ಹೆಚ್‌ಪಿಯಿಂದ ಹೊಸ ಲ್ಯಾಪ್‌ಟಾಪ್‌ ಅನಾವರಣ! 10 ಗಂಟೆಗಳ ಬ್ಯಾಟರಿ ಅವಧಿ!

|

ಲ್ಯಾಪ್‌ಟಾಪ್‌ ಖರೀದಿಸುವವರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಹೆಚ್‌ಪಿ ಕಂಪೆನಿ ಮುಂಚೂಣಿಯಲ್ಲಿದೆ. ತನ್ನ ಗುಣಮಟ್ಟ ಹಾಗೂ ವಿಶೇಷ ಮಾದರಿಯ ಡಿಸೈನ್‌ನಿಂದಾಗಿ ಹೆಚ್‌ಪಿ ಲ್ಯಾಪ್‌ಟಾಪ್‌ಗಳಿಗೆ ಭಾರಿ ಬೇಡಿಕೆಯಿದೆ. ಇದೀಗ ಹೆಚ್‌ಪಿ ಕಂಪೆನಿ ಭಾರತದಲ್ಲಿ ಹೊಸದಾಗಿ ಹೆಚ್‌ಪಿ Envy x360 15 (2023) ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿದೆ. ಇನ್ನು ಈ ಲ್ಯಾಪ್‌ಟಾಪ್‌ 360-ಡಿಗ್ರಿ ಹಿಂಜ್‌ ಒಳಗೊಂಡ 15.6 ಇಂಚಿನ OLED ಟಚ್ ಡಿಸ್‌ಪ್ಲೇಯನ್ನು ಹೊಂದಿದೆ.

ಹೆಚ್‌ಪಿಯಿಂದ ಹೊಸ ಲ್ಯಾಪ್‌ಟಾಪ್‌ ಅನಾವರಣ! 10 ಗಂಟೆಗಳ ಬ್ಯಾಟರಿ ಅವಧಿ!

ಹೌದು, ಹೆಚ್‌ಪಿ ಕಂಪೆನಿ ಭಾರತದಲ್ಲಿ ಹೊಸ ಹೆಚ್‌ಪಿ Envy x360 15 (2023) ಲ್ಯಾಪ್‌ಟಾಪ್‌ ಅನಾವರಣ ಮಾಡಿದೆ. ಈ ಲ್ಯಾಪ್‌ಟಾಪ್‌ 12 ನೇ Gen ಇಂಟೆಲ್ ಕೋರ್ i7 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ವೆಬ್‌ಕ್ಯಾಮ್‌ ಅನ್ನು ಕೂಡ ಒಳಗೊಂಡಿದೆ. ಅಲ್ಲದೆ ಐಆರ್ ಫೇಸ್ ರೆಕಗ್ನಿಷನ್ ಟೆಕ್ನಾಲಜಿಯನ್ನು ಕೂಡ ಈ ಲ್ಯಾಪ್‌ಟಾಪ್‌ನಲ್ಲಿ ಅಳವಡಿಸಲಾಗಿದೆ. ಹಾಗಾದ್ರೆ ಈ ಹೊಸ ಲ್ಯಾಪ್‌ಟಾಪ್‌ ಏನೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೆಚ್‌ಪಿ Envy x360 15 (2023) ಲ್ಯಾಪ್‌ಟಾಪ್ 15.6 ಇಂಚಿನ OLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಐಸೇಫ್-ಪ್ರಮಾಣೀಕೃತ ಡಿಸ್‌ಪ್ಲೇ ಆಗಿದೆ. ಇದು ಮ್ಯಾಗ್ನೆಟಿಕ್ ಕನೆಕ್ಟಿವಿಟಿ ಹೊಂದಿರುವ HP MPP 2.0 ಟಿಲ್ಟ್ ಪೆನ್ ಅನ್ನು ಬೆಂಬಲಿಸಲಿದೆ. ಜೊತೆಗೆ ಟಿಲ್ಟ್‌ ಪೆನ್‌ ಬಳಸುವಾಗ ಉತ್ತಮ ವಿವರಗಳನ್ನು ಸೆರೆಹಿಡಿಯಲು ಸುಧಾರಿತ ಲೆಟೆನ್ಸಿ ಮತ್ತು ಸೆನ್ಸಿಟಿವಿಟಿಯನ್ನು ನೀಡುವಂತೆ ಡಿಸೈನ್‌ ಮಾಡಲಾಗಿದೆ. ಇದು 12 ನೇ ತಲೆಮಾರಿನ ಇಂಟೆಲ್ ಕೋರ್ i7 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೆಚ್‌ಪಿಯಿಂದ ಹೊಸ ಲ್ಯಾಪ್‌ಟಾಪ್‌ ಅನಾವರಣ! 10 ಗಂಟೆಗಳ ಬ್ಯಾಟರಿ ಅವಧಿ!

ಹೆಚ್‌ಪಿ Envy x360 15 (2023) ಲ್ಯಾಪ್‌ಟಾಪ್‌ ಇಂಟೆಲ್‌ ಐರಿಸ್‌ Xe ಇಂಟಿಗ್ರೇಟೆಡ್ ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಇದು 5 ಮೆಗಾಪಿಕ್ಸೆಲ್ ವೆಬ್‌ಕ್ಯಾಮ್ ಅನ್ನು ಹೊಂದಿರುವುದು ಪ್ರಮುಖ ಹೈಲೈಟ್‌ ಆಗಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ ಕ್ಯಾಮೆರಾದಲ್ಲಿ ಐಆರ್ ಫೇಸ್ ರೆಕಗ್ನಿಷನ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಇದು ನಿಮ್ಮ ಪ್ರೈವೆಸಿಯನ್ನು ಕಾಪಾಡಲಿದೆ. ಇನ್ನು ಲ್ಯಾಪ್‌ಟಾಪ್‌ನಲ್ಲಿ ಒಲುಫ್‌ಸೆನ್ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ.

ಹೆಚ್‌ಪಿ Envy x360 15 (2023) ಲ್ಯಾಪ್‌ಟಾಪ್‌ 10 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇನ್ನು ವಾಯರ್‌ಲೆಸ್‌ ಕನೆಕ್ಟಿವಿಟಿಗಾಗಿ ವೈಫೈ 6E ಮತ್ತು ಬ್ಲೂಟೂತ್ 5.2 ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಇದು ಕನ್ವರ್ಟಿಬಲ್ ಲ್ಯಾಪ್‌ಟಾಪ್ ಆಗಿದ್ದು, 360-ಡಿಗ್ರಿ ಹಿಂಜ್‌ ಅನ್ನು ಒಳಗೊಂಡಿದೆ. ಜೊತೆಗೆ ವೇಗದ ಫೈಲ್ ಟ್ರಾನ್ಸಫರ್‌ಗಾಗಿ HP ಕ್ವಿಕ್‌ಡ್ರಾಪ್‌ ಫೀಚರ್ಸ್‌ ಅನ್ನು ಕೂಡ ಹೊಂದಿದೆ. ಇದರಿಂದ ನಿಮ್ಮ ಫೈಲ್‌ಗಳನ್ನು ವೇಗವಾಗಿ ಟ್ರಾನ್ಸಫರ್‌ ಮಾಡಬಹುದು. ಇದಲ್ಲದೆ ಫೋಟೋಗಳನ್ನು ಸ್ಕೆಚ್ ಮಾಡಲು HP ಪ್ಯಾಲೆಟ್ ಪ್ರೋಗ್ರಾಂ ಅನ್ನು ಪ್ರಿ ಲೋಡ್‌ ಮಾಡಲಾಗಿದೆ.

ಹೆಚ್‌ಪಿಯಿಂದ ಹೊಸ ಲ್ಯಾಪ್‌ಟಾಪ್‌ ಅನಾವರಣ! 10 ಗಂಟೆಗಳ ಬ್ಯಾಟರಿ ಅವಧಿ!

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಹೊಸ ಹೆಚ್‌ಪಿ Envy x360 15 ,ಲ್ಯಾಪ್‌ಟಾಪ್‌ 8GB RAM ಮತ್ತು 512GB ಸ್ಟೋರೇಜ್‌ ಆಯ್ಕೆಗೆ 82,999ರೂ.ಬೆಲೆಯನ್ನು ಹೊಂದಿದೆ. ಇದರ 16GB RAM + 512GB ಸ್ಟೋರೇಜ್ ಮಾದರಿಯ ಆಯ್ಕೆಗೆ 86,999ರೂ. ಬೆಲೆ ನಿಗಧಿಪಡಿಸಲಾಗಿದೆ. ಇದಲ್ಲದೆ OLED ಟಚ್ ಡಿಸ್‌ಪ್ಲೇ ಹೊಂದಿರುವ ಲ್ಯಾಪ್‌ಟಾಪ್‌ ಆಯ್ಕೆಯು 94,999ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಅಷ್ಟೇ ಅಲ್ಲ ಈ ಲ್ಯಾಪ್‌ಟಾಪ್‌ನ 16GB RAM ಮತ್ತು 1TB ಸ್ಟೋರೇಜ್‌ ಸಾಮರ್ಥ್ಯದ ಟಾಪ್-ಆಫ್-ಲೈನ್ ರೂಪಾಂತರವು 1,149,99ರೂ. ಬೆಲೆಯಲ್ಲಿ ಖರೀದಿಗೆ ಬರಲಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು ಹೆಚ್‌ಪಿ ಸ್ಟೋರ್ಸ್‌ಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
HP Envy x360 15 Laptop With 12th Gen Intel Core Processors Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X