ಫೇಸ್‌ಬುಕ್ ಹಾಲ್‌ ಆಫ್ ಫೇಮ್‌ನಲ್ಲಿ ಸೇರಿದ 22 ವರ್ಷದ ಭಾರತೀಯ ಟೆಕ್ಕಿ!!

|

ಫೇಸ್‌ಬುಕ್‌ ಹಾಲ್‌ ಆಫ್ ಫೇಮ್‌ನಲ್ಲಿ ಈ ವರ್ಷ ಸೇರ್ಪಡೆಯಾದ 94 ಹೆಸರುಗಳ ಪೈಕಿ 22 ವರ್ಷದ ಭಾರತೀಯ ಟೆಕ್ಕಿಯೋರ್ವರ ಹೆಸರು ಕೂಡ ಸೇರ್ಪಡೆಯಾಗಿದೆ. ವ್ಯಾಟ್ಸ್‌ಆಪ್‌ನಲ್ಲಿದ್ದ ಗುರುತರ ದೋಷವೊಂದನ್ನು ಪತ್ತೆಹಚ್ಚಿದ್ದ ಮಣಿಪುರದ ಯುವ ಟೆಕ್ಕಿ 'ಝೊನೆಲ್ ಸೌಗೈಜಮ್' ಎಂಬುವವರನ್ನು ಫೇಸ್‌ಬುಕ್ ಹಾಲ್‌ ಆಫ್ ಫೇಮ್‌ನಲ್ಲಿ 16ನೇ ಸ್ಥಾನ ನೀಡಿ ಗೌರವಿಸಲಾಗಿದೆ.

ಹೌದು, ವಾಟ್ಸ್‌ಆಪ್‌ ಪ್ರೋಗ್ರಾಂನಲ್ಲೇ ಒಂದು ದೋಷವೊಂದು ಕಂಡುಬಂದಿದ್ದನ್ನು 'ಝೊನೆಲ್ ಸೌಗೈಜಮ್' ಅವರು ಇತ್ತೀಚಿಗೆ ಕಂಡುಹಿಡಿದಿದ್ದರು. ಸಾಫ್ಟ್ವೇರ್ ಭಾಷೆಯಲ್ಲಿ "ಬಗ್‌' ಎಂದು ಕರೆಯಲಾಗುವ ಈ ದೋಷದಿಂದಾಗಿ, ವಾಟ್ಸ್‌ಆಪ್‌ ವಿಡಿಯೋ ಕಾಲ್‌ ಸೌಲಭ್ಯದಡಿ ಒಬ್ಬ ವ್ಯಕ್ತಿ ವಿಡಿಯೋ ಕಾಲ್‌ ಮಾಡಿದಾಗ ಸಮಸ್ಯೆ ಎದುರಾಗುತ್ತಿರುವುದನ್ನು ಝೊನೆಲ್ ತಿಳಿಸಿದ್ದರು.

ಫೇಸ್‌ಬುಕ್ ಹಾಲ್‌ ಆಫ್ ಫೇಮ್‌ನಲ್ಲಿ ಸೇರಿದ 22 ವರ್ಷದ ಭಾರತೀಯ ಟೆಕ್ಕಿ!!

ಓರ್ವ ವ್ಯಕ್ತಿ ವಿಡಿಯೋ ಕಾಲ್‌ ಮಾಡಿದಾಗ, ಆತ ಯಾರಿಗೆ ಕರೆ ಮಾಡಿದ್ದನೋ ಆತನ ಬಳಿಯಿದ್ದ ಮೊಬೈಲ್‌ನಲ್ಲಿ ಕರೆ ರಿಂಗಣಿಸುತ್ತಿದ್ದುದರ ಜತೆಗೆ, ಆತನ ಮೊಬೈಲಿನಲ್ಲಿದ್ದ ಸೆಲ್ಫೀ ಕ್ಯಾಮೆರಾ ಕುಡ ಚಾಲನೆಗೊಳ್ಳುತ್ತಿತ್ತು. ಈ ವೇಳೆಯಲ್ಲಿ ಆತ ಆ ಹೊತ್ತಿನಲ್ಲಿ ಮಾಡುತ್ತಿದ್ದ ಚಟುವಟಿಕೆಯೆಲ್ಲವನ್ನು ಆತನ ಅರಿವಿಗೆ ಬಾರದಂತೆ ಕರೆ ಮಾಡಿದ ವ್ಯಕ್ತಿಯ ಫೋನಿನನಲ್ಲಿ ಬಿತ್ತರವಾಗುತ್ತಿತ್ತು.

ಇದನ್ನು ಕಂಡುಹಿಡಿದ 'ಝೊನೆಲ್ ಸೌಗೈಜಮ್', ಆ ಬಗ್ ಅನ್ನು ಕೂಡಲೇ ಫೇಸ್‌ಬುಕ್‌ನ "ಬಗ್‌ ಬೌಂಟಿ ಪ್ರೋಗ್ರಾಂ' ವಿಭಾಗದ ಗಮನಕ್ಕೆ ತಂದಿದ್ದರು. ಇದಕ್ಕಾಗಿ ವಾಟ್ಸ್‌ಆಪ್‌ ಸಂಸ್ಥೆಯ ಮಾತೃಸಂಸ್ಥೆ ಫೇಸ್‌ಬುಕ್‌ 3.47 ಲಕ್ಷ ರೂ.(5 ಸಾವಿರ ಡಾಲರ್‌) ಬಹುಮಾನ ನೀಡಿ, ಅವರನ್ನು "2019ನೇ ಸಾಲಿನ ಫೇಸ್‌ಬುಕ್‌ ಹಾಲ್‌ ಆಫ್ ಫೇಮ್‌'ನಲ್ಲಿ ಸೇರ್ಪಡೆಗೊಳಿಸಿಕೊಂಡಿದೆ.

ಫೇಸ್‌ಬುಕ್ ಹಾಲ್‌ ಆಫ್ ಫೇಮ್‌ನಲ್ಲಿ ಸೇರಿದ 22 ವರ್ಷದ ಭಾರತೀಯ ಟೆಕ್ಕಿ!!

22 ವರ್ಷದ ಸಿವಿಲ್‌ ಎಂಜಿನಿಯರ್‌ ಆಗಿರುವ ಝೊನೆಲ್ ಅವರು ಈ ಸಮಸ್ಯೆಯನ್ನು ಬಗ್‌ ಬೌಂಟಿ ಪ್ರೋಗ್ರಾಂ' ವಿಭಾಗದ ಗಮನಕ್ಕೆ ತಂದಿದ್ದರಿಂದ, ಫೇಸ್‌ಬುಕ್‌ ಭದ್ರತಾ ತಂಡವು ತತ್‌ಕ್ಷಣ ಕಾರ್ಯ ಪ್ರವೃತ್ತವಾಯಿತು. ಬಗ್‌ ಕುರಿತು ಸರಿಯಾದ ಸಮಯಕ್ಕೆ ಮಾಹಿತಿ ಕೊಟ್ಟಿದ್ದರಿಂದ 15-20 ದಿನಗಳ ಒಳಗಾಗಿ ಫೇಸ್‌ಬುಕ್ ಸಮಸ್ಯೆಯನ್ನು ಪರಿಹರಿಸಿಕೊಂಡಿದ್ದನ್ನು ನೋಡಬಹುದು

ಓದಿರಿ: ಆನ್‌ಲೈನ್ ಮಾರುಕಟ್ಟೆಯಲ್ಲಿ ಫ್ಲಿಪ್‌ಕಾರ್ಟ್ ಅಮೆಜಾನ್‌ಗೆ ಭಯ ಹುಟ್ಟಿಸಿದ ಶಿಯೋಮಿ!!

Best Mobiles in India

English summary
Facebook has honoured a Manipuri man for discovering a WhatsApp bug that violated the privacy of a user. Zonel Sougaijam. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X