ಪ್ಯಾನ್ ಕಾರ್ಡ್‌ನಲ್ಲಿ ನಿಮ್ಮ ಫೋಟೋ ಬದಲಾಯಿಸುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಬ್ಯಾಂಕ್‌ ವ್ಯವಹಾರಗಳಿಗೆ ಪ್ಯಾನ್‌ಕಾರ್ಡ್‌ ಅತ್ಯಗತ್ಯವಾಗಿದೆ. ಶಾಶ್ವತ ಖಾತೆ ಸಂಖ್ಯೆ (PAN) ಆಗಿರುವ ಪಾನ್‌ ಕಾರ್ಡ್‌ 10 ಅಂಕಿಯ ವಿಶಿಷ್ಟ ಆಲ್ಫಾನ್ಯೂಮರಿಕ್ ಕೋಡ್ ಹೊಂದಿರಲಿದೆ. ಪ್ಯಾನ್‌ಕಾರ್ಡ್‌ ನಿಮ್ಮ ಹಣಕಾಸಿನ ಫುಲ್‌ ಹಿಸ್ಟರಿಯನ್ನು ನೀಡಲಿದೆ. ಜೊತೆಗೆ ಪ್ಯಾನ್‌ಕಾರ್ಡ್‌ ನಿಮ್ಮ ಗುರುತಿನ ದಾಖಲೆಯಾಗಿಯೂ ಕೂಡ ಸಹಕಾರಿಯಾಗಲಿದೆ. ಕೆಲವು ಸಂದರ್ಭದಲ್ಲಿ ನಿಮ್ಮ ಫೋಟೋ ಮತ್ತು ಸಹಿಯನ್ನು ಪರಿಶೀಲಿಸುವುದಕ್ಕೂ ಕೂಡ ಪ್ಯಾನ್‌ಕಾರ್ಡ್‌ ಬಳಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ಯಾನ್‌ಕಾರ್ಡ್‌ನಲ್ಲಿ ನಮೂದಿಸಿದ ಮಾಹಿತಿ ಸರಿಯಿರುವುದು ಅವಶ್ಯಕವಾಗಿದೆ.

ಪ್ಯಾನ್‌ಕಾರ್ಡ್‌

ಹೌದು, ಪ್ಯಾನ್‌ಕಾರ್ಡ್‌ ಕೇವಲ ನಿಮ್ಮ ಬ್ಯಾಂಕ್‌ ವಹಿವಾಟಿಗೆ ಮಾತ್ರವಲ್ಲ ನಿಮ್ಮ ಗುರುತಿನ ಚಿಟಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ಪ್ಯಾನ್‌ಕಾರ್ಡ್‌ನಲ್ಲಿ ನಿಮ್ಮ ನಿಮ್ಮ ಭಾವಚಿತ್ರ ಮತ್ತು ಸಹಿ ಮಾಹಿತಿ ಸರಿಯಾಗಿರಬೇಕು. ಇದಕ್ಕಾಗಿ ಕೆಲವರು ಪ್ಯಾನ್‌ಕಾರ್ಡ್‌ನಲ್ಲಿ ನಮೂದಿಸಿರುವ ಫೋಟೋ ಮತ್ತು ಸಹಿಯನ್ನು ಬದಲಾಯಿಸಲು ಬಯಸುತ್ತಾರೆ. ಹೊಸದಾಗಿ ತ್ಮ ಮಾಹಿತಿಯನ್ನು ಪ್ಯಾನ್‌ಕಾರ್ಡ್‌ನಲ್ಲಿ ಅಪ್ಡೇಟ್‌ ಮಾಡುವುದಕ್ಕೆ ಅವಕಾಶ ಕೂಡ ಇದೆ. ಹಾಗಾದ್ರೆ ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿ ಫೋಟೋ ಮತ್ತು ಸಹಿಯನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪ್ಯಾನ್‌ ಕಾರ್ಡ್‌

ಪ್ಯಾನ್‌ ಕಾರ್ಡ್‌ ಬ್ಯಾಂಕ್‌ನಲ್ಲಿ ಮಾತ್ರವಲ್ಲ ಹೆಚ್ಚಿನ ಹಣಕಾಸು ವ್ಯವಹಾರ ನಡೆಸುವಾಗ ಕಡ್ಡಾಯವಾಗಿದೆ.ಪರ್ಮನೆಂಟ್‌ ಅಕೌಂಟ್‌ ನಂಬರ್‌ ಎನಿಸಿಕೊಂಡಿರುವ ಪ್ಯಾನ್‌ಕಾರ್ಡ್‌ನ್ಲಿ ನಿಮ್ಮ ಹಣಕಾಸಿನ ಸಂಪೂರ್ಣ ಇತಿಹಾಸವೇ ಲಭ್ಯವಾಗಲಿದೆ. ಇದೇ ಕಾರಣಕ್ಕೆ ಎಲ್ಲಿ ಹೋದರೂ ಪ್ಯಾನ್‌ಕಾರ್ಡ್‌ ನಂಬರ್‌ ಎಂಟ್ರಿ ಮಾಡುವುದು ಇತ್ತಿಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಅಷ್ಟೇ ಅಲ್ಲ ಪ್ಯಾನ್‌ಕಾರ್ಡ್‌ ಅನ್ನು ಆಧಾರ್‌ನೊಂದಿಗೆ ಲಿಂಕ್‌ ಮಾಡುವ ಮೂಲಕ ಇದರ ಪ್ರಾಮುಖ್ಯತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಆದರಿಂದ ನಿಮ್ಮ ಪ್ಯಾನ್‌ಕಾರ್ಡ್‌ನನಲ್ಲಿರುವ ಮಾಹಿತಿ ಸರಿಯಾಗಿರುವುದು ಮುಖ್ಯ. ಇದಕ್ಕಾಗಿ ಎಷ್ಟೋ ಮಂದಿ ಪ್ಯಾನ್‌ಕಾರ್ಡ್‌ನಲ್ಲಿರುವ ಹಳೆ ಫೋಟೋ ಬದಲಿಸಿ ಹೊಸ ಫೋಟೋ ಅಪ್ಡೇಟ್‌ ಮಾಡಲು ಬಯಸುತ್ತಾರೆ.

ಪ್ಯಾನ್ ಕಾರ್ಡ್‌ನಲ್ಲಿ ನಿಮ್ಮ ಫೋಟೋ ಬದಲಾಯಿಸುವುದು ಹೇಗೆ?

ಪ್ಯಾನ್ ಕಾರ್ಡ್‌ನಲ್ಲಿ ನಿಮ್ಮ ಫೋಟೋ ಬದಲಾಯಿಸುವುದು ಹೇಗೆ?

ಹಂತ:1 ಮೊದಲನೆಯದಾಗಿ, NSDL ನ ಅಧಿಕೃತ ವೆಬ್‌ಸೈಟ್‌ ತೆರೆಯಿರಿ.
ಹಂತ:2 ನಂತರ, ವೆಬ್‌ಸೈಟ್‌ನಲ್ಲಿ ನಿಮ್ಮ ಅಪ್ಲಿಕೇಶನ್ ಪ್ರಕಾರದ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದೀಗ ಅಸ್ತಿತ್ವದಲ್ಲಿರುವ PAN ಡೇಟಾ ಆಯ್ಕೆಯಲ್ಲಿ ಬದಲಾವಣೆಗಳನ್ನು ಆಯ್ಕೆಮಾಡಿ.
ಹಂತ:3 ಇದಾದ ನಂತರ ಕ್ಯಾಟಗರಿ ಮೆನುವಿನಲ್ಲಿ ನಿಮ್ಮ ವೈಯಕ್ತಿಕ ಆಯ್ಕೆಯನ್ನು ಆರಿಸಿ
ಹಂತ:4 ಅಲ್ಲಿಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಸಬ್ಮಿಟ್‌ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:5 ನಂತರ ಪ್ಯಾನ್ ಅಪ್ಲಿಕೇಶನ್‌ನಲ್ಲಿ ಮುಂದುವರಿಯಿರಿ ಮತ್ತು KYC ಆಯ್ಕೆಯನ್ನು ಆಯ್ಕೆ ಮಾಡಿ.
ಹಂತ:6 ಇದೀಗ 'ಫೋಟೋ ಮಿಸ್‌ಮ್ಯಾಚ್‌' ಮತ್ತು 'ಸಿಗ್ನೇಚರ್ ಮಿಸ್‌ಮ್ಯಾಚ್' ಆಯ್ಕೆ ಕಾಣಿಸಿಕೊಳ್ಳುತ್ತದೆ.
ಹಂತ:7 ಇಲ್ಲಿ, ನೀವು ಫೋಟೋವನ್ನು ಬದಲಾಯಿಸಲು ಫೋಟೋ ಮಿಸ್‌ಮ್ಯಾಚ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಡಿಕ್ಲರೇಶನ್

ಹಂತ:8 ಈಗ, ಪೋಷಕರ ವಿವರಗಳನ್ನು ಭರ್ತಿ ಮಾಡಿದ ನಂತರ, ಮುಂದಿನ ಬಟನ್ ಕ್ಲಿಕ್ ಮಾಡಿ.
ಹಂತ:9 ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಅರ್ಜಿದಾರರು ಗುರುತಿನ ಪುರಾವೆ, ವಿಳಾಸ ಪುರಾವೆ ಮತ್ತು ಜನ್ಮ ಪುರಾವೆಯ ಮರಣದ ಪುರಾವೆಗಳನ್ನು ಲಗತ್ತಿಸಬೇಕು.
ಹಂತ:10 ನಂತರ, ಡಿಕ್ಲರೇಶನ್ ಅನ್ನು ಟಿಕ್ ಮಾಡಿ ಮತ್ತು ಸಬ್ಮಿಟ್‌ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ:11 ಪ್ಯಾನ್‌ಕಾರ್ಡ್‌ನಲ್ಲಿ ಫೋಟೋ ಮತ್ತು ಸಹಿ ಬದಲಾವಣೆ ಮಾಡುವುದಕ್ಕೆ ಅರ್ಜಿ ಶುಲ್ಕ ಭಾರತದಲ್ಲಿ 101ರೂ. (ಜಿಎಸ್‌ಟಿ ಸೇರಿದಂತೆ) ಆಗಿದೆ. ಭಾರತದ ಹೊರಗಿನ ವಿಳಾಸಕ್ಕಾಗಿ ಅರ್ಜಿ ಶುಲ್ಕ 1011ರೂ. (ಜಿಎಸ್‌ಟಿ ಸೇರಿದಂತೆ)ಆಗಲಿದೆ.
ಹಂತ:12 ಸಂಪೂರ್ಣ ಪ್ರಕ್ರಿಯೆಯ ನಂತರ, 15-ಅಂಕಿಯ ಸ್ವೀಕೃತಿಯನ್ನು ಸ್ವೀಕರಿಸಲಾಗುತ್ತದೆ.
ಹಂತ:13 ಇದಾದ ನಂತರ ಅಪ್ಲಿಕೇಶನ್‌ನ ಪ್ರಿಂಟ್‌ಔಟ್ ಅನ್ನು ಆದಾಯ ತೆರಿಗೆ ಪ್ಯಾನ್ ಸೇವಾ ಘಟಕಕ್ಕೆ ಕಳುಹಿಸಬೇಕಾಗುತ್ತದೆ.
ಹಂತ:14 ನೀವು ಸ್ವಿಕರಿಸುವ ಸ್ವೀಕೃತಿ ಸಂಖ್ಯೆ ಮೂಲಕ ನಿಮ್ಮ ಅಪ್ಲಿಕೇಶನ್ ಅನ್ನು ಟ್ರ್ಯಾಕ್ ಮಾಡಬಹುದಾಗಿದೆ.

ಫೋಟೋ

ಹೀಗೆ ಮೇಲಿನ ನಿಯಮಗಳನ್ನು ಪಾಲಿಸುವ ಮೂಲಕ ಪ್ಯಾನ್‌ಕಾರ್ಡ್‌ನಲ್ಲಿ ನಿಮ್ಮ ಫೋಟೋ ಮತ್ತು ಸಹಿಯನ್ನು ಬದಲಾಯಿಸಬಹುದಾಗಿದೆ. ಪ್ಯಾನ್‌ಕಾರ್ಡ್‌ನಲ್ಲಿ ಕಾಲಕಾಲಕ್ಕೆ ನಿಮ್ಮ ಫೋಟೋ ಮತ್ತು ಸಹಿಯನ್ನು ಅಪ್ಡೇಟ್‌ ಮಾಡುವುದು ಒಳ್ಳೆಯ ಕೆಲಸವಾಗಿದೆ. ಸಾಮಾನ್ಯವಾಗಿ ಪ್ಯಾನ್‌ಕಾರ್ಡ್‌ನಲ್ಲಿ ನಮೂದಿಸಿರುವ ಫೋಟೋ ಕಾಲಕಳೆದಂತೆ ನಿಮಗೆ ಮಿಸ್‌ಮ್ಯಾಚ್‌ ಆಗುವ ಸಾದ್ಯತೆ ಕೂಡ ಇರಲಿದೆ.

Best Mobiles in India

English summary
If you find any discrepancy in your photo or signature, then you can follow the following procedure to change or update the photo and signature in PAN card.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X