ಫೋಟೊಗಳನ್ನು ಗೂಗಲ್‌ ಫೋಟೋಸ್‌ಗೆ ಅಪ್‌ಲೋಡ್‌ ಮಾಡುವುದು ಹೇಗೆ?

|

ಕೆಲವು ಪ್ರಮುಖ ಸಂದರ್ಭಗಳಲ್ಲಿ ಜನರು ಸೆರೆಹಿಡಿದ ಫೋಟೋ ಮತ್ತು ವಿಡಿಯೋಗಳನ್ನು ನೆನಪಿಗಾಗಿ ಉಳಿಸಿಕೊಳ್ಳುತ್ತಾರೆ. ಈಗಂತೂ ಹೆಚ್ಚಾಗಿ ಫೋನ್‌ ಮೂಲಕವೇ ಫೋಟೊಗಳನ್ನು ಸೆರೆಹಿಡಿಯುತ್ತಾರೆ. ಫೋಟೊ ತೆಗೆಯುವ ಜೊತೆಗೆ, ತೆಗೆದ ಫೋಟೊಗಳನ್ನು ಕಾಯ್ದುಕೊಳ್ಳುವುದು ಅಷ್ಟೇ ಮುಖ್ಯ ಆಗಿರುತ್ತದೆ. ಏಕೆಂದರೇ ಯಾವುದೋ ಕಾರಣಗಳಿಂದಾಗಿ ಫೋಟೊಗಳು ಡಿಲೀಟ್ ಆಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಫೋಟೊ ಮತ್ತು ವಿಡಿಯೋ ಕಾಯ್ದುಕೊಳ್ಳುವುದು ಅಗತ್ಯ.

ಫೋನ್ ಗ್ಯಾಲರಿಯಲ್ಲಿ ಫೋಟೊ ಮತ್ತು ವಿಡಿಯೋ ಮಿಸ್‌ ಆಗುವ ಸಾಧ್ಯತೆಗಳಿರುತ್ತವೆ ಎಂದು ಅನೇಕ ಬಳಕೆದಾರರು ಕ್ಲೌಡ್‌ ಸ್ಟೋರೇಜ್‌ ನಲ್ಲಿ ಸಂಗ್ರಹಿಸಲು ಮುಂದಾಗುತ್ತಾರೆ. ಒಂದು ಲೆಕ್ಕಾಚಾರದಲ್ಲಿ ಫೋಟೊಗಳನ್ನು ಕ್ಲೌಡ್ ಸಂಗ್ರಹಣೆಯಲ್ಲಿ ಸಂಗ್ರಹಿಸುವುದು ಉತ್ತಮ ಎಂದು ಹೇಳಬಹುದು. ಈ ನಿಟ್ಟಿನಲ್ಲಿ ಗೂಗಲ್‌ ಫೋಟೊಸ್‌ (Google Photos) ಅತ್ಯುತ್ತಮ ಕ್ಲೌಡ್‌ ಸ್ಟೋರೇಜ್‌ ಆಯ್ಕೆಗಳಲ್ಲಿ ಒಂದಾಗಿದೆ.

ಫೋಟೊಗಳನ್ನು ಗೂಗಲ್‌ ಫೋಟೋಸ್‌ಗೆ ಅಪ್‌ಲೋಡ್‌ ಮಾಡುವುದು ಹೇಗೆ?
ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಿಂದ ಫೋಟೋಗಳು ಮತ್ತು ವೀಡಿಯೊಗಳನ್ನು ಉಚಿತವಾಗಿ ಸಂಗ್ರಹಿಸಲು ಗೂಗಲ್‌ ಫೋಟೊಸ್‌ ಅವಕಾಶ ನೀಡುತ್ತದೆ. ಬಳಕೆದಾರರು ಗೂಗಲ್‌ ಖಾತೆಯನ್ನು ಹೊಂದಿರಬೇಕು. ಈ ಸೇವೆಯಲ್ಲಿ 15GB ವರೆಗೆ ಉಚಿತ ಸ್ಟೋರೇಜ್‌ ಅವಕಾಶ ಲಭ್ಯ ಆಗುತ್ತದೆ. ಹಾಗಾದರೇ ಫೋಟೋಗಳು ಮತ್ತು ವೀಡಿಯೊಗಳನ್ನು ಗೂಗಲ್‌ ಫೋಟೊಸ್‌ ಗೆ ಅಪ್‌ಲೋಡ್‌ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಫೋಟೊಗಳನ್ನು ಗೂಗಲ್‌ ಫೋಟೋಸ್‌ಗೆ ಅಪ್‌ಲೋಡ್‌ ಮಾಡುವುದು ಹೇಗೆ?
ಡೆಸ್ಕ್‌ಟಾಪ್‌ನಿಂದ ಫೋಟೋಗಳನ್ನು ಅಪ್‌ಲೋಡ್ ಮಾಡಲು, ಈ ಹಂತಗಳನ್ನು ಅನುಸರಿಸಿ.
* ನಿಮ್ಮ ಡೆಸ್ಕ್‌ಟಾಪ್‌ನಲ್ಲಿ https://photos.google.com/ ಗೆ ಹೋಗಿ.
* ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಅಪ್‌ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಕಂಪ್ಯೂಟರ್‌ನಿಂದ ಗೂಗಲ್‌ ಫೋಟೋಗಳಿಗೆ ಫೋಟೋಗಳನ್ನು ಆಯ್ಕೆ ಮಾಡಲು ಮತ್ತು ಅಪ್‌ಲೋಡ್ ಮಾಡಲು ಕಂಪ್ಯೂಟರ್ ಆಯ್ಕೆಯನ್ನು ಕ್ಲಿಕ್ ಮಾಡಿ.
* ಈಗ, ಫೋಟೋಗಳನ್ನು ಆಯ್ಕೆಮಾಡಿ ಮತ್ತು ತೆರೆಯಿರಿ ಕ್ಲಿಕ್ ಮಾಡಿ. ನಿಮ್ಮ ಎಲ್ಲಾ ಆಯ್ಕೆಮಾಡಿದ ಫೋಟೋಗಳು ನಿಮ್ಮ ಗೂಗಲ್‌ ಫೋಟೋಗಳಲ್ಲಿ ಅಪ್‌ಲೋಡ್ ಆಗಲು ಪ್ರಾರಂಭಿಸುತ್ತವೆ.
ಗೂಗಲ್‌ ಡ್ರೈವ್‌ನಿಂದ ಗೂಗಲ್‌ ಫೋಟೋಸ್‌ಗೆ ಫೋಟೋ ಅಪ್‌ಲೋಡ್‌ ಮಾಡಲು ಹೀಗೆ ಮಾಡಿ:
* ನಿಮ್ಮ ಕಂಪ್ಯೂಟರ್‌ನಲ್ಲಿ https://photos.google.com/?pli=1 ತೆರೆಯಿರಿ
* ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಅಪ್‌ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಗೂಗಲ್‌ ಡ್ರೈವ್ ಆಯ್ಕೆಮಾಡಿ ಮತ್ತು ಅದು ನಿಮ್ಮ ಡ್ರೈವ್‌ನಿಂದ ಫೋಟೋಗಳನ್ನು ತೋರಿಸುತ್ತದೆ.
* ಫೋಟೋಗಳನ್ನು ಆಯ್ಕೆ ಮಾಡಿ ಮತ್ತು ಅಪ್ಲೋಡ್ ಕ್ಲಿಕ್ ಮಾಡಿ.

ಫೋಟೊಗಳನ್ನು ಗೂಗಲ್‌ ಫೋಟೋಸ್‌ಗೆ ಅಪ್‌ಲೋಡ್‌ ಮಾಡುವುದು ಹೇಗೆ?
ಮೊಬೈಲ್‌ನಿಂದ ಗೂಗಲ್‌ ಫೋಟೋಸ್‌ಗೆ ಫೋಟೋ ಅಪ್‌ಲೋಡ್‌ ಮಾಡಲು ಹೀಗೆ ಮಾಡಿ:
* ಗೂಗಲ್‌ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ನಿಂದ ಗೂಗಲ್‌ ಫೋಟೊಸ್‌ ಆಪ್‌ ಅನ್ನು ಡೌನ್‌ಲೋಡ್ ಮಾಡಿ.
* ಬಳಿಕ, ನಿಮ್ಮ ಗೂಗಲ್‌ ಖಾತೆಯೊಂದಿಗೆ ಸೈನ್ ಇನ್ ಮಾಡಿ.
* ಈಗ, ನೀವು ಬ್ಯಾಕಪ್ ಮಾಡಲು ಬಯಸುವ ಫೋಟೋವನ್ನು ಟ್ಯಾಪ್ ಮಾಡಿ.
* ಚಿತ್ರದ ಮೇಲ್ಭಾಗದಲ್ಲಿ, ನೀವು ಅಪ್‌ಲೋಡ್ ಐಕಾನ್ ಅನ್ನು ನೋಡಲು ಸಾಧ್ಯವಾಗುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಫೋಟೋವನ್ನು ಬ್ಯಾಕಪ್ ಮಾಡಲಾಗುತ್ತದೆ.
Best Mobiles in India

English summary
How to Upload Photos to Google Photos via Desktop and Mobile.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X