ಭಾರತದಲ್ಲಿ 'ಎಚ್‌ಪಿ ಕ್ರೋಮ್‌ಬುಕ್ 14' ಬಿಡುಗಡೆ!.ಆಕರ್ಷಕ ಫೀಚರ್ಸ್‌!

|

ಟೆಕ್‌ ಮಾರುಕಟ್ಟೆಯಲ್ಲಿ ಎಚ್‌ಪಿ ಕಂಪನಿಯು ತನ್ನ ಗುಣಮಟ್ಟದ ಉತ್ಪನ್ನಗಳಿಂದ ಜನಪ್ರಿಯ ಹೆಸರನ್ನು ಪಡೆದಿದ್ದು, ಮುಖ್ಯವಾಗಿ ಕಂಪನಿಯ ಲ್ಯಾಪ್‌ಟಾಪ್‌ಗಳು ಭಾರೀ ಸದ್ದು ಮಾಡಿವೆ. ಈಗ ಕಂಪನಿಯ ತನ್ನ ಲ್ಯಾಪ್‌ಟಾಪ್ ಸರಣಿಗೆ ಹೊಸದಾಗಿ ಕ್ರೋಮ್‌ಬುಕ್ 14 ಅನ್ನು ಸೇರ್ಪಡೆ ಮಾಡಿದ್ದು, ಈ ಲ್ಯಾಪ್‌ಟಾಪ್‌ 64GB SSD ಸ್ಟೋರೇಜ್ ಜೊತೆಗೆ 100GB ಗೂಗಲ್ ಕ್ಲೌಡ್‌ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಭಾರತದಲ್ಲಿ 'ಎಚ್‌ಪಿ ಕ್ರೋಮ್‌ಬುಕ್ 14' ಬಿಡುಗಡೆ!.ಆಕರ್ಷಕ ಫೀಚರ್ಸ್‌!

ಹೌದು, ಎಚ್‌ಪಿ ಕಂಪನಿಯು ಇದೇ ಅಗಷ್ಟ್ 28ರಂದು ಭಾರತೀಯ ಮಾರುಕಟ್ಟೆಗೆ ಹೊಸದಾಗಿ 'ಕ್ರೋಮ್‌ಬುಕ್ 14' ಹೆಸರಿನಲ್ಲಿ ಲ್ಯಾಪಟಾಪ್ ಬಿಡುಗಡೆ ಮಾಡಿದೆ. ಗೂಗಲ್ ಅಕೌಂಟ್‌ ಲಾಗಿನ್‌ ಆಗುವ ಮೂಲಕ ನೇರವಾಗಿ ಫೈಲ್‌ಗಳನ್ನು ಆಕ್ಸಸ್‌ ಮಾಡುವ ಆಯ್ಕೆಗಳನ್ನು ಹೊಂದಿದೆ. ಸುರಕ್ಷತೆಗೆ ಹೆಚ್ಚಿನ ಅನುಕೂಲಕರ ಫೀಚರ್ಸ್‌ಗಳನ್ನು ಹೊಂದಿದ್ದು, ವೇರಿಫೈ ಬೂಟ್ (Verify Boot), ಸೆಲ್ಫ ಚೆಕ್ ಸೆಕ್ಯುರಿಟಿ ಆಯ್ಕೆ ಅಗತ್ಯ ನೆರವು ನೀಡಲಿವೆ.

ಭಾರತದಲ್ಲಿ 'ಎಚ್‌ಪಿ ಕ್ರೋಮ್‌ಬುಕ್ 14' ಬಿಡುಗಡೆ!.ಆಕರ್ಷಕ ಫೀಚರ್ಸ್‌!

ಹಾಗೆಯೇ ಆಲ್ವೇಸ್‌ ಸೆಕ್ಯುರಿಟಿ ರೆಡಿ ಆಯ್ಕೆಯನ್ನು ಪಡೆದಿದ್ದು, ಲ್ಯಾಪಟಾಪ್‌ ಅನ್ನು ವೈರಸ್‌ಗಳಿಂದ ಸುರಕ್ಷಿತವಾಗಿಡಲು ನೆರವಾಗಲಿದೆ. ಇದರೊಂದಿಗೆ ಆಟೋ ಅಪ್‌ಡೇಟ್‌ ಸೌಲಭ್ಯವನ್ನು ಒಳಗೊಂಡಿದ್ದು, ಸರಳವಾಗಿ 180ಡಿಗ್ರಿ (ಬೂಟ್) ಸ್ಕ್ರೀನ್ ಪೋಲ್ಡ್‌ ಆಗುವ ಸಾಮರ್ಥ್ಯ ಪಡೆದಿದೆ. ಹಾಗಾದರೇ ಎಚ್‌ಪಿ ಸಂಸ್ಥೆಯ ಹೊಸ ಕ್ರೋಮ್‌ಬುಕ್ 14 ಲ್ಯಾಪ್‌ಟಾಪ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ.

ಓದಿರಿ : ಅಮೆಜಾನ್ ಆಫರ್‌ : ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್!ಓದಿರಿ : ಅಮೆಜಾನ್ ಆಫರ್‌ : ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್!

ಡಿಸ್‌ಪ್ಲೇ ಮತ್ತು ರಚನೆ

ಡಿಸ್‌ಪ್ಲೇ ಮತ್ತು ರಚನೆ

14 ಇಂಚಿನ (1366x768) ಹೆಚ್‌ಡಿ ಅಲ್ಟ್ರಾ ಬ್ರೈಟ್‌ ಟಚ್‌ಸ್ಕ್ರೀನ್‌ ಡಿಸ್‌ಪ್ಲೇಯನ್ನು ಹೊಂದಿರುವ ಎಚ್‌ಪಿ ಕ್ರೋಮ್‌ಬುಕ್ 14 ಲ್ಯಾಪಟಾಪ್‌ ನ್ಯಾರೀ ಬೆಜಲ್‌ ರಚನೆಯನ್ನು ಒಳಗೊಂಡಿದೆ. ತೆಳುವಾಗಿಯು ಮತ್ತು ಹಗುರವಾಗಿರುವ ರಚನೆಯನ್ನು ಹೊಂದಿದ್ದು, ಇದರ ತೂಕವು 4.54ಕಿಲೋ ಆಗಿದೆ. ಈ ಲ್ಯಾಪ್‌ಟಾಪ್‌ ಬ್ಯಾಂಗ್ ಮತ್ತು ಒಲುಫ್ಸೆನ್ (Bang & Olufsen)ನ ಎರಡು ಸ್ಪೀಕರ್ಸ್‌ಗಳನ್ನು ಪಡೆದಿದೆ.

ಪ್ರೊಸೆಸರ್ ಬಲ

ಪ್ರೊಸೆಸರ್ ಬಲ

ಎಚ್‌ಪಿ ಕ್ರೋಮ್‌ಬುಕ್ 14 ಲ್ಯಾಪ್‌ಟಾಪ್ ಅಪೊಲೊ ಲೇಕ್ ಡ್ಯುಯಲ್ ಕೋರ್ ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಕ್ರೋಮ್‌ ಓಎಸ್‌ ಬೆಂಬಲ ಪಡೆದಿದೆ. ಒಂದು ಮಿಲಿಯನ್‌ಗಿಂತಲೂ ಅಧಿಕ ಆಂಡ್ರಾಯ್ಡ್‌ ಆಪ್ಸ್‌ಗಳು ಲಭ್ಯವಾಗಲಿವೆ. 64GB SSD ಸ್ಟೋರೇಜ್ ಸಾಮರ್ಥ್ಯದೊಂದಿಗೆ, 100GB ಗೂಗಲ್ ಕ್ಲೌಡ್‌ ಸಂಗ್ರಹದ ಸ್ಥಳಾವಕಾಶವನ್ನು ಒಳಗೊಂಡಿದೆ.

ಓದಿರಿ : ಒಪ್ಪೊದ ಹೊಸ 'ನಾಯಿಸ್‌ಲೆಸ್‌ ಇಯರ್‌ಫೋನ್‌' ಅನಾವರಣ!..ಬೆಲೆ?ಓದಿರಿ : ಒಪ್ಪೊದ ಹೊಸ 'ನಾಯಿಸ್‌ಲೆಸ್‌ ಇಯರ್‌ಫೋನ್‌' ಅನಾವರಣ!..ಬೆಲೆ?

ವಿಶೇಷ ಸೌಲಭ್ಯಗಳು

ವಿಶೇಷ ಸೌಲಭ್ಯಗಳು

ಕ್ರೋಮ್‌ಬುಕ್ 14 ಗೂಗಲ್ ಅಸಿಸ್ಟಂಟ್ ವಾಯಿಸ್‌ ಕಮಾಂಡ್ ಸೌಲಭ್ಯ ಪಡೆದುಕೊಂಡಿದ್ದು, ಅದರೊಂದಿಗೆ ಪ್ರಾದೇಶಿಕ ಭಾಷೆಗಳ ಬೆಂಬಲವನ್ನು ಹೊಂದಿರುವುದು ವಿಶೇಷ. 47watt ಸಾಮರ್ಥ್ಯದ ಬ್ಯಾಟರಿ ಪವರ್ ಒಳಗೊಂಡಿದ್ದು, ವೈರಸ್‌ಗಳಿಂದ ರಕ್ಷಣೆ ಮತ್ತು ಸುರಕ್ಷತೆಗೆ ಆಲ್ವೆಸ್‌ ರೆಡಿ ಸೆಕ್ಯುರಿಟಿ ಆಯ್ಕೆಯನ್ನು ಪಡೆದಿದೆ. ಸ್ಕ್ರೀನ್‌ ಅನ್ನು 180ಡಿಗ್ರಿ ವರೆಗೂ ಟರ್ನ್ ಮಾಡಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಎಚ್‌ಪಿ ಕ್ರೋಮ್‌ಬುಕ್ 14 ಲ್ಯಾಪ್‌ಟಾಪ್ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಗ್ರೇ ಮತ್ತು ಸ್ನೋ ವೈಟ್‌ ಬಣ್ಣಗಳ ಆಯ್ಕೆಗಳಲ್ಲಿ ಸಿಗಲಿದೆ. ಇದರ ಬೆಲೆಯು 23,990ರೂ.ಗಳಾಗಿದ್ದು, ಎಚ್‌ಪಿ ವರ್ಲ್ಡ್‌ ಸ್ಟೋರ್‌ಗಳಲ್ಲಿ ದೊರೆಯಲಿದೆ. ಹಾಗೆಯೇ ಎಚ್‌ಪಿ ವೆಬ್‌ಸೈಟ್‌ನಲ್ಲಿಯೂ ಹಾಗೂ ಜನಪ್ರಿಯ ಇ ಕಾಮರ್ಸ್‌ ತಾಣಗಳಾದ ಫ್ಲಿಪ್‌ಕಾರ್ಟ್‌, ಅಮೆಕಾನ್ ತಾಣಗಳಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ.

ಓದಿರಿ : ವಾಟ್ಸಪ್‌ನ ಈ ಹೊಸ ಫೀಚರ್ಸ್‌ ಬಗ್ಗೆ ನೀವು ತಿಳಿಯಬೇಕು!ಓದಿರಿ : ವಾಟ್ಸಪ್‌ನ ಈ ಹೊಸ ಫೀಚರ್ಸ್‌ ಬಗ್ಗೆ ನೀವು ತಿಳಿಯಬೇಕು!

Best Mobiles in India

English summary
HP Chromebook 14 has local language support and access to more than one million Android Apps. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X