ಫೇಸ್‌ಬುಕ್‌ನಲ್ಲಿ ಆಕ್ಟಿವಿಟಿ ಟ್ರ್ಯಾಕಿಂಗ್‌ ಅನ್ನು ನಿಲ್ಲಿಸುವುದು ಹೇಗೆ?

|

ಇದು ಸೊಶೀಯಲ್‌ ಮೀಡಿಯಾ ಜಮಾನ. ಇತ್ತಿಚಿನ ದಿನಗಳಲ್ಲಿ ಸೊಶೀಯಲ್‌ ಮಿಡಿಯಾ ಸಾಕಷ್ಟು ಸ್ಟ್ರಾಂಗ್‌ ಆಗಿದೆ. ಅದರಲ್ಲೂ ಫೇಸ್‌ಬುಕ್‌ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಮಡಿದೆ. ವಿಶ್ವದದ್ಯಂತ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌ ಗೌಪ್ಯತೆಯ ವಿಚಾರದಲ್ಲೂ ಆಗಾಗ ಚರ್ಚೆಯನ್ನು ಎದುರಿಸುತ್ತಿದೆ. ಆದರೂ ಫೇಸ್‌ಬುಕ್‌ನ ಜನಪ್ರಿಯತೆ ಕುಗ್ಗಿಲ್ಲ. ಇನ್ನು ಫೇಸ್‌ಬುಕ್‌ ಗೌಪ್ಯತೆ ಕಾಳಜಿಯನ್ನು ಹೆಚ್ಚಿಸುವ ಮತ್ತೊಂದು ಫೇಸ್‌ಬುಕ್ ಫೀಚರ್ಸ್‌ ಎಂದರೆ ಇದರ 'ಆಫ್-ಫೇಸ್‌ಬುಕ್ ಆಕ್ಟಿವಿಟಿ-ಟ್ರ್ಯಾಕಿಂಗ್ ಫೀಚರ್ಸ್‌' ಇದು ಬಳಕೆದಾರರ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಬಳಕೆಯನ್ನು ಅವರ ಡಿವೈಸ್‌ಗಳಲ್ಲಿ ಟ್ರ್ಯಾಕ್ ಮಾಡುತ್ತದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ನಿಮ್ಮ ವೆಬ್‌ಸೈಟ್‌ ಸರ್ಚಿಂಗ್‌ ಆಧಾರದ ಮೇಲೆ ಫೇಸ್‌ಬುಕ್‌ ಆಕ್ಟಿವಿಟಿ ಟ್ರ್ಯಾಕಿಂಗ್‌ ಮಾಡಲಿದೆ. ಆದರೆ ನೀವು ಫೇಸ್‌ಬುಕ್‌ ನಿಂದ ನಿಮ್ಮ ವೆಬ್‌ಸೈಟ್‌ ಆಕ್ಟಿವಿಟಿಯನ್ನು ಖಾಸಗಿಯಾಗಿಡಲು ಬಯಸಿದರೆ, ನಿಮ್ಮ ಆಕ್ಟಿವಿಟಿಯನ್ನು ಟ್ರ್ಯಾಕ್ ಮಾಡುವುದನ್ನು ತಡೆಯಬಹುದಾಗಿದೆ. ಇದಕ್ಕಾಗಿ ನೀವು ಕೆಲವು ಹಂತಗಳನ್ನು ಅನುಸರಿಸಬೇಕಾಗಿದೆ. ಹಾಗಾದ್ರೆ ಫೇಸ್‌ಬುಕ್‌ ಆಕ್ಟಿವಿಟಿ ಟ್ರ್ಯಾಕಿಂಗ್‌ ಅನ್ನು ತಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್‌

ಫೇಸ್‌ಬುಕ್‌ ನೀವು ಯಾವ ಅಪ್ಲಿಕೇಶನ್‌ಗಳು ಅಥವಾ ವೆಬ್‌ಸೈಟ್‌ಗಳಲ್ಲಿ ಯಾವುದನ್ನು ಸರ್ಚ್‌ ಮಾಡಿದ್ದೀರಿ, ಯಾವ ಡಿವೈಸ್‌ ಅನ್ನು ಬಳಸಿದ್ದೀರಿ, ಏನನ್ನು ಸರ್ಚ್‌ ಮಾಡಿದ್ದೀರಿ, ಎಂಬ ವಿಚಾರವನ್ನು ಟ್ರ್ಯಾಕ್‌ ಮಾಡಲಿದೆ. ಇದು ನಿಮ್ಮ ಸಂಪರ್ಕಗಳು, ಹುಡುಕಾಟ ಇತಿಹಾಸ, ಜಾಹೀರಾತುಗಳು ಅಥವಾ ನೀವು ಸಂವಹನ ನಡೆಸುವ ಉತ್ಪನ್ನಗಳು, ನಿಖರವಾದ ಸ್ಥಳ, ಭೌತಿಕ ವಿಳಾಸ ಮತ್ತು ಹೆಚ್ಚಿನದನ್ನು ಟ್ರ್ಯಾಕ್ ಮಾಡುತ್ತದೆ. ಇದರಿಂದ ನೀವು ನಿಮ್ಮ ಖಾಸಗಿತನವನ್ನು ಫೇಸ್‌ಬುಕ್‌ ಟ್ರ್ಯಾಕ್‌ ಮಾಡದೇ ಮಾಡುವುದಕ್ಕೆ ಅವಕಾಶ ಸಹ ಇದೆ.

Android / iOS ನಲ್ಲಿ ಆನ್‌ಲೈನ್‌ ಆಕ್ಟಿವಿಟಿಯನ್ನು ಫೇಸ್‌ಬುಕ್‌ ಟ್ರ್ಯಾಕಿಂಗ್‌ ಮಾಡುವುದನ್ನು ನಿಲ್ಲಿಸುವುದು ಹೇಗೆ?

Android / iOS ನಲ್ಲಿ ಆನ್‌ಲೈನ್‌ ಆಕ್ಟಿವಿಟಿಯನ್ನು ಫೇಸ್‌ಬುಕ್‌ ಟ್ರ್ಯಾಕಿಂಗ್‌ ಮಾಡುವುದನ್ನು ನಿಲ್ಲಿಸುವುದು ಹೇಗೆ?

ಹಂತ 1: ಫೇಸ್‌ಬುಕ್ ಅಪ್ಲಿಕೇಶನ್ ತೆರೆಯಿರಿ ಮತ್ತು ಆಂಡ್ರಾಯ್ಡ್‌ನಲ್ಲಿ ಮೇಲಿನ ಬಲ ಮೂಲೆಯಲ್ಲಿ ಮತ್ತು ಐಒಎಸ್‌ನಲ್ಲಿ ಕೆಳಗಿನ ಮೋರ್‌ ಸೆಲೆಕ್ಟ್‌ ಮೆನುವನ್ನು ಟ್ಯಾಪ್ ಮಾಡಿ.

ಹಂತ 2: ಕೆಳಗೆ ಸ್ಕ್ರಾಲ್ ಮಾಡಿ ಮತ್ತು ‘ಸೆಟ್ಟಿಂಗ್ಸ್‌ ಮತ್ತು ಗೌಪ್ಯತೆ' ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 3: ಸೆಟ್ಟಿಂಗ್ಸ್‌ ಸ್ಕ್ರೀನ್‌ ತೆರೆಯಿರಿ ಮತ್ತು ‘ಅಪ್ಲಿಕೇಶನ್‌ಗಳು ಮತ್ತು ಅಧಿಸೂಚನೆಗಳು' ವಿಭಾಗಕ್ಕೆ ಹೋಗಿ.

ಹಂತ 4: ಫೇಸ್‌ಬುಕ್‌ನಲ್ಲಿ ಟ್ಯಾಪ್ ಮಾಡಿ ನಂತರ ಅನುಮತಿಗಳ ಟ್ಯಾಬ್ ತೆರೆಯಿರಿ.

ಹಂತ 5: ಎಲ್ಲಾ ಸೆಟ್ಟಿಂಗ್ಸ್‌ಗಳಿಗೆ ಅನುಮತಿಗಳನ್ನು ನಿರಾಕರಿಸಿ.

ಆಂಡ್ರಾಯ್ಡ್ / ಐಒಎಸ್‌ನಲ್ಲಿ ಆಫ್-ಫೇಸ್‌ಬುಕ್ ಆಕ್ಟಿವಿಟಿ ಟ್ರ್ಯಾಕಿಂಗ್ ಅನ್ನು ನಿಲ್ಲಿಸುವುದು ಹೇಗೆ?

ಆಂಡ್ರಾಯ್ಡ್ / ಐಒಎಸ್‌ನಲ್ಲಿ ಆಫ್-ಫೇಸ್‌ಬುಕ್ ಆಕ್ಟಿವಿಟಿ ಟ್ರ್ಯಾಕಿಂಗ್ ಅನ್ನು ನಿಲ್ಲಿಸುವುದು ಹೇಗೆ?

ಹಂತ 1: ಫೇಸ್‌ಬುಕ್ ಅಪ್ಲಿಕೇಶನ್ ತೆರೆಯಿರಿ ಮತ್ತು ಆಂಡ್ರಾಯ್ಡ್‌ನಲ್ಲಿ ಮೇಲಿನ ಬಲ ಮೂಲೆಯಲ್ಲಿರುವ ಐಒಎಸ್‌ನಲ್ಲಿ ಇನ್ನಷ್ಟು ಸೆಟ್ಟಿಂಗ್‌ಗಳ ಹ್ಯಾಂಬರ್ಗರ್ ಐಕಾನ್ ಅನ್ನು ಟ್ಯಾಪ್ ಮಾಡಿ.

ಹಂತ 2: ‘ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆ' ಟ್ಯಾಬ್ ತೆರೆಯಿರಿ.

ಹಂತ 3: ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ.

ಹಂತ 4: ಈಗ ಆಫ್-ಫೇಸ್‌ಬುಕ್ ಚಟುವಟಿಕೆಯನ್ನು ಟ್ಯಾಪ್ ಮಾಡಿ.

ಹಂತ 5: ನಿಮ್ಮ ಎಲ್ಲ ಡೇಟಾವನ್ನು ಫೇಸ್‌ಬುಕ್ ಅಳಿಸಿಹಾಕುತ್ತದೆ ಎಂದು ಖಚಿತಪಡಿಸಿಕೊಳ್ಳಲು ಈಗ ‘ಹಿಸ್ಟರಿ ಕ್ಲಿಯರ್‌' ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 6: ಈಗ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ.

ನೀವು ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದ ನಂತರ, ನಿಮ್ಮ ದೈನಂದಿನ ಆನ್‌ಲೈನ್ ಚಟುವಟಿಕೆಯ ಆಧಾರದ ಮೇಲೆ ನೀವು ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುತ್ತೀರಿ. ನೀವು ಈ ಎಲ್ಲಾ ಹಂತಗಳನ್ನು ಅನುಸರಿಸಿದ್ದರೂ ಸಹ, ಫೇಸ್‌ಬುಕ್ ನಿಮ್ಮನ್ನು ಸಂಪೂರ್ಣವಾಗಿ ಟ್ರ್ಯಾಕ್ ಮಾಡುವುದನ್ನು ನಿಲ್ಲಿಸುತ್ತದೆ ಎಂದು ಖಾತರಿಪಡಿಸುವುದಿಲ್ಲ. ಲಾಗ್ ಇನ್ ಸೆಷನ್‌ಗಳು, ಖರ್ಚು ಮಾಡಿದ ಸಮಯ ಮತ್ತು ಹೆಚ್ಚಿನವುಗಳಂತಹ ನಿಮ್ಮ ಅಪ್ಲಿಕೇಶನ್‌ಗಳ ಒಳಗೆ ಇದು ನಿಮ್ಮ ದೈನಂದಿನ ಮೂಲ ಬಳಕೆಯನ್ನು ಟ್ರ್ಯಾಕ್ ಮಾಡುತ್ತದೆ.

Best Mobiles in India

English summary
How to stop off-Facebook activity tracking on Android device.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X