ಭಾರತದಲ್ಲಿ ನಕಲಿ ಸುದ್ದಿಗಳನ್ನು ಹರಡುತ್ತಿದ್ದ 8 ಯೂಟ್ಯೂಬ್ ಚಾನಲ್‌ಗಳು ಬ್ಯಾನ್‌!

|

ರಾಷ್ಟ್ರೀಯ ಭದ್ರತೆಗೆ ದಕ್ಕೆ ತರುವ ಯುಟ್ಯೂಬ್‌ ಚಾನಲ್‌ಗಳ ಮೇಲೆ ಭಾರತ ಸರ್ಕಾರ ತನ್ನ ಬ್ಯಾನ್‌ ಅಸ್ತ್ರವನ್ನು ಪ್ರಯೋಗಿಸಿದೆ. ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಹರಡುತ್ತಿದ್ದ 7 ಭಾರತೀಯ ಮತ್ತು 1 ಪಾಕಿಸ್ತಾನ ಮೂಲದ ಯುಟ್ಯೂಬ್‌ ಚಾನಲ್‌ಗಳನ್ನು ಬ್ಯಾನ್‌ ಮಾಡಿದೆ. ಈ ಮೂಲಕ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಎಂದಿಗೂ ರಾಜಿಯಿಲ್ಲ ಎನ್ನುವ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

ಯುಟ್ಯೂಬ್‌

ಹೌದು, ಯುಟ್ಯೂಬ್‌ ನ್ಯೂಸ್‌ ಚಾನಲ್‌ಗಳ ಮೂಲಕ ಸುಳ್ಳು ಸುದ್ದಿ ಹರಡುವುದು, ಭಾರತದ ರಾಷ್ಟ್ರೀಯ ಭದ್ರತೆಗೆ ದಕ್ಕೆ ತರುವ ಕೆಲಸ ಮಾಡುವವರ ವಿರುದ್ದ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತಾ ಬಂದಿದೆ. ಅದರಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಒಟ್ಟು 8 ಯೂಟ್ಯೂಬ್ ಚಾನೆಲ್‌ಗಳನ್ನು ಬ್ಯಾನ್‌ ಮಾಡಿದೆ. ಇದರಲ್ಲಿ ಭಾರತದ 7 ಯುಟ್ಯೂಬ್‌ ಚಾನಲ್‌ಗಳು ಹಾಗೂ ಪಾಕಿಸ್ತಾನ ಮೂಲದ 1 ಯೂಟ್ಯೂಬ್ ನ್ಯೂಸ್‌ ಚಾನಲ್‌ ಸೇರಿದೆ ಎನ್ನಲಾಗಿದೆ. ಹಾಗಾದ್ರೆ ಈ ಯುಟ್ಯೂಬ್‌ ನ್ಯೂಸ್‌ ಚಾನಲ್‌ಗಳನ್ನು ಬ್ಯಾನ್‌ ಮಾಡುವುದಕ್ಕೆ ಕಾರಣ ಏನು? ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಏನು ಹೇಳಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯುಟ್ಯೂಬ್‌

ಭಾರತದ ರಾಷ್ಟ್ರೀಯ ಭದ್ರತೆಗೆ ದಕ್ಕೆ ತರುವ 8 ಯುಟ್ಯೂಬ್‌ ನ್ಯೂಸ್‌ ಚಾನಲ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ. ಸದ್ಯ ಬ್ಯಾನ್‌ ಮಾಡಲಾದ ಯುಟ್ಯೂಬ್‌ ಚಾನಲ್‌ಗಳನ್ನು ಲೋಕತಂತ್ರ ಟಿವಿ, ಯು & ವಿ ಟಿವಿ, ಎಎಮ್ ರಜ್ವಿ, ಗೌರವಶಾಲಿ ಪವನ್ ಮಿಥಿಲಾಂಚಲ್, ಸೀಟಾಪ್ 5 ಟಿಎಚ್, ಸರ್ಕಾರಿ ಅಪ್‌ಡೇಟ್, ಸಬ್ ಕುಚ್ ದೇಖೋ ಮತ್ತು ಪಾಕಿಸ್ತಾನ -ಆಧಾರಿತ ನ್ಯೂಸ್ ಕಿ ದುನ್ಯಾ ಎಂದು ಗುರುತಿಸಲಾಗಿದೆ. ಈ ಯುಟ್ಯೂಬ್‌ ಚಾನಲ್‌ಗಳು ಭಾರತೀಯ ಸಶಸ್ತ್ರ ಪಡೆಗಳು, ಜಮ್ಮು ಮತ್ತು ಕಾಶ್ಮೀರ ಇತ್ಯಾದಿ ವಿಷಯಗಳ ಮೇಲೆ ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡುತ್ತಿದ್ದವು ಎಂದು ಆರೋಪಿಸಲಾಗಿದೆ.

ಯುಟ್ಯೂಬ್‌

ಇದೇ ಕಾರಣಕ್ಕೆ ಐಟಿ ನಿಯಮಗಳು 2021 ರ ಅಡಿಯಲ್ಲಿ ಈ ಯುಟ್ಯೂಬ್‌ ನ್ಯೂಸ್‌ ಚಾನಲ್‌ಗಳನ್ನು ಬ್ಯಾನ್‌ ಮಾಡಲಾಗಿದೆ. ಇನ್ನು ಬ್ಯಾನ್‌ ಮಾಡಲಾದ ಯುಟ್ಯೂಬ್‌ ಚಾನಲ್‌ಗಳು 114 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿವೆ. ಅಲ್ಲದೆ 85 ಲಕ್ಷ 73 ಸಾವಿರ ಚಂದಾದಾರರನ್ನು ಪಡೆದುಕೊಂಡಿವೆ ಎನ್ನಲಾಗಿದೆ. ಈ ಎಲ್ಲಾ ಯೂಟ್ಯೂಬ್‌ ಚಾನಲ್‌ಗಳು ಭಾರತದ ವಿರುದ್ದ ನಕಲಿ ಸುದ್ದಿಗಳನ್ನು ಹರಡುವ ಮೂಲಕ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದವು ಅನ್ನೊದು ಬಹಿರಂಗವಾಗಿದೆ.

ಯೂಟ್ಯೂಬ್

ಇದರಲ್ಲಿ ಕೆಲವು ಯೂಟ್ಯೂಬ್ ಚಾನೆಲ್‌ಗಳು ಭಾರತದಲ್ಲಿ ಧಾರ್ಮಿಕ ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ಪ್ರಯತ್ನ ನಡೆಸಿವೆ. ಅಲ್ಲದೆ ವಿವಿಧ ವೀಡಿಯೊಗಳಲ್ಲಿ ಹಲವು ತಪ್ಪು ಸಂದೇಶಗಳನ್ನು ನೀಡಲಾಗಿದೆ. ಇವುಗಳಲ್ಲಿ ಭಾರತದಲ್ಲಿ ಧಾರ್ಮಿಕ ಹಬ್ಬಗಳ ಆಚರಣೆ, ಧಾರ್ಮಿಕ ಯುದ್ಧದ ಘೋಷಣೆ ಇತ್ಯಾದಿಗಳನ್ನು ಭಾರತ ಸರ್ಕಾರ ನಿಷೇಧಿಸಿದೆ ಎನ್ನುವ ಸುಳ್ಳುಸುದ್ದಿಗಳನ್ನು ಹರಡಲಾಗಿದೆ. ಇದರಿಂದ ದೇಶದಲ್ಲಿ ಕೋಮು ಸೌಹಾರ್ದತೆಗೆ ಹಾನಿಯನ್ನು ಉಂಟುಮಾಡುವ ಯತ್ನ ನಡೆಸಿದ್ದಾರೆ.

ಯುಟ್ಯೂಬ್‌

ಭಾರತ ಸರ್ಕಾರ ಯುಟ್ಯೂಬ್‌ ಸುದ್ದಿ ಚಾನಲ್‌ಗಳನ್ನು ಬ್ಯಾನ್‌ ಮಾಡಿರುವುದು ಇದೇ ಮೊದಲೇನಲ್ಲ. ಇತ್ತೀಚೆಗೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 22 ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳನ್ನು ಬ್ಯಾನ್‌ ಮಾಡಲು ಆದೇಶವನ್ನು ನೀಡಿತ್ತು. ಅದರಲ್ಲಿ ನಾಲ್ಕು ಯುಟ್ಯೂಬ್‌ ಚಾನಲ್‌ಗಳು ಪಾಕಿಸ್ತಾನ ಮೂಲವನ್ನು ಹೊಂದಿದ್ದವು. ಇವುಗಳ ಮೂಲಕ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ನಕಲಿ ಸುದ್ದಿಗಳನ್ನು ಹರಡಲಾಗುತ್ತಿತ್ತು. ಇದೆಲ್ಲವನ್ನು ಗುರುತಿಸಿದ ಸರ್ಕಾರ ಈ ಯುಟ್ಯೂಬ್‌ ಚಾನಲ್‌ಗಳ ಮೇಲೆ ಕ್ರಮವನ್ನು ತೆಗೆದುಕೊಂಡಿದೆ.

Best Mobiles in India

English summary
The Information and Broadcasting Ministry on Monday blocked 8 YouTube channels for ‘spreading disinformation related to India’s national security.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X