ನಕಲಿ ವಾಟ್ಸಾಪ್‌ ಅಕೌಂಟ್‌ಗಳನ್ನು ಪತ್ತೆ ಹಚ್ಚುವುದು ಹೇಗೆ?

|

ಮೆಟಾ ಒಡೆತನದ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ನೀಡುತ್ತಾ ಬಂದಿದೆ. ಇದರಲ್ಲಿ ಸೆಕ್ಯುರಿಟಿ ಫೀಚರ್ಸ್‌ಗಳು ಕೂಡ ಸೇರಿವೆ. ಆದರೂ ಕೂಡ ವಾಟ್ಸಾಪ್‌ ಬಳಕೆದಾರರು ವಂಚಕರಿಂದ ಮೋಸ ಹೋಗುತ್ತಿರುವ ಪ್ರಕರಣಗಳು ನಡೆಯುತ್ತಲೇ ಇವೆ. ವಾಟ್ಸಾಪ್‌ ಡೇಟಾ ಕದಿಯುವುದಕ್ಕೆ ಹಲವು ಸ್ಕ್ಯಾಮರ್‌ಗಳು ಬಳಕೆದಾರರನ್ನು ಗುರಿಯಾಗಿರಿಸಿಕೊಂಡಿದ್ದಾರೆ. ಇದಕ್ಕಾಗಿ ನಕಲಿ ವಾಟ್ಸಾಪ್‌ ಖಾತೆಗಳನ್ನು ಬಳಸುತ್ತಿದ್ದಾರೆ ಎನ್ನುವ ಸುದ್ದಿ ಬಹಿರಂಗವಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಬಳಕೆದಾರರ ಡೇಟಾ ಕದಿಯುವುದಕ್ಕೆ ನಕಲಿ ವಾಟ್ಸಾಪ್‌ ಅಕೌಂಟ್‌ಗಳು ಸಕ್ರಿಯವಾಗಿವೆ ಎನ್ನಲಾಗ್ತಿದೆ. ವಂಚಕರು ಬಳಕೆದಾರರ ವೈಯಕ್ತಿಕ ಡೇಟಾವನ್ನು ಕದಿಯುವುದಕ್ಕೆ ವಿವಿಧ ರೀತಿಯ ಟ್ರಿಕ್ಸ್‌ ಬಳಸುತ್ತಿದ್ದಾರೆ. ಆದರೆ ವಾಟ್ಸಾಪ್‌ ಬಳಕೆದಾರರು ನಿಜವಾದ ವಾಟ್ಸಾಪ್‌ ಅಕೌಂಟ್‌ ಹಾಗೂ ನಕಲಿ ವಾಟ್ಸಾಪ್‌ ಅಕೌಂಟ್‌ಗಳನ್ನು ಪತ್ತೆ ಹಚ್ಚುವುದು ಕಿರಿಕಿರಿ ಎನಿಸಲಿದೆ. ಹಾಗಾದರೆ, ವಾಟ್ಸಾಪ್‌ನಲ್ಲಿ ನಕಲಿ ಖಾತೆಗಳನ್ನು ಕಂಡುಹಿಡಿಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಕಲಿ ಮತ್ತು ಅಸಲಿ ವಾಟ್ಸಾಪ್‌ ಅಕೌಂಟ್‌ಗಳ ನಡುವಿನ ವ್ಯತ್ಯಾಸ ಪತ್ತೆ ಹಚ್ಚುವುದು ಹೇಗೆ?

ನಕಲಿ ಮತ್ತು ಅಸಲಿ ವಾಟ್ಸಾಪ್‌ ಅಕೌಂಟ್‌ಗಳ ನಡುವಿನ ವ್ಯತ್ಯಾಸ ಪತ್ತೆ ಹಚ್ಚುವುದು ಹೇಗೆ?

* ವಾಟ್ಸಾಪ್‌ ನಲ್ಲಿ ಅಸಲಿ ಅಕೌಂಟ್‌ಗಳನ್ನು ತಿಳಿಯಬೇಕಾದರೆ ನೀವು ಚಾಟ್ ಮಾಡುತ್ತಿರುವಾಗ, ಸಂವಾದ ಪರದೆಯಲ್ಲಿನ ಕಂಟ್ಯಾಕ್ಟ್‌ ನೇಮ್‌ ಮತ್ತು ಅವರ ಚಾಟ್ ಮಾಹಿತಿಯ ಪಕ್ಕದಲ್ಲಿ ವೆರಿಫೈ ಬ್ಯಾಡ್ಜ್ ಅನ್ನು ಕಾಣಬಹುದಾಗಿದೆ. ಒಂದು ವೇಳೆ ನೀವು ಚಾಟ್‌ ಮಾಡುತ್ತಿರುವ ವಾಟ್ಸಾಪ್‌ ಖಾತೆಯಲ್ಲಿ ವೆರಿಫೈಡ್‌ ಬ್ಯಾಡ್ಜ್ ಅನ್ನು ಬೇರೆ ಕಡೆ ಕಂಡರೆ ಅದು ನಕಲಿ ವಾಟ್ಸಾಪ್‌ ಅಕೌಂಟ್‌ ಎಂದು ತಿಳಿಯಬಹುದಾಗಿದೆ.
* ಇನ್ನು ವಾಟ್ಸಾಪ್‌ ಎಂದಿಗೂ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ. ಆದರೆ ಅಪರಿಚಿತ ವಾಟ್ಸಾಪ್ ಖಾತೆಯಿಂದ ನಿಮ್ಮ ಕ್ರೆಡಿಟ್‌ ಕಾರ್ಡ್‌ ಇಲ್ಲವೇ ಇತರೆ ಹಣಕಾಸಿನ ಮಾಹಿತಿಯನ್ನು ಕೇಳಲು ಪ್ರಯತ್ನಿಸಿದರೆ ಅದು ನಕಲಿ ಖಾತೆಯಾಗಿರುವ ಸಾಧ್ಯತೆಯಿದೆ. ಅಂತಹ ಸಂದರ್ಭದಲ್ಲಿ ಅವರ ಚಾಟ್ ಮಾಹಿತಿಯೊಳಗೆ ನಕಲಿ ಸಂಪರ್ಕವನ್ನು ನಿರ್ಬಂಧಿಸುವುದು ಉತ್ತಮ ಕ್ರಮವಾಗಿದೆ.

ವಾಟ್ಸಾಪ್‌

ಆದರಿಂದ ವಾಟ್ಸಾಪ್‌ ಖಾತೆಯಲ್ಲಿ ನೀವು ನಿಮ್ಮ ಗೌಪ್ಯತೆಯನ್ನು ಕಾಪಾಡಲು ಎರಡು ಹಂತದ ಪರಿಶೀಲನೆಯನ್ನು ಸಕ್ರಿಯಗೊಳಿಸುವುದು ಸೂಕ್ತ. ಈ ಇಂಟರ್‌ಬಿಲ್ಟ್‌ ಫೀಚರ್ಸ್‌ ಅನ್ನು ಆನ್ ಮಾಡುವುದರಿಂದ ಅನಧಿಕೃತ ಲಾಗಿನ್‌ಗಳನ್ನು ತಡೆಯಬಹುದಾಗಿದೆ. ವಾಟ್ಸಾಪ್‌ ಸೆಟ್ಟಿಂಗ್ಸ್‌/ ಅಕೌಂಟ್‌/ ಎರಡು ಹಂತದ ಪರಿಶೀಲನೆಗೆ ನ್ಯಾವಿಗೇಟ್ ಮಾಡಿ ಮತ್ತು 'ಸಕ್ರಿಯಗೊಳಿಸಿ' ಬಟನ್ ಕ್ಲಿಕ್ ಮಾಡಿ. ನಂತರ ಆರು-ಅಂಕಿಯ ಯೂನಿಕ್‌ ಪಿನ್ ಅನ್ನು ನಮೂದಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ವಾಟ್ಸಾಪ್‌ ಖಾತೆಯನ್ನು ಬೇರೆ ಡಿವೈಸ್‌ನಲ್ಲಿ ಆರು ಅಂಕಿಯ ಪಿನ್ ಇಲ್ಲದೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.

ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ಬರುವ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಮುನ್ನ ಪರಿಶೀಲಿಸುವುದು ಒಳ್ಳೆಯದು. ಏಕೆಂದರೆ ದುರುದ್ದೇಶಪೂರಿತ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಮೋಸ ಮಾಡುವ ಸಾಧ್ಯತೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿವೆ. ಆದರಿಂದ ನೀವು ಸ್ವೀಕರಿಸಿದ ಲಿಂಕ್ ಅನ್ನು ಪರಿಶೀಲಿಸುವ ಮೂಲಕ ಹಾನಿಕಾರಕ ವೆಬ್ ಪೇಜ್‌ಗಳಿಗೆ ಹೋಗುವುದನ್ನು ತಪ್ಪಿಸಬಹುದು.

ವಾಟ್ಸಾಪ್‌

ವಾಟ್ಸಾಪ್‌ನ ಸೆಕ್ಯೂರಿಟಿ ನೋಟಿಫಿಕೇಷನ್ಸ್ ಬಳಕೆದಾರರಿಗೆ ತಮ್ಮ ಚಾಟ್‌ಗಳು ಯಾವಾಗ ತೊಂದರೆಗೆ ಒಳಗಾಗುವ ಸಾಧ್ಯತೆಯಿದೆ ಅನ್ನೊದನ್ನ ತಿಳಿಸುತ್ತದೆ. ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಹೊಂದಿದೆ. ಇದರಿಂದ ಎರಡು ಖಾತೆಗಳಲ್ಲಿ ಒಂದನ್ನು ಹೊಸ ಸಾಧನಕ್ಕೆ ಸರಿಸಿದರೆ, ಬದಲಾವಣೆಯನ್ನು ತಿಳಿಸುವ ಎಲ್ಲಾ ಚಾಟ್‌ಗಳಿಗೆ ತ್ವರಿತ ಎಚ್ಚರಿಕೆಯನ್ನು ಕಳುಹಿಸಲಾಗುತ್ತದೆ. ಹಾಗಾಗಿ, ನಿಮ್ಮ ವಾಟ್ಸಾಪ್‌ ಅಕೌಂಟ್‌ ಅನ್ನು ಬೇರೆಡೆಯಿಂದ ಹ್ಯಾಕ್ ಮಾಡಿ ಲಾಗ್ ಇನ್ ಆಗಿದ್ದರೆ, ನಿಮಗೆ ಸೆಕ್ಯೂರಿಟಿ ನೋಟಿಫಿಕೇಷನ್ಸ್ ಮೂಲಕ ತಿಳಿಯಲಿದೆ.

Best Mobiles in India

Read more about:
English summary
As per reports scammers are tricking users into giving up their personal information by making them believe that they are interacting with WhatsApp support.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X