1.07 ಲಕ್ಷ ಕೋಟಿಗೆ ಮಾರಾಟವಾದ ಫ್ಲಿಪ್‌ಕಾರ್ಟ್ ಯಶೋಗಾತೆ ಗೊತ್ತಾ?

ಆರಂಭದಲ್ಲಿ ಆನ್‌ಲೈನ್‌ನಲ್ಲಿ ಪುಸ್ತಕ ಮಾರಾಟ ನಡೆಸುತ್ತಿದ್ದ ಫ್ಲಿಪ್‌ಕಾರ್ಟ್, ಇಂದು ವಿಶ್ವದ ಅತಿದೊಡ್ಡ ರಿಟೇಲ್‌ಸಂಸ್ಥೆ ವಾಲ್‌ಮಾರ್ಟ್‌ಗೆ ₹ 1.07 ಲಕ್ಷ ಕೋಟಿಗೆ ಮಾರಾಟವಾಗಿ ವಿಶ್ವ ಟೆಕ್ ಪ್ರಪಂಚಕ್ಕೆ ಆಶ್ಚರ್ಯ ಮೂಡಿಸಿದೆ.

|

ಆರಂಭದಲ್ಲಿ ಆನ್‌ಲೈನ್‌ನಲ್ಲಿ ಪುಸ್ತಕ ಮಾರಾಟ ನಡೆಸುತ್ತಿದ್ದ ಫ್ಲಿಪ್‌ಕಾರ್ಟ್, ಇಂದು ವಿಶ್ವದ ಅತಿದೊಡ್ಡ ರಿಟೇಲ್‌ಸಂಸ್ಥೆ ವಾಲ್‌ಮಾರ್ಟ್‌ಗೆ ₹ 1.07 ಲಕ್ಷ ಕೋಟಿಗೆ ಮಾರಾಟವಾಗಿ ವಿಶ್ವ ಟೆಕ್ ಪ್ರಪಂಚಕ್ಕೆ ಆಶ್ಚರ್ಯ ಮೂಡಿಸಿದೆ. ಈ ಮೂಲಕ ಕಳೆದ ಕೆಲವು ತಿಂಗಳುಗಳಿಂದ ಫ್ಲಿಪ್‌ಕಾರ್ಟ್ ಬಗ್ಗೆ ಹರಿದಾಡುತ್ತಿದ್ದ ರೂಮರ್ಸ್‌ಗಳಿಗೆ ಇದೀಗ ಬ್ರೇಕ್ ಬಿದ್ದಿದೆ.!

2007ನೇ ವರ್ಷದ ಅಕ್ಟೋಬರ್‌ನಲ್ಲಿ ಬೆಂಗಳೂರಿನ ಕೋರಮಂಗಲದ ಎರಡು ಬೆಡ್‌ರೂಂ ಅಪಾರ್ಟ್‌ಮೆಂಟ್‌ನಲ್ಲಿ ಶುರುವಾಗಿದ್ದ ಫ್ಲಿಪ್‌ಕಾರ್ಟ್ ಇಂದು ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ಆರಂಭದಲ್ಲಿ ಕೇವಲ ಗ್ರಾಹಕರು ಆನ್‌ಲೈನ್‌ನಲ್ಲಿ ಪುಸ್ತಕ ಖರೀದಿಗೆ ಬೇಡಿಕೆ ಸಲ್ಲಿಸಿದ್ದರೆ, ಅವರ ಮನೆ ಬಾಗಿಲಿಗೆ ತಲುಪಿಸುವ ವಹಿವಾಟು ಇಂದು ಆಗಾಧವಾಗಿ ಬೆಳೆದುನಿಂತಿದೆ.

1.07 ಲಕ್ಷ ಕೋಟಿಗೆ ಮಾರಾಟವಾದ ಫ್ಲಿಪ್‌ಕಾರ್ಟ್ ಯಶೋಗಾತೆ ಗೊತ್ತಾ?

ಫ್ಲಿಪ್‌ಕಾರ್ಟ್ ಸಂಸ್ಥೆಯು ಈಗ 1 ಲಕ್ಷ ಚದರ ಅಡಿಯ ಹೊಸ ಕ್ಯಾಂಪಸ್‌ನಿಂದ ತನ್ನ ವಹಿವಾಟನ್ನು ನಿರ್ವಹಿಸುವ ಮಟ್ಟಕ್ಕೆ ಬೆಳೆದಿದ್ದು, ದೇಶದಾದ್ಯಂತ ಕಚೇರಿಗಳನ್ನು ಹೊಂದಿದೆ. ಸಂಸ್ಥೆಯ ಉದ್ಯೋಗಿಗಳ ಸಂಖ್ಯೆ 6,800ಕ್ಕೆ ತಲುಪಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಭಾರತೀಯ ಸ್ಟಾರ್ಟ್ಅಪ್ ಒಂದರ ಅತಿದೊಡ್ಡ ಯಶೋಗಾತೆ ಹೇಗೆ ನಡೆದುಬಂತು ಎಂಬುದನ್ನು ತಿಳಿಯೋಣ.

ದಶಕದ ಪಯಣದಲ್ಲಿ ಫ್ಲಿಪ್‌ಕಾರ್ಟ್!!

ದಶಕದ ಪಯಣದಲ್ಲಿ ಫ್ಲಿಪ್‌ಕಾರ್ಟ್!!

ಅಮೆರಿಕದ ಮತ್ತೊಂದು ಇ-ಕಾಮರ್ಸ್ ಸಂಸ್ಥೆ ಅಮೆಜಾನ್‌ ಉದ್ಯೋಗಿಗಳಾಗಿದ್ದ ಸಚಿನ್‌ ಮತ್ತು ಬಿನ್ನಿ ಬನ್ಸಲ್ ಇಬ್ಬರೂ ಜತೆಯಾಗಿ ಸ್ಥಾಪಿಸಿದ್ದ ಸಂಸ್ಥೆಯೇ ಫ್ಲಿಪ್‌ಕಾರ್ಟ್, ಬೆಂಗಳೂರಿನ ಕೋರಮಂಗಲದ ಎರಡು ಬೆಡ್‌ರೂಂ ಅಪಾರ್ಟ್‌ಮೆಂಟ್‌ನಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಕಂಪೆನಿ ಮೊದಲು ಮಾರಾಟ ಮಾಡಿದ್ದು ಒಂದು ಪುಸ್ತಕವನ್ನು.

ಇಂಟರ್‌ನೆಟ್ ಸಹ ಇರಲಿಲ್ಲ!!

ಇಂಟರ್‌ನೆಟ್ ಸಹ ಇರಲಿಲ್ಲ!!

ದಶಕದ ಹಿಂದೆಯಷ್ಟೆ ಭಾರತದಲ್ಲಿ ಇ-ಕಾಮರ್ಸ್‌ ಬಗ್ಗೆ ಯಾರೊಬ್ಬರೂ ಕೇಳಿರಲಿಲ್ಲ. ಯಾವುದೇ ವಸ್ತು ಖರೀದಿಸಲು ಅದನ್ನು ಮುಟ್ಟಿ ನೋಡಿದ ನಂತರವೇ ಖರೀದಿಸುವ ಪ್ರವೃತ್ತಿಯು ಗ್ರಾಹಕರ ಮನದಲ್ಲಿ ದೃಢವಾಗಿ ಬೇರೂರಿತ್ತು. ಜೊತೆಗೆ ಇಂಟರ್‌ನೆಟ್ ಸಹ ಭಾರೀ ಹಿಂದುಳಿದಿತ್ತು. ಆದರೂ, ಅತ್ಯಲ್ಪ ಅವಧಿಯಲ್ಲಿ ದೇಶಿ ಗ್ರಾಹಕರ ಮನ ಗೆಲ್ಲುವಲ್ಲಿ ಸಫಲವಾಯಿತು.

ಬಂಡವಾಳ ಸೆಳೆಯಿತು ಫ್ಲಿಪ್‌ಕಾರ್ಟ್!!

ಬಂಡವಾಳ ಸೆಳೆಯಿತು ಫ್ಲಿಪ್‌ಕಾರ್ಟ್!!

ಆರಂಭದಲ್ಲಿ ಚಿಕ್ಕದಾಗಿಯೇ ಮಾರುಕಟ್ಟೆಗೆ ಕಾಲಿಟ್ಟ ಫ್ಲಿಪ್‌ಕಾರ್ಟ್ ಸಂಸ್ಥೆ ತನ್ನ ವಹಿವಾಟು ವಿಸ್ತರಿಸಲು ಇತರ ಬಂಡವಾಳ ಹೂಡಿಕೆದಾರರ ನೆರವು ಪಡೆಯತೊಡಗಿತು. ಮೊದಲಿಗೆ ಅಸೆಲ್‌ ಪಾರ್ಟನರ್ಸ್‌ ಸಂಸ್ಥೆಯು ₹ 5 ಕೋಟಿಗಳಷ್ಟು ಬಂಡವಾಳ ತೊಡಗಿಸಿತು. ಆನಂತರ ಅಮೆರಿಕದ ಟೈಗರ್‌ ಗ್ಲೋಬಲ್‌, ಟೆನ್ಸೆಂಟ್, ಇ-ಬೇ, ಮೈಕ್ರೊಸಾಫ್ಟ್‌ ಮತ್ತು ಸಾಫ್ಟ್‌ಬ್ಯಾಂಕ್‌ ಫ್ಲಿಪ್‌ಕಾರ್ಟ್‌ನಲ್ಲಿ ಬಂಡವಾಳ ತೊಡಗಿಸಿದವು.

ತಿರುವು ನೀಡಿದ್ದು ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್‌!!

ತಿರುವು ನೀಡಿದ್ದು ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್‌!!

2007ರಲ್ಲಿಯೇ ಫ್ಲಿಪ್‌ಕಾರ್ಟ್ ಹುಟ್ಟಿದರೂ ಸಹ ಫ್ಲಿಪ್‌ಕಾರ್ಟ್ ಪ್ರವರ್ಧಮಾನಕ್ಕೆ ಬಂದಿದ್ದು 2010ರಲ್ಲಿ. 2010ರಲ್ಲಿ ಫ್ಲಿಪ್‌ಕಾರ್ಟ್‌ ಸಂಸ್ಥೆಯು ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್‌ ಸರಕುಗಳ ಮಾರಾಟಕ್ಕೆ ತೆರೆದುಕೊಂಡಿದ್ದರಿಂದ, ಫ್ಲಿಪ್‌ಕಾರ್ಟ್ ವಹಿವಾಟಿಗೆ ಇದು ದೊಡ್ಡ ತಿರುವು ನೀಡಿತು. ಸಂಸ್ಥೆಯ ಲಾಭಕ್ಕೆ ಈ ಸರಕುಗಳು ಗಮನಾರ್ಹ ಕೊಡುಗೆ ನೀಡಿದವು.

ಕ್ಯಾಶ್‌ ಆನ್ ಡೆಲಿವರಿ!!

ಕ್ಯಾಶ್‌ ಆನ್ ಡೆಲಿವರಿ!!

ಮನೆ ಬಾಗಿಲಿಗೆ ಸರಕು ಪೂರೈಸಿದ ನಂತರವೇ ಹಣ ಪಾವತಿಸುವ ಸೌಲಭ್ಯವನ್ನೂ ಸಹ ಫ್ಲಿಪ್‌ಕಾರ್ಟ್ 2010ರಲ್ಲಿ ಜಾರಿಗೆ ತಂದಿತು. ಇದು ದೇಶೀಯ ಗ್ರಾಹಕರಲ್ಲಿ ನಂಬಿಕೆ ಉಳಿದುಕೊಳ್ಳುವಂತೆ ಮಾಡಿತು. ಸರಕುಗಳನ್ನು ಗ್ರಾಹಕರಿಗೆ ತಲುಪಿಸಲು ಪ್ರತ್ಯೇಕ ‘ಇಕಾರ್ಟ್' ಘಟಕವನ್ನು ಫ್ಲಿಪ್‌ಕಾರ್ಟ್ ಸ್ಥಾಪಿಸಿತ್ತು.

How to send WhatsApp Payments invitation to others - GIZBOT KANNADA
ಬಿಗ್ ಬಿಲಿಯನ್ ಡೇ!!

ಬಿಗ್ ಬಿಲಿಯನ್ ಡೇ!!

ಆನ್‌ಲೈನ್ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಫ್ಲಿಪ್‌ಕಾರ್ಟ್ ಈ ಪರಿ ಹೆಸರುಗಳಿಸಲು ಕಾರಣ ಫ್ಲಿಪ್‌ಕಾರ್ಟ್ ಮೊದಲು ಆಯೋಜಿಸಿದ ಬಿಗ್ ಬಿಲಿಯನ್ ಡೇ.! ಫ್ಲಿಪ್‌ಕಾರ್ಟ್ ಆಯೋಜಿಸಿದ ಕೇವಲ ಒಂದು ಮಾರಾಟ ಹಬ್ಬ ಫ್ಲಿಪ್‌ಕಾರ್ಟ್ ಅನ್ನು ಇಡೀ ದೇಶವೇ ನೋಡುವಂತೆ ಮಾಡಿತು. ಆ ನಂತರ ಫ್ಲಿಪ್‌ಕಾರ್ಟ್ ಎಂದೂ ಕೂಡ ಹಿಂತಿರುಗಿ ನೋಡಲಿಲ್ಲ.

ಪ್ರಭಾವಿಗಳಾದರೂ ಸಚಿನ್‌ ಮತ್ತು ಬಿನ್ನಿ ಬನ್ಸಲ್!!

ಪ್ರಭಾವಿಗಳಾದರೂ ಸಚಿನ್‌ ಮತ್ತು ಬಿನ್ನಿ ಬನ್ಸಲ್!!

2016ರಲ್ಲಿ ಫ್ಲಿಪ್‌ಕಾರ್ಟ್‌ ಸಂಸ್ಥೆಯ ನೋಂದಾಯಿತ ಗ್ರಾಹಕರ ಸಂಖ್ಯೆ 10 ಕೋಟಿಗೆ ತಲುಪಿತು. ಆ ಸಮಯದಲ್ಲಿ ಟೈಮ್‌ ನಿಯತಕಾಲಿಕೆಯು ಗುರುತಿಸಿದ ವಿಶ್ವದ 100 ಮಂದಿ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸಚಿನ್‌ ಮತ್ತು ಬಿನ್ನಿ ಬನ್ಸಲ್ ಅವರು ಸೇರಿದ್ದರು ಎಂದರೆ ಫ್ಲಿಪ್‌ಕಾರ್ಟ್ ಯಶೋಗಾತೆ ಎಲ್ಲಿಗೆ ಬೆಳೆದಿತ್ತು ಎಂಬುದನ್ನು ನೀವು ತಿಳಿಯಬಹುದು.

ಕೈತಪ್ಪಿತು ಫ್ಲಿಪ್‌ಕಾರ್ಟ್!!

ಕೈತಪ್ಪಿತು ಫ್ಲಿಪ್‌ಕಾರ್ಟ್!!

ಭಾರೀ ಮೊತ್ತದ ಹಣಕ್ಕೆ ದೇಶೀ ಕಂಪೆನಿ ಫ್ಲಿಪ್‌ಕಾರ್ಟ್ ವಿದೇಶಿ ಕಂಪೆನಿ ಪಾಲಾಗಿರುವುದು ಕಂಪೆನಿ ಯಶೋಗಾತೆಯನ್ನು ಸಾರುತ್ತಿದೆ. ಆದರೆ, ವಿದೇಶಿ ಬಂಡವಾಳದ ಮುಂದೆ ಫ್ಲಿಪ್‌ಕಾರ್ಟ್ ನೆಲಕಚ್ಚಿದೆ. ಫ್ಲಿಪ್‌ಕಾರ್ಟ್ ಕಂಪೆನಿ ಅಮೆರಿಕದ ರಿಟೇಲ್ ದೈತ್ಯ ಸಂಸ್ಥೆ ವಾಲ್‌ಮಾರ್ಟ್ ತೆಕ್ಕೆಗೆ ಬಿದ್ದ ನಂತರ, ಕಂಪೆನಿಯ ಹಿಡಿತ ಭಾರತೀಯರಿಂದ ಕೈತಪ್ಪಿಹೋಗಿದೆ.

Best Mobiles in India

English summary
If Sachin Bansal and Binny Bansal had gotten better marks they might never have met and Flipkart, the company the duo founded in 2007, might never have come to life. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X