ಗೂಗಲ್ ಡ್ರೈವ್‌ನಲ್ಲಿ ಡಿಲೀಟ್ ಮಾಡಿದ ಫೋಟೋಗಳನ್ನು ಮತ್ತೆ ಪಡೆದುಕೊಳ್ಳುವುದು ಹೇಗೆ?

|

ಸ್ಮಾರ್ಟ್‌ಫೋನ್‌ಗಳಲ್ಲಿ ಫೋಟೋ ಕ್ಲಿಕ್ಕಿಸುವುದು, ವೀಡಿಯೊ ರೆಕಾರ್ಡ್‌ ಮಾಡುವುದು ಸಾಮಾನ್ಯ ಎನಿಸಿಬಿಟ್ಟಿದೆ. ಅಲ್ಲದೆ ನೀವು ಕ್ಲಿಕ್ಕಿಸಿದ ಫೋಟೋಗಳನ್ನು ಗ್ಯಾಲರಿಯಲ್ಲಿ, ಇಲ್ಲವೇ ಗೂಗಲ್‌ ಡ್ರೈವ್‌ನಲ್ಲಿ ಸೇವ್‌ ಮಾಡುವುದು ಮಾಮೂಲಿ. ಆದರೆ ಕೆಲವು ಸಮಯದಲ್ಲಿ ಆಕಸ್ಮಿಕವಾಗಿ ನಿಮ್ಮ ಫೋಟೋಗಳು ಡಿಲೀಟ್‌ ಆಗಿ ಹೋದರೆ ಆಗುವ ಬೇಸರ ಅಷ್ಟಿಷ್ಟಲ್ಲ. ಆದರೂ ಗೂಗಲ್‌ ಡ್ರೈವ್‌ ಅಥವಾ ಗೂಗಲ್‌ ಫೋಟೋಸ್‌ಗಳಿಂದ ಡಿಲೀಟ್‌ ಮಾಡಲಾದ ಫೋಟೋ, ಫೈಲ್‌ಗಳು ಅಥವಾ ವೀಡಿಯೊಗಳನ್ನು ರಿಸ್ಟೋರ್‌ ಮಾಡಲು ಅವಕಾಶವಿದೆ.

ಗೂಗಲ್‌

ಹೌದು, ಗೂಗಲ್‌ ಡ್ರೈವ್‌ನಲ್ಲಿ ನೀವು ಶೇಖರಿಸಿದ ಫೋಟೋಗಳು, ವೀಡಿಯೋಗಳು ಆಕಸ್ಮಿಕವಾಗಿ ಡಿಲೀಟ್‌ ಆಗಿ ಹೋದರೆ ಅದನ್ನು ರಿಸ್ಟೋರ್‌ ಮಾಡುವುದಕ್ಕೆ ಅವಕಾಶವಿದೆ. ಆದರೆ ನೀವು ಅವುಗಳನ್ನು 30 ಅಥವಾ 60 ದಿನಗಳ ಹಿಂದೆ ಡಿಲೀಟ್‌ ಮಾಡಿದರೆ, ನೀವು ಅವುಗಳನ್ನು ರಿಸ್ಟೋರ್‌ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾದ್ರೆ ನೀವು ಗೂಗಲ್‌ ಡ್ರೈವ್‌ನಲ್ಲಿ ಡಿಲೀಟ್‌ ಮಾಡಲಾದ ನಿಮ್ಮ ಫೋಟೋಸ್‌ಗಳನ್ನು ರಿಸ್ಟೋರ್‌ ಮಾಡುವುದು ಹೇಗೆ ಅನ್ನೊದನ್ನ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ಡ್ರೈವ್‌ನ ಮೊಬೈಲ್ ಅಥವಾ ಡೆಸ್ಕ್‌ಟಾಪ್ ಆವೃತ್ತಿಯನ್ನು ಬಳಸಿಕೊಂಡು ನೀವು ಇತ್ತೀಚೆಗೆ ಏನನ್ನಾದರೂ ಡಿಲೀಟ್‌ ಮಾಡಿದರೆ, ನೀವು ಫೈಲ್ ಅನ್ನು ನೀವೇ ರಿಸ್ಟೋರ್‌ ಮಾಡಲು ಸಾಧ್ಯವಾಗುತ್ತದೆ. ನೀವು ಫೈಲ್ ಅನ್ನು ಅಳಿಸಿದಾಗ, ಗೂಗಲ್‌ ಮೆಸೇಜ್‌ಅನ್ನು ಪ್ರದರ್ಶಿಸುತ್ತದೆ. ಅದು ನಿಮ್ಮ ಚಿತ್ರವನ್ನು 30 ದಿನಗಳ ನಂತರ ಶಾಶ್ವತವಾಗಿ ಅಳಿಸಲಾಗುತ್ತದೆ ಎಂದು ಹೇಳುತ್ತದೆ. ಆದ್ದರಿಂದ, 30-ದಿನದ ಸಮಯದ ವಿಂಡೋದ ಮೊದಲು ನಿಮ್ಮ ಟ್ರಾಶ್ ನಿಂದ ನೀವು ಫೈಲ್‌ಗಳನ್ನು ರಿಕವರಿ ಮಾಡಬಹುದು.

ಗೂಗಲ್‌ ಡ್ರೈವ್‌ನಲ್ಲಿ ಡಿಲೀಟ್‌ ಮಾಡಲಾದ ಫೋಟೋಗಳನ್ನು ರಿಕವರಿ ಮಾಡುವುದು ಹೇಗೆ?

ಗೂಗಲ್‌ ಡ್ರೈವ್‌ನಲ್ಲಿ ಡಿಲೀಟ್‌ ಮಾಡಲಾದ ಫೋಟೋಗಳನ್ನು ರಿಕವರಿ ಮಾಡುವುದು ಹೇಗೆ?

ಹಂತ 1: ಗೂಗಲ್‌ ಡ್ರೈವ್ ಅಪ್ಲಿಕೇಶನ್ ತೆರೆಯಿರಿ ಮತ್ತು 'ಟ್ರಾಶ್' ಫೋಲ್ಡರ್‌ಗೆ ನ್ಯಾವಿಗೇಟ್ ಮಾಡಿ
ಹಂತ 2: ಟ್ರಾಶ್ ಫೋಲ್ಡರ್‌ನಲ್ಲಿ, ನಿಮ್ಮ ಇತ್ತೀಚೆಗೆ ಅಳಿಸಲಾದ ಎಲ್ಲಾ ಫೈಲ್‌ಗಳನ್ನು ನೀವು ಕಾಣಬಹುದು. ಇವುಗಳನ್ನು ರಿಸ್ಟೋರ್‌ ಮಾಡಲು, ನೀವು ಕಂಪ್ಯೂಟರ್‌ನಲ್ಲಿರುವ ಫೈಲ್ ಮೇಲೆ ರೈಟ್-ಕ್ಲಿಕ್ ಮಾಡಬೇಕಾಗುತ್ತದೆ.
ಹಂತ 3: ಫೈಲ್ ಅನ್ನು ಮರುಪಡೆಯಲು, ನೀವು ರಿಸ್ಟೋರ್‌ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದು ಫೈಲ್ ಅನ್ನು ಅದರ ಮೂಲ ಸ್ಥಳಕ್ಕೆ ಹಿಂದಿರುಗಿಸುತ್ತದೆ.

ಗೂಗಲ್‌ ಫೋಟೋಸ್‌ನಿಂದ ಅಳಿಸಲಾದ ಫೋಟೋಗಳನ್ನು ರಿಕವರಿ ಮಾಡುವುದು ಹೇಗೆ?

ಗೂಗಲ್‌ ಫೋಟೋಸ್‌ನಿಂದ ಅಳಿಸಲಾದ ಫೋಟೋಗಳನ್ನು ರಿಕವರಿ ಮಾಡುವುದು ಹೇಗೆ?

ನೀವು ಒಮ್ಮೆ ಡಿಲೀಟ್‌ ಮಾಡಿದ ಫೊಟೋಸ್‌ಗಳನ್ನು ರಿಕವರಿ ಮಾಡಲು ಗೂಗಲ್‌ ಫೋಟೋಸ್‌ 60 ದಿನಗಳ ಸಮಯ ವಿಂಡೋವನ್ನು ನೀಡುತ್ತವೆ. ಏಕೆಂದರೆ ಫೋಟೋಗಳು ಹೆಚ್ಚು ಮಹತ್ವದ್ದಾಗಿರುತ್ತವೆ ಮತ್ತು ಮೆಮೊರಿಯಂತೆ ಕಾರ್ಯನಿರ್ವಹಿಸುತ್ತವೆ. ಆದರೆ, ಮರುಪಡೆಯುವಿಕೆ ಆಯ್ಕೆಯು ತಕ್ಷಣವೇ ಗೋಚರಿಸುವುದಿಲ್ಲ. ನೀವು ಫೋಟೋಗಳನ್ನು ಮರುಸ್ಥಾಪಿಸಲು ಬಯಸಿದರೆ, ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ 1: ನಿಮ್ಮ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ, ಗೂಗಲ್ ಫೋಟೋಸ್ ಆಪ್ ತೆರೆಯಿರಿ.

ಹಂತ 2: ಪರದೆಯ ಕೆಳಭಾಗದಲ್ಲಿ, 'ಲೈಬ್ರರಿ' ಟ್ಯಾಬ್ ಇದೆ, ಅದರ ಮೇಲೆ ಟ್ಯಾಪ್ ಮಾಡಿ.

ಹಂತ 3: ನಂತರ ನೀವು ಮೇಲ್ಭಾಗದಲ್ಲಿ 'ಟ್ರಾಶ್' ಫೋಲ್ಡರ್ ಅನ್ನು ಕಾಣಬಹುದು. ನಿಮ್ಮ ಎಲ್ಲಾ ಅಳಿಸಿದ ಫೋಟೋಗಳನ್ನು ಪರೀಕ್ಷಿಸಲು ಅದರ ಮೇಲೆ ಟ್ಯಾಪ್ ಮಾಡಿ.

ಹಂತ 4: ನೀವು ರಿಸ್ಟೋರ್‌ ಮಾಡಲು ಬಯಸಿದರೆ, ಫೋಟೋ ಅಥವಾ ವೀಡಿಯೊವನ್ನು ಟಚ್‌ ಮಾಡಿ ಮತ್ತು ಪ್ರೆಸ್‌ ಮಾಡಿ. ನಂತರ, ರಿಸ್ಟೋರ್‌ ಟ್ಯಾಪ್ ಮಾಡಿ. ಫೋಟೋ ಅಥವಾ ವಿಡಿಯೋ ಮರಳಿ ಬರುತ್ತದೆ.

ನೀವು ಫೋಟೋವನ್ನು ಟ್ರಾಶ್ ನಲ್ಲಿ ನೋಡದಿದ್ದರೆ, ನೀವು ಅದನ್ನು 60 ದಿನಗಳ ಹಿಂದೆ ರಿಸೈಕಲ್‌ ಬಿನ್‌ಗೆ ವರ್ಗಾಯಿಸಿದ್ದೀರಿ ಎಂದರ್ಥ. ನೀವು ಅದನ್ನು ನಿಮ್ಮ ಟ್ರಾಶ್ ನಿಂದ ಶಾಶ್ವತವಾಗಿ ಅಳಿಸಿಹಾಕುವ ಸಾಧ್ಯತೆಯಿದೆ ಅಥವಾ ಮೊದಲು ಅದನ್ನು ಬ್ಯಾಕಪ್ ಮಾಡದೆಯೇ ನಿಮ್ಮ ಸಾಧನದ ಗ್ಯಾಲರಿ ಆಪ್‌ನಿಂದ ಶಾಶ್ವತವಾಗಿ ಅಳಿಸಿರುವಿರಿ.

Best Mobiles in India

English summary
Google allows you to restore the photos, files or videos that you deleted from Drive or Photos app.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X