ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪೆನಿಗಳಿಗೆ ಬಿಗ್‌ ಶಾಕ್‌ ಕೊಟ್ಟ ಭಾರತ!

|

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಚೀನಾ ಮೂಲದ ಕಂಪೆನಿಗಳ ಪ್ರಾಬಲ್ಯ ಜಾಸ್ತಿಯಿದೆ. ಆದರೆ ಇದೀಗ ಭಾರತ ಸರ್ಕಾರ ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪೆನಿಗಳಿಗೆ ಬಿಗ್‌ ಶಾಕ್‌ ನೀಡಲು ಮುಂದಾಗಿದೆ. ಈ ಮೂಲಕ ಸ್ವದೇಶಿ ಬ್ರ್ಯಾಂಡ್‌ಗಳು ಮತ್ತೆ ಪ್ರಾಬಲ್ಯ ಸಾಧಿಸುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ಅದರಂತೆ ಭಾರತದಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪೆನಿಗಳು 12,000ರೂ.ಗಳಿಗಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡದಂತೆ ತಡೆಯುವುದಕ್ಕೆ ಪ್ಲಾನ್‌ ಮಾಡಲಿದೆ ಎನ್ನಲಾಗಿದೆ.

ಚೀನಾ

ಹೌದು, ಚೀನಾ ದೇಶಕ್ಕೆ ಭಾರತ ಸರ್ಕಾರ ಮತ್ತೊಂದು ಬಿಗ್‌ ಶಾಕ್‌ ನೀಡಲು ಮುಂದಾಗಿದೆ. ಈಗಾಗಲೇ ಚೀನಾ ಮೂಲದ ಆಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿ ಚೀನಾ ದೇಶಕ್ಕೆ ಬಿಸಿಮುಟ್ಟಿಸಿರುವ ಭಾರತ ಸರ್ಕಾರ ಇದೀಗ ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪೆನಿಗಳಿಗೆ ಭಾರಿ ಹೊಡೆತ ನೀಡಲು ಪ್ಲಾನ್‌ ರೂಪಿಸಿದೆ. ಈ ಪ್ಲಾನ್‌ ಪ್ರಕಾರ ಇನ್ಮುಂದೆ ಚೀನಾ ದೇಶದ ಸ್ಮಾರ್ಟ್‌ಫೋನ್‌ ಕಂಪೆನಿಗಳು 12,000ರೂ.ಗಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಕಟ್ಟೆಯಿಂದ ಗೇಟ್‌ ಪಾಸ್‌ ನೀಡಲಿದೆ.

ಸರ್ಕಾರದ

ಭಾರತ ಸರ್ಕಾರದ ಈ ನಿರ್ಧಾರದಿಂದ ಸ್ವದೇಶಿ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಮತ್ತೆ ಏಳಿಗೆ ಸಾಧಿಸುವ ಅವಕಾಶ ಸಿಗಲಿದೆ. ಏಕೆಂದರೆ ಚೀನಾ ಮೂಲದ ಸ್ಮಾರ್ಟ್‌ಫೋನ್‌ಗಳ ಆರ್ಭಟದ ನಡುವೆ ಸ್ವದೇಶಿ ಕಂಪೆನಿಗಳಾದ ಲಾವಾ, ಮೈಕ್ರೋಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ಗಳು ಪ್ರಾಬಲ್ಯ ಕಳೆದುಕೊಂಡಿವೆ. ಒಂದು ವೇಳೆ ಭಾರತ ಸರ್ಕಾರದ ಈ ನಿರ್ಧಾರವನ್ನು ಜಾರಿಗೊಳಿಸಿದರೆ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ವದೇಶಿ ಬ್ರ್ಯಾಂಡ್‌ಗಳು ಪ್ರಾಬಲ್ಯ ಸಾಧಿಸುವುದು ಪಕ್ಕಾ ಆಗಲಿದೆ. ಹಾಗಾದ್ರೆ ಭಾರತ ಸರ್ಕಾರ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆಯಾ? ಇದರ ಬಗ್ಗೆ ಲಭ್ಯವಿರುವ ವರದಿ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಚೀನಾ

ಭಾರತದಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆಯಿದೆ. ಚೀನಾ ದೇಶದ ಸ್ಮಾರ್ಟ್‌ಫೋನ್‌ ಕಂಪೆನಿಗಳು ತಮ್ಮ ದೇಶಕ್ಕಿಂತ ಹೆಚ್ಚಿನ ಸಂಖ್ಯೆಯ ಮೊಬೈಲ್‌ಗಳನ್ನು ಭಾರತದಲ್ಲಿ ಮಾರಾಟಮಾಡುತ್ತಿವೆ. ಚೀನಾ ದೇಶದ ಮೊಬೈಲ್‌ಗಳ ಏಳಿಗೆಯಿಂದ ಭಾರತದ ದೇಶೀಯ ಉದ್ಯಮ ಇಳಿಮುಖವನ್ನು ಕಂಡಿದೆ. ಇದಲ್ಲದೆ ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪೆನಿಗಳು ಇತ್ತೀಚಿಗೆ ತೆರೆಗೆ ವಂಚನೆಯ ಕಾರಣಕ್ಕೆ ಸುದ್ದಿಯಾಗುತ್ತಿವೆ. ಇದೆಲ್ಲವನ್ನು ಗಂಬೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ ಭಾರತದಲ್ಲಿ ಚೀನಾ ಮೂಲದ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಗೇಟ್‌ ಪಾಸ್‌ ನೀಡಲು ಮುಂದಾಗಿದೆ.

ಸರ್ಕಾರ

ಭಾರತ ಸರ್ಕಾರ ಒಂದು ವೇಳೆ ಈ ನಿರ್ಧಾರವನ್ನು ಜಾರಿಗೊಳಿಸಿದರೆ ಚೀನಾ ಮೂಲದ ಶೀಯೋಮಿ ಬ್ರ್ಯಾಂಡ್‌ ಫೋನ್‌ಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಏಕೆಂದರೆ ಶಿಯೋಮಿ ಕಂಪೆನಿ ಭಾರತ ಅತಿದೊಡ್ಡ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಾಗಿದೆ. ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಚೀನಾ ಕಂಪೆನಿಗಳಿಗೆ ನಷ್ಟ ಆಗುವುದು ಪಕ್ಕಾ ಎನ್ನಲಾಗಿದೆ. ಅದರಲ್ಲೂ ಕೌಂಟರ್‌ಪಾಯಿಂಟ್ ರಿಸರ್ಚ್‌ನ ಪ್ರಕಾರ, ಭಾರತ ಸರ್ಕಾರ ಈ ರೀತಿಯ ನಿರ್ಧಾರ ತೆಗೆದುಕೊಂಡರೆ ಶಿಯೋಮಿ ಮತ್ತು ರಿಯಲ್‌ಮಿಯಂತಹ ಕಂಪನಿಗಳಿಗೆ ಸುಮಾರು 50% ಮಾರುಕಟ್ಟೆ ಪಾಲು ನಷ್ಟವಾಗಲಿದೆ.

ಸ್ಮಾರ್ಟ್‌ಫೋನ್‌

ಇನ್ನು ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಉತ್ತಮವಾದ ಬೇಡಿಕೆ ಇದೆ. ಇದರಲ್ಲಿ ಟೆಕ್ನೋ, ಇನ್ಫಿನಿಕ್ಸ್‌ ಮತ್ತು ಐಟೆಲ್‌ ಕಂಪೆನಿಗಳು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಪ್ರಸಿದ್ಧಿ ಪಡೆದುಕೊಂಡಿದೆ. ಈ ಕಂಪೆನಿಗಳು ಟ್ರಾನ್ಸಿಶನ್ ಗ್ರೂಪ್ ಬ್ರ್ಯಾಂಡ್‌ಗಳಾಗಿ ಗುರುತಿಸಿಕೊಂಡಿದೆ. ಅದರಲ್ಲೂ ಎರಡನೇ ತ್ರೈಮಾಸಿಕದಲ್ಲಿ ಭಾರತದ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ 12% ಪಾಲನ್ನು ಪಡೆದುಕೊಂಡಿವೆ. ಕೌಂಟರ್‌ಪಾಯಿಂಟ್ ರಿಸರ್ಚ್ ಪ್ರಕಾರ, ಐಟೆಲ್ 6,000 ಸ್ಮಾರ್ಟ್‌ಫೋನ್ ವಿಭಾಗದಲ್ಲಿ 77% ಪಾಲನ್ನು ಹೊಂದಿದ್ದರೆ, ಟೆಕ್ನೋ ಕಂಪೆನಿ ದೇಶದಲ್ಲಿ 8,000 ರೂ.ಗಳ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಸ್ವದೇಶಿ

ಇದೇ ಸಂದರ್ಭದಲ್ಲಿ ಸ್ವದೇಶಿ ಬ್ರ್ಯಾಂಡ್‌ಗಳಾದ ಮೈಕ್ರೊಮ್ಯಾಕ್ಸ್, ಲಾವಾ, ಕಾರ್ಬನ್ ಕಪೆನಿಗಳು ಮಾರುಕಟ್ಟೆಯಲ್ಲಿ ಏಳಿಗೆಯನ್ನು ಸಾಧಿಸುವಲ್ಲಿ ವಿಫಲವಾಗಿವೆ. ಆದರಿಂದ ಸ್ವದೇಶಿ ಬ್ರಾಂಡ್‌ಗಳಿಗೆ ಹೆಚ್ಚು ಅಗತ್ಯವಿರುವ ಉತ್ತೇಜನವನ್ನು ನೀಡಲು ಭಾರತ ಸರ್ಕಾರ ಮುಂದಾಗಿದೆ. ಆದರಿಂದ ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪೆನಿಗಖು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡದಂತೆ ತಡೆಯಲು ಮುಂದಾಗಿದೆ. ಇದರಿಂದ ಸ್ವದೇಶಿ ಬ್ರ್ಯಾಂಡ್‌ಗಳಿಗೆ ಉತ್ತಮ ಮಾರುಕಟ್ಟೆ ದೊರೆಯಲಿದೆ ಎನ್ನುವ ಸರ್ಕಾರದ ಪ್ಲಾನ್‌ ಆಗಿದೆ.

ಚೀನಾ

ಇನ್ನು ಚೀನಾ ದೇಶದ ಕಂಪೆನಿಗಳ ವಿರುದ್ದ ಭಾರತ ಸರ್ಕಾರ ತೆಗೆದುಕೊಂಡಿರುವ ಕಠಿಣ ನಿಲುವು ಇದೇ ಮೊದಲೇನಲ್ಲ. ಭಾರತ ಸರ್ಕಾರ ಈಗಾಗಲೇ ಚೀನಾದ ತಯಾರಕರ ವಿರುದ್ಧ ಕಠಿಣ ನಿಲುವನ್ನು ತೆಗೆದುಕೊಂಡಿದೆ. ಇದಕ್ಕೆ ಸಾಕ್ಷಿಯೆಂಬಂತೆ ಒಪ್ಪೋ, ವಿವೋ ಮತ್ತು ಶಿಯೋಮಿ ಸ್ಮಾರ್ಟ್‌ಫೋನ್‌ ಕಂಪೆನಿಗಳ ಮೇಲೆ ಕಾನೂನಾತ್ಮಕ ದಾಳಿಯನ್ನು ನಡೆಸಲಾಗಿದೆ. ಚೀನಾದ ಈ ಮೂರು ಮೊಬೈಲ್ ಕಂಪನಿಗಳು ಭಾರತದಲ್ಲಿ ತೆರಿಗೆ ವಂಚನೆ ಆರೋಪವನ್ನು ಹೊತ್ತಿದ್ದು, ಭಾರತ ಸರ್ಕಾರ ಈ ಪ್ರಕರಣಗಳನ್ನು ಪರಿಶೀಲಿಸುತ್ತಿದೆ.

ಮೊಬೈಲ್

ಇದರಲ್ಲಿ ವಿವೋ ಮೊಬೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಿಂದ ಸುಮಾರು 2,217 ಕೋಟಿ ರೂಪಾಯಿಗಳ ಕಸ್ಟಮ್ಸ್ ಸುಂಕ ವಂಚನೆಯಾಗಿದೆ ಅನ್ನೊದನ್ನ ಡಿಆರ್‌ಐ ಪತ್ತೆ ಮಾಡಿದೆ. ಆದರಿಂದ ಕಸ್ಟಮ್ಸ್ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ವಿವೋ ಇಂಡಿಯಾಗೆ 2,217 ಕೋಟಿ ರೂಪಾಯಿ ಮೊತ್ತದ ಕಸ್ಟಮ್ಸ್ ಸುಂಕವನ್ನು ಪಾವತಿಸುವಂತೆ ಶೋಕಾಸ್ ನೋಟಿಸ್ ಕೂಡ ನೀಡಲಾಗಿದೆ. ಇದಲ್ಲದೆ ಒಪ್ಪೋ ಮೊಬೈಲ್ಸ್‌ ಇಂಡಿಯಾ ಲಿಮಿಟೆಡ್‌ ಕೂಡ 4,403.88 ಕೋಟಿರೂ. ಕಸ್ಟಮ್ಸ್‌ ಸುಂಕವನ್ನು ಪಾವತಿಸಬೇಕಿದೆ.

ಸ್ಮಾರ್ಟ್‌ಫೋನ್‌ಗಳ

ಇನ್ನು ಚೀನಾ ಮೂಲದ ಸ್ಮಾರ್ಟ್‌ಫೋನ್‌ಗಳ ಮೇಲೆ ಮಾತ್ರವಲ್ಲ ಚೀನಿ ಅಪ್ಲಿಕೇಶನ್‌ಗಳ ಮೇಲೂ ಕೂಡ ಭಾರತ ಸರ್ಕಾರ ಮತ್ತೊಮ್ಮೆ ಕಣ್ಣುಹಾಯಿಸಿದೆ. ಈಗಾಗಲೇ ಚೀನಾ ಮೂಲದ ಅನೇಕ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿರುವ ಭಾರತ ಸರ್ಕಾರ ಇದೀಗ ಬ್ಯಾಟಲ್‌ಗ್ರೌಂಡ್‌ ಮೊಬೈಲ್‌ ಇಂಡಿಯಾ (BGMI) ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ತೆಗೆದುಹಾಕಲು ಸರ್ಕಾರ ಇತ್ತೀಚೆಗೆ ಗೂಗಲ್‌ ಮತ್ತು ಆಪಲ್‌ ಕಂಪೆನಿಗೆ ಆದೇಶಿಸಿದೆ. ಆದರೆ BGMI ಅನ್ನು ನಿರ್ಬಂಧಿಸಿರುವುದಕ್ಕೆ ಯಾವುದೇ ಕಾರಣವನ್ನು ಇನ್ನು ಸರ್ಕಾರವಾಗಲಿ, ಗೇಮ್ ಡೆವಲಪರ್ ಆಗಲಿ ಬಹಿರಂಗಪಡಿಸಿಲ್ಲ.

Best Mobiles in India

Read more about:
English summary
Indian government is planning to put curbs on China-based s low-end smartphones:..report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X