ಭಾರತದ ಪ್ರಪ್ರಥಮ ಸಾಮಾಜಿಕ ಜಾಲತಾಣ ಸೃಷ್ಟಿಸಿದರು ಕನ್ನಡಿಗರು!!..ಅದ್ಬುತವಾಗಿದೆ ಆಪ್!!

ಮುದೊಂದು ದಿನ ಭಾರತೀಯರೇ ಹೊಸ ಹೊಸ ಆವಿಷ್ಕಾರ ಮಾಡುತ್ತಾರೆ. ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಆಗಲಿದೆ ಎನ್ನುವುದಕ್ಕೆ ಹೊಸದಾಗಿ ಬಿಡುಗಡೆಯಾಗಿರುವ ಕನ್ನಡಿಗರ ಆಪ್ ಸಾಕ್ಷಿಯಾಗಿದೆ.!!

|

ಭಾರತೀಯರು ಗೂಗಲ್, ಫೇಸ್‌ಬುಕ್‌ನಂತಹ ಹೊರದೇಶದ ಕಂಪೆನಿಗಳ ಪ್ರಾಡೆಕ್ಟ್ ಬಳಸುವುದು ಇದೀಗ ಅನಿವಾರ್ಯವಿರಬಹುದು. ಆದರೆ, ಮುದೊಂದು ದಿನ ಭಾರತೀಯರೇ ಹೊಸ ಹೊಸ ಆವಿಷ್ಕಾರ ಮಾಡುತ್ತಾರೆ. ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಆಗಲಿದೆ ಎನ್ನುವುದಕ್ಕೆ ಹೊಸದಾಗಿ ಬಿಡುಗಡೆಯಾಗಿರುವ ಕನ್ನಡಿಗರ ಆಪ್ ಸಾಕ್ಷಿಯಾಗಿದೆ.!!

ಹೌದು, ಭಾರತದ ಮೊದಲ ಸ್ವದೇಶಿ ಜಾಲತಾಣವನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯುವಕ ಸಂಜೀವ್ ಕುಮಾರ್ ಪಾಟೀಲ್ ಹಾಗು ಹುಬ್ಬಳ್ಳಿಯ ಭರತ್ ಶರ್ಮಾ ಅವರು ಹುಟ್ಟಿಹಾಕಿದ್ದಾರೆ. ಫೇಸ್‌ಬುಕ್ ಸೇರಿದಂತೆ ವಿದೇಶಿ ಸಾಮಾಜಿಕ ಜಾಲತಾಣಗಳಿಗೆ ಸೆಡ್ಡು ಹೊಡೆಯಲು ಸ್ವದೇಶಿ ಸಾಮಾಜಿಕ ಜಾಲತಾಣವೊಂದನ್ನು ಕನ್ನಡಿಗರು ಅಭಿವೃದ್ದಿಪಡಿಸಿದ್ದಾರೆ.!!

ಭಾರತದ ಪ್ರಪ್ರಥಮ ಸಾಮಾಜಿಕ ಜಾಲತಾಣ ಸೃಷ್ಟಿಸಿದರು ಕನ್ನಡಿಗರು!.ಅದ್ಬುತವಾಗಿದೆ ಆಪ್!

ಸಾಮಾಜಿಕ ಜಾಲತಾಣ ಕ್ಷೇತ್ರದಲ್ಲಿ ದಿಗ್ಗಜನಾಗಿರುವ ಫೇಸ್‌ಬುಕ್‌ಗೆ ಸೆಡ್ಡುಹೊಡೆಯಲು ಕನ್ನಡಿಗರ ಹೊಸ ಆಪ್ ಬಿಡುಗಡೆಯಾಗಿದೆ. ಹಾಗಾದರೆ, ಕನ್ನಡಿಗರು ಅಭಿವೃದ್ದಿಪಡಿಸಿರುವ ದೇಶದ ಮೊದಲ ಸಾಮಾಜಿಕ ಜಾಲತಾಣ ಆಪ್ ಯಾವುದು? ಆಪ್ ಕಾರ್ಯನಿರ್ವಹಣೆ ಹೇಗಿದೆ? ಈ ಆಪ್‌ನಿಂದ ಬಳಕೆದಾರರಿಗೆ ಏನೆಲ್ಲಾ ಲಾಭಗಳಿವ ಎಂಬುದನ್ನು ಮುಂದೆ ತಿಳಿಯಿರಿ.!!

ಟಿ ಡೈರಿಸ್ (T Diaries )

ಟಿ ಡೈರಿಸ್ (T Diaries )

ಕ್ಯಾಲಿಫೋರ್ನಿಯಾ ಮೂಲದ ಫೇಸ್‌ಬುಕ್‌ ಕಂಪನಿಯನ್ನು ಎದುರಿಸಲು ಭಾರತೀಯ ಮೂಲದ ಕಂಪನಿ ಟಿ ಡೈರಿಸ್ ಆಪ್ ಅಖಾಡಕ್ಕಿಳಿದಿದೆ. ಒಂದೇ ಆಪ್‌ನಲ್ಲಿ ನೀವು ಫೇಸ್‌ಬುಕ್, ವಾಟ್ಸ್ಯಾಪ್, ಇನ್ಸ್ಟಾಗ್ರಾಂ ನಂತಹ ಸೋಶಿಯಲ್ ಮೀಡಿಯಾಗಳನ್ನು ಉಪಯೋಗಿಸಬಹುದಾದ ಆಯ್ಕೆಯನ್ನು ಈ ಆಪ್‌ನಲ್ಲಿ ತರಲಾಗಿದೆ.!!

ಸ್ವದೇಶಿ ಸೋಶಿಯಲ್ ಮೀಡಿಯಾ!

ಸ್ವದೇಶಿ ಸೋಶಿಯಲ್ ಮೀಡಿಯಾ!

ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ವಿಭಾಗದಲ್ಲಿ ಓದುತ್ತಿರುವ ಸಂಜೀವ್ ಕುಮಾರ್, ಭರತ್ ಶರ್ಮಾ ಸ್ವದೇಶಿ ಎಂಬುವವರು ಮೊದಲ ಸ್ವದೇಶಿ ಸೋಶಿಯಲ್ ಮೀಡಿಯಾ ಆಪ್ ಅಭಿವೃದ್ದಿಪಡಿಸಿದ್ದಾರೆ. ವಿದೇಶಿ ಕಂಪೆನಿಗಳ ಹಾವಳಿಯನ್ನು ತಡೆಯುವ ಸಲುವಾಗಿ ಈ ಆಪ್ ತಂದಿರುವುದಾಗಿ ಅವರು ಹೇಳಿದ್ದಾರೆ.!!

ಸಮೀರ್ ಆಚಾರ್ಯರಿಂದ ರಿಲೀಸ್!!

ಸಮೀರ್ ಆಚಾರ್ಯರಿಂದ ರಿಲೀಸ್!!

ಕನ್ನಡ ಬಿಗ್ಬಾಸ್ ಸ್ಪರ್ಧಿಯಾಗಿದ್ದ ಸಮೀರ್ ಆಚಾರ್ಯರವರು ಹುಬ್ಬಳ್ಳಿಯಲ್ಲಿ‌ ಕಳೆದ ತಿಂಗಳು ಉದ್ಘಾಟಿಸಿ ಆಪ್ ಬಿಡುಗಡೆ ಮಾಡಿದ್ದಾರೆ. ಆಪ್ ಕಳೆದ ತಿಂಗಳೇ ಬಿಡುಗಡೆಯಾಗಿದ್ದರೂ ಕೂಡ ಇದೀಗ ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನುಗಳಲ್ಲಿ ಆಪ್ ಕಾರ್ಯನಿರ್ವಹಣೆ ನೀಡುತ್ತಿದೆ.!!

ಟಿ ಡೈರಿಸ್ ವಿಶೇಷತೆಗಳೇನು?

ಟಿ ಡೈರಿಸ್ ವಿಶೇಷತೆಗಳೇನು?

ಫೇಸ್‌ಬುಕ್, ವಾಟ್ಸ್ಯಾಪ್, ಇನ್ಸ್ಟಾಗ್ರಾಂ ನಂತಹ ಸೋಶಿಯಲ್ ಮೀಡಿಯಾಗಳೆಲ್ಲವನ್ನು ಟಿ ಡೈರಿಸ್ ಒಂದೇ ಆಪ್‌ನಲ್ಲಿ ನೀಡಲಾಗಿದೆ. ನಿಮ್ಮ ಲೊಕೇಶನ್‌ನಲ್ಲಿರುವ ಶಾಪಿಂಗ್ ಮಳಿಗೆಗಳು , ಹೋಟೆಲ್‌ಗಳು, ಚಿತ್ರಮಂದಿರದಲ್ಲಿರುವ ಸಿನೆಮಾಗಳು ಇನ್ನೂ ಹಲವು ವಿವರಗಳನ್ನು ಆಪ್‌ ನೀಡುತ್ತದೆ.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಫೇಸ್‌ಬುಕ್‌ಗಿಂತ ಭಿನ್ನ!!

ಫೇಸ್‌ಬುಕ್‌ಗಿಂತ ಭಿನ್ನ!!

ಫೇಸ್‌ಬುಕ್‌ನಲ್ಲಿ 5000 ಜನ ಫ್ರೆಂಡ್ಸ್ ಆಗಿಬಿಟ್ಟರೆ ಅದರ ನಂತರ ನೀವು ಹೊಸ ಸ್ನೇಹಿತರನ್ನ ಸೇರಿಸಿಕೊಳ್ಳುವ ಆಯ್ಕೆಯನ್ನು ನೀಡಲಾಗಿಲ್ಲ. ಆದರೆ, ಟಿ-ಡೈರಿಸ್‌ನಲ್ಲಿ ನೀವು 5000 ಸ್ನೇಹಿತರನ್ನ ಹೊಂದಿದ ಮೇಲೆಯೂ ಮತ್ತೆ ನಿಮ್ಮ ಪೆಂಡಿಂಗ್ ರಿಕ್ವೆಸ್ಟ್ ಸ್ನೇಹಿತರನ್ನು ಸೇರಿಸಿಕೊಳ್ಳಬಹುದಾಗಿದೆ.!!

ಸೆಲೆಬ್ರಿಟಿ ಬ್ಯಾಡ್ಜ್!!

ಸೆಲೆಬ್ರಿಟಿ ಬ್ಯಾಡ್ಜ್!!

ಟಿ-ಡೈರಿಸ್‌ನಲ್ಲಿ 5000 ಸ್ನೇಹಿತರಾದ ನಂತರ ನಿಮ್ಮ ಅಕೌಂಟ್ ಸೆಲೆಬ್ರಿಟಿ ಅಕೌಂಟ್ ಆಗಲಿದೆ. ಫೇಸ್‌ಬುಕ್‌ನಂತೆಯೇ ನಿಮಗೊಂದು ಟಿಕ್ ಮಾರ್ಕ್ ಇರೋ ಬ್ಯಾಡ್ಜ್ ಸಿಗುತ್ತದೆ. ಸಾಮಾನ್ಯರನ್ನು ಸೆಲೆಬ್ರಿಟಿಗಳನ್ನಾಗಿ ಮಾಡುವ ಉದ್ದೇಶದಿಂದ ಈ ಆಯ್ಕೆ ತರಲಾಗಿದೆ ಎಂದು ಆಪ್ ನಿರ್ಮಾತೃಗಳು ತಿಳಿಸಿದ್ದಾರೆ.!!

ಈಗಲೇ ಡೌನ್‌ಲೋಡ್ ಮಾಡಿ!!

ಈಗಲೇ ಡೌನ್‌ಲೋಡ್ ಮಾಡಿ!!

ಮ್ಮ ದೇಶದ ಪ್ರತಿಭಾವಂತರ ಪ್ರತಿಭೆ ಬೇರೆ ದೇಶಗಳ ಪಾಲಾಗದೆ ಅದು ನಮ್ಮ ದೇಶಕ್ಕೇ ಮೀಸಲಾಗಿರಲಿ, ಜಗತ್ತು ಭಾರತದತ್ತ ತನ್ನ ದೃಷ್ಟಿ ನೆಡಬೇಕು ಎಂದರೆ ಸ್ವದೇಶಿ ಪ್ರತಿಭೆಗಳನ್ನು ಗುರುತಿಸಬೇಕಿದೆ. ಹಾಗಾಗಿ, ಭಾರತದ ಪ್ರಪ್ರಥಮ ಸಾಮಾಜಿಕ ಜಾಲತಾಣ ಆಪ್ ನಿರ್ಮಿಸಿದ ಕನ್ನಡಿಗರ ಆಪ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ.!!

Best Mobiles in India

English summary
tdiaries_ First Indian Social Media App. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X