇಟಾ ಸೌಲಭ್ಯ ನೀಡುವ ಮೂಲಕ ಸಾಕಷ್ಟು ಸಂಚಲನ ಸೃಷ್ಟಿಸಿದ್ದ ಜಿಯೋ ತನ್ನ ವ್ಯಾಪ್ತಿಯನ್ನು ಹಲವು ವಲಯಗಳಲ್ಲಿ ಈಗಾಗಲೇ ವಿಸ್ತರಿಸಿಕೊಳ್ಳುತ್ತಾ ಹೋಗಿದೆ. ಕೇವಲ ಟೆಲಿಕಾಂ ವಲಯ ಮಾತ್ರವಲ್ಲದೆ ಜಿಯೋ ಫೀಚರ್‌ಫೋನ್‌ ಅನ್ನು ಪರಿಚಯಿಸುವ ಮೂಲಕ ಫೀಚರ್‌ಫೋನ್‌ನಲ್ಲಿಯೂ ಯುಟ್ಯೂಬ್‌, ವಾಟ್ಸಾಪ್‌ ಬೆಂಬಲಿಸುವ ಅವಕಾಶವನ್ನು ನೀಡಿದೆ. ಸದ್ಯ ಜಿಯೋ ಫೋನ್‌ ಈಗ ದೇಶದ ಜನಪ್ರಿಯ ಫೀಚರ್ ಫೋನ್ ಆಗಿದೆ. ಹಾಗಾದ್ರೆ ಜಿಯೋ ಫೋನಿನಲ್ಲಿ Paytm ಅಪ್ಲಿಕೇಶನ್ ಅನ್ನು ಸಹ ಡೌನ್‌ಲೋಡ್ ಮಾಡಬಹುದೇ ಅನ್ನೊ ಗೊಂದಲ ಇದೆ. ಇದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಫೋನ್‌

ಹೌದು, ಜಿಯೋ ಫೋನ್‌ ಜನಪ್ರಿಯ ಫೀಚರ್‌ ಫೋನ್‌ಗಳಲ್ಲಿ ಒಂದಾಗಿದೆ. ಈಗಾಗಲೇ ಜಿಯೋ ಫೋನ್‌ನಲ್ಲಿ ವಾಟ್ಸಾಪ್‌, ಯುಟ್ಯೂಬ್‌, ಫೇಸ್‌ಬುಕ್‌ನ ಸೇವೆಗಳು ಲಭ್ಯವಿದೆ. ಅಲ್ಲದೆ ಜಿಯೋ ಟಿವಿ ಅಪ್ಲಿಕೇಶನ್‌ ಅನ್ನು ಸಹ ಬಳಸಬಹುದಾಗಿದೆ. ಆದರೆ ಜಿಯೋ ಫೋನ್‌ನಲ್ಲಿ ಪೇಟಿಎಂ ಆಪ್‌ ಅನ್ನು ಬಳಸಬಹುದಾ ಎನ್ನುವ ಗೊಂದಲ ಕೂಡ ಇದೆ. ನಿಜ ಪೇಟಿಎಂ ಆಪ್‌ ಅನ್ನು ಜಿಯೋ ಫೀಚರ್‌ಫೋನಿನಲ್ಲಿ ಬಳಸಬಹುದು ಹಾಗಾದ್ರೆ ಜಿಯೋ ಫೋನ್‌ನಲ್ಲಿ ಪೇಟಿಎಂ ಆಪ್‌ ಡೌನ್‌ಲೊಡ್‌ ಮಾಡುವುದು ಹೇಗೆ ಅನ್ನೊದನ್ನ ತಿಳಿದುಕೊಳ್ಳೋಣ ಬನ್ನಿರಿ.

ಜಿಯೋ

ಇತ್ತೀಚಿನ ದಿನಗಳಲ್ಲಿ ಜಿಯೋ ಫೀಚರ್‌ಫೋನ್‌ ಹಲವು ಅಪ್ಲಿಕೇಶನ್‌ ಪ್ಲಾಟ್‌ಫಾರ್ಮ್‌ಗಳನ್ನ ಬೆಂಬಲಿಸುತ್ತಿದೆ. ಇದರಲ್ಲಿ ಪೇಟಿಎಂ ಆಪ್‌ ಕೂಡ ಒಂದು. ಇನ್ನು ಪ್ರಸ್ತುತ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆ ಕೂಡ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಡಿಜಿಟಲ್‌ ಪೇಮೆಂಟ್‌ ಸೇವೆಗಾಗಿ ಈಗಾಗಲೇ ಗೂಗಲ್‌ ಪೇ, ಫೋನ್‌ ಪೇ, ಪೇಟಿಎಂ ಆಪ್‌ಗಳು ಪ್ರಸಿದ್ದಿಯನ್ನ ಪಡೆದುಕೊಂಡಿವೆ. ಇನ್ನು ಪೇಟಿಎಂ ಪ್ರಸ್ತುತ ಪ್ರಮುಖ ಆನ್‌ಲೈನ್ ಪಾವತಿ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜನರು ಹಣವನ್ನು ಡಿಜಿಟಲ್ ಪಾವತಿ ವಿಧಾನದ ಮೂಲಕ ಬಳಸುವುದಕ್ಕೆ ಮುಂದಾಗಿದ್ದಾರೆ.

ಜಿಯೋ ಫೋನ್‌

ಆದರಲ್ಲೂ ಕೊರೋನಾ ವೈರಸ್‌ ಹಾವಳಿ ಶುರುವಾದ ನಂತರ ಡಿಜಿಟಲ್ ಅಪ್ಲಿಕೇಶನ್‌ಗಳ ಬಳಕೆ ಹೆಚ್ಚಾಗಿದೆ. ಹಾಗಂತ ಡಿಜಿಟಲ್‌ ಪೇಮೆಂಟ್‌ ಬಲಸುವುದಕ್ಕೆ ಸ್ಮಾರ್ಟ್‌ಫೋನ್‌ಗಳೇ ಇರಬೇಕು ಅಂದೇನಿಲ್ಲ. ಜಿಯೋ ಫೋನ್‌ ಬಳಸುವವರು ಕೂಡ ತಮ್ಮ ಡಿಜಟಲ್‌ ಪಾವತಿ ವ್ಯವಸ್ಥೆಯನ್ನು ಪಡೆದುಕೊಳ್ಳಬಹುದು. ಆದರೆ ಓಮ್ನಿಸ್ಡ್ ಅಪ್ಲಿಕೇಶನ್‌ನ ಸಹಾಯದಿಂದ ನಿಮ್ಮ ಜಿಯೋ ಫೋನ್‌ನಲ್ಲಿ ನೀವು Paytm ಅನ್ನು ಸಹ ಇನ್‌ಸ್ಟಾಲ್‌ ಮಾಡಬಹುದು.

ಜಿಯೋ ಫೋನ್‌ನಲ್ಲಿ Paytm ಅನ್ನು ಇನ್‌ಸ್ಟಾಲ್‌ ಮಾಡುವುದು ಹೇಗೆ?

ಜಿಯೋ ಫೋನ್‌ನಲ್ಲಿ Paytm ಅನ್ನು ಇನ್‌ಸ್ಟಾಲ್‌ ಮಾಡುವುದು ಹೇಗೆ?

ಹಂತ 1: ನಿಮ್ಮ ಜಿಯೋ ಫೋನ್‌ನಲ್ಲಿ ಬ್ರೌಸರ್‌ಗೆ ಹೋಗಿ ಮತ್ತು 'Paytm APK' ಗಾಗಿ ಹುಡುಕಿ.
ಹಂತ 2: ನಂತರ 'ಡೌನ್‌ಲೋಡ್ ಎಪಿಕೆ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3: ಇದೀಗ ಇನ್‌ಸ್ಟಾಲ್‌ ಕ್ಲಿಕ್ ಮಾಡಿ ಮತ್ತು ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ.

Paytm

ಈ ಹಂತಗಳನ್ನು ಸನುಸರಿಸಿದ ನಂತರ ನಿಮ್ಮ Paytm ಖಾತೆಗೆ ನೀವು ಲಾಗ್ ಇನ್ ಮಾಡಬಹುದು ಅಥವಾ ನಿಮ್ಮ Jio ಫೋನ್‌ನಲ್ಲಿ ಹೊಸ ಖಾತೆಯನ್ನು ತೆರೆಯಬಹುದು. ಇನ್ನು ನೀವು ಬಯಸಿದರೆ ನೀವು Paytm UPI ಅನ್ನು ಸಹ ನೋಂದಾಯಿಸಬಹುದು. ಇದನ್ನು ಮಾಡಲು, ಮೊದಲು, ನೀವು ಅಪ್ಲಿಕೇಶನ್‌ನಲ್ಲಿ ಯುಪಿಐ ವಿಭಾಗಕ್ಕೆ ಹೋಗಬೇಕು, ನಂತರ ನಿಮ್ಮ ನೋಂದಾಯಿತ ಯುಪಿಐ ಖಾತೆಯನ್ನು ನೀವು ನೋಡಬಹುದು. ನಂತರ ಮೇಲಿನ ಬಲಭಾಗದಲ್ಲಿರುವ ಮೂರು-ಡಾಟ್ ಕ್ಲಿಕ್ ಮಾಡಿ ಮತ್ತು 'deregistered UPI profile' ಆಯ್ಕೆಮಾಡಿ. ಕೊನೆಯದಾಗಿ, 'ಸರಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಪೇಟಿಎಂ ಯುಪಿಐ ಅನ್ನು ನೊಂದಾಯಿಸಬಹುದಾಗಿದೆ..

Most Read Articles
Best Mobiles in India

English summary
Jio Phone is now the popular feature phone in the country. Now, the question is can you download Paytm App on the Jio Phone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X