ಗೂಗಲ್‌ ಮೆಸೇಜ್‌ನಲ್ಲಿ ನಿಮ್ಮ ಟೆಕ್ಸ್ಟ್‌ ಮೆಸೇಜ್‌ ಶೆಡ್ಯೂಲ್‌ ಮಾಡುವುದು ಹೇಗೆ?

|

ಗೂಗಲ್‌ ತನ್ನ ಗೂಗಲ್‌ ಮೆಸೇಜ್‌ನಲ್ಲಿ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈಗಾಗಲೇ ಹಲವು ಆಕರ್ಷಕ ಫೀಚರ್ಸ್‌ ಪರಿಚಯಿಸಿರುವ ಗೂಗಲ್‌ ಮೆಸೇಜ್‌ನಲ್ಲಿ ಶೆಡ್ಯೂಲ್‌ ಮೆಸೇಜ್‌ ಫೀಚರ್ಸ್‌ ಕೂಡ ಸೇರಿದೆ. ಇದರಿಂದ ಬಳಕೆದಾರರು ತಮ್ಮ ಪಠ್ಯ ಸಂದೇಶಗಳನ್ನು ಇನ್ನೊಬ್ಬರಿಗೆ ಕಳುಹಿಸುವ ಮುನ್ನ ಯಾವಾಗ ಕಳುಹಿಸಬೇಕು ಅನ್ನೊದನ್ನ ಶೆಡ್ಯೂಲ್‌ ಮಾಡಬಹುದಾಗಿದೆ. ಬಹುತೇಕ ಎಲ್ಲಾ ಆಂಡ್ರಾಯ್ಡ್ ಫೋನ್‌ಗಳು ಇದನ್ನು ಮಾಡಲು ನಿಮಗೆ ಅವಕಾಶ ನೀಡುತ್ತವೆ.

ಗೂಗಲ್‌

ಹೌದು, ಗೂಗಲ್‌ ಮೆಸೇಜ್‌ನಲ್ಲಿ ನಿಮಗೆ ಬೇಕಾದ ಸಮಯಕ್ಕೆ ಮೆಸೇಜ್‌ ಅನ್ನು ಶೆಡ್ಯೂಲ್‌ ಮಾಡುವ ಅವಕಾಶವಿದೆ. ಇದು ಎಲ್ಲರಿಗೂ ಲಭ್ಯವಿದೆ. ಆದರೂ ಕೆಲವು ಸಂದರ್ಭಗಳಲ್ಲಿ ನಿಮಗೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳು ಬೇಕಾಗಬಹುದು. ಗೂಗಲ್ ಸಂದೇಶಗಳು ವೇಳಾಪಟ್ಟಿ ಸಂದೇಶಗಳು ಮತ್ತು ಪಠ್ಯಗಳ ಸ್ವಯಂಚಾಲಿತ ವರ್ಗೀಕರಣ ಸೇರಿದಂತೆ ವಿವಿಧ ಫೀಚರ್ಸ್‌ಗಳನ್ನು ನೀಡುತ್ತದೆ. ಹಾಗಾದ್ರೆ ನೀವು ಗೂಗಲ್‌ ಮೆಸೇಜ್‌ನಲ್ಲಿ ಮೆಸೇಜ್‌ ಶೆಡ್ಯೂಲ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌ ಮೆಸೇಜ್‌ನಲ್ಲಿ ನಿಮ್ಮ ಸಂದೇಶಗಳನ್ನು ಶೆಡ್ಯೂಲ್‌ ಮಾಡುವುದು ಹೇಗೆ?

ಗೂಗಲ್‌ ಮೆಸೇಜ್‌ನಲ್ಲಿ ನಿಮ್ಮ ಸಂದೇಶಗಳನ್ನು ಶೆಡ್ಯೂಲ್‌ ಮಾಡುವುದು ಹೇಗೆ?

ಹಂತ:1 ಗೂಗಲ್‌ ಮೆಸೇಜ್‌ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ಪ್ರಾರಂಭಿಸಿ
ಹಂತ:2 ಪಠ್ಯ ಸಂದೇಶವನ್ನು ರಚಿಸಿ
ಹಂತ:3 ಬಾಣದ ಆಕಾರದಲ್ಲಿರುವ ಸೆಂಡ್‌ ಬಟನ್ ಅನ್ನು ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ.
ಹಂತ:4 "ಕಳುಹಿಸುವ ವೇಳಾಪಟ್ಟಿ" ಪಾಪ್-ಅಪ್ ವಿಂಡೋ ಕಾಣಿಸುತ್ತದೆ.

ಸಂದೇಶ

ಹಂತ:5 ನೀವು ಸಂದೇಶ ಕಳುಹಿಸಲು ಬಯಸುವ ಸಮಯವನ್ನು ಆಯ್ಕೆ ಮಾಡಿ.
ಹಂತ:6 ಇದರಲ್ಲಿ ನೀವು ಹಲವಾರು ಪೂರ್ವನಿರ್ಧರಿತ ಸಮಯಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು ಅಥವಾ "ದಿನಾಂಕ ಮತ್ತು ಸಮಯವನ್ನು ಆರಿಸಿ" ಮತ್ತು ನೀವು ಇಷ್ಟಪಡುವ ನಿಖರವಾದ ಸಮಯವನ್ನು ಆರಿಸಿಕೊಳ್ಳಿ.
ಹಂತ:7 ಸೆಂಡ್‌ ಬಟನ್ ಅನ್ನು ಟ್ಯಾಪ್ ಮಾಡಿ, ಇದು ನಿಗದಿತ ಪಠ್ಯ ಎಂದು ಸೂಚಿಸಲು ಸಣ್ಣ ಗಡಿಯಾರ ಐಕಾನ್ ಹೊಂದಿದೆ.

ಗೂಗಲ್‌

ಒಂದು ವೇಳೆ ನೀವು ಗೂಗಲ್‌ ಮೆಸೇಜ್‌ನಲ್ಲಿ ಈ ಫೀಚರ್ಸ್‌ನ ಆಯ್ಕೆಯನ್ನು ನೋಡದಿದ್ದರೆ, ನೀವು Google Play Store ಅಪ್ಲಿಕೇಶನ್ ಅನ್ನು ತೆರೆಯಬಹುದು. ಇದರಲ್ಲಿ ಗೂಗಲ್‌ ಮೆಸೇಜ್‌ ಅನ್ನು ಹುಡುಕಬಹುದು ಮತ್ತು ಉತ್ಪನ್ನ ಪುಟದಲ್ಲಿ ಬೀಟಾ ಪ್ರೋಗ್ರಾಂ ಅನ್ನು ಆಯ್ಕೆ ಮಾಡಬಹುದು. ಇನ್ನು ಅಪ್ಲಿಕೇಶನ್ ಬಳಸುವಾಗ, ಸಂದೇಶಗಳನ್ನು ಸ್ವಯಂಚಾಲಿತವಾಗಿ ವಿವಿಧ ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಇದರಿಂದ ನೀವು ಸಂಭಾಷಣೆಗಳನ್ನು ಸುಲಭವಾಗಿ ಹುಡುಕಬಹುದು. ಹೆಚ್ಚುವರಿಯಾಗಿ ಪ್ಲಾಟ್‌ಫಾರ್ಮ್ ನಿಮ್ಮ ಒನ್ ಟೈಮ್ ಪಾಸ್‌ವರ್ಡ್‌ಗಳನ್ನು (OTP ಗಳು) ನೀವು ಸ್ವೀಕರಿಸಿದ 24 ಗಂಟೆಗಳ ನಂತರ ಸ್ವಯಂಚಾಲಿತವಾಗಿ ಅಳಿಸುವ ಆಯ್ಕೆಯನ್ನು ನೀಡುತ್ತದೆ.

ಗೂಗಲ್‌

ಗೂಗಲ್‌ ಮೆಸೇಜ್‌ಗೆ ಬರುವ ಒನ್‌ಟೈಮ್‌ ಪಾಸ್‌ವರ್ಡ್‌ಗಳನ್ನು ಆಟೋಮ್ಯಾಟಿಕ್‌ ಆಗಿ ಡಿಲೀಟ್‌ ಮಾಡಲಿದೆ. ಇದು ಫರ್ಸನಲ್‌, ಟ್ರಾನ್ಸಕ್ಷನ್‌, ಆಫರ್‌ಗಳು ಮತ್ತು ಒಟಿಪಿಗಳು ಸೇರಿದಂತೆ ವರ್ಗಗಳ ಪ್ರಕಾರ ಸಂದೇಶಗಳನ್ನು ವಿಂಗಡಿಸಲು ಬಳಕೆದಾರರಿಗೆ ಅನುಮತಿಸುವ ಫೀಚರ್ಸ್‌ನ ಭಾಗವಾಗಿದೆ. ವರ್ಗದ ಪ್ರಕಾರ ಮೆಸೇಜ್‌ಗಳನ್ನು ವೀಕ್ಷಿಸಿ ಆನ್ ಮಾಡುವ ಆಯ್ಕೆ ಇದೆ, ಅದಕ್ಕೆ ಅನುಗುಣವಾಗಿ ಮೆಸೇಜ್‌ಗಳನ್ನು ಪ್ರದರ್ಶಿಸುತ್ತದೆ. ಅದರ ಕೆಳಗೆ ಈ ಹೊಸ ಫೀಚರ್ಸ್‌ ಲಭ್ಯವಾಗಲಿದೆ.

ಡಿಲೀಟ್‌

ಇದನ್ನು ಆನ್ ಮಾಡಿದ ನಂತರ, ಎಲ್ಲಾ ಪ್ರಸ್ತುತ ಮತ್ತು ಭವಿಷ್ಯದ ಒಟಿಪಿಗಳನ್ನು 24 ಗಂಟೆಗಳ ನಂತರ ಶಾಶ್ವತವಾಗಿ ಡಿಲೀಟ್‌ ಮಾಡಲಾಗುತ್ತದೆ. ಇದರಿಂದ ಗೂಗಲ್‌ ಮೆಸೇಜ್‌ಗಳ ಇನ್‌ಬಾಕ್ಸ್ ಹೆಚ್ಚಾಗಿ ಪ್ರಚಾರಗಳು ಮತ್ತು ಆಫರ್‌ ಮೆಸೇಜ್‌ಗಳಿಂದ ತುಂಬಿ ಹೋಗಿರುತ್ತೆ. ಕೆಲವೊಮ್ಮೆ ನಿಮ್ಮ ಮೆಸೇಜ್‌ ಇನ್‌ಬಾಕ್ಸ್‌ ತೆರೆದರೆ ಸಾಕು ಹೆಚ್ಚಿನ ಆಫರ್‌ ಸಂದೇಶಗಳೇ ತುಂಬಿ ಹೋಗಿರುತ್ತವೆ. ಆದರಿಂದ ಈ ಹೊಸ ಫೀಚರ್ಸ್‌ ತುಂಬಾ ಪರಿಣಾಮಕಾರಿಯಾಗಿ ಸಹಾಯಕವಾಗಲಿದೆ.

Best Mobiles in India

English summary
Here is how you can schedule your messages to be sent at a later time using your Android device.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X