ನಿಮ್ಮ ಫೋನ್‌ ಕರೆಗಳನ್ನು ಬೇರೆಯವರು ಕದ್ದು ಕೇಳುತ್ತಿದ್ದಾರಾ?..ಹೀಗೆ ತಿಳಿಯಿರಿ?

|

ನೀವು ಸ್ಮಾರ್ಟ್‌ಫೋನ್‌ನಲ್ಲಿ ಮಾತನಾಡುವಾಗ ನಿಮ್ಮ ಫೋನ್‌ ಕರೆಯನ್ನು ಯಾರೋ ಆಲಿಸುತ್ತಿದ್ದಾರೆ ಎಂದು ಅನಿಸುತಿದೆಯಾ? ನಿಮ್ಮ ಫೋನ್‌ ಕರೆಗಳ ಸುರಕ್ಷತೆಯ ಬಗ್ಗೆ ನಿಮಗೆ ಅನುಮಾನ ಬಂದಿದೆಯಾ? ಇಂತಹ ಸನ್ನಿವೇಶದಲ್ಲಿ ನಿಮ್ಮ ಕರೆಗಳ ಸುರಕ್ಷತೆಯನ್ನು ಮಾಡೋದು ಹೇಗೆ ಅನ್ನೊ ಗೊಂದಲ ಎಲ್ಲರಿಗೂ ಬಂದೆ ಬರುತ್ತದೆ. ಆದರೆ ಇದಕ್ಕೆಲ್ಲಾ ಕಾರಣ ನಿಮ್ಮ ಫೋನ್‌ನಲ್ಲಿರುವ ಕೆಲವು ಸೆಟ್ಟಿಂಗ್ಸ್‌ನಲ್ಲಿ ಆಗಿರುವ ಬದಲಾವಣೆಗಳ ಪ್ರಭಾವ ಅನ್ನೊದು ತಿಳಿಯೋದೆ ಇಲ್ಲ. ಕೆಲವೊಮ್ಮ ವಂಚಕರಿಂದಲೂ ನಿಮ್ಮ ಫೋನ್‌ ಕರೆಗಳು ಹ್ಯಾಕ್‌ ಆಗಿರುವ ಸಾಧ್ಯತೆಯಿರುತ್ತದೆ.

ಫೋನ್‌

ಹೌದು, ನಿಮ್ಮ ಫೋನ್‌ ಕರೆಗಳ ಸುರಕ್ಷತೆಯ ಬಗ್ಗೆ ನಿಮಗೆ ಅನುಮಾನ ಬಂದಿದ್ದರೆ ಸುರಕ್ಷತೆಯ ಬಗ್ಗೆ ಗಮನ ನೀಡುವುದು ಉತ್ತಮ. ನಿಮ್ಮ ಕರೆಗಳನ್ನು ಕದ್ದು ಕೇಳುವ ವಂಚಕರು ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಖಾಸಗಿ ಸಂಭಾಷಣೆಗಳನ್ನು ರೆಕಾರ್ಡ್‌ ಮಾಡುವ ಸಾಧ್ಯತೆಯಿದೆ. ಇದರ ನಡುವೆ ನಿಮ್ಮ ಫೋನ್‌ನಲ್ಲಿರುವ ಕೆಲವು ಸೆಟ್ಟಿಂಗ್ಸ್‌ ಕೂಡ ನಿಮ್ಮ ಮೊಬೈಲ್‌ ಕರೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದರಿಂದ ನಿಮ್ಮ ಫೋನ್‌ನಲ್ಲಿ ನೀವು ಮಾಡಬೇಕಾದ ಅಗತ್ಯ ಸೆಟ್ಟಿಂಗ್ಸ್‌ ಬದಲಾವಣೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಸಾಮಾ

ಸಾಮಾನ್ಯವಾಗಿ ನಿಮಗೆ ಕರೆ ಬಂದಾಗ ನಿಮ್ಮ ಫೋನ್‌ ಸಂಭಾಷಣೆಯನ್ನು ಯಾರೋ ಕೇಳುತ್ತಿದ್ದಾರೆ ಎಂಬ ಭಾವನೆ ಆಗಾಗ ಬರುವುದು ಸಹಜ. ಹಾಗಂತ ಎಲ್ಲಾ ಸಮಯದಲ್ಲಿಯೂ ನಿಮ್ಮ ಕರೆಯನ್ನು ವಂಚಕರು ಕೇಳುತ್ತಿದ್ದಾರೆ ಅಂತಾ ಭಾವಿಸೋದು ತಪ್ಪಾಗುತ್ತದೆ. ಕೆಲವೊಮ್ಮೆ ನಿಮ್ಮ ಮೊಬೈಲ್‌ ಸೆಟ್ಟಿಂಗ್ಸ್‌ನಲ್ಲಿ ಆಗಿರುವ ಬದಲಾವಣೆಯೂ ಕೂಡ ನಿಮ್ಮ ಫೋನ್‌ ಸಂಭಾಷಣೆ ರೆಕಾರ್ಡ್‌ ಆಗಿರುವಂತೆ ಮಾಡುತ್ತದೆ. ಇದಕ್ಕೆ ಡಿಜಿಟಲ್‌ ಅಸಿಸ್ಟೆಂಟ್‌ ಆಗಿರುವ ಗೂಗಲ್‌ ಅಸಿಸ್ಟೆಂಟ್‌ ಮತ್ತು ಆಪಲ್‌ನ ಸಿರಿ ಮೂಲ ಕಾರಣ ಎನ್ನಬಹುದಾಗಿದೆ. ಹಾಗಾದ್ರೆ ಇದನ್ನು ತಪ್ಪಿಸೋದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳನ್ನು ತಿಳಿಯಿರಿ.

ನಿಮ್ಮ ಫೋನ್‌ ಕರೆಯನ್ನು ಬೇರೆಯವರು ಆಲಿಸದಂತೆ ಮಾಡಲು ಹೀಗೆ ಮಾಡಿ!

ನಿಮ್ಮ ಫೋನ್‌ ಕರೆಯನ್ನು ಬೇರೆಯವರು ಆಲಿಸದಂತೆ ಮಾಡಲು ಹೀಗೆ ಮಾಡಿ!

* ನೀವು ಐಫೋನ್‌ ಬಳಕೆದಾರರಾಗಿದ್ದರೆ ನಿಮ್ಮ ಐಫೋನ್‌ನಲ್ಲಿ "ಸೆಟ್ಟಿಂಗ್ಸ್‌" ಅಪ್ಲಿಕೇಶನ್‌ ತೆರೆಯಿರಿ. ಇದರಲ್ಲಿ ಸಿರಿ ಮತ್ತು ಸರ್ಚ್‌ ಅನ್ನು ಆಯ್ಕೆ ಮಾಡಿ. ಇದೀಗ ನೀವು "ಹೇ ಸಿರಿ" ಮತ್ತು "ಸಿರಿಗಾಗಿ ಹೋಮ್ ಒತ್ತಿರಿ" ಆಯ್ಕೆಗಳನ್ನು ಟಾಗಲ್ ಮಾಡಿರಿ. ನೀವು ಸಿರಿ ಹೋಮ್ ಬಟನ್ ಟ್ಯಾಪ್‌ ಮಾಡಿದರೆ ನಿಮ್ಮ ಧ್ವನಿಯನ್ನು ಆಕ್ಟಿವ್‌ಗೊಳಿಸುವುದರಿಂದ ಸಿರಿ ನಿಮ್ಮ ಫೋನ್‌ ಸಂಭಾಷಣೆಯನ್ನು ರೆಕಾರ್ಡ್ ಮಾಡುವುದು ಸ್ಟಾಪ್‌ ಆಗಲಿದೆ.

* ಒಂದು ವೇಳೆ ಐಫೋನ್‌ನಲ್ಲಿ ನೀವು ಸಿರಿಯನ್ನು ಡಿಆ್ಯಕ್ಟಿವೇಟ್‌ ಮಾಡಲು ಬಯಸಿದರೆ "ಸೆಟ್ಟಿಂಗ್ಸ್‌" ತೆರೆಯಿರಿ ಅಪ್ಲಿಕೇಶನ್‌ನಲ್ಲಿ "ಸಾಮಾನ್ಯ" ವಿಭಾಗಕ್ಕೆ ಹೋಗಿ ಮತ್ತು "ಸಿರಿ" ಅನ್ನು ಆಯ್ಕೆ ಮಾಡಬಹುದು. ಅಲ್ಲಿಂದ, ನೀವು "ಸಿರಿ" ಸ್ವಿಚ್ ಅನ್ನು ಟಾಗಲ್ ಮಾಡಬಹುದು.

ಆಂಡ್ರಾಯ್ಡ್‌

* ನೀವು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಆಗಿದ್ದರೆ ಗೂಗಲ್‌ ಅಸಿಸ್ಟೆಂಟ್‌ ನಿಮ್ಮ ಕಾಲ್‌ ರೆಕಾರ್ಡಿಂಗ್‌ ಮಾಡೋದನ್ನು ಆಫ್‌ ಮಾಡಿ. ಇದಕ್ಕಾಗಿ ನೀವು ಫೋನ್‌ನಲ್ಲಿ ಸೆಟ್ಟಿಂಗ್ಸ್‌ ತೆರೆಯಿರಿ. ಇದರಲ್ಲಿ ಗೂಗಲ್‌ ಆಯ್ಕೆ ಮಾಡಿ, ನಂತರ ಅಕೌಂಟ್‌ ಆಂಡ್‌ ಪ್ರೈವೆಸಿ ಆಯ್ಕೆ ಮಾಡಿರಿ. ನಂತರ "ಗೂಗಲ್‌ ಅಕೌಂಟ್‌" ಆಯ್ಕೆಮಾಡಿ. ಇದೀಗ "ಡೇಟಾ ಮತ್ತು ವೈಯಕ್ತೀಕರಣ" ವಿಭಾಗದ ಅಡಿಯಲ್ಲಿ, ನೀವು "ಮ್ಯಾನೇಜ್‌ ಯುವರ್ ಆ್ಯಕ್ಟಿವಿಟಿ ಕಂಟ್ರೋಲ್ಸ್‌ ಅನ್ನು ಆಯ್ಕೆ ಮಾಡಬೇಕಾಗುತ್ತದೆ ಅಲ್ಲದೆ "ವಾಯ್ಸ್‌ ಮತ್ತು ಆಡಿಯೋ ಆಕ್ಟಿವಿಟಿ" ಟಾಗಲ್ ಅನ್ನು ಆಫ್ ಮಾಡಬಹುದು.

* ಒಂದು ವೇಳೆ ಗೂಗಲ್‌ ಅಸಿಸ್ಟೆಂಟ್‌ ಅನ್ನು ಸಂಪೂರ್ಣವಾಗಿ ಡಿ ಆ್ಯಕ್ಟಿವಿಟಿ ಮಾಡಲು ಬಯಸಿದರೆ ಫೋನ್‌ನಲ್ಲಿ ಸೆಟ್ಟಿಂಗ್ಸ್‌ ತೆರೆಯಬೇಕಾಗುತ್ತದೆ. ನಂತರ "ಅಪ್ಲಿಕೇಶನ್‌ಗಳು ಮತ್ತು ಅಧಿಸೂಚನೆಗಳು" ವಿಭಾಗಕ್ಕೆ ಹೋಗಿರಿ. ಇದರಲ್ಲಿ ಗೂಗಲ್‌ ಅಪ್ಲಿಕೇಶನ್‌ ಅನ್ನು ಆಯ್ಕೆ ಮಾಡಬೇಕು, ಇದಾದ ನಂತರ ಗೂಗಲ್‌ ಅಸಿಸ್ಟೆಂಟ್‌ ಸ್ವಿಚ್‌ ಅನ್ನು ಟಾಗಲ್‌ ಮಾಡಬಹುದು.

ಡೌನ್‌ಲೋಡ್‌

ಈ ಮೇಲಿನ ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ ಕರೆಯನ್ನು ಬೇರೆಯವರು ಆಲಿಸದಂತೆ ತಡೆಯಬಹುದಾಗಿದೆ. ಇದಲ್ಲದೆ ಮಾಲ್‌ವೇರ್‌ಗಳನ್ನು ಹೊಂದಿರುವ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡುವುದನ್ನು ತಪ್ಪಿಸಬೇಕು. ಯಾವುದೇ ಅನ್ಯ ಮೂಲದಿಂದ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡುವುದನ್ನು ಸಂಪೂರ್ಣವಾಗಿ ತ್ಯಜಿಸುವುದು ಸೂಕ್ತವಾಗಿದೆ.

Best Mobiles in India

English summary
If your phone listening to your private conversations? How to Protect

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X