ಹುವಾವೆಯ ಹೊಸ 'ಹಾರ್ಮನಿ ಓಎಸ್‌' ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು!

|

ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡುತ್ತಾ, ಶರವೇಗದಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ಹುವಾವೆ ಕಂಪನಿಯು ಗುರುತಿಸಿಕೊಂಡಿತು. ಆದರೆ ಹುವಾವೆಯ ಬೆಳವಣಿಗೆಯನ್ನು ಸಹಿಸದ ದೊಡ್ಡಣ್ಣ ಅಮೆರಿಕಾ ಹುವಾವೆ ಸ್ಮಾರ್ಟ್‌ಫೋನ್‌ಗಳಿಗೆ ಗೂಗಲ್ ಆಂಡ್ರಾಯ್ಡ್ ಓಸ್‌ ಬೆಂಬಲ ನೀಡುವುದನ್ನು ತಡೆಹಿಡಿಯಿತು. ಆದ್ರೆ, ದೃತಿಗೇಡದ ಹುವಾವೆ ಸಂಸ್ಥೆಯು ಸ್ವತಂತ್ರವಾಗಿ ಓಎಸ್‌ ಸಿದ್ಧಪಡಿಸಲು ಹೆಜ್ಜೆ ಇರಿಸಿತ್ತು ಮತ್ತು ಹೊಸ ಓಎಸ್‌ ಅಭಿವೃದ್ಧಿ ಪಡೆಸುವಲ್ಲಿ ಯಶಸ್ವಿಯು ಆಗಿದೆ.

ಹುವಾವೆಯ ಹೊಸ 'ಹಾರ್ಮನಿ ಓಎಸ್‌' ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು!

ಹೌದು, ಚೀನಾ ಮೂಲದ ಹುವಾವೆ ಕಂಪನಿಯು ಹೊಸದಾಗಿ 'ಹಾರ್ಮನಿ' ಓಎಸ್ (HarmonyOS) ಅಭಿವೃದ್ಧಿ ಪಡೆಸಿದ್ದು, ಇದೇ ಅಗಷ್ಟ 9ರಂದು ನಡೆದ, ಹುವಾವೆ ಡೆವಲಪರ್ಸ್ ಸಮ್ಮೇಳನದಲ್ಲಿ ಅನಾವರಣ ಮಾಡಿದೆ. ಕಂಪನಿಯ ಎಲ್ಲ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಹಾರ್ಮನಿ' ಆಪರೇಟಿಂಗ್ ಸಿಸ್ಟಮ್‌ ಕಾರ್ಯನಿರ್ವಹಿಸಲಿದೆ. ಹಾಗೆಯೇ ಅತ್ಯುತ್ತಮ RAM ಬೆಂಬಲ ನೀಡಿಲಿದ್ದು, ಪ್ರತ್ಯೇಕವಾದ ಆಪ್ಸ್ ಸ್ಟೋರ್‌ ಸಹ ಮಾಡಲಿದೆ ಎಂದು ತಿಳಿಸಿದೆ.

ಹುವಾವೆಯ ಹೊಸ 'ಹಾರ್ಮನಿ ಓಎಸ್‌' ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು!

ಹೊಸ ಹಾರ್ಮನಿ ಓಎಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವಲ್ಲದೆ ಟಿವಿಗಳು, ಟ್ಯಾಬ್ಲೆಟ್‌ಗಳು, ಸ್ಮಾರ್ಟ್ ಸ್ಪೀಕರ್‌ಗಳು, ವೈರ್‌ಲೆಸ್ ಇಯರ್‌ಬಡ್ಸ್‌ಗಳು, ಸ್ಮಾರ್ಟ್‌ವಾಚ್‌ಗಳು, ಪಿಸಿಗಳು, ವಿಆರ್ ಗ್ಲಾಸ್‌ಗಳು ಮತ್ತು ಕಾರುಗಳಲ್ಲಿಯೂ ಸಹ ಕಾರ್ಯನಿರ್ವಹಿಸುತ್ತದೆ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂದು ರೀಚರ್ಡ್‌ ಯು ಹೇಳಿದ್ದಾರೆ. ಹಾಗಾದರೇ ಹುವಾವೆಯ ಹೊಸ ಹಾರ್ಮನಿ ಓಎಸ್‌ ಕುರಿತಾಗಿ ನೀವು ತಿಳಿಯಬೇಕಾದ ಕೆಲವು ಸಂಗತಿಗಳನ್ನು ಮುಂದೆ ನೋಡೋಣ ಬನ್ನಿರಿ.

<strong>ಓದಿರಿ : ಯೂಟ್ಯೂಬ್‌ನಲ್ಲಿರುವ ಈ ಸ್ಪೆಷಲ್ ಆಯ್ಕೆಗಳ ಬಗ್ಗೆ ನಿಮಗೆ ಗೊತ್ತಾ?</strong>ಓದಿರಿ : ಯೂಟ್ಯೂಬ್‌ನಲ್ಲಿರುವ ಈ ಸ್ಪೆಷಲ್ ಆಯ್ಕೆಗಳ ಬಗ್ಗೆ ನಿಮಗೆ ಗೊತ್ತಾ?

ಹೊಸ ಓಎಸ್‌ ಪ್ರಯತ್ನ

ಹೊಸ ಓಎಸ್‌ ಪ್ರಯತ್ನ

ಹುವಾವೆಯು ಹಾರ್ಮನಿ ಓಎಸ್‌ ಅನ್ನು ಈಗ ಲಾಂಚ್ ಮಾಡಿದ್ದರೂ, ಅದರ ಅಭಿವೃದ್ಧಿ ಕಾರ್ಯ 2017ರಲ್ಲಿಯೇ ಆರಂಭವಾಗಿತ್ತು. ಈ ಓಎಸ್‌ನ v1.0 ಮಾದರಿಯನ್ನು ಡಿಸ್‌ಪ್ಲೇ ಹೊಂದಿದ ಸ್ಮಾರ್ಟ್‌ ಉತ್ಪನ್ನಗಳಲ್ಲಿ ಅಳವಡಿಸುವುದು, ಆನಂತರ ಮೈಕ್ರೋಕೆರ್ನಲ್ v2.0 ಮಾದರಿಯನ್ನು ಬಿಡುಗಡೆ ಮಾಡುವುದು ಹಾಗೆಯೇ 2021ರಲ್ಲಿ v3.0 ಮಾದರಿಯನ್ನು ವೇರೆಬಲ್ ಸ್ಮಾರ್ಟ್‌ ಡಿವೈಸ್‌ಗಳಲ್ಲಿ ಸೇರಿಸುವ ಯೋಜನೆಗಳಿವೆ.

IoT ಡಿವೈಸ್‌ಗಳೆ ಟಾರ್ಗೆಟ್

IoT ಡಿವೈಸ್‌ಗಳೆ ಟಾರ್ಗೆಟ್

ಹುವಾವೆ ಬರೀ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವಲ್ಲದೇ, ಸ್ಮಾರ್ಟ್ ವಾಚ್, ಸ್ಮಾರ್ಟ್‌ ಸ್ಕ್ರೀನ್ ಪ್ರೊಡೆಕ್ಟ್‌, ಸ್ಮಾರ್ಟ್‌ ಸ್ಪೀಕರ್ಸ್‌, ಮತ್ತು ಕಾರ್‌ಗಳಲ್ಲಿ ತನ್ನ ಹಾರ್ಮನಿ ಆಪರೇಟಿಂಗ್ ಸಿಸ್ಟಮ್ ಅಳವಡಿಸಲು ಹೆಚ್ಚು ಗಮನ ನೀಡಲಿದೆ. ಹಾರ್ಮನಿ ಓಎಸ್‌ ಹುವಾವೆ ಸ್ಮಾರ್ಟ್‌ಫೋನ್‌ಗಳನ್ನು ಸೇರಲಿದೆ. ಆದರು ಈ ಹೊಸ ಓಎಸ್‌ ಅನ್ನು ಫೋನ್‌ಗಳಲ್ಲಿ ಸೇರಿಸುವುದರಲ್ಲಿ ಕಂಪನಿಯು ಹೆಚ್ಚಿನ ಉತ್ಸುಕತೆ ಹೊರಹಾಕಿಲ್ಲ.

<strong>ಓದಿರಿ : ಐಫೋನ್ XR ಖರೀದಿಗೆ ಇದಕ್ಕಿಂತ ಒಳ್ಳೆಯ ಅವಕಾಶ ಇನ್ನೊಂದಿಲ್ಲ!</strong>ಓದಿರಿ : ಐಫೋನ್ XR ಖರೀದಿಗೆ ಇದಕ್ಕಿಂತ ಒಳ್ಳೆಯ ಅವಕಾಶ ಇನ್ನೊಂದಿಲ್ಲ!

ಸ್ವಂತ ಅಪ್ಲಿಕೇಶನ್ ಸ್ಟೋರ್

ಸ್ವಂತ ಅಪ್ಲಿಕೇಶನ್ ಸ್ಟೋರ್

ಹುವಾವೆ ಇದೀಗ ಸ್ವಂತ ಆಪರೇಟಿಂಗ್ ಸಿಸ್ಟಮ್ ತಯಾರಿಸಿದ್ದು, ಅದರ ಬೆನ್ನಲ್ಲೇ ಸ್ವಂತ ಅಪ್ಲಿಕೇಶನ್ ಸ್ಟೋರ್‌ ಸಹ ತಯಾರಿಸಲಿದೆ. ಗೂಗಲ್ ತನ್ನ ಆಪ್‌ ಸ್ಟೋರ್‌ಗೆ 'ಪ್ಲೇ ಸ್ಟೋರ್‌' ಎಂದಿದ್ದು, ಹಾಗೆಯೇ ಹುವಾವೆ ತನ್ನ ಆಪ್‌ ಸ್ಟೋರ್‌ಗೆ 'ಆಪ್‌ಗ್ಯಾಲರಿ' ಎಂದು ಕರೆದಿದೆ. ಕಂಪನಿಯ ಆಂಡ್ರಾಯ್ಡ್ ಆಪ್ಸ್‌ಗಳು ಹೊಸ ಆಪ್‌ಗ್ಯಾಲರಿ ಸೇರಿಕೊಳ್ಳಲಿವೆ ಹಾಗೂ ಹೊಸ ಆಪ್ಸ್‌ಗಳು ಸಹ ಅಭಿವೃದ್ಧಿ ಆಗಲಿವೆ.

ಓಪನ್ ಸೋರ್ಸ್‌ ಓಎಸ್‌

ಓಪನ್ ಸೋರ್ಸ್‌ ಓಎಸ್‌

ಹುವಾವೆ ಅಭಿವೃದ್ದಿ ಪಡೆಸಿರುವ ಹೊಸ ಹಾರ್ಮನಿ ಓಎಸ್‌ ಮುಕ್ತವಾದ ಓಎಸ್‌ ಮಾದರಿಯಲ್ಲಿರಲಿದೆ. ಇತರೆ ಕಂಪನಿಯವರು ಸಹ ಈ ಓಎಸ್‌ ಅಳವಡಿಸಿಕೊಳ್ಳಲು ಅವಕಾಶ ಇರುತ್ತದೆ. ಮುಂದಿನ ದಿನಗಳಲ್ಲಿ ಹುವಾವೆಯು ಚೀನಾ ಮೂಲದ ವಿವೋ, ಶಿಯೋಮಿ ಮತ್ತು ಒಪ್ಪೊ ಕಂಪನಿಗಳ ಜೊತೆ ಹೊಂದಾಣಿಗೆ ಮಾಡಿಕೊಂಡು ಆ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಹಾರ್ಮನ ಓಎಸ್ ಸೇರಿಸಲಿದೆ.

ಮೊದಲು ಚೀನಾದಲ್ಲಿ

ಮೊದಲು ಚೀನಾದಲ್ಲಿ

ಹುವಾವೇ ಕಂಪನಿಯು ಹೊಸ ಹಾರ್ಮನಿ ಅಪರೇಟಿಂಗ್ ಸಿಸ್ಟಮ್ ಅನ್ನು ಮೊದಲು ಚೀನಾದ ಮಾರುಕಟ್ಟೆಯಲ್ಲಿ ಭದ್ರಪಡಿಸಲಿದ್ದು, ಆ ನಂತರದಲ್ಲಿ ಅದನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ವಿಸ್ತರಿಸುವ ಆಲೋಚನೆ ಹೊಂದಿದೆ. ಆದ್ದರಿಂದ, ಹಾನರ್ ವಿಷನ್ ಸ್ಮಾರ್ಟ್ ಪರದೆಯಿಂದ ಪ್ರಾರಂಭವಾಗುವ ಹಾರ್ಮನಿ ಓಎಸ್ ಉತ್ಪನ್ನಗಳ ಮೊದಲ ಸೆಟ್ ಚೀನಾದಲ್ಲಿ ಅನಾವರಣಗೊಳ್ಳಲಿದೆ.

<strong>ಓದಿರಿ : ಶಿಯೋಮಿ ಇಂಥ ಅಚ್ಚರಿ ನೀಡಲಿದೆ ಎಂದು ಬಹುಶಃ ಯಾರು ಊಹಿಸಿರಲಿಲ್ಲ!</strong>ಓದಿರಿ : ಶಿಯೋಮಿ ಇಂಥ ಅಚ್ಚರಿ ನೀಡಲಿದೆ ಎಂದು ಬಹುಶಃ ಯಾರು ಊಹಿಸಿರಲಿಲ್ಲ!

Best Mobiles in India

English summary
Harmony OS is primarily targeted at IoT products and is the company’s back up plan if it no longer can use Android on its smartphones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X