ವಿಶ್ವದ ಫೇಸ್‌ಬುಕ್ ಬಳಕೆಯಲ್ಲಿ ಮೊದಲ ಸ್ಥಾನಕ್ಕೇರಿದ ಭಾರತ!!.ಬಳಕೆದಾರರೆಷ್ಟು ಗೊತ್ತಾ?

Written By:

200 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿರುವುದಾಗಿ ಕೆಲವೇ ದಿವಸಗಳ ಹಿಂದೆ ಘೋಷಿಸಿಕೊಂಡಿದ್ದ ಫೇಸ್‌ಬುಕ್, ಇದೀಗ ಇಡೀ ಪ್ರಪಂಚದಲ್ಲಿಯೇ ಹೆಚ್ಚು ಫೇಸ್‌ಬುಕ್ ಬಳಕೆದಾರರನ್ನು ಹೊಂದಿರುವ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದೆ.!!

ಭಾರತವು 241 ಮಿಲಿಯನ್ ಬಳಕೆದಾರರ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಮೊದಲಸ್ಥಾನದಲ್ಲಿದ್ದ ಯುಎಸ್‌ಎ ಎರಡನೇ ಸ್ಥಾನಕ್ಕೆ ಕುಸಿದಿದೆ.!! ಹಾಗಾದರೆ, ಫೇಸ್‌ಬುಕ್ ಬಿಡುಗಡೆ ಮಾಡಿರುವ ಬಳಕೆದಾರರ ಪಟ್ಟಿಯಲ್ಲಿ ಯಾವ ಯಾವ ಅಂಶಗಳು ಸೇರಿವೆ? ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರ ಪರ್ಸೆಂಟ್ ಎಷ್ಟು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲಲ್ಲಿ ತಿಳಿಯಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 24.10 ಕೋಟಿ ಫೇಸ್‌ಬುಕ್ ಬಳಕೆದಾರರು!!

24.10 ಕೋಟಿ ಫೇಸ್‌ಬುಕ್ ಬಳಕೆದಾರರು!!

ಫೇಸ್‌ಬುಕ್ ತನ್ನ ಸಂಭಾವ್ಯ ಬಳಕೆದಾರರ ಪಟ್ಟಿಯನ್ನು ಇದೇ ತಿಂಗಳ 13 ನೇ ರಂದು ಬಿಡುಗಡೆ ಮಾಡಿದ್ದು ಭಾರತದಲ್ಲಿಯೇ ತನ್ನ ಹೆಚ್ಚು ಬಳಕೆದಾರರಿರುವ ಬಗ್ಗೆ ಮಾಹಿತಿ ನಿಡಿದೆ.!! ಭಾರತದಲ್ಲಿ ಫೆಸ್‌ಬುಕ್ ಪ್ರಸ್ತುತ 24.10 ಕೋಟಿ ಬಳಕೆದಾರರನ್ನು ಹೊಂದಿದೆ.!!

Facebook !! ಕೆಲವೊಂದು ಸಿಂಪಲ್ ಫೇಸ್‌ಬುಕ್ ಟ್ರಿಕ್ಸ್....ಜಸ್ಟ್ ಸಿಂಪಲ್!!
ಯುಎಸ್‌ಎ ಎರಡನೇ ಸ್ಥಾನಕ್ಕೆ!!

ಯುಎಸ್‌ಎ ಎರಡನೇ ಸ್ಥಾನಕ್ಕೆ!!

ಇಲ್ಲಿಯವರೆಗೂ ಮೊದಲ ಸ್ಥಾನದಲ್ಲಿಯೇ ಇದ್ದ ಯುಎಸ್‌ಎ ಪ್ರಸ್ತುತ 240 ಮಿಲಿಯನ್ ಬಳಕೆದಾರರ ಮೂಲಕ ಎರಡನೇ ಸ್ಥಾನಕ್ಕೆ ಕುಸಿದಿದೆ. ಫೇಸ್‌ಬುಕ್ ಹುಟ್ಟಿಹಾಕಿದ ದಿನದಿಂದ ಇಲ್ಲಿಯವರೆಗೂ ಇದೇ ಮೊದಲ ಸಾರಿ ಯುಎಸ್‌ಎ ಎರಡನೇ ಸ್ಥಾನಕ್ಕೆ ಜಾರಿದೆ.

ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರ ಪ್ರಮಾಣ ಕಡಿಮೆ!!

ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರ ಪ್ರಮಾಣ ಕಡಿಮೆ!!

ಭಾರತದಲ್ಲಿಯೇ ಹೆಚ್ಚು ಫೇಸ್‌ಬುಕ್ ಬಳಕೆದಾರರಿದ್ದರೂ ಸಹ, ಜನಸಂಖ್ಯಾ ದೃಷ್ಟಿಯಿಂದ ನೋಡಿದರೆ ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರ ಪ್ರಮಾಣ ಕಡಿಮೆ ಇದೆ. ವಿಶ್ವದ ಸರಾಸರಿ ಫೇಸ್‌ಬುಕ್ ಬಳಕೆದಾರರ ಪ್ರಮಾಣ 42% ಆಗದ್ದರೆ ಭಾರತದಲ್ಲಿ ಶೇ.19% ಜನಸಂಖ್ಯೆ ಮಾತ್ರ ಫೇಸ್‌ಬುಕ್ ಬಳಸುತ್ತಿದೆ.!!

ಇನ್ನು ಭಾರತವೇ ನಂಬರ್ ಒನ್.!!

ಇನ್ನು ಭಾರತವೇ ನಂಬರ್ ಒನ್.!!

2017 ನೇ ವರ್ಷದ ಆರಂಭದಿಂದಲೂ ಭಾರತ ಮತ್ತು ಯುಎಸ್‌ಎ ಫೇಸ್‌ಬುಕ್ ಬಳಕೆದಾರರ ಬೆಳವಣಿಗೆ ಪ್ರಮಾಣ ಹೆಚ್ಚಾಗುತ್ತಿದ್ದು, ಅದರಲ್ಲಿಯೂ ಭಾರತದಲ್ಲಿ 27 ಪರ್ಸೆಂಟ್ ಹೆಚ್ಚು ಬೆಳವಣಿಗೆಯಾಗಿದೆ.!! ಇನ್ನು ಇದೇ ಸಮಯದಲ್ಲಿ ಯುಎಸ್‌ಎ ಯಲ್ಲಿ ಫೇಸ್‌ಬುಕ್ ಬಳಕೆದಾರರ ಬೆಳವಣಿಗೆ ಪ್ರಮಾಣ ಕೇವಲ 12 ಪರ್ಸೆಂಟ್‌ನಷ್ಟಿದೆ.!!

ಸರಾಸರಿಯಲ್ಲಿ ಯುಎಸ್‌ಎ ಫಸ್ಟ್!!

ಸರಾಸರಿಯಲ್ಲಿ ಯುಎಸ್‌ಎ ಫಸ್ಟ್!!

ವಿಶ್ವದ ಸರಾಸರಿ ಫೇಸ್‌ಬುಕ್ ಬಳಕೆದಾರರ ಪ್ರಮಾಣ 42% ಆಗದ್ದರೆ ಭಾರತದಲ್ಲಿ ಶೇ.19% ಜನಸಂಖ್ಯೆ ಮಾತ್ರ . ಆದರೆ, ಈ ವಿಷಯದಲ್ಲಿ ಯುಎಸ್‌ಎ ಮೊದಲ ಸ್ಥಾನದಲ್ಲಿದ್ದು, ಆ ದೇಶದ ಶೇ.73 ಪರ್ಸೆಂಟ್ ಜನರು ಫೇಸ್‌ಬುಕ್ ಬಳಸುತ್ತಿದ್ದಾರೆ.!! ಅಂದರೆ 100 ಜನರಲ್ಲಿ 73 ಜನರು ಅಲ್ಲಿ ಫೇಸ್‌ಬುಕ್ ಉಪಯೋಗಿಸುತ್ತಾರೆ.!!

ಓದಿರಿ:ಇಷ್ಟು ವರ್ಷ ಯೂಸ್ ಮಾಡಿದ್ರೂ..ಈ 12 ಕಂಪ್ಯೂಟರ್ ಕೀಗಳ ಬಗ್ಗೆ ಗೊತ್ತಿಲ್ಲಾ?!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The number of Facebook users in India stands at 241 million compared to the US’s 240 million, says a ‘The Next Web’ report. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot