ದಿ ಟ್ವಿಲೈಟ್ ಸರಣಿಯ ಚಲನಚಿತ್ರಗಳನ್ನು ಎಲ್ಲಿ ವೀಕ್ಷಿಸಬಹುದು ಗೊತ್ತಾ?

|

ಜನಪ್ರಿಯ ಫ್ಯಾಂಟಸಿ ಚಲನಚಿತ್ರಗಳ ಸರಣಿಯಲ್ಲಿ ದಿ ಟ್ವಿಲೈಟ್ ಅಥವಾ ದಿ ಟ್ವಿಲೈಟ್ ಸಾಗಾ ಎಂಬುದು ಕೂಡ ಸೇರಿದೆ. ಇನ್ನು ಈ ಸರಣಿ ರಕ್ತಪಿಶಾಚಿ-ವಿಷಯದ ಕುರಿತಾದ ಫ್ಯಾಂಟಸಿ ಚಲನಚಿತ್ರಗಳ ಸರಣಿಯಾಗಿದ್ದು, ಇದನ್ನು ಸಮ್ಮಿಟ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ. ಇನ್ನು ಈ ಚಲನಚಿತ್ರ ಪ್ರಸಿದ್ಧ ಕಾಂದಬರಿಕಾರ ಸ್ಟೀಫನಿ ಮೇಯರ್ ಪ್ರಕಟಿಸಿದ ನಾಲ್ಕು ಕಾದಂಬರಿಗಳನ್ನು ಆಧರಿಸಿದೆ. ಇನ್ನು ಈ ಚಲನಚಿತ್ರ ಸರಣಿಯು ವಿಶ್ವಾದ್ಯಂತ $3.4 ಶತಕೋಟಿಗೂ ಹೆಚ್ಚು ಹಣವನ್ನು ಗಳಿಸಿದೆ.

ಟ್ವಿಲೈಟ್‌

ಹೌದು, ದಿ ಟ್ವಿಲೈಟ್‌ ಫ್ಯಾಂಟಸಿ ಚಲನಚಿತ್ರ ಸರಣಿ ವಿಶ್ವದಾಂದ್ಯತ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಈ ಸರಣಿಯಲ್ಲಿ ಹಲವು ಚಲನಚಿತ್ರಗಳು ಬಿಡುಗಡೆಯಾಗಿದ್ದು, ಪ್ರತಿ ಚಿತ್ರವೂ ಕೂಡ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದೆ. ಇನ್ನು ಚಲನಚಿತ್ರ ಸರಣಿಯ ಮೊದಲ ಭಾಗ ಟ್ವಿಲೈಟ್, ನವೆಂಬರ್ 21, 2008 ರಂದು ಬಿಡುಗಡೆಯಾಗಿತ್ತು. ಹಾಗೆಯೇ ಎರಡನೇ ಚಿತ್ರ ದಿ ಟ್ವಿಲೈಟ್‌ ಸಾಗಾ: ನ್ಯೂ ಮೂನ್‌ ನವೆಂಬರ್ 20, 2009 ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿತ್ತು. ಹಾಗಾದ್ರೆ ದಿ ಟ್ವಿಲೈಟ್‌ ಸಾಗಾ ಚಲನಚಿತ್ರ ಸರಣಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಲೈಟ್‌

ದಿ ಟ್ವಿಲೈಟ್‌ನ ಮೊದಲ ಭಾಗ 2008ರಲ್ಲಿ ಬಿಡುಗಡೆಯಾದರೆ, ಎರಡನೇ ಭಾಗ 2009ಬಿಡುಗಡೆಯಾಗಿ ದಾಖಲೆಗಳನ್ನು ಬರೆದಿತ್ತು. ಈ ಚಿತ್ರ ಮಿಡ್‌ನೈಟ್‌ನಲ್ಲಿ ಅತಿ ಹೆಚ್ಚು ಪ್ರದರ್ಶನ ಕಂಡ ಚಿತ್ರವಾಗಿದೆ. ಇದು ಅಂದಾಜು $72.7 ಮಿಲಿಯನ್ ಹಣ ಗಳಿಕೆಯನ್ನು ಕೂಡ ಮಾಡಿತ್ತು. ಹಾಗೆಯೇ ಇದರ ಮೂರನೇ ಭಾಗ ದಿ ಟ್ವಿಲೈಟ್ ಸಾಗಾ: ಎಕ್ಲಿಪ್ಸ್, 30 ಜೂನ್ 2010 ರಂದು ಬಿಡುಗಡೆಯಾಯಿತು. ಈ ಸರಣಿಯಲ್ಲಿ ದಿ ಟ್ವಿಲೈಟ್ ಸಾಗಾ: ಬ್ರೇಕಿಂಗ್ ಡಾನ್ ಭಾಗ 1, ಮತ್ತು ದಿ ಟ್ವಿಲೈಟ್ ಸಾಗಾ: ಬ್ರೇಕಿಂಗ್ ಡಾನ್ ಭಾಗ 2 ಕ್ರಮವಾಗಿ 2011 ಮತ್ತು 2012 ರಲ್ಲಿ ಬಿಡುಗಡೆಯಾಗಿತ್ತ. ಇನ್ನು ಟ್ವಿಲೈಟ್‌ ಸರಣಿಯ ಎಲ್ಲಾ ಚಲನಚಿತ್ರಗಳನ್ನು ನೀವು ಎಲ್ಲಿ ಮತ್ತು ಹೇಗೆ ವೀಕ್ಷಿಸಬಹುದು ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ದಿ ಟ್ವಿಲೈಟ್‌ ಸರಣಿಯ ಚಲನಚಿತ್ರಗಳು

ದಿ ಟ್ವಿಲೈಟ್‌ ಸರಣಿಯ ಚಲನಚಿತ್ರಗಳು

1- ಟ್ವಿಲೈಟ್ - (2008)
2- ದಿ ಟ್ವಿಲೈಟ್ ಸಾಗಾ: ನ್ಯೂ ಮೂನ್ - (2009)
3- ದಿ ಟ್ವಿಲೈಟ್ ಸಾಗಾ: ಎಕ್ಲಿಪ್ಸ್ - (2010)
4- ದಿ ಟ್ವಿಲೈಟ್ ಸಾಗಾ: ಬ್ರೇಕಿಂಗ್ ಡಾನ್ ಭಾಗ 1 - (2011)
5- ದಿ ಟ್ವಿಲೈಟ್ ಸಾಗಾ: ಬ್ರೇಕಿಂಗ್ ಡಾನ್ ಭಾಗ 2 - (2012)

ಈ ಮೇಲಿನ ಪಟ್ಟಿಯಲ್ಲಿ ಟ್ವಿಲೈಟ್ ಚಲನಚಿತ್ರಗಳನ್ನು ಆರ್ಡರ್ ವೈಸ್ ವೀಕ್ಷಿಸುವುದು ಹೇಗೆ ಎಂದು ಹೇಳಲಾಗಿದೆ. ಇನ್ನು ಈ ಸರಣಿಯ ಚಿತ್ರವನ್ನು ಮೊದಲಿನಿಂದ ಪೂರ್ತಿ ಕಥೆಯೊಂದಿಗೆ ತಿಳಿದುಕೊಳ್ಳಲು ಬಯಸಿದರೆ, 2008 ರಲ್ಲಿ ಬಿಡುಗಡೆಯಾದ ಟ್ವಿಲೈಟ್ ಅನ್ನು ವೀಕ್ಷಿಸಬಹುದು. ಟ್ವಿಲೈಟ್ ಸರಣಿಯ ಚಲನಚಿತ್ರಗಳನ್ನು ನೀವು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು. ಇದರಲ್ಲಿ ಎಲ್ಲಾ ಭಾಗಗಳನ್ನು ವೀಕ್ಷಿಸಬಹುದು. ಇದಲ್ಲದೆ ಅಮೆಜಾನ್ ಪ್ರೈಮ್ ವಿಡಿಯೋ, ಮೈಕ್ರೋಸಾಫ್ಟ್ ಸ್ಟೋರ್‌ನಲ್ಲಿ ಶುಲ್ಕಪಾವತಿ ಮಾಡುವ ಮೂಲಕ ವೀಕ್ಷಿಸಬಹುದು.

Most Read Articles
Best Mobiles in India

Read more about:
English summary
How to watch all twilight movies online from first to last

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X