ನಿಮ್ಮ ಹಳೆ ಫೋನ್‌ ಕಂಟ್ಯಾಕ್ಟ್‌ಗಳನ್ನು ಹೊಸ ಫೋನ್‌ಗೆ ಟ್ರಾನ್ಸಫರ್‌ ಮಾಡುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ವರ್ಷಕ್ಕೊಂದು ಸ್ಮಾರ್ಟ್‌ಫೋನ್‌ ಬದಲಾಯಿಸೋದು ಯುವಜನತೆಗೆ ಒಂದು ರೀತಿಯ ಫ್ಯಾಷನ್‌ ಆಗಿ ಹೋಗಿದೆ. ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡ್ತಿದ್ದ ಹಾಗೇ ಸ್ಮಾರ್ಟ್‌ಫೋನ್‌ಗಳನ್ನು ಬದಲಾಯಿಸುವ ಸ್ಮಾರ್ಟ್‌ಫೋನ್‌ ಪ್ರಿಯರು ಇದ್ದಾರೆ. ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಹಿಂದೆ ಹೋಗುವ ಮಂದಿ ಹಳೆ ಸ್ಮಾರ್ಟ್‌ಫೋನ್‌ಗಳಿಂದ ಹೊಸ ಸ್ಮಾರ್ಟ್‌ಫೋನ್‌ಗಳಿಗೆ ಬದಲಾಗುತ್ತಿದ್ದಾರೆ. ಆದರೆ ನಿಮ್ಮ ಹಳೆ ಸ್ಮಾರ್ಟ್‌ಫೋನ್‌ನಿಂದ ಹೊಸ ಸ್ಮಾರ್ಟ್‌ಫೋನ್‌ಗೆ ಬದಲಾಗುವಾಗ ಕೆಲವರು ತಮ್ಮ ಬಳಿ ಇರುವ ಕಂಟ್ಯಾಕ್ಟ್‌ಗಳನ್ನು ಕಳೆದುಕೊಳ್ಳುತ್ತಾರೆ.

ಟ್ರಾನ್ಸಫರ್‌

ಹೌದು, ಸಾಮಾನ್ಯವಾಗಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿದ ನಂತರ ಹಳೆ ಸ್ಮಾರ್ಟ್‌ಫೋನ್‌ನಲ್ಲಿದ್ದ ಕಂಟ್ಯಾಕ್ಟ್‌ಗಳನ್ನು ಕೆಲವು ಕಳೆದುಕೊಳ್ಳುತ್ತಾರೆ. ಇದಕ್ಕೆ ಕಾರಣ ಕಂಟ್ಯಾಕ್ಟ್‌ಗಳನ್ನು ಯಾವ ರೀತಿಯಲ್ಲಿ ಟ್ರಾನ್ಸಫರ್‌ ಮಾಡಿಕೊಳ್ಳಬೇಕು ಅನ್ನೊದು ಕೆಲವರಿಗೆ ತಿಳಿದಿಲ್ಲ. ಹಳೆ ಫೋನ್‌ನಲ್ಲಿರುವ ನಿಮ್ಮ ಡೇಟಾ ವರ್ಗಾವಣೆ, ಕಂಟ್ಯಾಕ್ಟ್ಸ ಟ್ರಾನ್ಸಫರ್‌ ಮಾಡಿಕೊಳ್ಳಬಹುದು.ಇದು ಕೆಲವೊಮ್ಮೆ ನಿಮಗೆ ಕಿರಿಕಿರಿ ಎನಿಸಬಹುದು. ಆದರೆ ನೀವು ಕೆಲವು ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ನಲ್ಲಿರುವ ಕಂಟ್ಯಾಕ್ಟ್‌ಗಳನ್ನು ನಿಮ್ಮ ಹೊಸ ಸ್ಮಾರ್ಟ್‌ಫೋನ್‌ಗೆ ವರ್ಗಾಯಿಸಬಹುದು. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಅಕೌಂಟ್‌ ಅನ್ನು ಬಳಸುವುದು

ಗೂಗಲ್‌ ಅಕೌಂಟ್‌ ಅನ್ನು ಬಳಸುವುದು

ಹಂತ:1 ನಿಮ್ಮ ಗೂಗಲ್‌ ಅಕೌಂಟ್‌ ಅನ್ನು ತೆಗೆದುಹಾಕುವ ಮೊದಲು ಮತ್ತು ನಿಮ್ಮ ಹಳೆಯ ಫೋನ್‌ನಿಂದ ಡೇಟಾವನ್ನು ಡಿಲೀಟ್‌ ಮಾಡುವ ಮೊದಲು, ನೀವು ನಿಮ್ಮ ಕಂಟ್ಯಾಕ್ಟ್‌ಗಳನ್ನು ಸಿಂಕ್ ಮಾಡಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ.

ಹಂತ:2 ಕಂಟ್ಯಾಕ್ಟ್‌ಗಳನ್ನು ಸಿಂಕ್ ಮಾಡಲು, ನೀವು ಸೆಟ್ಟಿಂಗ್ಸ್‌ಗೆ ಹೋಗಬೇಕು, ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಅಕೌಂಟ್‌ಗಳು ಅಥವಾ ಸಿಂಕ್ ಮೇಲೆ ಕ್ಲಿಕ್ ಮಾಡಿ.

ಹಂತ:3 ಈಗ, ನಿಮ್ಮ ಸಂಪರ್ಕಗಳು ಸ್ಟೋರೇಜ್‌ ಆಗಿರುವ ಗೂಗಲ್‌ ಅಕೌಂಟ್‌ ಮೇಲೆ ಕ್ಲಿಕ್ ಮಾಡಿ.

ಅಕೌಂಟ್‌

ಹಂತ:4 ಅಕೌಂಟ್‌ ಸಿಂಕ್ ಮೇಲೆ ಪ್ರೆಸ್‌ ಮಾಡಿ. ನಿಮ್ಮ ಡಿವೈಸ್‌ನಲ್ಲಿ ಈ ಪೇಜ್‌ ಇಲ್ಲದಿದ್ದರೆ, ಮುಂದಿನ ಹಂತಕ್ಕೆ ತೆರಳಿ.

ಹಂತ:5 ಮುಂದಿನ ಪುಟದಲ್ಲಿ, ಸಂಪರ್ಕಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಈಗ, ಮೂರು-ಡಾಟ್ಸ್‌ ಇರುವ ಐಕಾನ್ ಮೇಲೆ ಕ್ಲಿಕ್ ಮಾಡಿ. ಈಗ ಸಿಂಕ್ ಮಾಡಿ ಟ್ಯಾಪ್ ಮಾಡಿ. ಇದು ನಿಮ್ಮ ಎಲ್ಲಾ ಸಂಪರ್ಕಗಳನ್ನು ನಿಮ್ಮ ಗೂಗಲ್‌ ಅಕೌಂಟ್‌ನೊಂದಿಗೆ ಸಿಂಕ್ರೊನೈಸ್ ಮಾಡಲಾಗಿದೆ ಎಂದು ಖಚಿತಪಡಿಸುತ್ತದೆ.

ಹಂತ:6 ನಿಮ್ಮ ಹೊಸ ಡಿವೈಸ್‌ನಲ್ಲಿ ಇದೇ ಗೂಗಲ್‌ ಅಕೌಂಟ್‌ ನೊಂದಿಗೆ ಲಾಗ್‌ ಇನ್‌ ಮಾಡಿ. ಈಗ ನಿಮ್ಮ ಎಲ್ಲಾ ಸಂಪರ್ಕಗಳನ್ನು ಆಟೋಮ್ಯಾಟಿಕ್‌ ಆಗಿ ಹೊಸ ಡಿವೈಸ್‌ನಲ್ಲಿ ಕಂಡುಬಬರಲಿವೆ.

vCard ಫೈಲ್ ಬಳಸುವುದು!

vCard ಫೈಲ್ ಬಳಸುವುದು!

ಇನ್ನು ಹೊಸ ಸ್ಮಾರ್ಟ್‌ಫೋನ್‌ ತೆಗೆದುಕೊಂಡ ನಂತರ ಹಳೆ ಮೊಬೈಲ್‌ನಲ್ಲಿರುವ ತಮ್ಮ ಸಂಪರ್ಕಗಳನ್ನು vCard ಫೈಲ್ ಬಳಸಿ ಆಫ್‌ಲೈನ್‌ನಲ್ಲಿಯೇ ಟ್ರಾನ್ಸಫರ್‌ ಮಾಡಬಹುದು. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಕಂಟ್ಯಾಕ್ಟ್‌ ಅಪ್ಲಿಕೇಶನ್‌ಗೆ ಹೋಗಿ, ಆಯ್ಕೆಗಳ ಮೆನು ತೆರೆಯಿರಿ
ಹಂತ:2 ಸೆಟ್ಟಿಂಗ್ಸ್ ಮೇಲೆ ಟ್ಯಾಪ್ ಮಾಡಿ. ನಂತರ ಎಕ್ಸ್‌ಫೋರ್ಟ್‌ ಆಯ್ಕೆಮಾಡಿ.
ಹಂತ 3: ಈಗ, ನೀವು export ಮಾಡಲು ಬಯಸುವ ಸಂಪರ್ಕಗಳನ್ನು Vcf ಫೈಲ್‌ಗೆ export ಮೇಲೆ ಟ್ಯಾಪ್ ಮಾಡಿ. ಫೋಲ್ಡರ್ ಅನ್ನು ಆಯ್ಕೆ ಮಾಡಿ ಮತ್ತು ಫೈಲ್ ಅನ್ನು ಸೇವ್‌ ಮಾಡಿರಿ.

ಅಪ್ಲಿಕೇಶನ್

ಹಂತ 4: ನಂತರ ನಿಮ್ಮ ಹೊಸ ಡಿವೈಸ್‌ಗೆ ಫೈಲ್ ಅನ್ನು ವರ್ಗಾಯಿಸಿ. ಇದಕ್ಕಾಗಿ ನೀವು ಬ್ಲೂಟೂತ್, ಇಮೇಲ್, ವಾಟ್ಸಾಪ್ ಯಾವುದಾದರೂ ಒಂದನ್ನ ಬಳಸಬಹುದು.
ಹಂತ 5: ಇದಾದ ನಂತರ ನಿಮ್ಮ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಕಂಟ್ಯಾಕ್ಟ್ಸ್‌ ಅಪ್ಲಿಕೇಶನ್ ತೆರೆಯಿರಿ. ಆಯ್ಕೆಗಳ ಮೆನುವಿನಿಂದ ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಇಂಪೋರ್ಟ್
ಟ್ಯಾಪ್ ಮಾಡಿ.

ಹಂತ 6: ನಂತರ vcf ಫೈಲ್ ಆಯ್ಕೆಯನ್ನು ಆರಿಸಿ. ಈಗ, ನೀವು ಇಂಪೋರ್ಟ್ ಮಾಡಿದ ಸಂಪರ್ಕಗಳನ್ನು ಉಳಿಸಲು ಬಯಸುವ ಖಾತೆಯನ್ನು ಆಯ್ಕೆ ಮಾಡಿ. ಮುಂದಿನ ಪುಟದಲ್ಲಿ, .vcf ಫೈಲ್ ಅನ್ನು ಒಕೆ ಟ್ಯಾಪ್ ಮಾಡಿ.

Best Mobiles in India

English summary
You can make your transition from an old android phone to a new one totally seamless and hassle-free.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X