ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳ ಪತನ ಶುರುವಾಯಿತೇ?

|

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳ ಅಬ್ಬರ ಈ ಒಂದು ವರ್ಷ ಮಾತ್ರ ಇರಬಹುದು ಎಂಬ ಸುದ್ದಿ ನಿಮಗೆ ಮಾತ್ರವಲ್ಲ ನಮಗೂ ಆಶ್ಚರ್ಯ ವಾಗುತ್ತದೆ. ಆದರೆ, ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಗಳು ಇಂತಹ ಸಾಧ್ಯತೆಯನ್ನು ನಿಖರವಾಗಿ ಹೇಳುತ್ತಿವೆ ಎಂದರೆ ನೀವು ನಂಬದೇ ಬೇರೆ ದಾರಿ ಇಲ್ಲ.!

ಹೌದು, ವಿಶ್ವ ದಿಗ್ಗಜ ಮೊಬೈಲ್ ಸಂಸ್ಥೆಗಳು ಎಂಬ ಪಟ್ಟವನ್ನು ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳು ಕಳೆದುಕೊಳ್ಳುತ್ತಿವೆ. ಶ್ರೀಮಂತರ ಮೊಬೈಲ್ ಕಂಪೆನಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ಆಪಲ್ ಈಗಾಗಲೇ ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಮೂರನೇ ಸ್ಥಾನಕ್ಕೆ ಜಾರಿದ್ದರೆ, ವಿಶ್ವದ ದಿಗ್ಗಜ ಮೊಬೈಲ್ ಸಂಸ್ಥೆ ಸ್ಯಾಮ್‌ಸಂಗ್ ಇನ್ನೇನು ತನ್ನ ಸ್ಥಾನ ಬಿಟ್ಟುಕೊಡಲಿದೆ.

ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳ ಪತನ ಶುರುವಾಯಿತೇ?

ಇತ್ತೀಚಿನ ಮೊಬೈಲ್‌ ಕಂಪೆನಿಗಳ ವಹಿವಾಟನ್ನು ಸಂಗ್ರಹಿಸಿ ಇಂಟರ್‌ನ್ಯಾಷನಲ್‌ ಡಾಟಾ ಕಾರ್ಪೊರೇಷನ್ (ಐಡಿಸಿ) ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಇದನ್ನು ಸ್ಪಷ್ಟಪಡಿಸಿದೆ. ಹಾಗಾದರೆ, ಮೊಬೈಲ್ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳೇನು? ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳು ನೆಲಕಚ್ಚಲಿವೆಯಾ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ದಿಗ್ಗಜರ ನಿದ್ದೆಗೆಡಿಸಿದೆ ನೂತನ ವರದಿ!

ದಿಗ್ಗಜರ ನಿದ್ದೆಗೆಡಿಸಿದೆ ನೂತನ ವರದಿ!

ಇಂಟರ್‌ನ್ಯಾಷನಲ್‌ ಡಾಟಾ ಕಾರ್ಪೊರೇಷನ್ ವಿಶ್ವದ ಎಲ್ಲಾ ಮೊಬೈಲ್‌ ಕಂಪೆನಿಗಳ ವಹಿವಾಟನ್ನು ಸಂಗ್ರಹಿಸಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಪ್ರತಿ ವರ್ಷ ಹೆಚ್ಚು ಕಡಿಮೆ ಅದೇ ಕಂಪೆನಿಗಳು ಯಥಾ ಸ್ಥಾನದಲ್ಲಿದ್ದ ವರದಿ ಬರುತ್ತಿತ್ತು, ಆದರೆ, 2018ರ ಎರಡನೇ ತ್ತೈಮಾಸಿಕ ವಹಿವಾಟಿನ ಅಂಕಿ ಅಂಶ ಆಪಲ್‌ ಹಾಗೂ ಸ್ಯಾಮ್ ಸಂಗ್‌ನ ನಿದ್ದೆಗೆಡಿಸಿದೆ.

ಮೂರನೇ ಸ್ಥಾನಕ್ಕೆ ಜಾರಿತು ಆಪಲ್!

ಮೂರನೇ ಸ್ಥಾನಕ್ಕೆ ಜಾರಿತು ಆಪಲ್!

2018ರ ಎರಡನೇ ತ್ತೈಮಾಸಿಕ ವಹಿವಾಟಿನ ಅಂಕಿ ಅಂಶಗಳಲ್ಲಿ ವಿಶ್ವದ ಅತಿ ಹೆಚ್ಚು ಬ್ರ್ಯಾಂಡ್ ಮೌಲ್ಯ ಹೊಂದಿರುವ ಆಪಲ್ ಮೂರನೇ ಸ್ಥಾನಕ್ಕೆ ಜಾರಿದೆ. ಕಳೆದ ಮೂರು ತಿಂಗಳಲ್ಲಿ ಆಪಲ್‌ ಕಂಪೆನಿಯ 41.3 ಮಿಲಿಯನ್‌ ಹ್ಯಾಂಡ್‌ಸೆಟ್‌ಗಳು ಮಾರಾಟವಾಗಿವೆ. ಮಾರುಕಟ್ಟೆಯ ಶೇ. 12.1 ಪಾಲನ್ನು ಹೊಂದುವ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದೆ.

ಕಿರಿಟವಿದ್ದರೂ ಕೆಳಗೆ ಬಿದ್ದ ಸ್ಯಾಮ್‌ಸಂಗ್!

ಕಿರಿಟವಿದ್ದರೂ ಕೆಳಗೆ ಬಿದ್ದ ಸ್ಯಾಮ್‌ಸಂಗ್!

2018ರ ಎರಡನೇ ತ್ತೈಮಾಸಿಕದಲ್ಲಿ ಸ್ಯಾಮ್ ಸಂಗ್‌ 71.5 ಮಿಲಿಯನ್‌ಮೊಬೈಲ್‌ ಫೋನ್‌ಗಳನ್ನು ಮಾರಾಟ ಮಾಡಿ ಮೊದಲ ಸ್ಥಾನ ಉಳಿಸಿಕೊಂಡಿದೆ. ಆದರೆ, ವರ್ಷದಿಂದ ವರ್ಷಕ್ಕೆ ಸ್ಯಾಮ್ ಸಂಗ್‌ ಮಾರುಕಟ್ಟೆ ಪಾಲು ಕಡಿಮೆಯಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಶೇ. 10.4ರಷ್ಟು ಮೊಬೈಲ್ ಮಾರುಕಟ್ಟೆಯನ್ನು ಸ್ಯಾಮ್‌ಸಂಗ್‌ ಕಳೆದುಕೊಳ್ಳುತ್ತಿದೆ.

ಹುವಾವೆ ಈಗ ಕಿಂಗ್!

ಹುವಾವೆ ಈಗ ಕಿಂಗ್!

ಭಾರತೀಯರಿಗೆ ಪರಿಚಯವಾಗಲೂ ಈಗಲೂ ಪರಿತಪ್ಪಿಸುತ್ತಿರುವ ಚೀನಾದ ಹುವಾವೆ ಕಂಪೆನಿ ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಆಪಲ್ ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ.ಈ ತ್ರೈಮಾಸಿಕದಲ್ಲಿ 54.2 ದಶಲಕ್ಷ ಮೊಬೈಲ್‌ ಹ್ಯಾಂಡ್‌ಸೆಟ್‌ಗಳನ್ನು ಮಾರಿ ಶೇ. 15.8 ರಷ್ಟು ಮಾರುಕಟ್ಟೆ ಪಾಲು ಪಡೆದಿದೆ. ಕಳೆದ ವರ್ಷ ಇದೇ ಅವದಿಯಲ್ಲಿ ಮಾರುಕಟ್ಟೆ ಪಾಲು ಶೇ.11 ರಷ್ಟಿತ್ತು.

ನೋಕಿಯಾ ಸಾಲಿನಲ್ಲಿ ದಿಗ್ಗಜರು?

ನೋಕಿಯಾ ಸಾಲಿನಲ್ಲಿ ದಿಗ್ಗಜರು?

ಒಂದು ಕಾಲದಲ್ಲಿ ನೋಕಿಯಾ ಕಂಪೆನಿ ಎಂದೂ ಬೀಳುವುದಿಲ್ಲ ಮಾತಿತ್ತು. ಆದರೆ, ಈ ತಂತ್ರಜ್ಞಾನ ಜಗತ್ತಿನಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳದಿದ್ದರೆ ಅವುಗಳ ಪತನ ಶುರುವಾಗುತ್ತದೆ. ಆಧುನಿಕತೆಗೆ ಒಗ್ಗಿಕೊಳ್ಳದಿದ್ದರೆ ನೋಕಿಯಾ ಕಂಪೆನಿ ಕೊನೆಯಾದಂತೆ ಆಗುತ್ತದೆ. ಈ ಸಾಲಿಗೆ ಸ್ಯಾಮ್‌ಸಂಗ್ ಮತ್ತು ಆಪಲ್ ಕಂಪೆನಿಗಳು ಸೇರಿಕೊಳ್ಳುತ್ತಿವೆ.!

ಹುವಾವೇ ನಾಗಾಲೋಟಕ್ಕೆ ಕಾರಣ?

ಹುವಾವೇ ನಾಗಾಲೋಟಕ್ಕೆ ಕಾರಣ?

ಬೆಲೆ, ಗುಣಮಟ್ಟ ಮತ್ತು ತಂತ್ರಜ್ಞಾನ ಈ ಮೂರನ್ನು ಯಾವ ಕಂಪೆನಿ ಸರಿಯಾದ ಕ್ರಮದಲ್ಲಿ ಒದಗಿಸುತ್ತದೆಯೊ ಅದೇ ಕಂಪೆನಿಯನ್ನು ಮೊಬೈಲ್ ಪ್ರಿಯರು ಒಪ್ಪಿಕೊಳ್ಳುತ್ತಾರೆ. 60 ಸಾವಿರ ಬೆಲೆಯ ಆಪಲ್‌ ಫೋನ್‌ನ ತಯಾರಿಕಾ ವೆಚ್ಚ 20 ಸಾವಿರಕ್ಕೂ ಕಡಿಮೆ ಇದ್ದಾಗ, ಮತ್ತೋರ್ವ (ಹುವಾವೆ) ಪೈಪೋಟಿದಾರ ಕಡಿಮೆ ಬೆಲೆಗೆ ಉತ್ತಮ ಪೋನ್ ನೀಡಿ ಗ್ರಾಹಕರನ್ನು ಸೆಳೆದಿದ್ದಾನೆ.

ಕಷ್ಟದ ಪರಿಸ್ಥಿಯಲ್ಲಿ ಸ್ಯಾಮ್‌ಸಂಗ್

ಕಷ್ಟದ ಪರಿಸ್ಥಿಯಲ್ಲಿ ಸ್ಯಾಮ್‌ಸಂಗ್

ಮೂರು ವರ್ಷಗಳ ಹಿಂದೆಯಷ್ಟೆ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್ ನೀಡುವ ಕಂಪೆನಿ ಎಂದು ಭಾರತದಲ್ಲಿ ಹೆಸರಾಗಿದ್ದ ಸ್ಯಾಮ್‌ಸಂಗ್‌ ಕಂಪೆನಿ ಈಗ ದುಬಾರಿಯಾಗಿದೆ. ಸ್ಯಾಮ್‌ಸಂಗ್‌ ಕಂಪನಿ 25 ಸಾವಿರದ ಮೊಬೈಲ್‌ಗ‌ಳಲ್ಲಿ ನೀಡುವ ಫೀಚರ್ಸ್ ಮೊಬೈಲ್ ಹುವಾವೆಯಲ್ಲಿ 10 ಸಾವಿರಗಳಲ್ಲಿ ಲಭ್ಯವಿದೆ ಎಂದರೆ ಆಶ್ಚರ್ಯವೇನಿಲ್ಲ.

ತಂತ್ರಜ್ಞಾನದಲ್ಲಿ ಹಿಂದುಳಿಯುತ್ತಿದೆ.!

ತಂತ್ರಜ್ಞಾನದಲ್ಲಿ ಹಿಂದುಳಿಯುತ್ತಿದೆ.!

ಸ್ಯಾಮ್‌ಸಂಗ್‌ ಕಂಪನಿ ಸ್ಮಾರ್ಟ್‌ಫೋನ್‌ಗಳ ಬೆಲೆ ಹೆಚ್ಚು ಎಂಬುದಕ್ಕಿಂತಲೂ ಸ್ಯಾಮ್‌ಸಂಗ್ ತಂತ್ರಜ್ಞಾನದಲ್ಲಿ ಹಿಂದುಳಿಯುತ್ತಿರುವಂತೆ ಕಾಣುತ್ತಿದೆ. , ಚೀನಾ ಕಂಪೆನಿಗಳು ಸಂಶೋಧಿಸಿದ ಫೀಚರ್‌ಗಳನ್ನು ಒಂದೆರಡು ವರ್ಷ ಕಳೆದ ನಂತರ ತಾನು ಅಳವಡಿಸಿಕೊಳ್ಳುತ್ತಿದೆ! ಆದರೆ, ಡಿಸ್‌ಪ್ಲೇ ಮತ್ತು ಗುಣಮಟ್ಟದಲ್ಲಿ ಮಾತ್ರ ಸ್ವಲ್ಪ ತನ್ನತನವನ್ನು ಕಾಪಾಡಿಕೊಂಡಿದೆ.

ಅಮೆರಿಕಾದ ಸೊಕ್ಕು ಮುರಿಯುತ್ತಿದೆ ಚೀನಾ!

ಅಮೆರಿಕಾದ ಸೊಕ್ಕು ಮುರಿಯುತ್ತಿದೆ ಚೀನಾ!

ಈಗ ಚೀನಾದ ಮೊಬೈಲ್ ಕಂಪೆನಿಗಳು ಯೂರೋಪಿಯನ್‌, ಲ್ಯಾಟಿನ್‌ ಅಮೆರಿಕಾ, ರಷ್ಯಾ ಮುಂತಾದ ದೇಶಗಳಲ್ಲಿ ಅತ್ಯಂತ ಜನಪ್ರಿಯವಾಗುತ್ತಿವೆ. ಗುಣಮಟ್ಟ ಹಾಗೂ ನ್ಯಾಯವಾದ ಬೆಲೆ ಮೊಬೈಲ್ ಗ್ರಾಹಕರನ್ನು ಸೆಳೆಯುತ್ತಿವೆ. ತಂತ್ರಜ್ಞಾನದಲ್ಲಿ ದೊಡ್ಡಣ್ಣ ಎಂಬ ಹಮ್ಮಿನಿಂದ ಬೀಗುತ್ತಿರುವ ಯು.ಎಸ್‌. ಕಂಪೆನಿಯನ್ನು ಬಗ್ಗು ಬಡಿಯುವಲ್ಲಿ ಏಷ್ಯಾ ಕಂಪೆನಿಗಳು ಮುನ್ನುಗ್ಗಿವೆ.

Best Mobiles in India

English summary
Huawei overtakes Apple, global mobile market sees a decline in Q2. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X