ಭಾರತ ಸರ್ಕಾರದ ಐತಿಹಾಸಿಕ ಘೋಷಣೆಗೆ ಮತ್ತೆ ಬೆಚ್ಚಿಬಿದ್ದವು 'ಟೆಲಿಕಾಂ' ಕಂಪೆನಿಗಳು!!

|

ಜಾಗತಿಕ ನಿರ್ಣಯಗಳಿಗೆ ಒಗ್ಗಿಕೊಳ್ಳುತ್ತಿರುವ ಭಾರತ ಸರ್ಕಾರವು ಭಾರೀ ಸುದ್ದಿಯಲ್ಲಿದ್ದ 'ನೆಟ್‌ ನ್ಯೂಟ್ರಾಲಿಟಿ'ಗೆ ಅಸ್ತು ಎಂದಿದೆ. ವರ್ಷದಿಂದ ಕೇಳಿಬರುತ್ತಿರುವ ನೆಟ್ ನ್ಯೂಟ್ರಾಲಿಟಿ ಎಂಬ ಕೂಗು ಅಂತಿಮವಾಗಿ ಭಾರತ ಹಸಿರು ನಿಶಾನೆ ತೋರಿಸಿದ್ದು, ಐತಿಹಾಸಿಕ ನಿರ್ಧಾರವೊಂದು ಹೊರಬಿದ್ದಿದೆ. ಇದನ್ನು ಇಂಟರ್‌ನೆಟ್ ಬಳಕೆದಾರರ ಬಹುದೊಡ್ಡ ಜಯ ಎಂದು ಪರಿಗಣಿಸಲಾಗಿದೆ.

ಹೌದು, ಭಾರತದ ತಟಸ್ಥ ಅಂತರ್ಜಾಲ ನೀತಿಗೆ ದೂರ ಸಂಪರ್ಕ ನಿಯೋಗ ಅನುಮತಿ ನೀಡಿದ್ದು, ಇನ್ಮುಂದೆ ಅಂತರ್ಜಾಲದಲ್ಲಿ ಕೆಲವು ಮಾಹಿತಿ ಮತ್ತು ಸೇವೆಗಳನ್ನು ಸ್ಥಗಿತಗೊಳಿಸುವುದು ಮತ್ತು ಕೆಲವು ಮಾಹಿತಿ ಮತ್ತು ಸೇವೆಗಳು ಹೆಚ್ಚಿನ ವೇಗದಲ್ಲಿ ದೊರೆಯುವಂತೆ ಮಾಡುವುದನ್ನು ಈ ನೀತಿ ತಡೆಯಲಿದೆ.ಆದರೆ, ಕೆಲವು ಸೇವೆಗಳನ್ನು ಮಾತ್ರ ಈ ನೀತಿಯಿಂದ ಹೊರಗಿಡಲಾಗಿದೆ.

ಭಾರತ ಸರ್ಕಾರದ ಐತಿಹಾಸಿಕ ಘೋಷಣೆಗೆ ಮತ್ತೆ ಬೆಚ್ಚಿಬಿದ್ದವು 'ಟೆಲಿಕಾಂ' ಕಂಪೆನಿಗಳು!

ಟೆಲಿಕಾಂ ಸಂಸ್ಥೆಗಳ ಲಾಬಿ, ಎಲ್ಲಕ್ಕೂ ದುಡ್ಡು ನೀಡಬೇಕಾದ ಅನಿವಾರ್ಯತೆ ಜೊತೆಗೆ ಗ್ರಾಹಕರು ಎಚ್ಚೆತ್ತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದ ಸಮಯದಲ್ಲಿ ಈ ಸುದ್ದಿಯು ಈಗ ಭಾರತದ ಟೆಲಿಕಾಂ ಕಂಪೆನಿಗಳಿಗೆ ಮತ್ತು ದೊಡ್ಡ ದೊಡ್ಡ ಐಟಿ ಕಂಪೆನಿಗಳಿಗೆ ಚಾಟಿ ಏಟು ನೀಡಿದೆ. ಹಾಗಾದರೆ, ಏನಿದು ನೆಟ್‌ ನ್ಯೂಟ್ರಾಲಿಟಿ'? ಇದರ ಹಿನ್ನಲೆಯೇನು ಎಂಬುದನ್ನು ಮುಂದೆ ತಿಳಿಯಿರಿ.

ಇಂಟರ್ ನೆಟ್ ತಾಟಸ್ಥ್ಯ ಎಂದರೇನು?

ಇಂಟರ್ ನೆಟ್ ತಾಟಸ್ಥ್ಯ ಎಂದರೇನು?

ಇಂಟರ್ ನೆಟ್ ತಾಟಸ್ಥ್ಯ ಎಂದರೆ ಅಂತರ್ಜಾಲ ಮುಕ್ತ ಬಳಕೆಗೆ ಬೆಂಬಲವಾಗಿರುತ್ತದೆ. ಇದು ಟೆಲಿಕಾಂ ಕಂಪನಿಗಳಿಗೆ ಗ್ರಾಹಕನ ಅಂತರ್ಜಾಲ ಬಳಕೆಯನ್ನು ನಿಯಂತ್ರಿಸುವುದನ್ನು ವಿರೋಧಿಸುತ್ತದೆ. ಅಂತರ್ಜಾಲದ ಮುಕ್ತ ಬಳಕೆ ಇದರ ಮೂಲ ಉದ್ದೇಶವಾಗಿರುತ್ತದೆ. ಅದರಂತೆ ಎಲ್ಲಾ ಜಾಲತಾಣಗಳೂ,ಮಾಹಿತಿ ವಿನಿಮಯಗಳೂ ಒಂದೇ ವೇಗದಲ್ಲಿ ಗ್ರಾಹಕರಿಗೆ ದೊರೆಯಬೇಕು. ಸೇವಾ ಪೂರೈಕೆದಾರರಿಂದ ಡೇಟಾಪ್ಯಾಕ್ ಪಡೆದ ಬಳಕೆದಾರರು ತಾವು ನಿರ್ಧರಿಸಿದ ಜಾಲತಾಣ ಹಾಗು ಅಪ್ಲಿಕೇಷನ್ ಗಳನ್ನು ಮುಕ್ತವಾಗಿ ಬಳಸುವಂತಾಗ ಬೇಕು ಎನ್ನುವುದೇ ಇದರ ಮುಖ್ಯ ಗುರಿ.

ಅಂತರ್ಜಾಲದಲ್ಲಿ ಅಸಮಾನತೆ

ಅಂತರ್ಜಾಲದಲ್ಲಿ ಅಸಮಾನತೆ

ವಿಶ್ವಾದ್ಯಂತ ಮುಕ್ತ ಮಾಹಿತಿ ಹಂಚುವ ಅಂತರ್ಜಾಲವನ್ನು ಸುಮಾರು 300 ಕೋಟಿ ಮಂದಿ ಬಳಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ, ಸೇವಾ ಕಂಪನಿಗಳು ತಮಗೆ ಹಣ ನೀಡುವ ಕಂಪೆನಿಗಳ ಜಾಲತಾಣ ಉಚಿತವಾಗಿ ನೋಡಲು ಅವಕಾಶ ನೀಡುತ್ತದೆ ಅಥವಾ ವೇಗವಾಗಿ ಓಪನ್ ಆಗುವಂತೆ ಮಾಡುತ್ತದೆ. ಯಾರು ಸೇವಾ ಕಂಪೆನಿಗಳಿಗೆ ಹಣ ನೀಡುವುದಿಲ್ಲವೋ ಆಕಂಪೆನಿಗಳ ಜಾಲತಾಣ ಬ್ಲಾಕ್ ಮಾಡುತ್ತಾರೆ ಅಥವಾ ತಡವಾಗಿ ಓಪನ್ ಆಗುವಂತೆ ವ್ಯವಸ್ಥೆ ರೂಪಿಸುತ್ತದೆ. ಹೀಗೆ ಜಾಲ ತಾಣಗಳು ಹಾಗೂ ಗ್ರಾಹಕರಿಂದ ಹಣ ಪೀಕುವ ಈ ಲಾಬಿಯು ನಮಗೇ ಗೊತ್ತಿಲ್ಲದೆ ನಡೆಯುವ ಪ್ರಕ್ರಿಯೆ.

ಅಂತರ್ಜಾಲದಲ್ಲಿ ಪೈಪೋಟಿ

ಅಂತರ್ಜಾಲದಲ್ಲಿ ಪೈಪೋಟಿ

ಗೂಗಲ್, ಯಾಹೂ ಇತ್ಯಾದಿ ದೈತ್ಯ ಕಂಪನಿಗಳು ಟೆಲಿಕಾಂ ಸಂಸ್ಥೆಗಳಿಗೆ ಅಪಾರ ಪ್ರಮಾಣದ ಹಣ ನೀಡಿ ತಮ್ಮ ತಾಣಗಳು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳುತ್ತವೆ.ಆದರೆ, ಉತ್ತಮ ಉದ್ದೇಶದೊಡನೆ ಪ್ರಾರಂಭವಾದ ಚಿಕ್ಕ ಸಂಸ್ಥೆಗಳಿಗೆ ಟೆಲಿಕಾಂ ಸಂಸ್ಥೆಗಳು ಕೇಳಿದಷ್ಟು ಹಣ ಸಂದಾಯಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಅಂತರ್ಜಾಲದಲ್ಲಿನ ಸಹಜ ಪೈಪೋಟಿಗೆ ಅಡ್ಡಿಯಾಗುತ್ತದೆ. ಇದೇ ಕಾರಣದಿಂದ ಜಗತ್ತಿನ ನಾನಾ ದೇಶಗಳು ಅಂತರ್ಜಾಲ ತಾಟಸ್ತ್ಯ ನೀತಿಯನ್ನು ಅನುಸರಿಸುತ್ತಿವೆ. ಈಗ ಭಾರತದಲ್ಲಿ ಇದಕ್ಕೆ ಸ್ಪಷ್ಟನೆ ದೊರೆತಿದೆ.

ವಿದೇಶಗಳಲ್ಲಿ ಅಂತರ್ಜಾಲ ತಾಟಸ್ತ್ಯ

ವಿದೇಶಗಳಲ್ಲಿ ಅಂತರ್ಜಾಲ ತಾಟಸ್ತ್ಯ

ಸೇವಾಪೂರೈಕೆದಾರರ ಈ ಲಾಬಿಯ ವಿರುದ್ಧ ಮೊದಲಿಗೆ ಅಮೆರಿಕದಲ್ಲಿ ಬೃಹತ್ ಮಟ್ಟದ ಅಭಿಯಾನವೇ ನಡೆಯಿತು. ಜನರ ಅಭಿಪ್ರಾಯಕ್ಕೆ ಮಣಿದ ಅಧ್ಯಕ್ಷ ಒಬಾಮಾ ಸರಕಾರ ನೆಟ್ ಸಮಾನತೆಗಾಗಿ ಒಂದು ವಿಧೇಯಕವನ್ನು ಮಂಡಿಸಿ ಸೆನೆಟ್ ನಲ್ಲಿ ಅಂಗೀಕರಿಸಿತು. ನಂತರ ಅಮೆರಿಕಾದಲ್ಲಿ ಅಂತರ್ಜಾಲ ತಾಟಸ್ತ್ಯ ನೀತಿ ಬಳಕೆಯಲ್ಲಿದೆ. ದೊಡ್ಡ ಕಂಪೆನಿಗಳ ಮಾರುಕಟ್ಟೆ ಬೆಳವಣಿಗೆ ಮತ್ತು ಟೆಲಿಕಾಂ ಕಂಪೆನಿಗಳಿಂದ ಹಣ ಪೀಕುವ ಈ ಲಾಭಿಗೆ ಬ್ರೇಕ್ ಬಿದ್ದಿದೆ.

ಭಾರತದಲ್ಲಿ ಅಂತರ್ಜಾಲ ತಾಟಸ್ತ್ಯ: ಹಂತ 1

ಭಾರತದಲ್ಲಿ ಅಂತರ್ಜಾಲ ತಾಟಸ್ತ್ಯ: ಹಂತ 1

2006: ನೆಟ್ ಸಮಾನತೆಯ ಕುರಿತು ಅಭಿಪ್ರಾಯಗಳನ್ನು ನೀಡುವಂತೆ ಸೇವಾ ಪೂರೈಕೆದಾರರಿಗೆ ಟ್ರಾಯ್ ಸೂಚನೆ. 2012 ಫೆಬ್ರವರಿ: ಯೂಟ್ಯೂಬ್ ನಂಥ ಕಂಪನಿಗಳು ತಮ್ಮ ಆದಾಯದ ಭಾಗವನ್ನು ಸೇವಾ ಪೂರೈಕೆದಾರರೊಂದಿಗೆ ಹಂಚಿಕೊಳ್ಳಬೇಕು ಎಂದು ಏರ್ ಟೆಲ್ ಮುಖ್ಯಸ್ಥ ಸುನಿಲ್ ಭಾರತಿ ಮಿತ್ತಲ್ ಅವರು ಸಲಹೆ ನೀಡಿದ್ದರು. ಗೂಗಲ್,ಫೇಸ್ ಬುಕ್ ಅನ್ನು ಗ್ರಾಹಕರು ಉಚಿತವಾಗಿ ಬಳಸಬೇಕಾದರೆ ಆ ಕಂಪನಿಗಳು ಆದಾಯದ ಭಾಗವನ್ನು ನೀಡಬೇಕು ಎಂದು ಅದೇ ವರ್ಷ ಜುಲೈನಲ್ಲಿ ಕಂಪನಿಯು ಹೇಳಿತ್ತು. 2014 ಫೆಬ್ರವರಿ: ವಾಟ್ಸಪ್, ಸ್ಕೈಪ್ ಮತ್ತು ಲೈನ್ ನಂಥ ಅಪ್ಲಿಕೇಷನ್ ಗಳು ಸೇವಾ ಪೂರೈಕೆದಾರರಿಗೆ ಹಣನೀಡಬೇಕು ಎಂದು ಏರ್‌ಟೆಲ್, ಟ್ರಾಯ್ ಗೆ ಪ್ರಸ್ತಾವನೆ.

ಭಾರತದಲ್ಲಿ ಅಂತರ್ಜಾಲ ತಾಟಸ್ತ್ಯ: ಹಂತ 2

ಭಾರತದಲ್ಲಿ ಅಂತರ್ಜಾಲ ತಾಟಸ್ತ್ಯ: ಹಂತ 2

27 ಮಾರ್ಚ್ 2015: ಭಾರತದಲ್ಲಿ ನೆಟ್ ಸಮಾನತೆಯ ಕಾನೂನುಗಳನ್ನು ಜಾರಿಗೆ ತರುವುದರಿಂದ ಆಗುವ ಪ್ರಯೋಜನವೇನು ಎಂಬ ಕುರಿತು ಟ್ರಾಯ್ 117 ಪುಟಗಳ ಸಮಾಲೋಚನಾ ವರದಿಯನ್ನು ಬಿಡುಗಡೆ ಮಾಡಿತ್ತು. 2015 ಏಪ್ರಿಲ್ 6: ಏರ್‌ಟೆಲ್ 'ಏರ್ ಟೆಲ್ ಜೀರೊ' ಎಂಬ ಯೋಜನೆಯೊಂದನ್ನು ಜಾರಿಗೆ ತಂದಿತು.ಬಳಕೆದಾರರು ನಿರ್ದಿಷ್ಟ ಅಪ್ಲಿಕೇಷನ್ ಗಳನ್ನಷ್ಟೇ ಉಚಿತವಾಗಿ ಬಳಸುವುದು ಹಾಗೂ ಗ್ರಾಹಕರು ಉಚಿತವಾಗಿ ಬಳಸುವ ಅಪ್‌ಗಳು ಏರ್‌ಟೆಲ್‌ಗೆ ಶುಲ್ಕ ಕಟ್ಟಬೇಕೆಂಬುದು ಇದರ ಉದ್ದೇಶ. ಟೋಲ್ ಫ್ರೀ ಸಂಖ್ಯೆಗಳಿಗೆ ಉಚಿತವಾಗಿ ಕರೆ ಮಾಡುವುದರಿಂದ ಕಂಪನಿಗೆ ನಷ್ಟವಾಗುತ್ತದೆ. ಇದನ್ನು ತುಂಬಿಕೊಳ್ಳಲು ಈ ನೀತಿ ಅನುಸರಿಸುತ್ತಿದ್ದೇವೆ ಎಂದು ಏರ್‌ಟೆಲ್ ಸಬೂಬು.

ಭಾರತದಲ್ಲಿ ನೆಟ್ ಸಮಾನತೆ

ಭಾರತದಲ್ಲಿ ನೆಟ್ ಸಮಾನತೆ

ಭಾರತದಲ್ಲಿ ನೆಟ್ ಸಮಾನತೆ ಕಾನೂನು ಜಾರಿಗೆ ತರಬೇಕೆಂದು ಪ್ರಾರಂಭವಾಗಿರುವ ಅಭಿಯಾನದ ಭಾಗವಾಗಿ ಎಐಬಿ ಎಂಬ ಕಾಮಿಡಿ ಗುಂಪು ಈ ಕುರಿತ ವಿಡಿಯೊವನ್ನು ಯೂಟ್ಯೂಬ್ ನಲ್ಲಿ ಬಿಡುಗಡೆಮಾಡಿತು. ಇದನ್ನು ವೀಕ್ಷಿಸಿದ ಲಕ್ಷಾಂತರ ಜನರು ಅಭಿಯಾನದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ಯೂಟ್ಯೂಬ್ ನಲ್ಲಿ ಈವಿಡಿಯೊ ಲಿಂಕ್ ಅನ್ನು ಫೇಸ್ ಬುಕ್ ಕಂಪನಿಯು ಡಿಲಿಟ್ ಮಾಡಿತು. ಆದರೆ, ಭಾರತದಲ್ಲಿ ನೆಟ್ ಸಮಾನತೆಯ ಕಾನೂನುಗಳನ್ನು ಜಾರಿಗೆ ತರುವ ಪ್ರತಿಭಟನೆಯನ್ನು ಹತ್ತಿಕ್ಕಲು ದೊಡ್ಡ ಕಂಪೆನಿಗಳ ಲಾಭಿಗೆ ಸಾಧ್ಯವಾಗಲಿಲ್ಲ.

Best Mobiles in India

English summary
India just approved net neutrality rules that ban ‘any form’ of data discrimination. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X