ಭಾರತೀಯ ಸೇನೆಯ ಮೇಲೆ ಪಾಕಿಸ್ತಾನಿ ಹ್ಯಾಕರ್ ದಾಳಿ

By Shwetha
|

ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನವು ನಿಧಾನವಾಗಿ ಪ್ರಗತಿಯನ್ನು ಕಂಡುಕೊಳ್ಳುತ್ತಿದೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರವನ್ನು ಒದಗಿಸುವ ಹೊಸ ವಿಧಾನಗಳನ್ನು ಇಂದಿನ ಆಧುನಿಕ ತಂತ್ರಜ್ಞಾನವು ಒದಗಿಸುತ್ತಿದ್ದರೂ ಹ್ಯಾಕರ್‌ಗಳ ಕಪಿ ಮುಷ್ಟಿಯಿಂದ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಸಂರಕ್ಷಿಸುವ ಸಂಕಷ್ಟಕ್ಕೆ ಪರಿಹಾರ ಮಾತ್ರ ಇನ್ನೂ ದೊರಕಿಲ್ಲ.

ಓದಿರಿ: ಅರೆ ಏನಾಶ್ಚರ್ಯ ಫೋನ್ ಸ್ಕ್ರೀನ್‌ನಿಂದ ಬ್ಯಾಟರಿ ದುಪ್ಪಟ್ಟು

ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋದರೆ ಭಾರತೀಯ ಸೇನೆಯಲ್ಲಿ ಕೂಡ ಪಾಕಿಸ್ತಾನಿ ಹ್ಯಾಕರ್ ಕ್ರೂರದೃಷ್ಟಿ ಬಿದ್ದಿದೆ ಎಂಬ ಸುದ್ದಿ ಕೇಳಿ ಬಂದಿದೆ. ಅದು ಏನು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ.

ಅಪ್ಲಿಕೇಶನ್ ಡೌನ್‌ಲೋಡ್

ಅಪ್ಲಿಕೇಶನ್ ಡೌನ್‌ಲೋಡ್

ಸೇನೆಯಲ್ಲಿರುವ ವೈಯಕ್ತಿಕ ಫೋನ್‌ಗಳು ಪಾಕಿಸ್ತಾನಿ ಹ್ಯಾಕರ್‌ಗಳ ಕಣ್ಣಿಗೆ ಬಿದ್ದಿದೆ ಎಂಬ ಸುದ್ದಿಯೊಂದು ದೊರೆತಿದ್ದು ಕೆಲವೊಂದು ಮೊಬೈಲ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿರುವುದರಿಂದ ಈ ಸಂಕಷ್ಟಕ್ಕೆ ಸೇನೆ ಗುರಿಯಾಗಿದೆ.

ಸೈಬರ್ ಸೆಕ್ಯುರಿಟಿ

ಸೈಬರ್ ಸೆಕ್ಯುರಿಟಿ

ಸೈಬರ್ ಸೆಕ್ಯುರಿಟಿ ಸಂಶೋಧಕರ ಪ್ರಕಾರ ಕಳೆದ ವರ್ಷ ಹೆಚ್ಚಿನ ಭಾರತೀಯ ಸೇನಾ ಸಿಬ್ಬಂದಿಗಳು ಮಾಲ್‌ವೇರ್‌ಗಳು ಮತ್ತು ವೈರಸ್‌ಗಳಿಗೆ ತುತ್ತಾಗಿರುವುದರ ಬಗ್ಗೆ ವರದಿ ಮಾಡಿತ್ತು.

ಹ್ಯಾಕರ್‌ ಗುರಿ

ಹ್ಯಾಕರ್‌ ಗುರಿ

ಸುದ್ದಿ ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳನ್ನು ಹ್ಯಾಕರ್‌ಗಳು ಗುರಿಯಾಗಿಸಿಕೊಂಡಿದ್ದಾರೆ.

ಕೋಡ್

ಕೋಡ್

ಸುದ್ದಿ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿರುವ ಕೋಡ್ ಅನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಕಳೆದ ಮೂರು ವರ್ಷಗಳಿಂದ ಪಾಕಿಸ್ತಾನಿ ಹ್ಯಾಕರ್‌ಗಳು ಈ ಕ್ರಿಯೆಯಲ್ಲಿ ತೊಡಗಿರುವುದು ಕಂಡುಬಂದಿದೆ.

ವಶಕ್ಕೆ ತೆಗೆದುಕೊಳ್ಳಲಾಗಿದೆ

ವಶಕ್ಕೆ ತೆಗೆದುಕೊಳ್ಳಲಾಗಿದೆ

ಈ ಅಪ್ಲಿಕೇಶನ್‌ಗಳ ದಾಳಿಗೆ ಹಲವಾರು ಮೊಬೈಲ್ ಫೋನ್‌ಗಳು ತುತ್ತಾಗಿವೆ. ಈ ವಿವರಗಳನ್ನು ಆರು ತಿಂಗಳ ಹಿಂದೆಯೇ ಭದ್ರತಾ ಸಿಬ್ಬಂದಿಗಳಿಗೆ ರವಾನಿಸಿದ್ದು ದಾಳಿಗೆ ಒಳಗಾಗಿರುವ ಫೋನ್‌ಗಳು ಮತ್ತು ಸಿಸ್ಟಮ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಪಾಕಿಸ್ತಾನಿ ಇಂಟೆಲಿಜೆನ್ಸಿ ಏಜೆನ್ಸಿ

ಪಾಕಿಸ್ತಾನಿ ಇಂಟೆಲಿಜೆನ್ಸಿ ಏಜೆನ್ಸಿ

26/11 ರ ಮುಂಬೈ ದಾಳಿಯ ದಾಳಿಕೋರರು ಈ ಸಂಚಿನ ಹಿಂದಿರುವ ಕಾಣದ ಕೈಗಳಾಗಿದ್ದು ಪಾಕಿಸ್ತಾನಿ ಇಂಟೆಲಿಜೆನ್ಸಿ ಏಜೆನ್ಸಿಗಳು ಮೊಬೈಲ್‌ನಿಂದ ಮಾಡಲಾದ ಅಧಿಕೃತ ಕರೆಗಳು, ಎಸ್‌ಎಮ್‌ಎಸ್‌ಗಳ ಮೇಲೆ ಕಣ್ಣಿಟ್ಟಿದೆ.

ನಿಯಂತ್ರಿಸುತ್ತಿದ್ದಾರೆ

ನಿಯಂತ್ರಿಸುತ್ತಿದ್ದಾರೆ

ಮಾಲೀಕರಿಗೆ ತಿಳಿಯದಂತೆಯೇ ಫೋನ್‌ನಲ್ಲಿ ದಾಖಲಾಗಿರುವ ವೀಡಿಯೊಗಳನ್ನು ಇವರು ನಿಯಂತ್ರಿಸುತ್ತಿದ್ದಾರೆ.

ಅಸಾಮಾನ್ಯ

ಅಸಾಮಾನ್ಯ

ಜನಸಾಮಾನ್ಯರು ಇದರ ಬಗ್ಗೆ ಹೆಚ್ಚು ಜಾಗರೂಕತೆಯಿಂದ ಇದ್ದು ಏನಾದರೂ ಅಸಾಮಾನ್ಯ ಎಂಬುದು ಕಂಡುಬಂದಲ್ಲಿ ಅಧಿಕಾರಿಗೆ ತಿಳಿಸಬೇಕು ಎಂಬುದನ್ನು ಸೂಚಿಸಲಾಗಿದೆ.

ಮಾಹಿತಿಗಳನ್ನು ಕಬಳಿಸುವ ಯತ್ನ

ಮಾಹಿತಿಗಳನ್ನು ಕಬಳಿಸುವ ಯತ್ನ

ಪಾಕಿಸ್ತಾನಿ ಹ್ಯಾಕರ್‌ಗಳು ರಹಸ್ಯವಾಗಿ ಭಾರತೀಯ ಸೇನೆಯ ಮಾಹಿತಿಗಳನ್ನು ಕಬಳಿಸುವ ಯತ್ನದಲ್ಲಿದ್ದು ಹ್ಯಾಕಿಂಗ್ ತಂತ್ರಜ್ಞಾನ ಅವರಿಗೆ ಸಹಾಯವನ್ನು ಮಾಡಲಿದೆ.

ಅಧಿಕೃತ ಸಂವಹನ

ಅಧಿಕೃತ ಸಂವಹನ

ಅಧಿಕೃತವಾಗಿ ಮಾಡಲಾದ ಯಾವುದೇ ಸಂವಹನವನ್ನು ಪಾಕಿಸ್ತಾನಿ ಇಂಟಲಿಜೆನ್ಸಿ ಹ್ಯಾಕರ್‌ಗಳು ಸೆರೆಹಿಡಿಯಬಹುದಾಗಿದೆ.

Most Read Articles
Best Mobiles in India

English summary
A private consortium has claimed that phones of Army personnel, who had downloaded some mobile application related to news, had been compromised by hackers based in Pakistan.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X