ನಿಮ್ಮ ಆಂಡ್ರಾಯ್ಡ್ ಫೋನ್ ಸ್ಲೋ ಆಗಿದ್ದರೆ ಇದೊಂದು ಕೆಲಸ ಮಾಡಿ ಸಾಕು!!

|

ಕಡಿಮೆ ಬೆಲೆ- ಕಡಿಮೆ ಸಾಮರ್ಥ್ಯದ ಮೊಬೈಲ್ ಫೋನ್ ಬಳಸುತ್ತಿರುದ್ದರೆ ಅವುಗಳು ಸ್ಲೋ ಆಗುವುದು ಸಾಮಾನ್ಯ ವಿಷಯ ಎನ್ನಬಹುದು. ಆದರೆ, ಇದಕ್ಕೆ ಪರಿಹಾರ ಕೂಡ ಇದೆ. ನೀವು 'ಗೋ' ಆಪ್‌ಗಳ ಬಳಕೆ ಮಾಡಿದರೆ ನಿಮ್ಮ ಮೊಬೈಲ್ ಫೋನ್ ಹೆಚ್ಚು ವೇಗವಾಗಿ ಕೆಲಸ ಮಾಡುತ್ತದೆ. ಏಕೆಂದರೆ, ಆಂಡ್ರಾಯ್ಡ್ ಗೋ ಎಡಿಶನ್​ನಲ್ಲಿ ಬಳಸಲೆಂದು ಮೂಲತಃ ಸೃಷ್ಟಿಯಾದ ಆಪ್​ಗಳು ಈಗ ಎಲ್ಲಾ ಸ್ಮಾರ್ಟ್‌ಫೋನ್‌ ಬಳಕೆದಾರರಿಗೂ ಬಳಕೆಗೆ ಲಭ್ಯವಿವೆ.

ಮೊಬೈಲ್ ಕಾರ್ಯಾಚರಣ ವ್ಯವಸ್ಥೆಯನ್ನೇ ಬದಲಿಸುವುದಕ್ಕಿಂತ ನಾವು ಬಳಸುವ ಆಪ್ ಬದಲಿಸುವುದು ಬಹು ಸುಲಭ ಎನ್ನುವ ಚಿಂತನೆಯೊಡನೆ ಇವನ್ನು ಬಳಸುವ ಅವಕಾಶವನ್ನು ಆಂಡ್ರಾಯ್ಡ್ ಇತರ ಆವೃತ್ತಿಗಳ ಬಳಕೆದಾರರಿಗೂ ನೀಡಲಾಗುತ್ತಿದೆ. ಪ್ಲೇ ಸ್ಟೋರ್​ನಿಂದ ಸಾಮಾನ್ಯ ಆಪ್​ಗಳನ್ನು ಪಡೆದುಕೊಳ್ಳುವಂತೆಯೇ ಇವನ್ನು ಕೂಡ ಇನ್​ಸ್ಟಾಲ್ ಮಾಡಿಕೊಂಡು ಇವುಗಳನ್ನು ಎಲ್ಲಾ ಮೊಬೈಲ್ ಫೋನ್ ಬಳಕೆದಾರರೂ ಬಳಸಬಹುದು.

ನಿಮ್ಮ ಆಂಡ್ರಾಯ್ಡ್ ಫೋನ್ ಸ್ಲೋ ಆಗಿದ್ದರೆ ಇದೊಂದು ಕೆಲಸ ಮಾಡಿ ಸಾಕು!!

'ಗೋ' ಆಪ್​ಗಳ ಸಾಲಿನಲ್ಲಿ ಗೂಗಲ್ ಗೋ, ಜಿಮೇಲ್ ಗೋ, ಯೂಟ್ಯೂಬ್ ಗೋ, ಮ್ಯಾಪ್ಸ್ ಗೋ ಮುಂತಾದವೆಲ್ಲ ಈಗಾಗಲೇ ಇವೆ. ಮೊಬೈಲ್ ನಿಧಾನವಾಗಿದೆ ಎಂದು ತೋರಿದರೆ ನಾವು ಮೂಲ ಆಪ್​ಗಳನ್ನು ತೆಗೆದುಹಾಕಿ ಇವನ್ನು ಬಳಸಲು ಬಳಸಬಹುದು. ಇವು ಕಡಿಮೆ ಗಾತ್ರದ ಮತ್ತು ಕಡಿಮೆ ಮೆಮೊರಿ ಬಳಸುವುದರಿಂದ ನಿಮ್ಮ ಫೋನ್ ವೇಗವಾಗಿ ಕೆಲಸ ಮಾಡಬಲ್ಲದು. ಹಾಗಾದರೆ, ಫೋನ್ ವೇಗ ಹೆಚ್ಚಿಸಲು ಇನ್ನಿತರ ಉಪಾಯಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಕ್ಲೀನ್ ಇನ್‌ಸ್ಟಾಲ್ ಮಾಡಿ

ಕ್ಲೀನ್ ಇನ್‌ಸ್ಟಾಲ್ ಮಾಡಿ

ಎಲ್ಲಾ ಮೊಬೈಲ್ ಕಂಪೆನಿಗಳು ಒಂದೆ ಕ್ಲಿಕ್‌ನಲ್ಲಿ ಹೊಸ ಆಪರೇಟಿಂಗ್ ಸಿಸ್ಟಂಗೆ ಅಪ್‌ಗ್ರೇಡ್ ಮಾಡಲು ಸೂಚಿಸುತ್ತವೆ. ಹಾಗಾಗಿ, ಮೊಬೈಲ್ ಅಪ್‌ಡೇಟ್ ಮಾಡುವ ಮುನ್ನ ನಿಮ್ಮೆಲ್ಲಾ ಮೊಬೈಲ್ ಡೇಟಾ ಖಾಲಿ ಮಾಡಿ ಅಪ್‌ಡೇಟ್ ಮಾಡಿ. ಮೊಬೈಲ್‌ ಅನ್ನು ಹಾಗೆಯೇ ಅಪ್‌ಡೇಟ್ ಮಾಡಿದರೆ ಒಎಸ್ ಕ್ರಾಶ್ ಆಗುವ ಸಂಭವ ಹೆಚ್ಚಿರುತ್ತದೆ.

ಮೆಮೊರಿ ಬಗ್ಗೆ ಗಮನವಿರಲಿ

ಮೆಮೊರಿ ಬಗ್ಗೆ ಗಮನವಿರಲಿ

16GB, 32GB ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಇಂದು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB ಮೆಮೊರಿ ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೋರೇಜ್‌ನಿಂದಾಗಿ ಸ್ಮಾರ್ಟ್‌ಫೋನ್‌ಗಳು ನಿಧಾನವಾಗುತ್ತವೆ. ಹಾಗಾಗಿ, ಮೆಮೊರಿ ಇರುವ ಅರ್ಧಕ್ಕಿಂತ ಕಡಿಮೆ ಸ್ಟೋರೇಜ್‌ ಇರಲಿ.

ಕ್ಲೀನಿಂಗ್ ಅಪ್‌ ಮಾಡಿ.

ಕ್ಲೀನಿಂಗ್ ಅಪ್‌ ಮಾಡಿ.

ದೀರ್ಘ ಅವಧಿಯಲ್ಲಿ ಕೆಲವು ಅನವಶ್ಯಕ ಫೈಲ್‌ಗಳು ಫೋನ್‌ ಮೆಮೊರಿಯಲ್ಲಿ ಸಂಗ್ರಹಗೊಂಡು ಮೊಬೈಲ್‌ನ ವೇಗ ಕುಂಠಿತವಾಗುತ್ತದೆ. ಹಾಗಾಗಿ, ಫೋನ್‌ನಲ್ಲಿರುವ ಅನವಶ್ಯಕ ಫೈಲ್‌ಗಳನ್ನು ಡಿಲೀಟ್ ಮಾಡಿ ಫೋನ್ ವೇಗ ಹೆಚ್ಚಿಸಿ. ಫೋನ್‌ ಸೆಟ್ಟಿಂಗ್ಸ್ ತೆರೆದು ಫೋನ್ ರಿಸೆಟ್ ಮಾಡಿದರೆ ಅನವಶ್ಯಕ ಫೈಲ್‌ಗಳು ಡಿಲೀಟ್ ಆಗಲಿದೆ. ಆದರೆ, ಫೋನ್ ರಿಸೆಟ್ ಮಾಡುವ ಮುನ್ನ ಉಪಯುಕ್ತ ಡೇಟಾವನ್ನು ಸೇವ್ ಮಾಡಿಕೊಳ್ಳಿ.

ಕಡಿಮೆ ಆಪ್‌ಗಳನ್ನು ಬಳಸಿ.

ಕಡಿಮೆ ಆಪ್‌ಗಳನ್ನು ಬಳಸಿ.

ಒಂದೇ ಸಾರಿ ಹಲವು ಆಪ್‌ಗಳನ್ನು ಬಳಕೆ ಮಾಡಬಹುದಾದ ಶಕ್ತಿ ಸ್ಮಾರ್ಟ್‌ಫೋನ್‌ಗಳಿಗಿದ್ದರೂ ಸಹ, ಒಮ್ಮೆಲೆ ಹೆಚ್ಚು ಆಪ್‌ಗಳನ್ನು ಬಳಕೆ ಮಾಡುವುದು ಫೋನ್ ಸ್ಲೋ ಆಗಲು ಕಾರಣವಾಗಿರುತ್ತದೆ. ಹಾಗಾಗಿ, ಒಂದೇ ಸಾರಿ ಹಲವು ಆಪ್‌ಗಳನ್ನು ಬಳಕೆ ಮಾಡದಿರುವುದು ಒಳ್ಳೆಯದು. ಇಲ್ಲದಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್ ಸ್ಲೋ ಆಗುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ.

Best Mobiles in India

English summary
This is why we've compiled a list of tips and tricks, which will help you improve the performance of your Android smartphone . to know more visi tto kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X