ಏಕಕಾಲದಲ್ಲಿ ಹಲವು ಭಾಷೆಗಳಲ್ಲಿ ಸಂದೇಶವನ್ನು ಟೈಪ್‌ ಮಾಡುವುದು ಹೇಗೆ!

|

ಇದು ಸ್ಮಾರ್ಟ್‌ಫೋನ್‌ ಜಮಾನ, ಬಹುತೇಕ ಎಲ್ಲರ ಕೈನಲ್ಲೂ ಇಂದು ಸ್ಮಾರ್ಟ್‌ಫೋನ್‌ಗಳು ರಿಂಗಣಿಸುತ್ತಿವೆ. ಹೆಚ್ಚಿನ ಜನರು ಸ್ಮಾರ್ಟ್‌ಫೋನ್‌ ಬಳಕೆಯನ್ನು ಮಾಡುತ್ತಿದ್ದು, ಸ್ಮಾರ್ಟ್‌ಫೋನ್‌ನಲ್ಲಿರುವ ಆಪ್‌ಗಳು ಸಾಕಷ್ಟು ಉಪಯುಕ್ತ ಕೂಡ ಆಗಿದೆ. ಸದ್ಯ ಸ್ಮಾರ್ಟ್‌ಫೋನ್‌ನಲ್ಲಿ ಬ್ರೌಸಿಂಗ್, ಟೆಕ್ಸ್ಟಿಂಗ್, ಕಾಲ್ ರೆಕಾರ್ಡಿಂಗ್, ಟೈಪಿಂಗ್ ಮತ್ತು ಇತರವುಗಳಿಗೆ ಬಳಸಬಹುದಾದ ಬಹಳಷ್ಟು ಅಪ್ಲಿಕೇಶನ್‌ಗಳನ್ನು ಸಹ ನಾವು ಕಾಣಬಹುದಾಗಿದೆ. ಇದಲ್ಲದೆ ನಿಮಗಿಷ್ಟವಾದ ಭಾಷೆಯಲ್ಲಿ ಸಂದೇಶವನ್ನು ಟೈಪ್‌ ಮಾಡುವುದಕ್ಕೆ ಬಳಸಬಹುದಾದ ಕೀ ಬೋರ್ಡ್‌ ಅಪ್ಲಿಕೇಶನ್‌ ಅನ್ನು ಸಹ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾಗಿದೆ.

ಸ್ಮಾರ್ಟ್‌ಫೋನ್

ಹೌದು, ಸ್ಮಾರ್ಟ್‌ಫೋನ್‌ನಲ್ಲಿ ಸಂದೇಶ ರವಾನೆ ಮಾಡುವುದಕ್ಕೆ ಸಾಕಷ್ಟು ಮೇಸೆಜಿಂಗ್‌ ಅಪ್ಲಿಕೇಶನ್‌ಗಳು ಲಭ್ಯವಿವೆ. ಇನ್ನು ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಕಷ್ಟು ಆಸಕ್ತಿದಾಯಕ ಕೀಬೋರ್ಡ್‌ ಅನ್ನು ಸಹ ಕಾಣಬಹುದಾಗಿದೆ. ಈ ರೀತಿಯ ಅಪ್ಲಿಕೇಶನ್ಗಳಿಂದ ಸ್ಮಾರ್ಟ್‌ಫೋನ್‌ ಬಳಕೆದಾರರು ಸಮದೇಶ ರವಾನಿಸುವಾಗ ಒಂದೇ ಬಾರಿಗೆ ಹಲವು ಭಾಷೆಗಳಲ್ಲಿ ಟೈಪ್‌ ಮಾಡಲು ಅವಕಾಶವಿದೆ. ಹಾಗಾದ್ರೆ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಟೈಪ್ ಮಾಡುವಾಗ ವಿಭಿನ್ನ ರೀತಿಯ ಹಲವು ಭಾಷಾ ಟೈಪಿಂಗ್ ಅನ್ನು ಹೇಗೆ ನಿಭಾಯಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Android ಸ್ಮಾರ್ಟ್‌ಫೋನ್

ಸದ್ಯ ನಿಮ್ಮ Android ಸ್ಮಾರ್ಟ್‌ಫೋನ್‌ನಲ್ಲಿ ಏಕಕಾಲದಲ್ಲಿ ಅನೇಕ ಭಾಷೆಗಳಲ್ಲಿ ಸಂದೇಶವನ್ನು ಟೈಪ್ ಮಾಡುವುದಕ್ಕೆ 2 ವಿಧಾನಗಳಿವೆ. ಅವುಗಳಲ್ಲಿ ಸ್ವಿಫ್ಟ್‌ಕೀ ಕೀಬೋರ್ಡ್ ಮತ್ತು ಗೂಗಲ್‌ ಕೀಬೋರ್ಡ್‌ ಅಪ್ಲಿಕೇಶನ್‌ ಮೂಲಕ ಡೀಫಾಲ್ಟ್‌ ಅಪ್ಲಿಕೇಶನ್‌ ಆಗಿ ಬಳಸಬಹುದಾಗಿದೆ. ಇದರಲ್ಲಿ ಸ್ವಿಫ್ಟ್‌ ಕೀ ಕೀಬೋರ್ಡ್‌ ಆಂಡ್ರಾಯ್ಡ್ ಕೀಬೋರ್ಡ್ ಅಪ್ಲಿಕೇಶನ್ ಆಗಿದೆ. ನೀವು ಅದನ್ನು Google Play ಸ್ಟೋರ್‌ ನಿಂದ ಪಡೆಯಬಹುದಾಗಿದೆ. ಈ ಅಪ್ಲಿಕೇಶನ್‌ನ ಸಹಾಯದಿಂದ, ನೀವು ಐದು ಭಾಷೆಗಳಲ್ಲಿ ಟೈಪ್ ಮಾಡಬಹುದಾಗಿದೆ. ಇದರಲ್ಲಿ ಐದು ಭಾಷೆಗಳ ನಡುವೆ ಸಂದೇಶವನ್ನು ಟೈಪ್‌ ಮಾಡಬಹುದಾಗಿದೆ. ಇನ್ನು ಸ್ವಿಫ್ಟ್‌ ಕೀಬೋರ್ಡ್‌ ಮೂಲಕ ಮಲ್ಟಿ ಲ್ಯಾಂಗ್ವೇಜ್‌ ಟೈಪ್‌ ಮಾಡುವುದು ಹೇಗೆ ಅನ್ನೊದನ್ನ ಹಂತಹಂತವಾಗಿ ತಿಳಿದುಕೊಳ್ಳೋಣ ಬನ್ನಿರಿ.

Swiftkey keyboard

Swiftkey keyboard

ಹಂತ:1 ನೀವು ಪ್ಲೇ ಸ್ಟೋರ್‌ನಲ್ಲಿ Swiftkey keyboard ಅನ್ನು ಡೌನ್‌ಲೋಡ್ ಮಾಡಿದ ನಂತರ ಸ್ವಿಫ್ಟ್ ಕೀ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಿ.
ಹಂತ:2 ಅಪ್ಲಿಕೇಶನ್ ತೆರೆಯಿರಿ ಮತ್ತು ನಂತರ ಭಾಷೆಗಳ ಆಯ್ಕೆಗೆ ಹೋಗಿ. ನೀವು ಬಳಸಬಹುದಾದ ಮತ್ತು ಆರಿಸಬಹುದಾದ ಬಹಳಷ್ಟು ಭಾಷೆಗಳು ಇದರಲ್ಲಿ ಲಭ್ಯವಿದ್ದು, ಇವುಗಳನ್ನು ಯಾವುದೇ ರೀತಿಯ ಭಾಷಾ ಪ್ಯಾಕ್‌ಗಳಿಂದ ಡೌನ್‌ಲೋಡ್ ಮಾಡಬಹುದು ಮತ್ತು ಅವುಗಳನ್ನು ಕೀಬೋರ್ಡ್‌ನಲ್ಲಿಯೂ ಬಳಸಬಹುದಾಗಿದೆ.
ಹಂತ:3 ಇನ್ನು ನೀವು ಬಹು ಭಾಷೆಗಳೊಂದಿಗೆ ಕೆಲಸ ಮಾಡಲು ಬಯಸಿದರೆ, ನೀವು ಎಲ್ಲಾ ಭಾಷಾ ಪ್ಯಾಕ್‌ಗಳನ್ನು ಏಕಕಾಲದಲ್ಲಿ ಡೌನ್‌ಲೋಡ್ ಮಾಡಬಹುದಾಗಿರುತ್ತದೆ. ನಂತರ ನೀವು ಕೀಬೋರ್ಡ್ ಹಂತಕ್ಕೆ ಹೋಗಿ ನಿಮಗೆ ಅಗತ್ಯವಿರುವ ನಿರ್ದಿಷ್ಟ ಭಾಷೆಯನ್ನು ಪರಿಶೀಲಿಸಬಹುದು. ಈ ಮೂಲಕ ನೀವು ಮಲ್ಟಿ ಲ್ಯಾಂಗ್ವೇಜ್‌ ಅನ್ನು ಬಳಸಬಹುದಾಗಿದೆ.

ಗೂಗಲ್ ಕೀಬೋರ್ಡ್

ಇನ್ನು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸದೆ ಇದನ್ನು ಮಾಡಲು ಗೂಗಲ್ ಕೀಬೋರ್ಡ್ ಅಪ್ಲಿಕೇಶನ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಎಲ್ಲಾ ಭಾಷೆಗಳಿಗೆ ಡೀಫಾಲ್ಟ್ ಅಪ್ಲಿಕೇಶನ್ ಆಗಿಯೂ ಸಹ ಬಳಸಬಹುದು.ಇದರಲ್ಲಿ ಯಾವ ಮಾದರಿಯಲ್ಲಿ ಮಲ್ಟಿ ಲ್ಯಾಂಗ್ವೇಜ್‌ ಅನ್ನು ಬಳಸಬಹುದು ಅನ್ನೊದನ್ನ ತಿಳಿಯೋಣ ಬನ್ನಿರಿ.
ಹಂತ:1 ಸೆಟ್ಟಿಂಗ್‌ಗಳನ್ನು ತೆರೆಯಿರಿ. ನಂತರ ಭಾಷೆ ಮತ್ತು ಇನ್‌ಪುಟ್‌ಗೆ ಹೋಗಿ. ಇಲ್ಲಿ ಗೇರ್ ಐಕಾನ್ ಕಾಣಲಿದೆ. ಅದನ್ನು ನೀವು ಟ್ಯಾಪ್‌ ಮಾಡಬೇಕಾಗುತ್ತದೆ. ಇದು ಡೀಫಾಲ್ಟ್ ಕೀಬೋರ್ಡ್ ಅಪ್ಲಿಕೇಶನ್‌ನ ಹಿಂದೆ ಇದೆ. ನಂತರ ನೀವು ಇನ್ಪುಟ್ ಭಾಷೆಗಳ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಹಂತ:2 ನಂತರ ನೀವು ಲಭ್ಯವಿರುವ ಭಾಷಾ ಪಟ್ಟಿಗೆ ಹೋಗಬಹುದು. ಅಲ್ಲಿ ನಿಮಗೆ ಅಗತ್ಯವಿರುವ ಭಾಷೆಯನ್ನು ಪಟ್ಟಿಯಿಂದ ಆಯ್ಕೆ ಮಾಡಬಹುದು.
ಹಂತ:3 Google ಕೀಬೋರ್ಡ್ ಸೆಟ್ಟಿಂಗ್‌ಗಳಿಗೆ ಹೋಗಿ. ಅಲ್ಲಿ ನೀವು ಸಿಸ್ಟಮ್ ಸಿಸ್ಟಮ್ ಭಾಷೆ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಬಹುದು.
ಹಂತ:4 ನಂತರ ನೀವು ಯಾವುದೇ ಮೆಸೇಜಿಂಗ್ ಅಪ್ಲಿಕೇಶನ್ ತೆರೆಯಬಹುದು. ಸ್ಪೇಸ್ ಬಾರ್ ಕೆಳಗೆ ನೀವು ಗ್ಲೋಬ್ ಐಕಾನ್ ಅನ್ನು ಕಾಣಬಹುದು. ನೀವು ಒಮ್ಮೆ ಗ್ಲೋಬ್ ಐಕಾನ್ ಕ್ಲಿಕ್ ಮಾಡಿದರೆ. ಅಲ್ಲಿ ಭಾಷೆಯನ್ನು ಬದಲಾಯಿಸಲು ನಿಮಗೆ ಅವಕಾಶ ಸಿಗಲಿದೆ.

ಮಲ್ಟಿ ಲ್ಯಾಂಗ್ವೇಜ್

ಇದಲ್ಲದೆ ಮಲ್ಟಿ ಲ್ಯಾಂಗ್ವೇಜ್‌ ಅನ್ನು ಒದಗಿಸಲು, ನೀವು Google ನಿಂದ Gboard, GO ಕೀಬೋರ್ಡ್ ಲೈಟ್, ಮಲ್ಟಿಲಿಂಗ್ ಒ ಕೀಬೋರ್ಡ್ + ಎಮೋಜಿ ಮತ್ತು ಇತರ ಅಪ್ಲಿಕೇಶನ್‌ಗಳನ್ನು ಸಹ ಬಳಸಬಹುದಾಗಿದೆ.

Best Mobiles in India

English summary
There are 2 methods with the help of which you can type in multiple languages in your Android device.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X