ಹುವಾವೆ P20 ಸ್ಮಾರ್ಟ್ ಫೋನ್ ಮಾಹಿತಿ ಲೀಕ್..!

By Precilla Dias

  ಯೂರೋಪ್ ಮಾರುಕಟ್ಟೆಯಲ್ಲಿ ಕಾಣಸಿಕೊಳ್ಳಲಿರುವ ಹುವಾವೆ P20 ಮತ್ತು ಹುವಾವೆ P20 ಪ್ರೋ ಸ್ಮಾರ್ಟ್ ಫೋನ್ ಕುರಿತಂತೆ ಸಂಪೂರ್ಣ ಮಾಹಿತಿಯೂ ಲಭ್ಯವಾಗಿದ್ದು, ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳಿಗೆ ಇದು ಭರ್ಜರಿ ಸವಾಲು ಒಡ್ಡಲಿದೆ ಎನ್ನುವ ಮಾತು ಕೇಳಿಬಂದಿದೆ.

  ಹುವಾವೆ P20 ಸ್ಮಾರ್ಟ್ ಫೋನ್ ಮಾಹಿತಿ ಲೀಕ್..!

  ಹುವಾವೆ P20 ಸ್ಮಾರ್ಟ್ ಫೋನಿನಲ್ಲಿ 5.8 ಇಂಚಿನ LCD ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಇದು FHD+ ಗುಣಮಟ್ಟವನ್ನು ಹೊಂದಿದೆ. ಅಲ್ಲದೇ ಐಫೋನ್ X ಮಾದರಿಯಲ್ಲಿ ಫೋನ್ ಮುಂಭಾಗದ ಮಧ್ಯದಲ್ಲಿ ನೋಚ್ ಅನ್ನು ಸಹ ಒಳಗೊಂಡಿದೆ. ಇಲ್ಲಿಯೇ ಮುಂಭಾಗದ ಕ್ಯಾಮೆರಾವನ್ನು ಅಳವಡಿಸಲಾಗಿದೆ.

  ಹುವಾವೆ P20 ಸ್ಮಾರ್ಟ್ ಫೋನಿನಲ್ಲಿ ಫೇಸ್ ಅನ್ ಲಾಕ್ ಆಯ್ಕೆಯೂ ಇರುವ ಬಗ್ಗೆ ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ, ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಸ್ಮಾರ್ಟ್ ಫೋನ್ ಗಳಲ್ಲಿ ಫೇಸ್ ರೆಕಗ್ನಿಷನ್ ಆಯ್ಕೆಯನ್ನು ಕಾಣಬಹುದಾಗಿದ್ದು, ಈ ಹಿನ್ನಲೆಯಲ್ಲಿ ಈ ಪೋನಿನಲ್ಲಿಯೂ ಅಳವಡಿಸುವ ಸಾಧ್ಯತೆ ದಟ್ಟವಾಗಿದೆ.

  Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?
  ಹುವಾವೆ P20 ಸ್ಮಾರ್ಟ್ ಪೋನಿನಲ್ಲಿ ಕಿರನ್ 970 ಪ್ರೋಸೆಸರ್ ಅನ್ನು ನೋಡಬಹುದಾಗಿದ್ದು, ಇದರೊಂದಿಗೆ 4GB RAM ಮತ್ತು 128GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಇದೇ ಮಾದರಿಯಲ್ಲಿ ಹುವಾವೆ P20 ಪ್ರೋ ಸ್ಮಾರ್ಟ್ ಪೋನಿನಲ್ಲಿ 6GB RAM ಅನ್ನು ಅಳವಡಿಸಲಾಗಿದೆ. ಈ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

  ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಒನ್‌ಪ್ಲಸ್ ಇತಿಹಾಸದಲ್ಲೇ ಬೆಸ್ಟ್ ಫೋನ್‌..!

  ಕ್ಯಾಮೆರಾ ವಿಭಾಗದಲ್ಲಿ ಹುವಾವೆ P20 ಮತ್ತು ಹುವಾವೆ P20 ಪ್ರೋ ನಡುವೆ ವ್ಯತ್ಯಾಸವನ್ನು ಕಾಣಬಹುದಾಗಿದ್ದು, ಹುವಾವೆ P20 ಸ್ಮಾರ್ಟ್ ಫೋನಿನಲ್ಲಿ 12MP RGB ಸೆಸ್ಸಾರ್ ಸೇರಿದಂತೆ 20MP ಕ್ಯಾಮೆರಾ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, 24MP ಸೆಲ್ಫ9 ಕ್ಯಾಮೆರಾವನ್ನು ಇದರಲ್ಲಿ ನೋಡಬಹುದಾಗಿದೆ. ಅಲ್ಲದೇ ಉತ್ತಮ ಚಿತ್ರಗಳನ್ನು ಸೆರೆಹಿಡಿಯುವ ಸಲುವಾಗಿ ಕೃತಕ ಬುದ್ದಿಮತ್ತೆಯನ್ನು ಸಹ ಇದರಲ್ಲಿದೆ.

  Read more about:
  English summary
  Huawei P20, which is to be unveiled tomorrow in Europe along with P20 Pro has been leaked online. The complete specifications were out and the same has been confirmed by a German retailer via images.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more