Subscribe to Gizbot

ಮಾರುಕಟ್ಟೆಗೆ HTC ನಾಲ್ಕು ಕ್ಯಾಮೆರಾದ ಸ್ಮಾರ್ಟ್‌ಫೋನ್‌..!

Posted By: Lekhaka

HTC ಮಾರುಕಟ್ಟೆಗೆ ಮಧ್ಯಮ ಸರಣಿಯ ಸ್ಮಾರ್ಟ್ ಪೋನ್ ಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಡಿಸೈರ್ 12 ಮತ್ತು ಡಿಸೈರ್ 12+ ಸ್ಮಾರ್ಟ್ ಪೋನ್ ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಇದೇ ಮಾದರಿಯಲ್ಲಿ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳನ್ನು ವಿನ್ಯಾಸ ಮಾಡಲು ಮುಂದಾಗಿರುವ HTC U12 ಮತ್ತು U12+ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸನಿಹದಲ್ಲಿದೆ.

ಮಾರುಕಟ್ಟೆಗೆ HTC ನಾಲ್ಕು ಕ್ಯಾಮೆರಾದ ಸ್ಮಾರ್ಟ್‌ಫೋನ್‌..!

ಸದ್ಯ HTC U12 ಸ್ಮಾರ್ಟ್ ಫೋನ್ ಫೋಟೋಗಳು ಲೀಕ್ ಆಗಿದ್ದು, ಇದರೊಂದಿಗೆ ಈ ಸ್ಮಾರ್ಟ್ ಫೋನ್ ಗಳ ವಿಶೇಷೆತೆಗಳ ಕುರಿತ ಮಾಹಿತಿಯೂ ಲಭ್ಯವಾಗಿದೆ. ಫುಲ್ ಸ್ಕ್ರಿನ್ ಡಿಸ್ ಪ್ಲೇ ವಿನ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್ ಫೋನ್ ಹಾರಿಜಾಂಟಲ್ ಡ್ಯುಯಲ್ ಕ್ಯಾಮೆರಾವನ್ನು ಇದರಲ್ಲಿ ನೊಡಬಹುದಾಗಿದೆ. ಅಲ್ಲದೇ ಡ್ಯುಯಲ್ ಟೋನ್ LED ಫ್ಲಾಷ್ ಲೈಟ್ ಸಹ ಇದರೊಂದಿಗಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ಹಿಂಭಾಗದಲ್ಲಿ ಕಾಣಿಸಿಕೊಂಡಿದೆ.

6 ಇಂಚಿನ ಡಿಸ್ ಪ್ಲೇಯನ್ನು HTC U12 ಸ್ಮಾರ್ಟ್ ಫೋನಿನಲ್ಲಿ ಅಳವಡಿಸಲಾಗಿದ್ದು, WQHD + ಗುಣಮಟ್ಟವನ್ನು ಇದು ಹೊಂದಿರಲಿದೆ. ಜೊತೆಗೆ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 845 ಪ್ರೋಸೆಸರ್ ಅನ್ನು ನೋಡಬಹುದಾಗಿದ್ದು, 6GB RAM ಮತ್ತು 256GB ಇಂಟರ್ನಲ್ ಮೆಮೊರಿಯನ್ನು ಈ ಸ್ಮಾರ್ಟ್ ಫೋನಿನಲ್ಲಿ ನೀಡುವ ಸಾಧ್ಯತೆ ದಟ್ಟವಾಗಿದೆ.

ಒಂದೇ ಪಾಸ್‌ವರ್ಡ್ ಅನ್ನು ನಾಲ್ಕೈದು ಕಡೆ ಬಳಸುತ್ತಿದ್ದೀರಾ?..ಹಾಗಾದ್ರೆ ಈ ಶಾಕಿಂಗ್ ಸ್ಟೋರಿ ನೋಡಿ!!

ಒಟ್ಟು ನಾಲ್ಕು ಕ್ಯಾಮೆರಾದೊಂದಿಗೆ ಈ ಸ್ಮಾರ್ಟ್ ಪೋನ್ ಕಾಣಿಸಿಕೊಳ್ಳಲಿದ್ದು, ಹಿಂಭಾಗದಲ್ಲಿ 16MP + 12MP ಕ್ಯಾಮೆರಾವನ್ನು ಹಾಗೂ ಮುಂಭಾಗದಲ್ಲಿ 8MP + 8 MP ಕ್ಯಾಮೆರಾವನ್ನು ನೋಡಬಹುದಾಗಿದೆ. ಈ ಎರಡು ಡ್ಯುಯಲ್ ಕ್ಯಾಮೆರಾಗಳು ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಮತ್ತು ಫೋಟೋಗಳನ್ನು ಕ್ಲಿಕಿಸಲು ಸಹಾಯಕಾರಿಯಾಗಿದೆ.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
HTC U12 ಸ್ಮಾರ್ಟ್ ಫೋನಿನಲ್ಲಿ ಆಂಡ್ರಾಯ್ಡ್ ಒರಿಯೋವನ್ನು ಕಾಣಬಹುದಾಗಿದ್ದು, ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಟಾಪ್ ಎಂಡ್ ಫೋನ್ ಗಳಿಗೆ ಮತ್ತೊಮ್ಮೆ ದೊಡ್ಡ ಮಟ್ಟದ ಸ್ಪರ್ಧೆಯನ್ನು ಒಡಲಿದೆ ಎನ್ನಲಾಗಿದೆ.
English summary
Based on the leaks, a 3D artist who goes by the moniker Concept Creator has released a few renders of the HTC U12+. While these are not real images, they gives us an idea of what to expect from the phone. The renders show the smartphone featuring a full-screen design with minimal bezels. The top bezel houses two selfie cameras, whereas the bottom bezel is empty.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot