ಗೂಗಲ್‌ ಫೋಟೋಸ್ ಪೋಟೋಗಳನ್ನು ಲ್ಯಾಪ್‌ಟಾಪ್‌ಗೆ ಡೌನ್‌ಲೋಡ್ ಮಾಡುವುದು ಹೇಗೆ?

|

ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆ ತನ್ನ ಬಳಕೆದಾರರಿಗೆ ಈಗಾಲೇ ಹಲವು ಆಕರ್ಷಕ ಸೇವೆಗಳನ್ನು ಪರಿಚಯಿಸಿದೆ. ಇದರಲ್ಲಿ ಗೂಗಲ್‌ ಫೋಟೋಸ್‌ ಸೇವೆ ಕೂಡ ಒಂದಾಗಿದೆ. ಸದ್ಯ ಇದೀಗ ಗೂಗಲ್‌ ತನ್ನ ತನ್ನ ಜನಪ್ರಿಯ ಗೂಗಲ್ ಫೋಟೋಸ್‌ ನಲ್ಲಿ ನೀಡುತ್ತಿದ್ದ ಉಚಿತ ಸ್ಥಳಾವಕಾಶಕ್ಕೆ ಕತ್ತರಿ ಹಾಕಲು ಮುಂದಾಗಿದೆ. ಇದು ಜೂನ್‌ 1, 2021 ರಿಂದ ಜಾತಿಗೆ ಬರಲಿದೆ ಎಂದು ಈಗಾಗಲೇ ಗೂಗಲ್‌ ಘೋಷಣೆ ಮಾಡಿದೆ. ಇನ್ನು ಗೂಗಲ್‌ ಫೋಟೋಸ್ ಫ್ರೀ ಸ್ಪೇಸ್‌ ಅನ್ನು ಕಡಿತ ಮಾಡುವುದರಿಂದ ನೀವು ಮತ್ತೇ ಸ್ಟೋರೇಜ್‌ ಮಾಡಬೇಕಾದರೆ ಗೂಗಲ್‌ ಒನ್‌ ಅಲ್ಲಿ ಚಂದಾದಾರಿಕೆ ಸೇವೆಯನ್ನು ಪಡದುಕೊಳ್ಳಬಹುದಾಗಿದೆ.

ಗೂಗಲ್

ಹೌದು, ಗೂಗಲ್ ಸಂಸ್ಥೆಯು ತನ್ನ ಗೂಗಲ್ ಫೋಟೋಸ್‌ ನಲ್ಲಿ ಅನಿಯಮಿತ ಉಚಿತ ಸ್ಟೋರೇಜ್ ಸ್ಥಳಾವಕಾಶ ನಿಲ್ಲಿಸುವುದಾಗಿ ಹೇಳಿದೆ. ಈ ಬದಲಾವಣೆಯು ಜೂನ್ 1, 2021ರಿಂದ ಅನ್ವಯವಾಗಲಿದೆ ಎಂದು ಹೇಳಲಾಗಿದೆ. ಉತ್ತಮ ಗುಣಮಟ್ಟದ ಫೋಟೊ, ವಿಡಿಯೊಗಳಿಗೆ ಉಚಿತ ಸ್ಟೋರೇಜ್ ಸ್ಥಳಾವಕಾಶವನ್ನು ನಿಲ್ಲಿಸಲಿದೆ. ಇದರಿಂದ ಗೂಗಲ್ ಫೋಟೋಗಳಿಗೆ ಅಪ್‌ಲೋಡ್ ಮಾಡಲಾದ ಎಲ್ಲಾ ಹೊಸ ಮಾಧ್ಯಮಗಳು ಪ್ರತಿ ಗೂಗಲ್ ಖಾತೆ ಬಳಕೆದಾರರಿಗೆ ನೀಡಲಾಗುವ 15 ಜಿಬಿ ಉಚಿತ ಸಂಗ್ರಹಣೆಯ ಒಂದು ಭಾಗವಾಗಿರುತ್ತದೆ. ನೀವು ಚಂದಾದಾರರಾಗಿರುವ ಯಾವುದೇ Google One ಚಂದಾದಾರಿಕೆಗೂ ಇದು ಅನ್ವಯಿಸುತ್ತದೆ. ಹಾಗಾದ್ರೆ ಇನ್ಮುಂದೆ ಗೂಗಲ್‌ ಪೋಟೊಸ್‌ನಲ್ಲಿರುವ ಸ್ಟೋರೇಜ್‌ ಅನ್ನು ಚಂದಾದಾರಿಕೆ ಸೇವೆ ಇಲ್ಲದೆ ಬೇರೆ ಕಡೆ ಸಂಗ್ರಹಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌ ಸಂಸ್ಥೆ

ಗೂಗಲ್‌ ಸಂಸ್ಥೆ ಜೂನ್‌ 1, 2021 ಕ್ಕೆ ಗೂಗಲ್ ಫೋಟೋಸ್‌ನಲ್ಲಿ ಅನಿಯಮಿತ ಫ್ರೀ ಸ್ಟೋರೇಜ್‌ ಸೇವೆಯನ್ನು ನಿಲ್ಲಿಸಲಿದೆ. ಇದು ನಿಮ್ಮ ಫೋಟೋಗಳನ್ನು ನಿಮ್ಮ Google ಖಾತೆಯೊಂದಿಗೆ ಬರುವ 15GB ಉಚಿತ ಸಂಗ್ರಹಣೆಯಲ್ಲಿ ಒಂದು ಭಾಗವಾಗಿರುತ್ತದೆ. ಇದು GMail, Google ಡಾಕ್ಸ್, Google ಶೀಟ್‌ಗಳು ಮತ್ತು ಇತರ Google ಸೇವೆಗಳನ್ನು ಒಳಗೊಂಡಿದೆ. ಅಲ್ಲದೆ ನಿಮ್ಮ ಸ್ಟೋರೇಜ್‌ ಅನ್ನು ಗೂಗಲ್‌ನ Google One ಅಥವಾ Apple ನ iCloud ನಂತಹ ಪಾವತಿಸಿದ ಕ್ಲೌಡ್ ಶೇಖರಣಾ ಸೇವೆಗೆ ಹೋಗುವುದು ಒಂದು ಆಯ್ಕೆಯಾಗಿದೆ. ನೀವು ಸಂಗ್ರಹಣೆಗಾಗಿ ಖರ್ಚು ಮಾಡಲು ಬಯಸದಿದ್ದರೆ, ನೀವು ಅವುಗಳನ್ನು ನಿಮ್ಮ PC / ಲ್ಯಾಪ್‌ಟಾಪ್‌ನ ಡ್ರೈವ್‌ನಲ್ಲಿ ಸಂಗ್ರಹಿಸಬಹುದಾಗಿದೆ. ಹಾಗಾದ್ರೆ ಗೂಗಲ್‌ ಫೋಟೋಸ್‌ ಅನ್ನು ಲ್ಯಾಪ್‌ಟಾಪ್‌ನಲ್ಲಿ ಡೌನ್‌ಲೋಡ್‌ ಮಾಡುವುದನ್ನ ಕೆಳಗಿನ ಹಂತಗಳಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಗೂಗಲ್ ಫೋಟೋಸ್‌ಗಳಲ್ಲಿನ ಫೋಟೋ ಮತ್ತು ವೀಡಿಯೊಗಳನ್ನು ಲ್ಯಾಪ್‌ಟಾಪ್‌ಗೆ ಡೌನ್‌ಲೋಡ್ ಮಾಡುವುದು ಹೇಗೆ?

ಗೂಗಲ್ ಫೋಟೋಸ್‌ಗಳಲ್ಲಿನ ಫೋಟೋ ಮತ್ತು ವೀಡಿಯೊಗಳನ್ನು ಲ್ಯಾಪ್‌ಟಾಪ್‌ಗೆ ಡೌನ್‌ಲೋಡ್ ಮಾಡುವುದು ಹೇಗೆ?

1. ಯಾವುದೇ ಬ್ರೌಸರ್‌ನಿಂದ ‘takeout.google.com' ಗೆ ಭೇಟಿ ನೀಡುವ ಮೂಲಕ Google Takeout ತೆರೆಯಿರಿ

2. Google ಖಾತೆ ರುಜುವಾತುಗಳನ್ನು ಬಳಸಿಕೊಂಡು ಲಾಗಿನ್ ಮಾಡಿ
3. ಮುಂದೆ ‘ಡಿ ಸೆಲೆಕ್ಟ್‌ ಆಲ್‌' ಆಯ್ಕೆಯನ್ನು ಕ್ಲಿಕ್ ಮಾಡಿ
4. ಈಗ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು Google ಫೋಟೋಗಳ ಆಯ್ಕೆಯ ಮುಂದೆ ಇರಿಸಲಾಗಿರುವ ಚೆಕ್‌ಬಾಕ್ಸ್ ಆಯ್ಕೆಮಾಡಿ
5. ಗೂಗಲ್ ಫೋಟೋಗಳ ಆಯ್ಕೆಯ ಅಡಿಯಲ್ಲಿ, ಬಳಕೆದಾರರು ಯಾವ ಸ್ವರೂಪಗಳನ್ನು ಎಕ್ಸ್‌ಪೋರ್ಟ್‌ ಮಾಡುತ್ತಾರೆ ಅನ್ನೊದನ್ನು ಪರಿಶೀಲಿಸಲು ಬಳಕೆದಾರರು ‘Multiple formats' ಆಯ್ಕೆಯನ್ನು ಕ್ಲಿಕ್ ಮಾಡಬಹುದು

ಬಟನ್

6. ನಂತರ, ಬಳಕೆದಾರರು ಎಕ್ಸಪೋರ್ಟ್‌ ಮಾಡಲು ನಿರ್ದಿಷ್ಟ ಆಲ್ಬಮ್‌ಗಳನ್ನು ‘All photo album included' ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ನಿರ್ದಿಷ್ಟ ಆಲ್ಬಮ್‌ಗಳನ್ನು ಆಯ್ಕೆ ಮಾಡಬಹುದು
7. ನೀವು ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಎಲ್ಲಾ ರೀತಿಯಲ್ಲಿ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಮುಂದಿನ ಹಂತದ ಬಟನ್ ಕ್ಲಿಕ್ ಮಾಡಿ
8. ಡೆಲಿವರಿ ವಿಧಾನ ಆಯ್ಕೆಯ ಅಡಿಯಲ್ಲಿ, ‘ಇಮೇಲ್ ಮೂಲಕ ಡೌನ್‌ಲೋಡ್ ಲಿಂಕ್ ಕಳುಹಿಸಿ' ಆಯ್ಕೆಮಾಡಿ
9. ಆವರ್ತನ ಅಡಿಯಲ್ಲಿ, ಒಮ್ಮೆ ಎಕ್ಸಪೋರ್ಟ್‌ ಆಯ್ಕೆಮಾಡಿ
10. ಫೈಲ್ ಪ್ರಕಾರ ಮತ್ತು ಗಾತ್ರದ ಅಡಿಯಲ್ಲಿ, .zip ಆಯ್ಕೆಯನ್ನು ಆರಿಸಿ ಮತ್ತು 2GB ಯಿಂದ 50GB ವರೆಗಿನ ಅಪೇಕ್ಷಿತ ಡೌನ್‌ಲೋಡ್ ಗಾತ್ರವನ್ನು ಆರಿಸಿ. ಆಯ್ದ ಗಾತ್ರಕ್ಕಿಂತ ದೊಡ್ಡದಾದ ಫೈಲ್‌ಗಳನ್ನು ಸ್ವಯಂಚಾಲಿತವಾಗಿ ಪ್ರತ್ಯೇಕ ಡೌನ್‌ಲೋಡ್‌ಗಳಾಗಿ ವಿಭಜಿಸಲಾಗುತ್ತದೆ.
11. ಇದಾದ ನಂತರ, ಕ್ರಿಯೆಟ್‌ ಎಕ್ಸಪೋರ್ಟ್‌ ಬಟನ್ ಕ್ಲಿಕ್ ಮಾಡಿ

Best Mobiles in India

English summary
Google has a tool called Google Takeout that allows users to download all their data stored in Google accounts including Google Photos.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X