ಭಾರತದ ಮೊದಲ 'ದೇಸಿ' ಜಿಪಿಎಸ್‌ ಬಿಡುಗಡೆ..! ಭಾರತೀಯ ಉಪಗ್ರಹ ಆಧಾರಿತ ಸೇವೆ..!

|

ಕಳೆದ ವರ್ಷದಿಂದ ಕೇಳಿಬರುತ್ತಿದ್ದ “ದೇಸಿ” ಜಿಪಿಎಸ್ ಮಾಡ್ಯೂಲ್ ಅಂತೂ ಬಿಡುಗಡೆಯಾಗಿದೆ. ನವದೆಹಲಿಯಲ್ಲಿ ನಡೆದ ಒಂದು ಸಮಾರಂಭದಲ್ಲಿ, ST ಮೈಕ್ರೊಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಟೆಕ್ ಸ್ಥಳಗಳನ್ನು ಪತ್ತೆಹಚ್ಚಲು ಭಾರತ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (IRNSS) ಆಧಾರಿತ GT ಘಟಕವನ್ನು UTraQ ಪರಿಚಯಿಸಿತು.

ಭಾರತದ ಮೊದಲ 'ದೇಸಿ' ಜಿಪಿಎಸ್‌ ಬಿಡುಗಡೆ..! ಭಾರತೀಯ ಉಪಗ್ರಹ ಆಧಾರಿತ ಸೇವೆ..!

ಇದುವರೆಗೂ ಡಿವೈಸ್ ನಲ್ಲಿರುವ ಜಿಪಿಎಸ್ ಅಪ್ಲಿಕೇಷನ್ ಯುಎಸ್ ಸೆಟಲೈಟ್ ನೀಡುವ ಮಾಹಿತಿಯ ಅನುಸಾರವೇ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ UTraQ ಭಾರತೀಯ ಮೂಲಕ ಸ್ಯಾಟಲೈಟ್ ಸಿಸ್ಟಮ್ ನ್ನು ಹೊಂದಿದ್ದು ಹೆಚ್ಚು ನಿಖರವಾಗಿರುವ ಮತ್ತು ವಿಶ್ವಾಸಾರ್ಹ ಸ್ಥಳದ ಡಾಟಾವನ್ನು ಒದಗಿಸುತ್ತದೆ.

ಎರಡು ಮಾದರಿ ಬಿಡುಗಡೆ

ಎರಡು ಮಾದರಿ ಬಿಡುಗಡೆ

ಇದರಲ್ಲಿ L110 GNSS ಮಾಡ್ಯೂಲ್ ಇದು ಕಾಂಪ್ಯಾಕ್ಟ್ NavIC ಮಾಡ್ಯೂಲ್ ಆಗಿದೆ ಮತ್ತು L100 GNSS ಮಾಡ್ಯೂಲ್ ಸಣ್ಣ ಗಾತ್ರದ POT (Patch on Top) IRNSS ಮಾಡ್ಯೂಲ್ ಆಗಿದೆ. ಟ್ರ್ಯಾಕಿಂಗ್ ನ್ನು ಹೊರತುಪಡಿಸಿ ಇತರೆ ಹಲವು ಕೆಲಸಗಳಿಗೆ ಈ ಮಾಡ್ಯೂಲ್ ಗಳನ್ನು ಬಳಕೆ ಮಾಡಬಹುದು. ಆದೇಶಿಸುವುದು, ಸಮಯ ನಿಗದಿ, ನಿಯಂತ್ರಣ ಇತ್ಯಾದಿ ಹಲವು ಇದರಲ್ಲಿ ಒಳಗೊಂಡಿದೆ.

'ದೇಸಿ' ಜಿಪಿಎಸ್ ಉಪಯೋಗ:

'ದೇಸಿ' ಜಿಪಿಎಸ್ ಉಪಯೋಗ:

ಇದರ ಅರ್ಥ ಸಾಗರ ಸಂಚಾರ, ವೈಮಾನಿಕ ಸಂಚರಣೆ, ಪಾದಯಾತ್ರಿಕರು ಮತ್ತು ಪ್ರವಾಸಿಗರಿಗೆ ಭೂಮಿಯ ಸಂಚಾರ, ವಾಹನ ಟ್ರ್ಯಾಕಿಂಗ್, ಜಿಯೊಡೆಟಿಕ್ ದತ್ತಾಂಶ ಸೆರೆಹಿಡಿಯುವಿಕೆಗಳಲ್ಲಿ ಈ ಮಾಡ್ಯೂಲ್ ಗಳನ್ನು ಬಳಕೆ ಮಾಡಲು ಅವಕಾಶವಿದೆ. ಗ್ರಾಹಕರ ವಸ್ತುಗಳನ್ನು ಇದು ತಲುಪಲು ಇನ್ನು ಕೆಲವು ಸಮಯ ಹಿಡಿಯಬಹುದು. ಸದ್ಯ ಕೆಲವು ಪಾಲುದಾರರಿಗೆ ಮಾತ್ರ ಇದರ ಸವಲತ್ತನ್ನು ತಲುಪಿಸಲಾಗುತ್ತೆ. UTraQ L110 GNSS ಮತ್ತು L100 GNSS ಎರಡೂ ಕೂಡ ಎಸ್.ಟಿ ಮೈಕ್ರೋಎಲೆಕ್ಟ್ರಾನಿಕ್ಸ್ ನಿಂದ ತಯಾರಿಸಲಾಗಿದ್ದು ಅದನ್ನು ರಾಮಕೃಷ್ಣ ಎಲೆಕ್ಟ್ರೋ ಪ್ರೈವೆಟ್ ಲಿಮಿಟೆಡ್ ನಿಂದ ವಿತರಿಸಲಾಗುತ್ತದೆ.

'ದೇಸಿ' ಜಿಪಿಎಸ್ ತಯಾರಿಕೆಗೆ ಕಾರಣ:

'ದೇಸಿ' ಜಿಪಿಎಸ್ ತಯಾರಿಕೆಗೆ ಕಾರಣ:

ದೇಸಿ ಜಿಪಿಎಸ್ ಮಾಡ್ಯೂಲ್ ನ ಸೇವೆ ಮತ್ತು ಡಿವೈಸ್ ತಯಾರಿಕೆಯ ಬಗ್ಗೆ ಕಾರ್ಗಿಲ್ ವಾರ್ ನ ನಂತರ ನಿರ್ಧಾರ ಕೈಗೊಳ್ಳಲಾಯಿತು. 1999 ರಲ್ಲಿ ಪಾಕಿಗಳು ಕಾರ್ಗಿಲ್ ನಲ್ಲಿ ಯುದ್ಧ ಸಾರಿದಾಗ ಭಾರತವು ಕೆಲವು ಜಿಪಿಎಸ್ ಲೊಕೇಷನ್ ಡಾಟಾವನ್ನು ಯುಎಸ್ ಜಿಪಿಎಸ್ ಮೂಲವನ್ನು ಬೇಡುವಂತಾಗಿತ್ತು. ಸಂಪೂರ್ಣ ಮಾಹಿತಿ ದೊರಕದೆ ಕೆಲವು ಮಾಹಿತಿಗಳು ಮಾತ್ರ ಯುಎಸ್ ನಿಂದ ಭಾರತಕ್ಕೆ ಲಭ್ಯವಾಗಿತ್ತು.

ಇಸ್ರೋ ನಿಯಂತ್ರಣ

ಇಸ್ರೋ ನಿಯಂತ್ರಣ

Indian Space Research Organization (ISRO) ನಿಯಂತ್ರಣದ IRNSS ಮೂಲದ UTraQ ಹೆಚ್ಚು ನಿಖರ ಮಾಹಿತಿಯನ್ನು ನೀಡುವುದರ ಜೊತೆಗೆ ವಿದೇಶಿ ಉಪಗ್ರಹಗಳ ಅವಲಂಬನೆಯನ್ನು ನಿಲ್ಲಿಸುತ್ತದೆ. UTraQ ಮಾಡ್ಯೂಲ್ L1 ಮತ್ತು L5 ಬ್ಯಾಂಡ್ಸ್, EPOTM ಕಕ್ಷೆ ಭವಿಷ್ಯ, EASYTM ಸ್ವಯಂ-ರಚಿತ ಕಕ್ಷೆಯ ಭವಿಷ್ಯ ಮತ್ತು ಕ್ರಮಗಳು 18x16x2.3mm ಗೆ ಬೆಂಬಲ ನೀಡುತ್ತದೆ.

Best Mobiles in India

English summary
India’s first ‘desi’ GPS module launched. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X