ಗ್ಯಾಜೆಟ್ಸ್‌, ಎಲೆಕ್ಟ್ರಾನಿಕ್ಸ್ ರಿಪೇರಿಗೆ ಸರ್ಕಾರದಿಂದ ಏಕೀಕೃತ ಪೋರ್ಟಲ್ ಸ್ಥಾಪನೆ?; ಏನಿದರ ಕೆಲಸ

|

ನೀವು ಯಾವುದೇ ಗ್ಯಾಜೆಟ್‌ ಖರೀದಿ ಮಾಡಿದಾಗ ಅದರಲ್ಲಿ ವಾರಂಟಿ ಕಾರ್ಡ್‌ ಇರುತ್ತದೆ. ಹಾಗೆಯೇ ಆ ಪ್ರೊಡಕ್ಟ್‌ ಮಾರುವವರು ಸಹ ಮೊದಲೇ ಅಷ್ಟು ವರ್ಷ ವಾರಂಟಿ ಇದೆ, ಹಾಗಿದೆ-ಹೀಗಿದೆ ಎಂದು ಹೇಳಿ ಮಾರಾಟ ಮಾಡುತ್ತಾರೆ. ಆದರೆ, ನೀವು ಖರೀದಿ ಮಾಡಿದ ಗ್ಯಾಜೆಟ್‌ ಕೆಲವು ದಿನಗಳ ನಂತರ ಕೆಟ್ಟು ಹೋದಾಗ ಅದನ್ನು ರಿಪೇರಿ ಮಾಡಿಸಿಕೊಳ್ಳುವ ಸಮಯದಲ್ಲಿ ನೀವು ಖಂಡಿತಾ ಹೈರಾಣಾಗುತ್ತೀರ. ಈ ಕಾರಣಕ್ಕೆ ಸರ್ಕಾರ ಪ್ರಮುಖ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದೆ.

ಬ್ರ್ಯಾಂಡ್

ಹೌದು, ಹಲವು ಬ್ರ್ಯಾಂಡ್ ನ ಗ್ಯಾಜೆಟ್‌ಗಳ ರಿಪೇರಿ ವಿಷಯಕ್ಕೆ ಸಂಬಂಧಿಸಿದಂತೆ ಏಕೀಕೃತ ಪೋರ್ಟಲ್ ಅನ್ನು ಸ್ಥಾಪಿಸಲು ಸರ್ಕಾರ ಯೋಜಿಸುತ್ತಿದೆ. ಈ ಮೂಲಕ ಗ್ರಾಹಕರು ಶೀಘ್ರದಲ್ಲೇ ವಿವಿಧ ಗ್ಯಾಜೆಟ್‌ಗಳು, ಎಲೆಕ್ಟ್ರಾನಿಕ್ ಡಿವೈಸ್‌ಗಳು ಹಾಗೂ ಗೃಹೋಪಯೋಗಿ ಉಪಕರಣಗಳ ದುರಸ್ತಿ ನೀತಿಗಳು ಮತ್ತು ತಾಂತ್ರಿಕ ಕೈಪಿಡಿಗಳ ಬಗ್ಗೆ ಸುಲಭವಾಗಿ ಮಾಹಿತಿ ಪಡೆಯಬಹುದಾಗಿದೆ.

ಬ್ರ್ಯಾಂಡ್ ಕೈಪಿಡಿಗಳು

ಗ್ರಾಹಕ ವ್ಯವಹಾರಗಳ ಸಚಿವಾಲಯವು ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪೆನಿಗಳಿಗೆ ಬ್ರ್ಯಾಂಡ್ ಕೈಪಿಡಿಗಳು, ರಿಪೇರಿ ಶುಲ್ಕಗಳು, ಸೇವಾ ಕೇಂದ್ರಗಳು ಮತ್ತು ಇನ್ನಿತರೆ ವೆಚ್ಚದ ವಿವರಗಳನ್ನು ಒದಗಿಸಲು ಪತ್ರ ಬರೆದಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ಒಂದು ಮಾಡುವ ಸರ್ಕಾರದ ಈ ಯೋಜನೆಯಿಂದ ಇನ್ಮುಂದೆ ಗ್ರಾಹಕರು ಯಾವುದೇ ಗ್ಯಾಜೆಟ್‌ ಅನ್ನು ಭಯಮುಕ್ತತೆಯಿಂದ ಖರೀದಿ ಮಾಡಬಹುದು ಹಾಗೂ ಸುಲಭವಾಗಿ ರಿಪೇರಿ ಮಾಡಿಸಿಕೊಳ್ಳಬಹುದು.

LiFE ಆಂದೋಲನಕ್ಕೆ ಬೆಂಬಲ

LiFE ಆಂದೋಲನಕ್ಕೆ ಬೆಂಬಲ

ಸರ್ಕಾರದ ಈ ನಿರ್ಧಾರವು ಈ ವರ್ಷದ ಆರಂಭದಲ್ಲಿ ಘೋಷಣೆ ಮಾಡಿದ LiFE (ಪರಿಸರಕ್ಕನುಗುಣವಾಗಿ ಜೀವನಶೈಲಿ) ಆಂದೋಲನಕ್ಕೆ ಸಹಕಾರಿಯಾಗಿದೆ. ಈ ಲೈಫ್ ಆಂದೋಲನವು ಉತ್ಪನ್ನಗಳ ಮೇಲೆ ಗಮನ ಇಡುವುದು ಮತ್ತು ಉದ್ದೇಶಪೂರ್ವಕ ಬಳಕೆಗೆ ಕರೆ ನೀಡುವ ಬಗ್ಗೆ ಕೆಂದ್ರೀಕರಿಸುತ್ತದೆ. ಅಂತೆಯೇ ಸರ್ಕಾರದ ಈ ಪ್ಲ್ಯಾನ್‌ ಮೂಲಕ ಗ್ರಾಹಕರು ತಮ್ಮ ಪ್ರೊಡಕ್ಡ್‌ಗಳ ರಿಪೇರಿ ಹಕ್ಕನ್ನು ಪಡೆದುಕೊಂಡು ಯಾವುದೇ ಸಮಸ್ಯೆ ಇಲ್ಲದೆ ಸೇವೆ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತದೆ.

ಗ್ರಾಹಕರಿಗೆ ಕಿರುಕುಳ

ಗ್ರಾಹಕರಿಗೆ ಕಿರುಕುಳ

ಸಾಮಾನ್ಯವಾಗಿ ದುರಸ್ತಿಯಲ್ಲಿ ಸಾಕಷ್ಟು ವಿಳಂಬವಾಗುವುದು ಮಾತ್ರವಲ್ಲದೆ ಕೆಲವೊಮ್ಮೆ ಕೆಟ್ಟುಹೋದ ಪ್ರೊಡಕ್ಟ್‌ಗಳನ್ನು ಸರಿಮಾಡಲು ಹೆಚ್ಚಿನ ದರ ವಿಧಿಸಲಾಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಬಿಡಿ ಭಾಗಗಳು ನಮ್ಮಲ್ಲಿ ಇಲ್ಲ, ಅದಿಲ್ಲ, ಇದಿಲ್ಲ ಎಂದು ಹೇಳುವ ಮೂಲಕ ಗ್ರಾಹಕರಿಗೆ ಒಂದು ರೀತಿಯ ಕಿರುಕುಳವನ್ನು ಕಂಪೆನಿಗಳು ನೀಡುತ್ತಿವೆ ಎಂಬ ವಿಷಯವನ್ನೂ ಮನಗಂಡಿದೆ.

ಸರ್ಕಾರ ಸಮಿತಿ

ಈ ಎಲ್ಲಾ ಸಮಸ್ಯೆಗಳನ್ನು ಕ್ರೂಡೀಕರಿಸಿಕೊಂಡು ಸರ್ಕಾರ ಸಮಿತಿ ರಚಿಸಿದ್ದು, ಇದರಲ್ಲಿ ಗುರುತಿಸಲಾದ ಕ್ಷೇತ್ರಗಳಲ್ಲಿ ಕೃಷಿ ಉಪಕರಣಗಳು, ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು, ಬೆಲೆಬಾಳುವ ವಸ್ತುಗಳು ಹಾಗೂ ಆಟೋಮೊಬೈಲ್‌ಗಳು, ಆಟೋಮೊಬೈಲ್ ಟೂಲ್ಸ್‌ಗಳು ಸೇರಿವೆ.

ಬಳಕೆದಾರರಿಗೆ ಇದರಿಂದಾಗುವ ಅನುಕೂಲವೇನು?

ಬಳಕೆದಾರರಿಗೆ ಇದರಿಂದಾಗುವ ಅನುಕೂಲವೇನು?

ಈ ಪ್ರಕ್ರಿಯೆಯಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಗ್ರಾಹಕರು ಹಾಗೂ ಉತ್ಪನ್ನ ಖರೀದಿದಾರರನ್ನು ಸಬಲೀಕರಣಗೊಳಿಸುವುದು, ಮೂಲ ಉಪಕರಣ ತಯಾರಕರು ಮತ್ತು ಥರ್ಡ್‌ ಪಾರ್ಟಿ ಖರೀದಿದಾರರು ಹಾಗೂ ಮಾರಾಟಗಾರರ ನಡುವಿನ ವ್ಯಾಪಾರವನ್ನು ಸಮನ್ವಯಗೊಳಿಸುವುದು, ಉತ್ಪನ್ನಗಳ ಸುಸ್ಥಿರ ಬಳಕೆಯನ್ನು ಅಭಿವೃದ್ಧಿಪಡಿಸಲು ಮತ್ತು ಕಡಿಮೆಗೊಳಿಸುವುದಕ್ಕೆ ಸಹಕಾರ ನೀಡುವುದು ಇದರ ಉದ್ದೇಶವಾಗಿದೆ.

ಪ್ರೊಡಕ್ಟ್‌

ಇನ್ನು ಕೆಲವು ಕಂಪೆನಿಗಳು ಪ್ರೊಡಕ್ಟ್‌ ಜೊತೆಗೆ ರಿಪೇರಿ ಮಾಡಬಹುದಾದ ಕೈಪಿಡಿಯನ್ನು ನೀಡುವುದನ್ನೇ ನಿಲ್ಲಿಸಿವೆ. ಈ ವಿಷಯವನ್ನೂ ಸಹ ಸರ್ಕಾರ ಪರಿಗಣಸಿದ್ದು, ಇನ್ಮುಂದೆ ಕೈಪಿಡಿಯನ್ನು ಗ್ರಾಹಕರಿಗೆ ನೀಡಬೇಕು ಎಂದು ತಿಳಿಸಿದೆ. ಜೊತೆಗೆ ಡಯಾಗ್ನೋಸ್ಟಿಕ್ ಟೂಲ್‌ಗಳು ಸೇರಿದಂತೆ ಇತರೆ ಸರ್ವಿಸ್ ಡಿವೈಸ್‌ಗಳನ್ನು ಯಾವುದೇ ವ್ಯಕ್ತಿಗಳನ್ನು ಒಳಗೊಂಡಂತೆ ಥರ್ಡ್‌ ಪಾರ್ಟಿಗೂ ಲಭ್ಯವಾಗುವಂತೆ ಮಾಡಬೇಕು, ಇದರಿಂದ ಸಣ್ಣ ಸಮಸ್ಯೆಗಳು ಕಂಡುಬಂದರೆ ಸುಲಭವಾಗಿ ಸರಿಪಡಿಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.

Best Mobiles in India

Read more about:
English summary
When you buy any gadget, it comes with a warranty card, but it is very difficult to get it repaired. For this, government has come up with a new plan.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X