ಸರ್ಕಾರಿ ನೌಕರರು ಇನ್ಮುಂದೆ ಗೂಗಲ್‌ ಡ್ರೈವ್‌ ಬಳಸುವಂತಿಲ್ಲ! ಯಾಕೆ ಗೊತ್ತಾ?

|

ನೀವು ಸರ್ಕಾರಿ ನೌಕರರಾಗಿದ್ದರೆ ಈ ಸ್ಟೋರಿಯನ್ನು ಓದಲೇಬೇಕು. ಸರ್ಕಾರಿ ನೌಕರರು ಇನ್ಮುಂದೆ ಗೂಗಲ್‌ ಡ್ರೈವ್‌, ಡ್ರಾಪ್‌ಬಾಕ್ಸ್‌ ನಂತಹ ಕ್ಲೌಡ್‌ ಸ್ಟೋರೇಜ್‌ ಅಪ್ಲಿಕೇಶನ್‌ಗಳನ್ನು ಬಳಸುವಂತಿಲ್ಲ. ಇದಲ್ಲದೆ ವಿಪಿಎನ್‌ಗಳನ್ನು ಕೂಡ ಬಳಸುವುದನ್ನು ನಿರ್ಬಂಧಿಸುವಂತೆ ಸರ್ಕಾರ ತನ್ನ ನೌಕರರಿಗೆ ತಿಳಿಸಿದೆ. ಮಾಹಿತಿ ಸೋರಿಕೆ ಮತ್ತು ಸೈಬರ್‌ ಅಟ್ಯಾಕ್‌ ಅನ್ನು ತಡೆಯುವ ಸಲುವಾಗ ಸರ್ಕಾರ ಇಂತಹ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

ಸರ್ಕಾರಿ

ಹೌದು, ಸರ್ಕಾರಿ ನೌಕರರು ಥರ್ಡ್-ಪಾರ್ಟಿ ವಿಪಿಎನ್‌ಗಳು ಮತ್ತು ಗೂಗಲ್‌ಡ್ರೈವ್‌ ಅಪ್ಲಿಕೇಶನ್‌ ಬಳಕೆಯನ್ನು ನಿಲ್ಲಿಸುವಂತೆ ತಿಳಿಸಲಾಗಿದೆ. ಇದಲ್ಲದೆ ಸರ್ಕಾರಿ ನೌಕರರು ಯಾವುದೇ ಆಂತರಿಕ, ಸರ್ಕಾರಿ ಡೇಟಾ ಅಥವಾ ಫೈಲ್‌ಗಳನ್ನು ಗೂಗಲ್‌ ಡ್ರೈವ್‌ನಲ್ಲಿ ಸ್ಟೋರ್‌ ಮಾಡದಂತೆ ಭಾರತ ಸರ್ಕಾರ ಅಧಿಕೃತ ಆದೇಶವನ್ನು ನೀಡಿದೆ. ಯಾವುದೇ ಅನಾಮದೇಯ ಸೇವೆಗಳನ್ನು ಬಳಸದಂತೆ ಈ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹಾಗಾದ್ರೆ ಸರ್ಕಾರಿ ನೌಕರರು ಗೂಗಲ್‌ ಡ್ರೈವ್‌ ಯಾಕೆ ಬಳಸಬಾರದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋರಿಕೆ

ಮಾಹಿತಿ ಸೋರಿಕೆ ಮತ್ತು ಸೈಬರ್‌ ಅಟ್ಯಾಕ್‌ ಅನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಹೊಸ ಆದೇಶ ನೀಡಿದೆ. ಈ ಆದೇಶದಂತೆ ಸರ್ಕಾರಿ ನೌಕರರು ಯಾವುದೇ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಬಾರದು ಎಂದು ಹೇಳಲಾಗಿದೆ. "ಸರ್ಕಾರಿ ಉದ್ಯೋಗಿಗಳಿಗೆ ಸೈಬರ್ ಭದ್ರತಾ ಮಾರ್ಗಸೂಚಿಗಳು" ಎಂಬ ಶೀರ್ಷಿಕೆಯ ಆದೇಶದಲ್ಲಿ, ಭಾರತದಾದ್ಯಂತ ಎಲ್ಲಾ ಸರ್ಕಾರಿ ನೌಕರರು ಸರ್ಕಾರೇತರ ಕ್ಲೌಡ್ ಸೇವೆಗಳನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ಹೇಳಲಾಗಿದೆ. ಈ ಸೇವೆಗಳಲ್ಲಿ ಜನಪ್ರಿಯ ಡ್ರಾಪ್‌ಬಾಕ್ಸ್ ಮತ್ತು ಗೂಗಲ್‌ಡ್ರೈವ್‌ಗಳು ಕೂಡ ಸೇರಿವೆ.

CERT

ಸರ್ಕಾರದ ಇಲಾಖೆಗಳ ಮಾಹಿತಿ ಇತ್ತೀಚಿನ ದಿನಗಳಲ್ಲಿ ಸೈಬರ್‌ ಹ್ಯಾಕರ್‌ಗಳ ಪಾಲಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಅದರಂತೆ CERT-In ಹೊಸ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಖಾಸಗಿ ವಿಪಿಎನ್‌ಗಳು ಮತ್ತು ಕ್ಲೌಡ್‌ ಸ್ಟೋರೇಜ್‌ಗಳಿಗೆ ತಿಳಿಸಿತ್ತು. ಆದರೆ CERT-Inನ ಹೊಸ ಮಾರ್ಗಸೂಚಿಗಳನ್ನು ಅನುಸರಿಸುವುದಕ್ಕೆ ವಿಪಿಎನ್‌ಗಳು ಹಿಂದೆಟು ಹಾಕಿರುವುದರಿಂದ ಸರ್ಕಾರ ಈ ಹೊಸ ಆದೇಶವನ್ನು ಆದೇಶಿಸಿದೆ. ಅದರಂತೆ ಸರ್ಕಾರಿ ನೌಕರರು ಗೂಗಲ್‌ ಡ್ರೈವ್‌ ಹಾಗೂ ಖಾಸಗಿ ವಿಪಿಎನ್‌ಗಳನ್ನು ಬಳಸದಂತೆ ಹೇಳಿದೆ.

ಸರ್ಕಾರಿ

ಇದೀಗ ಸರ್ಕಾರಿ ನೌಕರರು ಥರ್ಡ್‌ ಪಾರ್ಟಿ ವರ್ಚುವಲ್ ಖಾಸಗಿ ನೆಟ್‌ವರ್ಕ್‌ಗಳನ್ನು ಬಳಸಬಾರದು ಎನ್ನಲಾಗಿದೆ. ಇದರಲ್ಲಿ VPN ಮತ್ತು ನಾರ್ಡ್‌ ವಿಪಿಎನ್‌, ಎಕ್ಸ್‌ಪ್ರೆಸ್‌ ವಿಪಿಎನ್‌ ಮತ್ತು Tor ನಂತಹ ಕಂಪನಿಗಳು ಒದಗಿಸುವ ಸೇವೆಗಳನ್ನು ಬಳಸಬಾರದು ಎಂದು ಹೇಳಲಾಗಿದೆ. ಇದರ ಜೊತೆಗೆ, ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರ ಮಾಹಿತಿ ಕೇಂದ್ರ (NIC), ಸರ್ಕಾರಿ ಉದ್ಯೋಗಿಗಳಿಗೆ ತಮ್ಮ ಮೊಬೈಲ್ ಫೋನ್‌ಗಳನ್ನು (ET ಮೂಲಕ) ‘ರೂಟ್' ಅಥವಾ ‘ಜೈಲ್ ಬ್ರೇಕ್' ಮಾಡದಂತೆ ಕೇಳಿಕೊಂಡಿದೆ.

ಸರ್ಕಾರಿ

ಇದಲ್ಲದೆ, ಸರ್ಕಾರಕ್ಕೆ ಸಂಬಂಧಿಸಿದ "ಆಂತರಿಕ ಸರ್ಕಾರಿ ದಾಖಲೆಗಳನ್ನು" ಸ್ಕ್ಯಾನ್ ಮಾಡಲು ಕ್ಯಾಮ್‌ಸ್ಕ್ಯಾನರ್‌ನಂತಹ ಯಾವುದೇ ಬಾಹ್ಯ ಮೊಬೈಲ್ ಅಪ್ಲಿಕೇಶನ್ ಗಳನ್ನು ಬಳಸದಂತೆ ಸೂಚಿಸಲಾಗಿದೆ. ಜೊತೆಗೆ ಯಾವುದೇ ಅಧಿಕೃತ ಸಂವಹನಕ್ಕಾಗಿ ಇಂಟರ್‌ನಲ್‌ ಇಮೇಲ್‌ ಸೇವೆಗಳನ್ನು ಬಳಸದಂತೆ ಹೇಳಿದೆ. ಹಾಗೆಯೇ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಿಕೊಮಡು ವೀಡಿಯೊ ಕಾನ್ಫರೆನ್ಸಿಂಗ್‌ ನಡೆಸದಂತೆಯೂ ಕೂಡ ಸೂಚನೆ ನೀಡಿದೆ.

ಆದೇಶದಿಂದ

ಸರ್ಕಾರದ ಈ ಹೊಸ ಆದೇಶದಿಂದ ದೇಶದಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಏಕರೂಪದ ಸೈಬರ್ ಭದ್ರತಾ ಮಾರ್ಗಸೂಚಿಗಳನ್ನು ಅನುಸರಿಸ ಬೇಕಾಗುತ್ತದೆ. ಸದ್ಯ ಈ ಸೂಚನೆಯನ್ನು ಸರ್ಕಾರಿ ನೌಕರರು ಮಾತ್ರವಲ್ಲದೆ ಸರ್ಕಾರಿ ಇಲಾಖೆಗಳನ್ನು ಕಾರ್ಯನಿರ್ವಹಿಸುವ ಗುತ್ತಿಗೆ, ಹೊರಗುತ್ತಿಗೆ, ತಾತ್ಕಾಲಿಕ ಉದ್ಯೋಗ ಮಾಡುತ್ತಿರುವವರು ಕೂಡ ಅನುಸರಿಸಬೇಕಾಗುತ್ತದೆ. ಇದರಿಂದ ಸರ್ಕಾರದ ಮಾಹಿತಿ ಸೋರಿಕೆಯಾಗದಂತೆ ತಡೆಗಟ್ಟಬಹುದು ಎಂದು ಸರ್ಕಾರ ಹೇಳಿದೆ.

ಸರ್ಕಾರ

ಭಾರತ ಸರ್ಕಾರ ಸೈಬರ್‌ ಭದ್ರತೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಕೆಲದಿನಗಳಿಂದ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಇದೇ ಕಾರಣಕ್ಕೆ ಕೆಲವು ದಿನಗಳ ಹಿಂದೆ ಭಾರತ ಸರ್ಕಾರದ ಐಟಿ ಸಚಿವಾಲಯ ವಿಪಿಎನ್‌ ಕಂಪೆನಿಗಳಿಗೆ ಐದು ವರ್ಷಗಳ ಅವಧಿಗೆ ಬಳಕೆದಾರರ ಡೇಟಾ ಸ್ಟೋರೇಜ್‌ ನೀಡುವಂತೆ ಹೇಳಿತ್ತು. CERT-in ದೇಶದಲ್ಲಿ ಸೈಬರ್ ಭದ್ರತೆಗೆ ಸಂಬಂಧಿಸಿದ ಪ್ರತಿಕ್ರಿಯೆ ಚಟುವಟಿಕೆಗಳು ಮತ್ತು ತುರ್ತು ಕ್ರಮಗಳನ್ನು ಸಂಘಟಿಸುವುದಕ್ಕಾಗಿ ಈ ಆದೇಶ ನೀಡಿತ್ತು. ಅದರಂತೆ ಬಳಕೆದಾರರ ಡೇಟಾವನ್ನು ಕಲೆಕ್ಟ್‌ ಮಾಡುವುದಕ್ಕೆ ಮತ್ತು ಸ್ಟೋರೇಜ್‌ ಮಾಡುವುದಕ್ಕೆ ಡೇಟಾ ಸೆಂಟರ್‌ ಮತ್ತು ಕ್ರಿಪ್ಟೋ ವಿನಿಮಯ ಕೇಂದ್ರಗಳನ್ನು ಕೇಳಿತ್ತು. ಆದರೆ ವಿಪಿಎನ್‌ ಕಂಪೆನಿಗಳು ಈ ಆದೇಶವನ್ನು ಪಾಲಿಸುವುದಕ್ಕೆ ವಿರೋದ ಮಾಡಿವೆ ಎನ್ನಲಾಗಿದೆ.

ಹೊಸ

ಭಾರತದ ಹೊಸ ಐಟಿ ನಿಯಮಗಳ ಅನ್ವಯ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಬೇಡಿಕೆಗಳನ್ನು ಪೂರೈಸಲು ವಿಫಲವಾದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಕೂಡ ಇದೆ. ಅಲ್ಲದೆ ಬಳಕೆದಾರರು ತಮ್ಮ ವಿಪಿಎನ್‌ ಸೇವೆಯ ಚಂದಾದಾರಿಕೆಯನ್ನು ರದ್ದುಗೊಳಿಸಿದ ನಂತರವೂ ಈ ಕಂಪನಿಗಳು ಬಳಕೆದಾರರ ದಾಖಲೆಗಳನ್ನು ಟ್ರ್ಯಾಕ್ ಮಾಡುವುದು ಅಗತ್ಯವಾಗಿದೆ. ಆದರೆ ಸರ್ಕಾರ ಇದೀಗ ತನ್ನ ನೌಕರರಿಗೆ ಖಾಸಗಿ ವಿಪಿಎನ್‌ ಬಳಸದಂತೆ ಸೂಚನೆ ನೀಡಿರುವುದನ್ನು ಗಮನಿಸಿದರೆ ಶೀಘ್ರದಲ್ಲೇ ಭಾರತದಲ್ಲಿ ವಿಪಿಎನ್‌ ಸೇವೆ ಬ್ಯಾನ್‌ ಆಗುವ ಸಾದ್ಯತೆ ಕೂಡ ಇದೆ.

ವಿಪಿಎನ್‌

ವೆಬ್‌ ಬ್ರೌಸಿಂಗ್‌ನಲ್ಲಿ ಗೌಪ್ಯತೆಯನ್ನುಕಾಪಾಡಿಕೊಳ್ಳುವುದಕ್ಕಾಗಿ ವಿಪಿಎನ್‌ ಸೇವೆಯನ್ನು ಹೆಚ್ಚಿನ ಜನರು ಬಳಸುತ್ತಾರೆ. ವಿಪಿಎನ್‌ (ವರ್ಚುವಲ್ ಪ್ರಾಕ್ಸಿ ನೆಟ್‌ವರ್ಕ್‌)ಗಳು ಬಳಕೆದಾರರ ಲೊಕೇಶನ್‌ ಡೇಟಾವನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ ಟ್ರ್ಯಾಕರ್‌ಗಳಿಂದ ಮುಕ್ತವಾಗಿರಲು ಅವಕಾಶ ಮಾಡಿಕೊಡುತ್ತದೆ. ಇದರಿಂದ ನೀವು ಎಲ್ಲಿ ಕುಳಿತು ವೆಬ್‌ ಬ್ರೌಸಿಂಗ್‌ ಮಾಡುತ್ತಿದ್ದೀರಿ ಅನ್ನುವುದು ಬೇರೆಯವರಿಗೆ ತಿಳಿಯುವುದೇ ಇಲ್ಲ. ಇದಲ್ಲದೆ ನೀವು ಪಾವತಿಸಿದ VPN ಸೇವೆಗಳು ಮತ್ತು ಕೆಲವು ಉತ್ತಮ ಉಚಿತ ಸೇವೆಗಳು ಹಾಗೂ ನೋ-ಲಾಗಿಂಗ್ ನೀತಿಯನ್ನು ನೀಡುತ್ತವೆ. ಆದರೆ ಸರ್ಕಾರದ ಹೊಸ ಆದೇಶವನ್ನು ವಿಪಿಎನ್‌ ಕಂಪೆನಿಗಳು ಜಾರಿಗೊಳಿಸಿದರೆ ಬಳಕೆದಾರರ ಡೇಟಾವನ್ನು ಸ್ಟೋರೇಜ್‌ ಮಾಡಬೇಕಾಗುತ್ತದೆ. ಬಳಕೆದಾರರ ಡೇಟಾಗೆ ಲಾಗ್ ಇನ್ ಮಾಡಲು ಮತ್ತು ಕನಿಷ್ಠ ಐದು ವರ್ಷಗಳ ಅವಧಿಗೆ ಅದನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ.

Best Mobiles in India

English summary
India Govt prohibits its employees from using services like Google drive and dropbox

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X