ಸ್ಯಾಮ್‌ಸಂಗ್‌ ಫೋನ್‌ನಲ್ಲಿ ಲಾಕ್‌ ಪ್ಯಾಟರ್ನ್‌ ಮರೆತುಹೋದರೆ ಹೀಗೆ ಮಾಡಿ!

|

ಸ್ಮಾರ್ಟ್‌ಫೋನ್‌ ಬಳಸುವವರು ಸಾಮಾನ್ಯವಾಗಿ ಲಾಕ್‌ ಸ್ಕ್ರೀನ್‌ಗಳನ್ನು ಬಳಸುತ್ತಾರೆ. ತಮ್ಮ ಮೊಬೈಲ್‌ನಲ್ಲಿರುವ ಡೇಟಾ ಬೇರೆಯವರಿಗೆ ದೊರೆಯದಂತೆ ಮಾಡುವುದಕ್ಕಾಗಿ ಪ್ಯಾಟರ್ನ್‌ ಲಾಕ್‌, ಪಾಸ್‌ವರ್ಡ್‌ ಲಾಕ್‌ ಮೂಲಕ ಸ್ಕ್ರೀನ್‌ ಲಾಕ್‌ ಮಾಡುತ್ತಾರೆ. ಅದರಲ್ಲೂ ಹೆಚ್ಚಿನ ಜನರು ಪ್ಯಾಟರ್ನ್‌ ಲಾಕ್‌ ಬಳಸುತ್ತಾರೆ. ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ತಮಗೆ ಅನುಕೂಲವಾಗು ಪ್ಯಾಟರ್ನ್‌ ಬಳಸಿ ಲಾಕ್‌ ಮಾಡುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಲಾಕ್‌ ಪ್ಯಾಟರ್ನ್‌ ಮರೆತು ಹೋದರೆ ಸಾಕಷ್ಟು ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ.

ಪ್ಯಾಟರ್ನ್‌

ಹೌದು, ಸ್ಮಾರ್ಟ್‌ಫೋನ್‌ನಲ್ಲಿರುವ ಅಗತ್ಯ ಡೇಟಾ, ಫೈಲ್‌ಗಳನ್ನು ರಕ್ಷಿಸುವುದಕ್ಕಾಗಿ ಬಳಸುವ ಪ್ಯಾಟರ್ನ್‌ ಲಾಕ್‌ ಕೆಲವೊಮ್ಮೆ ಕಿರಿಕಿರಿ ತಂದಿಡುವ ಸಾದ್ಯತೆ ಕೂಡ ಇದೆ. ಏಕೆಂದರೆ ಪ್ಯಾಟರ್ನ್‌ ಲಾಕ್‌ ಬಳಸುವವರು ಲಾಕ್‌ ಪ್ಯಾಟರ್ನ್‌ ಮರೆತು ಹೋದಾಗ ಮೊಬೈಲ್‌ ಅನ್ನು ಪ್ಲಾಶ್‌ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ನಲ್ಲಿ ನೀವು ಪ್ಯಾಟರ್ನ್‌ ಲಾಕ್‌ ಅನ್ನು ಮರೆತು ಹೋದರೆ ಕೆಲವು ಕ್ರಮಗಳನ್ನು ಅನುಸರಿಸಿ ಅನ್‌ಲಾಕ್‌ ಮಾಡಬಹುದಾಗಿದೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಬಳಸುವವರು ಪ್ಯಾಟರ್ನ್‌ ಅನ್‌ಲಾಕ್‌ ಮರೆತು ಹೋದರೆ ಅದನ್ನು ತೆಗೆದುಹಾಕುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ಹಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಇದರ ಮೂಲಕ ನಿಮ್ಮ ಡೇಟಾ ಮತ್ತು ಸ್ಮಾರ್ಟ್‌ಫೋನ್‌ನಲ್ಲಿರುವ ಫೈಲ್‌ಗಳನ್ನು ರಕ್ಷಿಸಬಹುದಾಗಿದೆ. ಹಾಗಾದ್ರೆ ನಿಮ್ಮ ಸ್ಯಾಮ್‌ಸಂಗ್‌ ಡಿವೈಸ್‌ನಲ್ಲಿ ಪ್ಯಾಟರ್ನ್ ಅನ್ಲಾಕ್ ಅನ್ನು ತೆಗೆದುಹಾಕುವುದು ಹೇಗೆ? ಇದಕ್ಕಾಗಿ ನೀವು ಅನುಸರಿಸಬಹುದಾದ ಕ್ರಮಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪಾಸ್‌ಫ್ಯಾಬ್ ಆಂಡ್ರಾಯ್ಡ್ ಅನ್‌ಲಾಕರ್

ಪಾಸ್‌ಫ್ಯಾಬ್ ಆಂಡ್ರಾಯ್ಡ್ ಅನ್‌ಲಾಕರ್

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ನಲ್ಲಿ ನೀವು ಪ್ಯಾಟರ್ನ್‌ ಲಾಕ್‌ ಅನ್ನು ಮರೆತು ಹೋದರೆ ಪಾಸ್‌ಫ್ಯಾಬ್ ಆಂಡ್ರಾಯ್ಡ್ ಅನ್‌ಲಾಕರ್‌ ಮೂಲಕ ಲಾಕ್‌ ಪ್ಯಾಟರ್ನ್‌ ಅನ್ನು ಅನ್‌ಲಾಕ್‌ ಮಾಡಬಹುದು. ಇದಕ್ಕಾಗಿ ನೀವು ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.
* ಮೊದಲಿಗೆ ಪಾಸ್‌ಫ್ಯಾಬ್ ಆಂಡ್ರಾಯ್ಡ್ ಅನ್‌ಲಾಕರ್ ಅನ್ನು ಇನ್‌ಸ್ಟಾಲ್‌ ಮಾಡಬೇಕು.
* ನಂತರ ಈ ಅಪ್ಲಿಕೇಶನ್‌ ಮೂಲಕ ನಿಮ್ಮ ಡಿವೈಸ್‌ ಅನ್ನು ಕನೆಕ್ಟ್‌ ಮಾಡಿ "ಸ್ಕ್ರೀನ್ ಲಾಕ್ ತೆಗೆದುಹಾಕಿ" ಆಯ್ಕೆಮಾಡಬೇಕು.
* ಇದೀಗ ನೀವು ಕೆಳಗಿನ ಬಲ ಮೂಲೆಯಲ್ಲಿರುವ "ಪ್ರಾರಂಭಿಸು" ಬಟನ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
* ನಂತರ ಪ್ರಾಂಪ್ಟ್ ಸಂದೇಶ ಬರಲಿದೆ, ಇದೀಗ ಮುಂದುವರೆಯಲಿ ಹೌದು ಕ್ಲಿಕ್ ಮಾಡಿ.
* ಈಗ ಪಾಸ್‌ಪ್ಯಾಬ್‌ ಅಪ್ಲಿಕೇಶನ್ ನಿಮ್ಮ ಲಾಕ್ ಸ್ಕ್ರೀನ್ ಅನ್ನು ತೆಗೆದುಹಾಕುತ್ತದೆ.

ಸೆಟ್ಟಿಂಗ್ಸ್‌ ಮೂಲಕ ಸ್ಕ್ರೀನ್ ಲಾಕ್ ತೆಗೆದುಹಾಕಿ

ಸೆಟ್ಟಿಂಗ್ಸ್‌ ಮೂಲಕ ಸ್ಕ್ರೀನ್ ಲಾಕ್ ತೆಗೆದುಹಾಕಿ

ಈ ವಿಧಾನ ನಿಮ್ಮ ಸ್ಕ್ರೀನ್‌ ಹೊರಗೆ ನೀವು ಲಾಕ್ ಆಗಿದ್ದರೆ ಸಹಾಯ ಮಾಡುವುದಿಲ್ಲ. ಆದರೆ ನಿಮ್ಮ ಡಿವೈಸ್‌ನಿಂದ ಲಾಕ್ ಸ್ಕ್ರೀನ್ ಸೆಟ್ಟಿಂಗ್ ಅನ್ನು ತೆಗೆದುಹಾಕಲು ಬಯಸಿದಾಗ ಈ ವಿಧಾನ ಉಪಯುಕ್ತವಾಗಿದೆ.
* ಮೊದಲಿಗೆ ಸೆಟ್ಟಿಂಗ್ಸ್‌ >> ಲಾಕ್ ಸ್ಕ್ರೀನ್ >> ಸ್ಕ್ರೀನ್ ಲಾಕ್ ಟೈಪ್‌ ಅನ್ನು ಟ್ಯಾಪ್ ಮಾಡಿ
* ನಂತರ ನಿಮ್ಮ ಪ್ರಸ್ತುತ ಲಾಕ್ ಸ್ಕ್ರೀನ್ ಕೋಡ್ ಅನ್ನು ನಮೂದಿಸಬೇಕಾಗುತ್ತದೆ.
* ಇದರಲ್ಲಿ ಯಾವುದೂ ಇಲ್ಲ ಟ್ಯಾಪ್ ಮಾಡಿ.

ಇದೀಗ ನೀವು ಸ್ಕ್ರೀನ್‌ ಲಾಕ್‌ ಅನ್ನು ಬದಲಾಯಿಸಬೇಕಾದರೆ ನೀವು ಸ್ವೈಪ್, ಪ್ಯಾಟರ್ನ್, ಪಿನ್ ಮತ್ತು ಪಾಸ್‌ವರ್ಡ್ ನಡುವೆ ಆಯ್ಕೆ ಮಾಡಬಹುದು. ನೀವು ಹೊಸ ಆಯ್ಕೆಯನ್ನು ಆರಿಸಿ ಮತ್ತು ದೃಢೀಕರಿಸುವ ಅಗತ್ಯವಿದೆ.

ಸ್ಯಾಮ್ಸಂಗ್ ಫೈಂಡ್ ಮೈ ಮೊಬೈಲ್

ಸ್ಯಾಮ್ಸಂಗ್ ಫೈಂಡ್ ಮೈ ಮೊಬೈಲ್

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ನಲ್ಲಿ ಸ್ಯಾಮ್‌ಸಂಗ್‌ ಫೈಂಡ್‌ ಮೈ ಮೊಬೈಲ್‌ ಸೇವೆಯನ್ನು ಬಳಸುವ ಮೂಲಕ ಸ್ಕ್ರೀನ್‌ ಲಾಕ್‌ ತೆಗೆದುಹಾಕಬಹುದಾಗಿದೆ.

* ಇದಕ್ಕಾಗಿ ನೀವು ಮೊದಲಿಗೆ ವೆಬ್ ಬ್ರೌಸರ್‌ನಲ್ಲಿ ನಿಮ್ಮ ಫೋನ್‌ನಲ್ಲಿ ಸೆಟ್‌ ಮಾಡಿರುವ ಸ್ಯಾಮ್‌ಸಂಗ್‌ ಖಾತೆಗೆ ಲಾಗ್ ಇನ್ ಮಾಡಿ
* ಇದೀಗ "ಅನ್ಲಾಕ್" ಆಯ್ಕೆಯನ್ನು ಟ್ಯಾಪ್ ಮಾಡಿ.
* ಪ್ಯಾಟರ್ನ್ ಲಾಕ್ ತೆಗೆದುಹಾಕಲು ಸ್ಯಾಮ್‌ಸಂಗ್ ಖಾತೆ ಪಾಸ್‌ವರ್ಡ್ ಅನ್ನು ನಮೂದಿಸಬೇಕಾಗುತ್ತದೆ.

ಈ ಮೂಲಕ ನಿಮ್ಮ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್‌ಲಾಕ್‌ ತೆಗೆದುಹಾಕಬಹುದಾಗಿದೆ.

ಸುರಕ್ಷಿತ ಮೋಡ್‌ಗೆ ಬೂಟ್ ಮಾಡಿ

ಸುರಕ್ಷಿತ ಮೋಡ್‌ಗೆ ಬೂಟ್ ಮಾಡಿ

ಇನ್ನು ನಿಮ್ಮ ಸ್ಯಾಮ್‌ಸಂಗ್‌ ಡಿವೈಸ್‌ನಲ್ಲಿ ಪ್ಯಾಟರ್ನ್‌ ಲಾಕ್‌ ಅನ್‌ಲಾಕ್‌ ಮಾಡುವುದಕ್ಕೆ ನಿಮ್ಮ ಡಿವೈಸ್‌ ಅನ್ನು ಸುರಕ್ಷಿತ ಮೋಡ್‌ಗೆ ಬೂಟ್ ಮಾಡುವುದು ಕೂಡ ಒಂದು ವಿಧಾನವಾಗಿದೆ. ಈ ವಿಧಾನದಲ್ಲಿ ನೀವು ಬಳಸುತ್ತಿರುವ ಯಾವುದೇ ರೀತಿಯ ಥರ್ಡ್‌ ಪಾರ್ಟಿ ಲಾಕ್ ಸ್ಕ್ರೀನ್ ವಿಧಾನವನ್ನು ಬೈಪಾಸ್ ಮಾಡಲು ಸಹಾಯಕವಾಗಿದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.
* ಮೊದಲಿಗೆ ನಿಮ್ಮ ಡಿವೈಸ್‌ ಅನ್ನು ಸುರಕ್ಷಿತ ಮೋಡ್‌ಗೆ ಬೂಟ್ ಮಾಡಿ
* ನಿಮ್ಮ ಡಿವೈಸ್‌ನ್ನು ರೀಬೂಟ್ ಮಾಡಿ,
* ಇದರಲ್ಲಿ ನೀವು ಸ್ಯಾಮ್‌ಸಂಗ್‌ ಲೋಗೋ ಕಂಡಾಗ ವಾಲ್ಯೂಮ್ ಡೌನ್ ಬಟನ್ ಅನ್ನು ಒತ್ತಿ ಮತ್ತು ಹಿಡಿದುಕೊಳ್ಳಿ.
* ನಂತರ ಸೇಫ್ ಮೋಡ್ ಮೆನು ಟ್ಯಾಪ್ ಮಾಡಬೇಕಾಗುತ್ತದೆ. ಈ ಮೂಲಕ ಸ್ಕ್ರೀನ್‌ ಅನ್‌ಲಾಕ್‌ ಮಾಡಬಹುದಾಗಿದೆ.

ಫ್ಯಾಕ್ಟರಿ ರಿಸೆಟ್‌

ಫ್ಯಾಕ್ಟರಿ ರಿಸೆಟ್‌

ನಿಮ್ಮ ಮೊಬೈಲ್‌ನಲ್ಲಿ ಪ್ಯಾಟರ್ನ್‌ ಲಾಕ್‌ ಮರೆತು ಹೋದಾಗ ಅನ್‌ಲಾಕ್‌ ಮಾಡಬೇಕಾದರೆ ನೀವು ಅನುಸರಿಸಬಹುದಾದ ಮತ್ತೊಂದು ಮಾರ್ಗವೆಂದರೆ ಮೊಬೈಲ್‌ ಫ್ಯಾಕ್ಟರಿ ರಿಸೆಟ್‌ ಆಗಿದೆ. ಫ್ಯಾಕ್ಟರಿ ರಿಸೆಟ್‌ ಮಾಡಿದರೆ ನಿಮ್ಮ ಡಿವೈಸ್‌ನಲ್ಲಿ ಪ್ಯಾಟರ್ನ್ ಸೇರಿದಂತೆ ಎಲ್ಲಾ ಡೇಟಾ ಡಿಲೀಟ್‌ ಆಗಲಿದೆ.
* ಮೊದಲಿಗೆ ನಿಮ್ಮ ಡಿವೈಸ್‌ ನಲ್ಲಿ ವಾಲ್ಯೂಮ್ ಡೌನ್ ಮತ್ತು ಪವರ್ ಬಟನ್‌ ಒಂದೇ ಸಮಯದಲ್ಲಿ ಒತ್ತಿರಿ.
* ಇದೀಗ "ಫ್ಯಾಕ್ಟರಿ ರಿಸೆಟ್‌ ಆಯ್ಕೆ ಪ್ರಾಂಪ್ಟ್‌ ಆಗಲಿದೆ.
* ಈ ಆಯ್ಕೆಯನ್ನು ಟ್ಯಾಪ್‌ ಮಾಡಿದ ನಂತರ ನಿಮ್ಮ ಡಿವೈಸ್‌ ಹೊಸದಾಗಿ ಚಾಲನೆಯಾಗಲಿದೆ.

ಈ ಮೇಲಿನ ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ ಸ್ಯಾಮ್‌ಸಂಗ್‌ ಡಿವೈಸ್‌ನಲ್ಲಿ ಪ್ಯಾಟರ್ನ್‌ ಲಾಕ್‌ ಅನ್ನು ಅನ್‌ಲಾಕ್‌ ಮಾಡಬಹುದಾಗಿದೆ. ನೀವು ಪ್ಯಾಟರ್ನ್‌ ಲಾಕ್‌ ಮರೆತು ಹೋದಾಗ ಈ ಕ್ರಮಗಳನ್ನು ಅನುಸರಿಸಬಹುದಾಗಿದೆ. ಆದರೆ ನೀವು ಈ ಅಂಶಗಳನ್ನು ಅನುಸರಿಸುವಾಗ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಳಸುವುದು ಉತ್ತಮವಾಗಿದೆ.

Best Mobiles in India

English summary
5 best methods to unlock your device and recover access to your precious data and apps

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X