ಈ ಸೂಚನೆ ಪಾಲಿಸದಿದ್ದರೆ ನಿಮ್ಮ ಫೇಸ್‌ಬುಕ್‌ ಖಾತೆ ಲಾಕ್‌ಔಟ್‌ ಗ್ಯಾರಂಟಿ!

|

ಮೆಟಾ ಒಡೆತನದ ಫೇಸ್‌ಬುಕ್‌ ಸಾಮಾಜಿಕ ಜಾಲತಾಣ ದೈತ್ಯ ಎನಿಸಿಕೊಂಡಿದೆ. ತನ್ನ ಆಕರ್ಷಕ ಫೀಚರ್ಸ್‌ಗಳ ಮೂಲಕ ಬಳಕೆದಾರರ ಸ್ನೇಹಿ ಎನಿಸಿಕೊಂಡಿದೆ. ಇನ್ನು ಕಾಲಕ್ಕೆ ಅನುಗುಣವಾಗಿ ಅಗತ್ಯ ಬದಲಾವಣೆಗಳನ್ನು ಕೂಡ ಮಾಡುತ್ತಾ ಬಂದಿದೆ. ಸದ್ಯ ಇದೀಗ ಫೇಸ್‌ಬುಕ್‌ ಪ್ರೊಟೆಕ್ಟ್‌ ಅನ್ನು ಸಕ್ರಿಯಗೊಳಿಸಿದ ಬಳಕೆದಾರರಿಗೆ ಬಿಗ್‌ ಶಾಕ್‌ ನೀಡಿದೆ. ಫೇಸ್‌ಬುಕ್‌ನ ನಿಮ್ಮ ಖಾತೆಯಲ್ಲಿ ನೀವು ಇನ್ನೂ ಫೇಸ್‌ಬುಕ್ ಪ್ರೊಟೆಕ್ಟ್ ಅನ್ನು ಸಕ್ರಿಯಗೊಳಿಸದಿದ್ದರೆ ನಿಮ್ಮ ಖಾತೆಯಿಂದ ಲಾಕ್‌ಔಟ್‌ ಆಗುವ ಸಾದ್ಯತೆಯಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಖಾತೆಗಳಲ್ಲಿ ಫೇಸ್‌ಬುಕ್‌ ಪ್ರೊಟೆಕ್ಟ್‌ ಬಳಸದ ಖಾತೆಗಳು ಲಾಕ್‌ಔಟ್‌ ಆಗಲಿದೆ ಎಂದು ಹೇಳಿದೆ. ಈ ತಿಂಗಳ ಆರಂಭದಿಂದಲೂ ಕೂಡ ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಮೇಲ್‌ ಕಳುಹಿಸುತ್ತಿದೆ. ನಿರ್ದಿಷ್ಟ ದಿನಾಂಕದೊಳಗೆ ತಮ್ಮ ಖಾತೆಗಳಲ್ಲಿ ಫೇಸ್‌ಬುಕ್ ಪ್ರೊಟೆಕ್ಟ್‌ ಅನ್ನು ಸಕ್ರಿಯಗೊಳಿಸುವಂತೆ ಹೇಳಿದೆ. ಅಲ್ಲದೆ 'ನಿಮ್ಮ ಖಾತೆಗೆ ಫೇಸ್‌ಬುಕ್ ರಕ್ಷಣೆಯಿಂದ ಸುಧಾರಿತ ಭದ್ರತೆಯ ಅಗತ್ಯವಿದೆ' ಎಂಬ ಶೀರ್ಷಿಕೆಯ ಇಮೇಲ್ ಕಳುಹಿಸಿದೆ. ಒಂದು ವೇಳೆ ನೀವು ಫೇಸ್‌ಬುಕ್‌ ಪ್ರೊಟೆಕ್ಟ್‌ ಸಕ್ರಿಯಗೊಳಿಸದಿದ್ದರೆ ನಿಮ್ಮ ಖಾತೆಗಳಿಂದ ಲಾಕ್‌ಔಟ್‌ ಆಗಬೇಕಾಗುತ್ತದೆ. ಹಾಗಾದ್ರೆ ಫೇಸ್‌ಬುಕ್‌ ಪ್ರೊಟೆಕ್ಟ್‌ ಅನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್‌

ಫೇಸ್‌ಬುಕ್‌ ಇತ್ತೀಚಿಗೆ ತನ್ನ ಬಳಕೆದಾರರಿಗೆ ಒಂದು ಇಮೇಲ್ ಕಳುಹಿಸಿದೆ. ಈ ಇ-ಮೇಲ್‌ ಸ್ಪ್ಯಾಮ್ ಮೇಲ್‌ನ ರೂಪದಲ್ಲಿರುವುದರಿಂದ ಹೆಚ್ಚಿನ ಜನ ನಿರ್ಲಕ್ಷ್ಯ ಮಾಡಿದ್ದಾರೆ. ಆದರೆ ಇದು ಇಮೇಲ್ ಸ್ಪ್ಯಾಮ್ ಅಲ್ಲ, ಫೇಸ್‌ಬುಕ್‌ ತನ್ನ ಬಳಕೆದಾರರು ತಮ್ಮ ಖಾತೆಗಳಿಂದ ಲಾಕ್ ಔಟ್ ಆಗದಂತೆ ತಮ್ಮನ್ನು ರಕ್ಷಿಸಿಕೊಳ್ಳಲು ಸೂಚಿಸಿರುವ ಇಮೇಲ್‌ ಆಗಿದೆ. ಈಗಾಗಲೇ ಫೇಸ್‌ಬುಕ್‌ ನೀಡಿದ್ದ ಗಡುವು ಮುಗಿದಿದ್ದು, ಫೇಸ್‌ಬುಕ್ ಪ್ರೊಟೆಕ್ಟ್ ಅನ್ನು ಸಕ್ರಿಯಗೊಳಿಸದ ಜನರು ತಮ್ಮ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಖಾತೆ ಪ್ರವೇಶಿಸಬೇಕಾದರೆ ಮುಂದೆ ಏನು ಮಾಡಬೇಕು ಎಂಬ ಸಂದೇಶಗಳನ್ನು ಪಡೆಯುತ್ತಿದ್ದಾರೆ.

ಮೆಟಾ

ಮೆಟಾ ಕಂಪೆನಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಫೇಸ್‌ಬುಕ್‌ನಲ್ಲಿ ಬಳಕೆದಾರರು ತಮ್ಮ ಖಾತೆಗಳನ್ನು ಎರಡು-ಅಂಶ ದೃಢೀಕರಣದೊಂದಿಗೆ ರಕ್ಷಿಸುವುದು ಅಗತ್ಯವಿದೆ ಎಂದು ಘೋಷಣೆ ಮಾಡಿತ್ತು. ಆ ಸಮಯದಲ್ಲಿ, ತಮ್ಮ ಪ್ರೊಫೈಲ್‌ಗಳಲ್ಲಿ ಫೇಸ್‌ಬುಕ್ ಪ್ರೊಟೆಕ್ಟ್ ಫೀಚರ್ಸ್‌ ಅನ್ನು ಆನ್ ಮಾಡಲು ಹೇಳಿತ್ತು. ಆದರೆ ಹೆಚ್ಚಿನ ಜನರು ಇಂದಿಗೂ ಕೂಡ ಈ ಫೀಚರ್ಸ್‌ ಅನ್ನು ಬಳಸದಿರುವುದರಿಂದ ಹೆಚ್ಚಿನ ಖಾತೆಗಳು ಸೈಬರ್‌ ದಾಳಿಗಳಿಗೆ ಒಳಗಾಗುತ್ತಿವೆ. ಅದರಲ್ಲೂ ಆಯ್ದ ಪತ್ರಕರ್ತರು, ಮಾನವ ಹಕ್ಕು ಕಾರ್ಯಕರ್ತರು, ಸರ್ಕಾರಿ ಅಧಿಕಾರಿಗಳು ಮತ್ತು ಇತರ ಬಳಕೆದಾರರನ್ನು ಒಳಗೊಂಡಿರುವ ಖಾತೆಗಳು ಹ್ಯಾಕ್‌ ಆಗುವ ಸಾಧ್ಯತೆಯಿದೆ.

ನಿಮ್ಮ ಖಾತೆಯಲ್ಲಿ ಫೇಸ್‌ಬುಕ್‌ ಪ್ರೊಟೆಕ್ಟ್‌ ಆನ್ ಮಾಡುವುದು ಹೇಗೆ?

ನಿಮ್ಮ ಖಾತೆಯಲ್ಲಿ ಫೇಸ್‌ಬುಕ್‌ ಪ್ರೊಟೆಕ್ಟ್‌ ಆನ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಫೇಸ್‌ಬುಕ್‌ನಲ್ಲಿ ಮೇಲಿನ ಬಲ ಮೂಲೆಯಲ್ಲಿರುವ ಕೆಳಮುಖ ಬಾಣದ ಗುರುತನ್ನು ಕ್ಲಿಕ್ ಮಾಡಿ.
ಹಂತ:2 ಸೆಟ್ಟಿಂಗ್ಸ್‌ ಮತ್ತು ಗೌಪ್ಯತೆ ಕ್ಲಿಕ್ ಮಾಡಿ, ನಂತರ ಸೆಟ್ಟಿಂಗ್ಸ್‌ಅನ್ನು ಕ್ಲಿಕ್ ಮಾಡಿ.
ಹಂತ:3 ಇದರಲ್ಲಿ ಭದ್ರತೆ ಮತ್ತು ಲಾಗಿನ್ ಅನ್ನು ಕ್ಲಿಕ್ ಮಾಡಿ.
ಹಂತ:4 ನಂತರ ಫೇಸ್‌ಬುಕ್‌ ಪ್ರೊಟೆಕ್ಟ್‌ ಆಯ್ಕೆ ಕಾಣಲಿದೆ. ಇಲ್ಲಿ ಸ್ಟಾರ್ಟ್‌ ಕ್ಲಿಕ್ ಮಾಡಿ.
ಹಂತ:5 ವೆಲ್‌ಕಮ್‌ ಸ್ಕ್ರೀನ್‌ನಲ್ಲಿ ನೆಕ್ಸ್ಟ್‌ ಕ್ಲಿಕ್ ಮಾಡಿ.
ಹಂತ:6 ನಂತರ ಫೇಸ್‌ಬುಕ್‌ ಪ್ರೊಟೆಕ್ಟ್ ಪ್ರಯೋಜನಗಳ ಪರದೆಯಲ್ಲಿ, ನೆಕ್ಸ್ಟ್ ಕ್ಲಿಕ್ ಮಾಡಿ.
ಹಂತ:7 ಇದೀಗ ಫೇಸ್‌ಬುಕ್‌ ನಿಮ್ಮ ಖಾತೆಯನ್ನು ಸಂಭಾವ್ಯ ದೋಷಗಳಿಗಾಗಿ ಸ್ಕ್ಯಾನ್ ಮಾಡುತ್ತದೆ. ಹಾಗೆಯೇ ನೀವು ಫೇಸ್‌ಬುಕ್‌ ಪ್ರೊಟೆಕ್ಟ್‌ ಆನ್‌ ಮಾಡಿದಾಗ ಏನು ಸರಿಪಡಿಸಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡುತ್ತದೆ.
ಹಂತ:8 ಈಗ ಫಿಕ್ಸ್‌ ಕ್ಲಿಕ್ ಮಾಡಿ ಮತ್ತು ಫೇಸ್‌ಬುಕ್ ಪ್ರೊಟೆಕ್ಟ್‌ ಆನ್ ಮಾಡುವುದನ್ನು ಪೂರ್ಣಗೊಳಿಸಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.

Best Mobiles in India

English summary
Some users have also reported tech issues in getting their text-base two-factor authentication codes sent on their phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X