HTC ಡಿಸೈಯರ್ 12 ಮತ್ತು ಡಿಸೈಯರ್ 12+ ಸ್ಮಾರ್ಟ್ ಫೋನ್ ಗಳು ಇಂದು ಭಾರತೀಯ ಮಾರುಕಟ್ಟೆಗೆ ಎಂಟ್ರಿ..

By GizBot Bureau
|

ಭಾರತೀಯ ಮಾರುಕಟ್ಟೆಗೆ ಇಂದು ಎರಡು ಮಧ್ಯಮ ರೇಂಜಿನ ಹೆಚ್ ಟಿ ಸಿ ಮೊಬೈಲ್ ಗಳು ಎಂಟ್ರಿ ಕೊಡಲಿವೆ. ಅದುವೇ ಡಿಸೈಯರ್ 12 ಮತ್ತು ಡಿಸೈಯರ್ 12 +. ವಿದೇಶದಲ್ಲಿ ಈಗಾಗಲೇ ಈ ಎರಡೂ ಫೋನ್ ಗಳು ಈ ವರ್ಷದ ಮಾರ್ಚ್ ತಿಂಗಳಲ್ಲಿಯೇ ಬಿಡುಗಡೆಗೊಂಡಿತ್ತು ಮತ್ತು ಈಗ ಭಾರತೀಯ ಮಾರುಕಟ್ಟೆಗೆ ಬರುತ್ತಿದೆ. ಈಗಾಗಲೇ ಹೆಚ್ಚಿನವರಿಗೆ HTC ಡಿಸೈಯರ್ 12 ಮತ್ತು ಡಿಸೈಯರ್ 12+ ಸ್ಮಾರ್ಟ್ ಫೋನ್ ಗಳ ವಿಶೇಷತೆಗಳ ಪರಿಚಯವಿದೆ. ಇಂದು ಭಾರತೀಯ ಮಾರುಕಟ್ಟೆಯ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾಹಿತಿಗಳು ದೊರೆಯಲಿವೆ. ಕಂಪೆನಿ ವೆಬ್ ಸೈಟ್ ಗಳಲ್ಲಿ ಈಗಾಗಲೇ ಈ ಎರಡೂ ಫೋನ್ ಗಳು ಇವೆ.

HTC ಡಿಸೈಯರ್ 12 ಮತ್ತು ಡಿಸೈಯರ್ 12+  ಸ್ಮಾರ್ಟ್ ಫೋನ್ ಗಳು ಇಂದು ಭಾರತೀಯ ಮಾರುಕಟ


bezel-less ಡಿಸ್ಪ್ಲೇ ಹೊಂದಿರುವ 18:9 ಅನುಪಾತದಲ್ಲಿರುವ HTC ಯ ಅತ್ಯಂತ ಕಡಿಮೆ ಬೆಲೆಯ ಫೋನ್ ಗಳೆಂದರೆ ಅದು HTC ಡಿಸೈಯರ್ 12 ಮತ್ತು ಡಿಸೈಯರ್ 12+ ಫೋನ್ ಗಳು. ಯುರೋಪಿನ ಮಾರುಕಟ್ಟೆಗಳಲ್ಲಿ ಈಗಾಗಲೇ ಈ ಎರಡೂ ಫೋನ್ ಗಳು ಮಾರಾಟಕ್ಕೆ ಲಭ್ಯವಾಗಿದೆ. ಯುರೋಪಿನಲ್ಲಿ ಇದರ ಆರಂಭಿಕ ಬೆಲೆ EUR 185. HTC ಡಿಸೈಯರ್ 12 ನ ಯುರೋಪಿಯನ್ ಮಾರುಕಟ್ಟೆಯ ಬೆಲೆ EUR 185 ಅಂದರೆ ಭಾರತೀಯ ಬೆಲೆ ಸರಿಸುಮಾರು 14,500 ರುಪಾಯಿಯಾಗಿದೆ. ಡಿಸೈಯರ್ 12+ ನ ಯುರೋಪಿಯನ್ ಮಾರುಕಟ್ಟೆಯ ಬೆಲೆ EUR 235 ಅಂದರೆ ಭಾರತೀಯ ಮಾರುಕಟ್ಟೆಯ ಬೆಲೆ ಸರಿಸುಮಾರು 18,500 ರುಪಾಯಿಗಳು. ಆದರೆ ಭಾರತೀಯ ಮಾರುಕಟ್ಟೆಯ ನಿಗಧಿತ ಬೆಲೆಯು ಇಂದು ತಿಳಿಯಲಿದೆ.

ಡಿಸೈಯರ್ 12+ ನಲ್ಲಿ ಹಿಂಭಾಗದಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಇದ್ದು ಆಂಡ್ರಾಯ್ಡ್ ಓರಿಯೋ ಸಾಫ್ಟ್ ವೇರ್ ಮೂಲಕ ರನ್ ಆಗುತ್ತೆ. ವಿಶ್ವದಾದ್ಯಂತ ಇದು ಎರಡು ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡಿದೆ ಒಂದು ಕಪ್ಪು ಮತ್ತೊಂದು ಬೆಳ್ಳಿಯ ಬಣ್ಣ. ಎರಡು ಬಣ್ಣಗಳೂ ಭಾರತದಲ್ಲೂ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.

HTC ಲಿಕ್ವಿಡ್ ಸರ್ಫೇಸ್ ಡಿಸೈನ್ ಸ್ಕೀಮ್ ನಲ್ಲಿ ಎರಡೂ ಫೋನ್ ಗಳೂ ಬರಲಿದ್ದು ಫ್ಲಾಗ್ ಶಿಪ್ ಯು 11 ಮತ್ತು ಯು 11 ಪ್ಲಸ್ ನಂತೆಯೇ ಇರಲಿವೆ. ಇವೆರಡರಲ್ಲಿ ಡಿಸೈಯರ್ 12+ ಮಾತ್ರ ಬೆರಳಚ್ಚು ತಂತ್ರಜ್ಞಾನವನ್ನು ಹೊಂದಿದ್ದು, ಹಿಂಭಾಗದ ಪೆನಲ್ ನಲ್ಲಿ ಇರುತ್ತೆ. ಆದರೆ ಡಿಸೈಯರ್ 12 ನಲ್ಲಿ ಈ ತಂತ್ರಜ್ಞಾನವಿಲ್ಲ.

. ಡಿಸೈಯರ್ 12 ಹೇಗಿದೆ ಗೊತ್ತಾ?

ಡಿಸೈಯರ್ 12 5.5-ಇಂಚಿನ HD+ IPS ಡಿಸ್ಪ್ಲೇಯ ಜೊತೆಗೆ 720x1440 ಪಿಕ್ಸಲ್ ರೆಸಲ್ಯೂಷನ್ ಮತ್ತು 18:9 ಅನುಪಾತದ ಡಿಸ್ಪ್ಲೇ ಹೊಂದಿರುತ್ತೆ..ಈ ಸ್ಮಾರ್ಟ್ ಫೋನ್ quad-core MediaTek MT6739 ಸಾಕೆಟ್ ಎರಡು RAM ಗಳಲ್ಲಿ ಒಂದು 2ಜಿಬಿ ಅಥವಾ 3ಜಿಬಿ RAMನಲ್ಲಿ ಪೇರ್ ಆಗಿರುತ್ತೆ. ಎರಡು ರೀತಿಯ ಸ್ಟೋರೇಜ್ ಮೋಡ್ ನಲ್ಲಿ ಈ ಸ್ಮಾರ್ಟ್ ಫೋನ್ ಸಿಗಲಿದೆ.. 16ಜಿಬಿ ಮತ್ತು 32ಜಿಬಿ, ಅದನ್ನು 2TB ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹಿಗ್ಗಿಸಿಕೊಳ್ಳಬಹುದು.

ಪ್ರವಾಸದ ಸವಿ ಹೆಚ್ಚಿಸಲು 10 ಬೆಸ್ಟ್ ಟ್ರಾವೆಲಿಂಗ್ ಆ್ಯಪ್ಸ್..!ಪ್ರವಾಸದ ಸವಿ ಹೆಚ್ಚಿಸಲು 10 ಬೆಸ್ಟ್ ಟ್ರಾವೆಲಿಂಗ್ ಆ್ಯಪ್ಸ್..!

ಎರಡು ಸಿಮ್ ಕಾರ್ಡ್ ಬಳಸಲು ಫೋನ್ ಅವಕಾಶಕೊಡಲಿದೆ. ಒಂದೇ ಒಂದು ಸೆನ್ಸರ್ ನ್ನು ಡಿಸೈಯರ್ 12 ಹೊಂದಿದ್ದು 13 ಮೆಗಾಪಿಕ್ಸಲ್ BSI ಕ್ಯಾಮರಾ ಸೆನ್ಸರ್ ಹಿಂಭಾಗದಲ್ಲಿದ್ದು f/2.2 ದ್ಯುತಿರಂದ್ರದೊಂದಿಗೆ ಲೆಡ್ ಫ್ಲ್ಯಾಶ್ ಮತ್ತು PDAF ಹೊಂದಿದೆ.ಮುಂಭಾಗದಲ್ಲಿ 5 ಮೆಗಾಪಿಕ್ಸಲ್ BSI ಸೆನ್ಸರ್ ಒಳಗೊಂಡಿದ್ದು f/2.4 ದ್ಯುತಿರಂದ್ರ ಹೊಂದಿದೆ. 3.5 ಎಂ ಎಂ ನ ಹೆಡ್ ಫೋನ್ ಜ್ಯಾಕ್ ಇರಲಿದ್ದು 2730mAh ಬ್ಯಾಟರಿಯನ್ನುಈ ಫೋನ್ ಹೊಂದಿರುತ್ತದೆ.

. ಡಿಸೈಯರ್ 12+ ನ ವೈಶಿಷ್ಟ್ಯತೆಗಳು ಹೇಗಿವೆ ಗೊತ್ತಾ?

ಡಿಸೈಯರ್ 12+ ನಲ್ಲಿ ದೊಡ್ಡ ಡಿಸ್ಪ್ಲೇ ಇರಲಿದೆ. ಮತ್ತು ಡಿಸೈಯರ್ 12 ಗಿಂತಲೂ ಉತ್ತಮವಾದ ಕ್ಯಾಮರಾ ಸೆಟ್ ಅಪ್ ಇದೆ. 6-inch HD+ IPS ಡಿಸ್ಪ್ಲೇಯನ್ನು 18:9 ಅನುಪಾತದಲ್ಲಿ ಮತ್ತು 720x1440 ರೆಸಲ್ಯೂಷನ್ ಹೊಂದಿರುವ ಡಿಸ್ಪ್ಲೇಯನ್ನು ಈ ಸ್ಮಾರ್ಟ್ ಫೋನ್ ಹೊಂದಿದೆ. ಅಕ್ಟಾ- ಕೋರ್- ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 450 ಸಾಕೆಟ್ 3ಜಿಬಿ ಮತ್ತು 32 ಜಿಬಿ ಇಂಟರ್ ನಲ್ ಸ್ಟೋರೇಜ್ ನೊಂದಿಗೆ ಪೇರ್ ಆಗಿರುತ್ತದೆ.

ಅದನ್ನು ನೀವು ಮೈಕ್ರೋ ಎಸ್.ಡಿ ಕಾರ್ಡ್ ಮೂಲಕ 2TB ವರೆಗೆ ಹಿಗ್ಗಿಸಿಕೊಳ್ಳಬಹುದಾಗಿದೆ.ಆಂಡ್ರಾಯ್ಡ್ 8.0 Oreo ನಲ್ಲಿ ರನ್ ಆಗುವ ಫೋನ್ HTC ಸೆನ್ಸ್ ನ್ನು ಮೇಲ್ಭಾಗದಲ್ಲಿ ಹೊಂದಿರುತ್ತದೆ.

ಈ ಕ್ಯಾಮರಾವು ಡುಯಲ್ ಕ್ಯಾಮರಾ ಸೆಟ್ ಅಪ್ ಹೊಂದಿದ್ದು 13 ಮೆಗಾಪಿಕ್ಸಲ್ BSI ಪ್ರೈಮರಿ ಸೆನ್ಸರ್ ಮತ್ತು 2 ಮೆಗಾಪಿಕ್ಸಲ್ ನ ಸೆಕೆಂಡರಿ ಸೆನ್ಸರ್ ನ್ನು ಒಳಗೊಂಡಿದೆ. ಹಿಂಭಾಗದ ಕ್ಯಾಮರಾವು ಹಲವು ಮೋಡ್ ಗಳನ್ನು ಒಳಗೊಂಡಿದ್ದು ಬೋಕೆ, ಫೇಸ್ ಡಿಟೆಕ್ಷನ್ ಮತ್ತು ಪನೋರಮಾ ಇತ್ಯಾದಿಗಳಲ್ಲಿ ಫೋಟೋ ಕ್ಲಿಕ್ಕಿಸಬಹುದು.

ಮುಂಭಾಗದ ಡಿಸೈಯರ್ 12+ ನಲ್ಲಿ 8 ಮೆಗಾಪಿಕ್ಸಲ್ ನ BSI ಕ್ಯಾಮರಾ ಸೆನ್ಸರ್ ಇರಲಿದ್ದು f/2.0 ದ್ಯುತಿರಂದ್ರವನ್ನು ಹೊಂದಿದೆ, ಈ ಫೋನಿನಲ್ಲಿ 3.5 ಎಂಎಂ ನ ಹೆಡ್ ಫೋನ್ ಜ್ಯಾಕ್ ಇರಲಿದೆ. 2965mAh ಬ್ಯಾಟರಿ ಸಾಮರ್ಥ್ಯವನ್ನು ಇದು ಒಳಗೊಂಡಿದ್ದು, ಬೆರಳಚ್ಚು ತಂತ್ರಜ್ಞಾನವನ್ನು ಇದು ಹೊಂದಿರುವುದಿಲ್ಲ.

Best Mobiles in India

Read more about:
English summary
HTC Desire 12, Desire 12+ mid-range smartphones launching in India today

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X