ಫೇಸ್‌ಬುಕ್‌ನಲ್ಲಿ ಹಣಕಾಸು ಸಚಿವ ಜೇಟ್ಲಿ ಫುಲ್ ಆಕ್ಟಿವ್..!

By Avinash
|

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಬಳಕೆಯಲ್ಲಿ ಕೇಂದ್ರದ ಉಳಿದ ಮಂತ್ರಿಗಳಿಗಿಂತ ಹಣಕಾಸು ಮಂತ್ರಿ ಅರುಣ್‌ ಜೇಟ್ಲಿ ಮುಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಆಕ್ಟಿವ್ ಆಗಿರುವ ಜೇಟ್ಲಿ ಫೇಸ್‌ಬುಕ್‌ ತನ್ನ ತನ್ನ ರಾಯಭಾರಿಯನ್ನಾಗಿ ಮಂತ್ರಿಗಳನ್ನು ಮಾಡಬೇಕೆಂದು ಬಯಸಿದರೆ ಬ್ರಾಂಡ್‌ ರಾಯಭಾರಿ ಸ್ಥಾನಕ್ಕೆ ಅರುಣ್‌ ಜೇಟ್ಲಿ ಪ್ರಭಲ ಸ್ಪರ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಫೇಸ್‌ಬುಕ್‌ನಲ್ಲಿ ಹಣಕಾಸು ಸಚಿವ ಜೇಟ್ಲಿ ಫುಲ್ ಆಕ್ಟಿವ್..!

ಭಾರತದ 250 ಮಿಲಿಯನ್ ಫೇಸ್‌ಬುಕ್‌ ಬಳಕೆದಾರರ ಪೈಕಿ ಶೇ.71ರಷ್ಟು ಬಳಕೆದಾರರು 18 ರಿಂದ 34 ವರ್ಷದವರಾಗಿದ್ದಾರೆ. ಆದರೆ, ಕೇಂದ್ರ ಹಣಕಾಸು ಸಚಿವರಾಗಿರುವ ಅರುಣ್‌ ಜೇಟ್ಲಿ ತಮ್ಮ 65ನೇ ವಯಸ್ಸಿನಲ್ಲಿಯೂ ಫೇಸ್‌ಬುಕ್‌ನಲ್ಲಿ ಬಹುದೊಡ್ಡ ಟ್ರಾಫಿಕ್‌ನ್ನು ಹೊತ್ತು ತರುತ್ತಿದ್ದು, ಪ್ರಮುಖ ವಿಷಯಗಳನ್ನು ಕ್ರಮಬದ್ಧವಾಗಿ ಮುಖ್ಯವಾಹಿನಿಗೆ ತರುತ್ತಿರುವುದು ವಿಶೇಷವಾಗಿದೆ.

ಆಸ್ಪತ್ರೆಯಲ್ಲಿಯೂ 18 ಪೋಸ್ಟ್‌

ಆಸ್ಪತ್ರೆಯಲ್ಲಿಯೂ 18 ಪೋಸ್ಟ್‌

ಕಳೆದ ಒಂದು ತಿಂಗಳಲ್ಲಿ, ಜೂನ್ 4ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗುವವರೆಗೂ ಕನಿಷ್ಠ 18 ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಮಾಡಿದ್ದಾರೆ. ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗಿ ಮಹತ್ವವನ್ನು ಪಡೆದಿವೆ.

ರಾಹುಲ್‌ ಗಾಂಧಿಯಿಂದಿಡಿದು ಜಿಎಸ್‌ಟಿವರೆಗೆ

ರಾಹುಲ್‌ ಗಾಂಧಿಯಿಂದಿಡಿದು ಜಿಎಸ್‌ಟಿವರೆಗೆ

ಅರುಣ್‌ ಜೇಟ್ಲಿ ಫೇಸ್‌ಬುಕ್‌ ವಾಲ್‌ನಲ್ಲಿ ರೈತರ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗಿರುವ ಜ್ಞಾನ, ಬಿಡ್ಡಿಂಗ್ ಫೇರ್‌ವೆಲ್, ಸಿಇಎ ಅರವಿಂದ್ ಸುಬ್ರಹ್ಮಣ್ಯನ್ ಮತ್ತು ಜಿಎಸ್‌ಟಿಯ ಪ್ರಥಮ ವಾರ್ಷಿಕೋತ್ಸವಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ಸ್ಥಾನ ಪಡೆದಿದ್ದವು.

ವಿಷಯದ ಆಯ್ಕೆಯಲ್ಲಿ ತಂತ್ರಗಾರಿಕೆ

ವಿಷಯದ ಆಯ್ಕೆಯಲ್ಲಿ ತಂತ್ರಗಾರಿಕೆ

ಅದರಂತೆ ಅವರು ವಿಷಯಗಳನ್ನು ಆಯ್ಕೆ ಮಾಡುವಲ್ಲಿಯೂ ಸೂಕ್ಷ್ಮ ತಂತ್ರಗಾರಿಕೆ ಬಳಸಿದ್ದು, ನಗರೀಕರಣದ ಬಗ್ಗೆ ಕಾಂಗ್ರೆಸ್‌ಗಿರುವ ಮಾಹಿತಿ ಕೊರತೆ, ಜಮ್ಮು ಕಾಶ್ಮೀರದಲ್ಲಿನ ಮಾನವ ಹಕ್ಕುಗಳು, ಸುಪ್ರೀಂ ಕೋರ್ಟ್‌ನ ಬೆಳವಣಿಗೆಗಳನ್ನು ಸಾಮಾಜಿಕ ಮಾಧ್ಯಮಕ್ಕೆ ತಂದಿದ್ದಾರೆ.

ತುರ್ತು ಪರಿಸ್ಥಿತಿಯ 3 ಪೋಸ್ಟ್‌

ತುರ್ತು ಪರಿಸ್ಥಿತಿಯ 3 ಪೋಸ್ಟ್‌

ಕಳೆದ ತಿಂಗಳಿನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಡಳಿತದಲ್ಲಿನ ತುರ್ತು ಪರಿಸ್ಥಿತಿಯ ಕುರಿತು ಜೇಟ್ಲಿ ಎಫ್‌ಬಿ ಗೋಡೆಯಲ್ಲಿ 3 ಪೋಸ್ಟ್‌ಗಳು ಸ್ಥಾನ ಪಡೆದಿವೆ.

ಕಾಂಗ್ರೆಸ್‌ಗೆ ಪೋಸ್ಟ್‌ಗಳಲ್ಲಿಯೇ ತಿವಿತ

ಕಾಂಗ್ರೆಸ್‌ಗೆ ಪೋಸ್ಟ್‌ಗಳಲ್ಲಿಯೇ ತಿವಿತ

ತಮ್ಮ ಇತ್ತೀಚಿನ ಪೋಸ್ಟ್‌ಗಳಲ್ಲಿ ಕಾಂಗ್ರೆಸ್‌ ಗುರಿಯಾಗಿಸಿಕೊಂಡು ಬರೆದಿದ್ದಾರೆ. ಜೆಎನ್‌ಯುನಲ್ಲಿ ನಡೆಯುತ್ತಿರುವ ತುಕ್ಡೇ ತುಕ್ಡೇ ಸಂಘರ್ಷವನ್ನು ಕಾಂಗ್ರೆಸ್ ವಾಕ್‌ಸ್ವಾತಂತ್ರ್ಯ ಎಂದಿರುವುದನ್ನು ಪ್ರಸ್ತಾಪಿಸಿದ್ದಾರೆ. ಅದರಂತೆ ಸಂವಿಧಾನ ತಿದ್ದುಪಡಿ ಮಾಡುವ ಹಾಗೂ ಅಖಂಡ ಭಾರತದ ಬಗ್ಗೆ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರ ಸಲಹೆಯನ್ನು ನಿರ್ಬಂಧಿಸುವ ಕಾಂಗ್ರೆಸ್‌ ನಿರ್ಧಾರಗಳನ್ನು ಪೋಸ್ಟ್‌ಗಳಲ್ಲಿ ಬರೆದಿದ್ದಾರೆ.

Best Mobiles in India

English summary
If Facebook wanted a minister as brand ambassador...To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X