ಈ ವಿಶೇಷ ಆಪ್‌ಗಳು ನಿಮ್ಮ 'ಸಾಮಾಜಿಕ ಜಾಲತಾಣಗಳ' ಬಳಕೆಯನ್ನು ಬದಲಿಸುತ್ತವೆ!!

|

ವಿಶ್ವದಲ್ಲಿ ಅಂತರ್ಜಾಲ ಬಳಸುವ ಅರ್ಧದಷ್ಟು ಮಂದಿ ಈಗ ಸಾಮಾಜಿಕ ತಾಣಗಳನ್ನು ಬಳಸುತ್ತಾರೆ. ಸಾಮಾಜಿಕ ಮಾಧ್ಯಮವು ಸಮಕಾಲೀನ ಜಗತ್ತಿನ ಮುಂಚೂಣಿ ಮಾಧ್ಯಮವಾಗಿದ್ದು, ದಿನನಿತ್ಯ ಸಾವಿರಾರು ಮಂದಿ ಸಾಮಾಜಿಕ ಜಾಲತಾಣಗಳಿಗೆ ಆಕರ್ಷಿತರಾಗುತ್ತಿದ್ದಾರೆ. ಹಾಗಾಗಿ, ಇದನ್ನು ಅಂತರ್ಜಾದಲ್ಲಿ ಸೋಶಿಯಲ್ ಮೀಡಿಯಾ ಯುಗ ಎಂದು ಕರೆಯಬಹುದು.

2017ರ ಮೂರನೇ ತ್ರೈಮಾಸಿಕದ ಅಂತ್ಯದ ಅಂಕಿ ಅಂಶಗಳ ಪ್ರಕಾರ, ಯೂಟ್ಯೂಬ್ ಮತ್ತು ಫೇಸ್‌ಬುಕ್ ವಿಶ್ವದ ಅತ್ಯಂತ ಜನಪ್ರಿಯ ಜಾಲತಾಣಗಳಾಗಿ ಗುರುತಿಸಿಕೊಂಡಿವೆ. ಅಂತರ್ಜಾಲ ಬಳಸುವ ಶೇ.30ರಷ್ಟು ಮಂದಿ ಈ ಎರಡು ಜಾಲತಾಣಗಳ ಬಳಕೆ ಮಾಡುತ್ತಿದ್ದರೆ, ಶೇ. 28 ರಷ್ಟು ಜನರು ಬಳಕೆ ಮಾಡುತ್ತಿರುವ ವಾಟ್ಸ್‌ಅಪ್ ಮೂರನೇ ಸ್ಥಾನ ಪಡೆದುಕೊಂಡಿದೆ.

ಈ ವಿಶೇಷ ಆಪ್‌ಗಳು ನಿಮ್ಮ 'ಸಾಮಾಜಿಕ ಜಾಲತಾಣಗಳ' ಬಳಕೆಯನ್ನು ಬದಲಿಸುತ್ತವೆ!!

ಹಾಗಾಗಿ, ನಾವಿಂದು ಈ ಲೇಖನದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುವುದು ಹೇಗೆ ಎಂಬುದನ್ನು ನಿಮಗೆ ತಿಳಿಸಿಕೊಡುತ್ತೇವೆ. ಈ ಕೆಲವು ವಿಶೇಷ ಆಪ್‌ಗಳು ನಿಮ್ಮ ಸಾಮಾಜಿಕ ತಾಣಗಳ ಅನುಭವವನ್ನು ಮತ್ತಷ್ಟು ಉತ್ತಮವಾಗಿಸಲಿವೆ. ಏಕೆಂದರೆ, ಇವುಗಳ ಬಳಕೆ ಈಗಾಗಲೇ ಮಿಲಿಯನ್ ಸಂಖ್ಯೆಯನ್ನು ದಾಟಿವೆ.

ಫೇಸ್‌ಮೋಜಿ ಆಪ್!

ಫೇಸ್‌ಮೋಜಿ ಆಪ್!

ಪ್ರಖ್ಯಾತ ಆಪ್ ಆಗಿರುವ ಫೇಸ್‌ಮೋಜಿ ತನ್ನ ಬಳಕೆದಾರರಿಗಾಗಿ 1200 ಕ್ಕಿಂತ ಹೆಚ್ಚು ಎಮೊಜಿಗಳು, 1000+ ಸ್ಟಿಕ್ಕರ್‌ಗಳು, 50ಕ್ಕೂ ಹೆಚ್ಚು ಕಾವಮೋಜಿಗಳು, ಲೆಕ್ಕವಿಲ್ಲದಷ್ತು ಜಿಫ್ (GIF) ಮತ್ತು ಸ್ಕಿನ್‌ಗಳನ್ನು ನೀಡಲಿದೆ. ಬಳಕೆದಾರರು ತಮ್ಮ ದೈನಂದಿನ ಪರಿಣಾಮಕಾರಿ ಸಂಭಾಷಣೆಗಾಗಿ ಈ ಫೇಸ್‌ಮೋಜಿ ಆಪ್ ಅನ್ನು ಬಳಸಿಕೊಳ್ಳಬಹುದಾಗಿದೆ.

ಫೇಸ್‌ಮೋಜಿ ಬಳಕೆ ಹೇಗೆ?

ಫೇಸ್‌ಮೋಜಿ ಬಳಕೆ ಹೇಗೆ?

ಫೇಸ್‌ಮೋಜಿ ಜಾಲತಾಣದ ಕೀಬೋರ್ಡ್ 30ಕ್ಕೂ ಹೆಚ್ಚು ಭಾಷೆಗಳಲ್ಲಿ ಚಾಟ್ ಮಾಡುವ ಸೌಲಭ್ಯ ಹೊಂದಿದೆ. ಇದರಲ್ಲಿರುವ ಎಮೊಜಿಗಳ ಸಹಾಯದಿಂದ ಬಳಕೆದಾರರು ಸುಲಭವಾಗಿ, ಸರಾಗವಾಗಿ ತಮ್ಮ ಭಾವನೆ ವ್ಯಕ್ತಗೊಳಿಸಬಹುದಾಗಿದೆ. ಇದುವರೆಗೆ ಫೇಸ್‌ಮೋಜಿ ಕೀಬೋರ್ಡ್ ಜಾಗತಿಕವಾಗಿ 30 ದಶಲಕ್ಷ ಡೌನ್ ಲೋಡ್ ಗಳನ್ನು ಕಂಡಿದೆ.

ಮ್ಯೂಸಿಕಲಿ ಆಪ್

ಮ್ಯೂಸಿಕಲಿ ಆಪ್

ಮ್ಯೂಸಿಕಲಿ ಆಪ್ ನಿಮಗೆ ಸುಲಭ ಎಡಿಟಿಂಗ್ ಸಾಧನಗಳಿಂದ ಚಿಕ್ಕಚಿಕ್ಕ ವೀಡಿಯೋಗಳನ್ನು ತಯಾರಿಸಲು ನೆರವಾಗಲಿದೆ.ನೀವು ತಯಾರು ಮಾಡಿದ ವೀಡಿಯೋವನ್ನುಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಳ್ಳುವುದಕ್ಕೆ ಇದು ನೆರವಾಗುತ್ತದೆ. ಸಂಗೀತ ಮತ್ತು ಧ್ವನಿ ಗ್ರಂಥಾಲಯ ಈ ಆಪ್ ನಿಮ್ಮ ಮೊಬೈಲ್‌ನಲ್ಲಿದ್ದರೆ ಚೆನ್ನ.

ಮ್ಯೂಸಿಕಲಿ ಬಳಕೆ ಹೇಗೆ?

ಮ್ಯೂಸಿಕಲಿ ಬಳಕೆ ಹೇಗೆ?

ಮ್ಯೂಸಿಕಲಿ ಆಪ್‌ನಲ್ಲಿ ಸ್ಟಿಕ್ಕರ್‌ಗಳು, ಫೇಸ್ ಫಿಲ್ಟರ್ಸ್, ಬ್ಯೂಟಿ ಎಫೆಕ್ಟ್ಸ್ ಫೀಚರ್ಸ್ ಎಲ್ಲವೂ ಇವೆ. ಇದರಲ್ಲಿರುವ ಸಾವಿರಾರು ವೀಡಿಯೋ ತುಣುಕು, ಧ್ವನಿ ಪರಿಣಾಮವನ್ನು ಬಳಸಿಕೊಂಡು ವೀಡಿಯೊಗಳನ್ನು ಸಂಪಾದಿಸಬಹುದು. ಪಾಪ್, ರಾಕ್, ರ್ಯಾಪ್, ಲೆಕ್ಟ್ರಾನಿಕ್, ಆರ್ & ಬಿ, ಕಂಟ್ರಿ, ಮತ್ತು ಇನ್ನೂ ಅನೇಕ ಬಗೆಯ ಹಾಡುಗಳ ಸಂಕಲನ ನಡೆಸಬಹುದು.

ಡ್ಯುಯಲ್ ಸ್ಪೇಸ್

ಡ್ಯುಯಲ್ ಸ್ಪೇಸ್

ವಾಟ್ಸಅಪ್‌ಗೆ ನೇರ ಸ್ಪರ್ಧೆ ಒಡ್ಡುವ ಮೊದಲ ಅಪ್ಲಿಕೇಷನ್ ಎಂಬ ಹೆಸರನ್ನು ಪಡೆದಿರುವ ಡ್ಯುಯಲ್ ಸ್ಪೇಸ್ ಆಪ್ ವಾಟ್ಸ್‌ಅಪ್‌ನಂತೆಯೇ ಸ್ಥಿರತೆ ಒದಗಿಸುತ್ತದೆ ಎಂದು ಖಚಿತವಾಗಿ ಹೇಳಬಹುದು. ನಿಮಗೆ ವಾಟ್ಸ್‌ಅಪ್ ಗಿಂತ ಹೆಚ್ಚಿನ ಅಪ್ಲಿಕೇಷನ್ ಬೇಕೆನಿಸಿದರೆ ನೀವು ಖಂಡಿತಾ ಡ್ಯುಯಲ್ ಸ್ಪೇಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಡ್ಯುಯಲ್ ಸ್ಪೇಸ್ ಬಳಕೆ ಹೇಗೆ?

ಡ್ಯುಯಲ್ ಸ್ಪೇಸ್ ಬಳಕೆ ಹೇಗೆ?

ಡ್ಯುಯಲ್ ಸ್ಪೇಸ್ ಅಪ್ಲಿಕೇಷನ್‌ ಇದ್ದರೆ, ನೀವು ಒಂದೇ ಸ್ಮಾರ್ಟ್‌ಪೋನಿನಲ್ಲಿ ಹಲವು ಖಾತೆಗಳನ್ನು ಬಳಸಬಹುದಾಗಿದೆ. ಈ ಆಪ್‌ ಇದ್ದರೆ ವಿಭಿನ್ನ ಖಾತೆಗಳ ಸಂದೇಶ ಸ್ವಾಗತ ಮತ್ತು ಡೇಟಾ ಶೇಖರಣಾ ಸಮಸ್ಯೆ ಬಗ್ಗೆ ನೀವು ಚಿಂತೆ ಮಾಡಬೇಕಿಲ್ಲ. ಇಲ್ಲಿ ಎಲ್ಲಾ ಖಾತೆಗಳೂ ಸ್ವತಂತ್ರವಾಗಿ ಕೆಲಸ ಮಾಡುವುದರಿಂದ ಒಂದಕ್ಕೊಂದು ಅಡ್ಡಿ ಆಗುವುದಿಲ್ಲ.

Best Mobiles in India

English summary
India ranks second among countries with the most Facebook users, accounting for 11 per cent of global Facebook audiences in April 2017.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X