ಇನ್‌ಸ್ಟಾಗ್ರಾಮ್‌ನಲ್ಲಿ ಕ್ರಾಸ್-ಮೆಸೇಜಿಂಗ್ ಫೀಚರ್ಸ್ ಸಕ್ರಿಯಗೊಳಿಸುವುದು ಹೇಗೆ?

|

ಕೆಲ ದಿನಗಳ ಹಿಂದೆಯಷ್ಟೇ ಫೇಸ್‌ಬುಕ್ ತನ್ನ ಇನ್‌ಸ್ಟಾಗ್ರಾಮ್ ಮತ್ತು ಮೆಸೆಂಜರ್ ಕ್ರಾಸ್-ಮೆಸೇಜಿಂಗ್ ಫೀಚರ್ಸ್ ‌ಅನ್ನು ಪರಿಚಯಿಸಿತ್ತು. ಈ ಮೂಲಕ ಪೇಸ್‌ಬುಕ್‌ ಮೆಸೆಂಜರ್‌ನಲ್ಲಿ ಸಮದೇಶ ಕಳುಹಿಸಿದರೆ ಇನ್‌ಸ್ಟಾಗ್ರಾಮ್‌ನಲ್ಲಿಯೂ ಸಹ ನೋಡಬಹುದಾಗಿತ್ತು. ಅಲ್ಲದೆ ಇನ್‌ಸ್ಟಾಗ್ರಾಮ್‌ ಬಳಕೆದಾರರು ಸಹ ಮೆಸೆಂಜರ್‌ನಲ್ಲಿ ಸ್ನೇಹಿತರ ಜೊತೆ ಚಾಟ್‌ ಮಾಡುವ ಅವಕಾಶವನ್ನು ನೀಡಲಾಗಿತ್ತು. ಈ ಕ್ರಾಸ್‌ ಮೆಸೇಜಿಂಗ್‌ ಫೀಚರ್ಸ್‌ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಎರಡೂ ಅಪ್ಲಿಕೇಶನ್‌ಗಳಲ್ಲಿ ಪರಿಚಯಿಸಿದೆ. ಮೆಸೆಂಜರ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ನಡುವಿನ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಏಕೀಕರಿಸುವ ಮಾರ್ಗ ಇದಾಗಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ತನ್ನ ಒಡೆತನದ ಮೆಸೆಂಜರ್‌ ಮತ್ತು ಇನ್‌ಸ್ಟಾಗ್ರಾಮ್‌ ನಲ್ಲಿ ಕ್ರಾಸ್-ಮೆಸೇಜಿಂಗ್ ಫೀಚರ್ಸ್ ‌ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಅನ್ನು ಬಳಸುವುದು ಹೇಗೆ, ಸಕ್ರಿಯಗೊಳಿಸುವುದು ಹೇಗೆ ಮತ್ತು ಸರಿಯಾದ ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸುವುದು ಅನ್ನೊದು ಅನೇಕರಿಗೆ ತಿಳಿದಿಲ್ಲ. ಹಾಗಾದ್ರೆ ಈ ಫೀಚರ್ಸ್‌ ಅನ್ನು ಬಳಸುವುದು ಹೇಗೆ, ಸಕ್ರಿಯಗೊಳಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

Instagram ನಲ್ಲಿ ಕ್ರಾಸ್-ಮೆಸೇಜಿಂಗ್ ಫೀಚರ್ಸ್ ಸಕ್ರಿಯಗೊಳಿಸುವುದು ಹೇಗೆ?

Instagram ನಲ್ಲಿ ಕ್ರಾಸ್-ಮೆಸೇಜಿಂಗ್ ಫೀಚರ್ಸ್ ಸಕ್ರಿಯಗೊಳಿಸುವುದು ಹೇಗೆ?

ಹಂತ:1 ಸೆಟ್ಟಿಂಗ್ಸ್‌ ಪೇಜ್‌ ಅನ್ನು ತೆರೆಯಿರಿ.

ಹಂತ:2 ‘ಪ್ರೈವಸಿ' ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ:3 ‘messages' ಆಯ್ಕೆಯನ್ನು ಟ್ಯಾಪ್ ಮಾಡಿ. ಇಲ್ಲಿಂದ ನೀವು ಸಂದೇಶ ವಿನಂತಿಗಳನ್ನು ಸ್ವೀಕರಿಸುವ ಫೋಲ್ಡರ್ ಅನ್ನು ಸಾಧನವಾಗಿ ಮಾಡಬಹುದು. ನೀವು ಅವುಗಳನ್ನು ಸ್ವೀಕರಿಸಲು ಬಯಸಿದರೆ ಮಾತ್ರ.

ಹಂತ:4 ಇಲ್ಲಿ ನಿಮಗೆ ಮೂರು ಆಯ್ಕೆಗಳನ್ನು ನೀಡಲಾಗುತ್ತದೆ.
- ಫೇಸ್‌ಬುಕ್ ಸ್ನೇಹಿತರು ಅಥವಾ ನೀವು ಮೆಸೆಂಜರ್‌ನಲ್ಲಿ ಚಾಟ್ ಮಾಡಿದ ಜನರು - ಚಾಟ್‌ಗಳು, ಸಂದೇಶ ವಿನಂತಿಗಳು ಮತ್ತು ವಿನಂತಿಗಳನ್ನು ಸ್ವೀಕರಿಸಬೇಡಿ
- ನಿಮ್ಮ ಫೋನ್ ಸಂಖ್ಯೆ ಹೊಂದಿರುವ ಜನರು - ಚಾಟ್‌ಗಳು, ಸಂದೇಶ ವಿನಂತಿಗಳು ಮತ್ತು ವಿನಂತಿಗಳನ್ನು ಸ್ವೀಕರಿಸಬೇಡಿ
- ಫೇಸ್‌ಬುಕ್‌ನಲ್ಲಿ ಇತರೆ - ಚಾಟ್‌ಗಳು, ಸಂದೇಶ ವಿನಂತಿಗಳು ಮತ್ತು ವಿನಂತಿಗಳನ್ನು ಸ್ವೀಕರಿಸಬೇಡಿ

ನೀವು ಮೂರರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು.

ಮೆಸೆಂಜರ್ ನಲ್ಲಿ ಕ್ರಾಸ್-ಮೆಸೇಜಿಂಗ್ ಫೀಚರ್ಸ್ ಸಕ್ರಿಯಗೊಳಿಸುವುದು ಹೇಗೆ?

ಮೆಸೆಂಜರ್ ನಲ್ಲಿ ಕ್ರಾಸ್-ಮೆಸೇಜಿಂಗ್ ಫೀಚರ್ಸ್ ಸಕ್ರಿಯಗೊಳಿಸುವುದು ಹೇಗೆ?

ಹಂತ:1 ಸೆಟ್ಟಿಂಗ್ಸ್‌ ಪೇಜ್‌ ಅನ್ನು ತೆರೆಯಿರಿ.


ಹಂತ:2 ‘ಪ್ರೈವಸಿ' ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ:3 ‘Message delivery' ಟ್ಯಾಪ್ ಮಾಡಿ.

ಹಂತ:4 ಇದರಲ್ಲೂ ಸಹ ನಿಮಗೆ ಮೂರು ಆಯ್ಕೆಗಳನ್ನು ನೀಡಲಾಗುತ್ತದೆ.
-ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಅನುಸರಿಸುವ ಅಥವಾ ಚಾಟ್ ಮಾಡಿದ ಖಾತೆಗಳು - ಚಾಟ್‌ಗಳು, Message Requests ಮತ್ತು Message Requestsಗಳನ್ನು ಸ್ವೀಕರಿಸಬೇಡಿ
-Instagram ನಲ್ಲಿ ನಿಮ್ಮ Followers - ಚಾಟ್‌ಗಳು, Message Requests ಮತ್ತು Message Requestsಗಳನ್ನು ಸ್ವೀಕರಿಸಬೇಡಿ
-ಇನ್‌ಸ್ಟಾಗ್ರಾಮ್‌ನಲ್ಲಿ ಇತರರು - ಚಾಟ್ಗಳು, Message Requests ಮತ್ತು Message Requestsಗಳನ್ನು ಸ್ವೀಕರಿಸಬೇಡಿ

ನೀವು ಮೂರರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು.

ಇನ್‌ಸ್ಟಾಗ್ರಾಮ್‌

ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್ ಬಣ್ಣಗಳನ್ನು ಬದಲಾಯಿಸುವುದು, ಎಮೋಜಿಗಳೊಂದಿಗೆ ಪ್ರತಿಕ್ರಿಯಿಸುವುದು, ಸಂದೇಶಗಳಿಗೆ ಉತ್ತರಿಸಲು ಸ್ವೈಪ್ ಮಾಡುವುದು ಮತ್ತು ಸೆಲ್ಫಿ ಸ್ಟಿಕ್ಕರ್‌ಗಳನ್ನು ರಚಿಸುವಂತಹ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಯಾವುದೇ ದೃಶ್ಯ ಬದಲಾವಣೆಗಳಿಲ್ಲದಿದ್ದರೂ ಇನ್‌ಬಾಕ್ಸ್ ಇನ್ನೂ ಒಂದೇ ರೀತಿ ಕಾಣುತ್ತದೆ.

Best Mobiles in India

English summary
Earlier this month Facebook introduced its Instagram and Messenger cross-messaging feature on both the apps for Android and iOS users.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X