ಭಾರತದಲ್ಲಿ 5G ಕ್ಲೌಡ್ ಗೇಮಿಂಗ್ ಸೇವೆ ಪರಿಚಯಿಸಿದ ವಿ ಟೆಲಿಕಾಂ!

|

ವೊಡಾಫೋನ್‌ ಐಡಿಯಾ ದೇಶದ ಅಗ್ರ ಮೂರು ಟೆಲಿಕಾಂಗಳಲ್ಲಿ ಒಂದಾಗಿದೆ. ತನ್ನ ಆಕರ್ಷಕ ಪ್ರಿಪೇಯ್ಡ್‌ ಮತ್ತು ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳ ಮೂಲಕ ಜಿಯೋ, ಏರ್‌ಟೆಲ್‌ ಟೆಲಿಕಾಂಗಳ ಜೊತೆಗೆ ಪೈಪೋಟಿ ನಡೆಸುತ್ತಿದೆ. ಇದಲ್ಲದೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಹೊಸ ಹೊಸ ಪ್ಲಾನ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಬಳಕೆದಾರರಿಗೆ 5G ಕ್ಲೌಡ್‌ ಗೇಮಿಂಗ್‌ ಅನುಭವವನ್ನು ನೀಡಲಿ ಮುಂದಾಗಿದೆ. ಇದಕ್ಕಾಗಿ ಗೇಮಿಂಗ್ ಪ್ಲಾಟ್‌ಫಾರ್ಮ್ ಕೇರ್‌ಗೇಮ್‌ನೊಂದಿಗೆ ಪಾಲುದಾರಿಕೆಯನ್ನು ಪ್ರಕಟಿಸಿದೆ.

ವಿ ಟೆಲಿಕಾಂ

ಹೌದು, ವಿ ಟೆಲಿಕಾಂ ಭಾರತದಲ್ಲಿ 5G ಕ್ಲೌಡ್‌ ಗೇಮಿಂಗ್‌ ಸರ್ವಿಸ್‌ ಅನ್ನು ಪರಿಚಯಿಸಿದೆ. 5G ಯ ಕಡಿಮೆ ಲೇಟೆನ್ಸಿ ತಂತ್ರಜ್ಞಾನದೊಂದಿಗೆ, ಕ್ಲೌಡ್ ಗೇಮಿಂಗ್ ಉದ್ಯಮವು ಇನ್ನಷ್ಟು ವಿಶಾಲವಾಗಲಿದೆ ಎಂದು ವಿ ಟೆಲಿಕಾಂ ಹೇಳಿದೆ. ಸದ್ಯ ದೇಶದಲ್ಲಿ ಆನ್‌ಲೈನ್‌ ಗೇಮಿಂಗ್‌ ಉದ್ಯಮ ವೇಗವಾಗಿ ಬೆಳೆಯುತ್ತಿರುವುದರಿಂದ ವಿ ಟೆಲಿಕಾಂ 5G ಕ್ಲೌಡ್‌ ಗೇಮಿಂಗ್‌ ಸರ್ವಿಸ್‌ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಹಾಗಾದ್ರೆ ವಿ ಟೆಲಿಕಾಂನ 5G ಕ್ಲೌಡ್‌ ಗೇಮಿಂಗ್‌ ಸರ್ವಿಸ್‌ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

 5G ಕ್ಲೌಡ್‌

ಭಾರತದಲ್ಲಿ ವಿ ಟೆಲಿಕಾಂ 5G ಕ್ಲೌಡ್‌ ಗೇಮಿಂಗ್‌ ಸರ್ವಿಸ್‌ ಅನ್ನು ಪರಿಚಯಿಸುವ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ. ಆನ್‌ಲೈನ್ ಗೇಮಿಂಗ್ ಉದ್ಯಮ 5G ಆಗಮನದ ಮೂಲಕ ಇನ್ನಷ್ಟು ಪಟ್ಟು ಬೆಳೆಯುವ ನಿರೀಕ್ಷೆಯನ್ನು ಇಡಲಾಗಿದೆ. ಇದೇ ಕಾರಣಕ್ಕೆ ವಿ ಟೆಲಿಕಾಂ 5G ಕ್ಲೌಡ್‌ ಗೇಮಿಂಗ್‌ ಸರ್ವಿಸ್‌ ಅನ್ನು ಪರಿಚಯಿಸಿದೆ. ನಮ್ಮ ಗ್ರಾಹಕರೊಂದಿಗೆ ಹೆಚ್ಚಿನ ಎಂಗೇಜ್‌ ಅನ್ನು ಹೊಂದುವುದಕ್ಕೆ ಮೊಬೈಲ್ ಗೇಮಿಂಗ್ ನಮಗೆ ಪ್ರಮುಖ ಕಾರ್ಯಸೂಚಿಯಾಗಿದೆ ಎಂದು ವೊಡಾಫೋನ್ ಐಡಿಯಾದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಅವನೀಶ್ ಖೋಸ್ಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೆಲವು

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಆನ್‌ಲೈನ್‌ ಗೇಮರ್‌ಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಗಮನಿಸಬಹುದಾಗಿದೆ. ಅದರಲ್ಲೂ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ವರದಿಯ ಪ್ರಕಾರ, ಪ್ರಸ್ತುತ 300 ಮಿಲಿಯನ್ ಮೊಬೈಲ್ ಗೇಮರ್‌ಗಳ ಬಳಕೆದಾರರನ್ನು ಭಾರತದಲ್ಲಿ ಕಾಣಬಹುದಾಗಿದೆ. ಇದಲ್ಲದೆ 2025ರ ವೇಳೆಗೆ $5 ಶತಕೋಟಿ ಸಂಖ್ಯೆಯನ್ನು ದಾಟಲಿದೆ ಎಂದು ಹೇಳಲಾಗಿದೆ. ಇದಕ್ಕೆ ಪೂರಕವಾಗಿ ನಮ್ಮ ಮೊಬೈಲ್‌ ಕ್ಲೌಡ್‌ ಗೇಮಿಂಗ್‌ ಟೆಕ್ನಾಲಜಿ ಸಹಾಯ ಮಾಡಲಿದೆ ಎಂದು ವಿ ಟೆಲಿಕಾಂ ಹೇಳಿದೆ.

ವಿ ಟೆಲಿಕಾಂ

ವಿ ಟೆಲಿಕಾಂ ತನ್ನ 5G ಕ್ಲೌಡ್‌ ಗೇಮಿಂಗ್‌ ಸರ್ವಿಸ್‌ ಮೂಲಕ ಮೊಬೈಲ್‌ ಗೇಮರ್‌ಗಳು RPG, MOBA, ಬ್ಯಾಟಲ್ ರಾಯಲ್, ಸ್ಟ್ರಾಟಜಿ, ಸಿಮ್ಯುಲೇಶನ್, FPS, ರೇಸಿಂಗ್ ಪ್ರಕಾರದ ಗೇಮ್‌ಗಳನ್ನು ಆನಂದಿಸಬಹುದು ಎಂದು ಅಥುಯಿಲ್, ಕೇರ್‌ಗೇಮ್‌ನ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ಬೆಂಜಮಿನ್ ಹೇಳಿದ್ದಾರೆ. ಇನ್ನು ಈ ಗೇಮಿಂಗ್‌ ಸೇವೆಯನ್ನು ಅಕ್ಟೋಬರ್ 1-4 ರಿಂದ ನವದೆಹಲಿಯಲ್ಲಿ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) ನಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಹೇಳಲಾಗಿದೆ.

ಟೆಲಿಕಾಂ

ಇನ್ನು ಇದೇ ಸಮಯದಲ್ಲಿ ಭಾರತದಲ್ಲಿ 5G ಸೇವೆಯನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ಭಾರತದಲ್ಲಿ 5G ಸೇವೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ಏರ್‌ಟೆಲ್‌ ಮತ್ತು ಜಿಯೋ ಟೆಲಿಕಾಂಗಳು 5G ಸೇವೆ ಪರಿಚಯಿಸುವ ನಿರೀಕ್ಷೆಯಿದೆ. ಪ್ರಾರಂಬಿಕ ಹಂತದಲ್ಲಿ ದೇಶದ ಪ್ರಮುಖ ಮಹಾನಗರಗಳಲ್ಲಿ ಪ್ರಾರಂಬವಾಗಲಿರುವ 5G ಸೇವೆ ನಂತರದ ದಿನಗಳಲ್ಲಿ ಹಂತಹಂತವಾಗಿ ವಿಸ್ತರಣೆಯಾಗಲಿದೆ. ಇದಲ್ಲದೆ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ದೇಶದ ಎಲ್ಲಾ ಮೂಲೆಗೂ 5G ಸೇವೆ ತಲುಪಿಸುವುದಾಗಿ ಟೆಲಿಕಾಂ ಕಂಪೆನಿಗಳು ಈಗಾಗಲೇ ಘೋಷಣೆ ಮಾಡಿವೆ.

Best Mobiles in India

English summary
IMC 2022: VI Telecom to launch 5G cloud gaming service in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X