ಟಿಂಡರ್‌ನಲ್ಲಿ ಡೇಟಿಂಗ್‌ ಮಾಡೋಕು ಮುನ್ನ ಈ ವಿಚಾರಗಳ ಬಗ್ಗೆ ಕೂಡ ಎಚ್ಚರವಿರಲಿ!

|

ಆನ್‌ಲೈನ್‌ನಲ್ಲಿ ಡೇಟಿಂಗ್‌ ಅನ್ನೊದು ಇಂದಿನ ಯುವಜನತೆಯ ಹವ್ಯಾಸಗಳಲ್ಲಿ ಒಂದಾಗಿ ಹೋಗಿದೆ. ತಮ್ಮ ಏಕಾಂಗಿತನವನ್ನು ಕಳೆಯಲು, ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಒಂದು ಆತ್ಮಿಯತೆಯ ಜೋಡಿಯನ್ನು ಸರ್ಚ್‌ ಮಾಡೋದಕ್ಕೆ ಆನ್‌ಲೈನ್‌ ಡೇಟಿಂಗ್‌ ಆ್ಯಪ್‌ಗಳು ಸಹಾಯ ಮಾಡುತ್ತಿವೆ. ಅಷ್ಟೇ ಅಲ್ಲದೆ ಡೇಟಿಂಗ್‌ ಬಯಸೋರಿಗೆ ಈ ಆ್ಯಪ್‌ಗಳು ಸಹಾಯ ಮಾಡುತ್ತವೆ. ಆದರೆ ಇಂದಿನ ದಿನಗಳಲ್ಲಿ ಆನ್‌ಲೈನ್‌ ಡೇಟಿಂಗ್‌ ಅನ್ನೊದು ವಂಚಕರ ತಾಣವಾಗಿ ಬದಲಾಗಿ ಹೋಗಿದೆ.

ಟಿಂಡರ್‌ನಲ್ಲಿ ಡೇಟಿಂಗ್‌ ಮಾಡೋಕು ಮುನ್ನ ಈ ವಿಚಾರಗಳ ಬಗ್ಗೆ ಕೂಡ ಎಚ್ಚರವಿರಲಿ!

ಹೌದು, ಆನ್‌ಲೈನ್‌ ಡೇಟಿಂಗ್‌ ಮಾಡಲು ಬಯಸುವ ರೊಮ್ಯಾಂಟಿಕ್‌ ಜೋಡಿಗಳು ಹೆಚ್ಚಿನ ಪ್ರಮಾಣದಲ್ಲಿ ವಂಚನೆಯನ್ನು ಅನುಭವಿಸುತ್ತಿದ್ದಾರೆ. ಇದರಲ್ಲಿ ಆನ್‌ಲೈನ್‌ ರೋಮ್ಯಾನ್ಸ್‌ ಸ್ಕ್ಯಾಮ್‌ಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ. ಅದೇ ರೀತಿ ಡೇಟಿಂಗ್‌ ಆ್ಯಪ್‌ ಟಿಂಡರ್‌ನಲ್ಲಿ ಒಬ್ಬ ವ್ಯಕ್ತಿ ಹಲವು ಮಹಿಳೆಯರನ್ನು ವಂಚಿಸಿರುವ ಘಟನೆಗಳನ್ನು ಕೂಡ ನಡೆದಿದೆ. ಇದೀಗ ಇಂತಹ ವಂಚನೆ ಪ್ರಕರಣಗಳನ್ನು ತಡೆಗಟ್ಟಲು ಟಿಂಡರ್‌ ಆ್ಯಪ್‌ ಮುಂದಾಗಿದೆ. ಹಾಗಾದ್ರೆ ಟಿಂಡರ್‌ ಆ್ಯಪ್‌ನಲ್ಲಿ ರೋಮ್ಯಾನ್ಸ್‌ ಸ್ಕ್ಯಾಮ್‌ ಅನ್ನು ತಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆನ್‌ಲೈನ್‌ ಡೇಟಿಂಗ್‌ ಆ್ಯಪ್‌ನಲ್ಲಿ ಈ ರೀತಿಯ ಸ್ಕ್ಯಾಮ್‌ಗಳು ಇದೇ ಮೊದಲೇನಲ್ಲ. ಮಹಿಳೆಯರನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ನಂತರ ಅವರಿಗೆ ಮೋಸ ಮಾಡುವ ಅನೇಕ ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಮಹಿಳೆಯರ ಸೋಗಿನಲ್ಲಿ ಚಾಟ್‌ ಮಾಡಿ ಪುರುಷರಿಂದ ಹಣ ಪೀಕುವ ಪ್ರವೃತ್ತಿ ಕೂಡ ದೊಡ್ಡದಾಗಿ ಬೆಳೆದಿದೆ. ಆದರಿಂದ ಆನ್‌ಲೈನ್‌ನಲ್ಲಿ ಡೇಟಿಂಗ್‌ ಮಾಡುವಾಗ ಎಚ್ಚರಿಕೆ ವಹಿಸುವುದು ಅತಿ ಮುಖ್ಯವಾಗಿದೆ. ಅದರಲ್ಲೂ ಟಿಂಡರ್‌ ಆ್ಯಪ್‌ ಆನ್‌ಲೈನ್ ವಂಚನೆಗಳಿಂದ ರಕ್ಷಿಸಿಕೊಳ್ಳಲು ಹಲವು ಜಾಗೃತಿ ಅಭಿಯಾನವನ್ನು ಕೂಡ ನಡೆಸುತ್ತಿದೆ.

ಟಿಂಡರ್‌ನಲ್ಲಿ ಡೇಟಿಂಗ್‌ ಮಾಡೋಕು ಮುನ್ನ ಈ ವಿಚಾರಗಳ ಬಗ್ಗೆ ಕೂಡ ಎಚ್ಚರವಿರಲಿ!

ಆ್ಯಪ್‌ನಲ್ಲಿಯೇ ಕಾಲ ಕಳೆಯಿರಿ

ಆನ್‌ಲೈನ್‌ನಲ್ಲಿ ಡೇಟಿಂಗ್‌ ಮಾಡುವಾಗ ಹೆಚ್ಚಿನ ಸಮಯ ನೀವು ಆ್ಯಪ್‌ನಲ್ಲಿಯೇ ಕಾಲ ಕಳೆಯಲು ಬಯಸಿರಿ. ಯಾಕೆಂದರೆ ವಂಚಕರು ನಿಮಗೆ ಬೇರೊಂದು ಲಿಂಕ್‌ ಕಳುಹಿಸಿ ಅದರ ಮೂಲಕ ನಿಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆಯಿದೆ. ಅಲ್ಲದೆ ಬೇರೊಂದು ಪ್ಲಾಟ್‌ಫಾರ್ಮ್‌ಗೆ ಕರೆದುಕೊಂಡು ಹೋದ ತಕ್ಷಣ ತಮ್ಮ ಪ್ರೊಫೈಲ್‌ ಅನ್ನು ಡಿಲೀಟ್‌ ಮಾಡುವ ಅವಕಾಶ ಸಿಗಲಿದೆ. ಆದರಿಂದ ನಿಮ್ಮ ಜೊತೆ ಡೇಟಿಂಗ್‌ ಮಾಡುವವರು ಅಸಲಿ ವ್ಯಕ್ತಿ ಅಂತಾ ತಿಳಿಯುವ ತನಕ ಆ್ಯಪ್‌ನಲ್ಲಿಯೇ ಇರುವುದಕ್ಕೆ ಪ್ರಯತ್ನಿಸಿ.

ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಟೂಲ್ಸ್‌ ಬಳಸಿರಿ
ಇನ್ನು ಡೇಟಿಂಗ್‌ ಸೈಟ್‌ನಲ್ಲಿ ಲಭ್ಯವಾಗುವ ಪ್ರೊಫೈಲ್ ಗಳಲ್ಲಿನ ವ್ಯಕ್ತಿಯ ಚಿತ್ರ ಅಸಲಿಯೇ ಎಂದು ಖಚಿತ ಪಡಿಸಲು ಪ್ರಯತ್ನಿಸಿ. ಇದಕ್ಕಾಗಿ ಆ್ಯಪ್‌ಗಳಲ್ಲಿರುವ ಟೂಲ್ಸ್‌ಗಳನ್ನು ಬಳಸಿಇದೆ. ಅದರಂತೆ ಆ ಫೋಟೋವನ್ನು ಆ್ಯಪ್‌ ವೆರಿಫಿಕೇಶನ್‌ ಮಾಡಿದೆಯಾ ಅನ್ನೊದು ನಿಮಗೆ ತಿಳಿಯಲಿದೆ. ಇದಕ್ಕಾಗಿ ನೀವು ಕೆಲವೊಮ್ಮೆ ನೀವು ವೀಡಿಯೊ ಚಾಟ್‌ಗಳನ್ನು ಸೆಟ್‌ ಮಾಡಬಹುದು. ಒಂದು ಪಕ್ಷದಲ್ಲಿ ನಿಮ್ಮ ಚಾಟ್‌ಗಳನ್ನು ಆ ಪ್ರೊಫೈಲ್‌ನಲ್ಲಿರುವ ವ್ಯಕ್ತಿ ಮಾಡಲು ನಿರಾಕರಿಸಿದರೆ ಅಂತಹ ಪ್ರೊಫೈಲ್‌ ಅನ್ನು ರಿಮೂವ್‌ ಮಾಡಿ.

ಟಿಂಡರ್‌ನಲ್ಲಿ ಡೇಟಿಂಗ್‌ ಮಾಡೋಕು ಮುನ್ನ ಈ ವಿಚಾರಗಳ ಬಗ್ಗೆ ಕೂಡ ಎಚ್ಚರವಿರಲಿ!

ಡೇಟಿಂಗ್‌ ಆ್ಯಪ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣಕಾಸಿನ ವಂಚನೆ ಪ್ರಕರಣಗಳು ಕೂಡ ನಡೆಯುತ್ತಿವೆ. ಆದರಿಂದ ಡೇಟಿಂಗ್‌ ಸೈಟ್‌ನಲ್ಲಿ ನಿಮ್ಮ ಪಾರ್ಟನರ್‌ ಜೊತೆ ಭಾವನಾತ್ಮಕವಾಗಿ ಜೊಯೆಯಾಗಬೇಡಿ. ಅಂದರೆ ವೀಸಾ, ಕಸ್ಟಮ್ಸ್ ಶುಲ್ಕಗಳು, ಶಸ್ತ್ರಚಿಕಿತ್ಸೆಗಳು, ಕುಟುಂಬ ವೈದ್ಯಕೀಯ ಬಿಲ್‌ಗಳು, ಕಾರು ರಿಪೇರಿಗಳು ಇತರೆ ಅಗತ್ಯಗಳಿಗೆ ಹಣ ಬೇಕೆಂದು ಕೇಳಿದರೆ ಅದರ ಹಿಂದಿನ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿ. ಅಂತಹ ಪ್ರೊಫೈಲ್‌ಗಳಿಂದ ದೂರ ಉಳಿಯುವುದು ಸೂಕ್ತ ಎಂದರೆ ಕೂಡಲೇ ಆ ಕೆಲಸ ಮಾಡಿ. ಯಾಕಂದ್ರೆ ಹೆಚ್ಚಿನ ಜನರು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್‌ ಮಾಡಿ ಹಣ ಪಡೆದುಕೊಂಡ ನಂತರ ತಮ್ಮ ಪ್ರೊಫೈಲ್‌ ಡಿಲೀಟ್‌ ಮಾಡಿ ನಿಮಗೆ ಮೋಸ ಮಾಡುವ ಸಾಧ್ಯತೆಯಿದೆ.

Best Mobiles in India

English summary
How to safe on dating apps like Tinder against romance scams?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X