ಭಾರತದ ಐಫೋನ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌! ಸದ್ಯದಲ್ಲೇ ಸಿಗಲಿದೆ ಈ ಅಪ್ಡೇಟ್‌!

|

ಭಾರತದ ಪ್ರಮುಖ ನಗರಗಳಲ್ಲಿ ಈಗಾಗಲೇ 5G ನೆಟ್‌ವರ್ಕ್‌ ಲಭ್ಯವಾಗ್ತಿದೆ. ಇದರಲ್ಲಿ ಏರ್‌ಟೆಲ್‌ ಮತ್ತು ರಿಲಯನ್ಸ್‌ ಜಿಯೋ ಟೆಲಿಕಾಂಗಳು ದೇಶಾದ್ಯಂತ 5G ಸೇವೆ ಪರಿಚಯಿಸಲು ಕಾರ್ಯನಿರ್ವಹಿಸುತ್ತಿವೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ದೇಶಾದ್ಯಂತ 5G ಸೇವೆ ಲಭ್ಯವಾಗುವ ಸಾಧ್ಯತೆಯಿದೆ. ಸದ್ಯ ಇದೀಗ 5G ಲಭ್ಯವಿರುವ ನಗರಗಳಲ್ಲಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು 5G ಸೇವೆ ಬಳಸುತ್ತಿದ್ದಾರೆ. ಆದರೆ ಇಂದಿಗೂ ಕೂಡ ಆಪಲ್‌ ಐಫೋನ್‌ ಬಳಕೆದಾರರು 5G ಸೇವೆ ಪಡೆಯಲು ಸಾಧ್ಯವಾಗಿಲ್ಲ.

ಭಾರತದಲ್ಲಿ

ಹೌದು, ಭಾರತದಲ್ಲಿ 5G ಸೇವೆಗೆ ಪ್ರವೇಶ ಪಡೆಯಲು ಆಪಲ್‌ ಐಫೋನ್‌ಗಳಿಗೆ ಇನ್ನು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಭಾರತದ 5Gಗೆ ಬೇಕಾದ ಸಾಫ್ಟ್‌ವೇರ್‌ ಅಪ್ಡೇಟ್‌ ಇನ್ನು ಕೂಡ ಆಪಲ್‌ ಐಫೋನ್‌ಗಳು ಪಡೆದಿಲ್ಲ. ಆದರೆ ಭಾರತದಲ್ಲಿ ಐಫೋನ್‌ ಬಳಕೆದಾರರು iOS 16.2 ಅಪ್‌ಡೇಟ್‌ನೊಂದಿಗೆ 5G ಬೆಂಬಲವನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಆಪಲ್‌ ಕಂಪೆನಿ ದೃಢಪಡಿಸಿದೆ. ಹಾಗಾದ್ರೆ ಆಪಲ್‌ ಐಫೋನ್‌ಗಳು ಭಾರತದಲ್ಲಿ 5G ಸೇವೆ ಪಡೆಯುವುದು ಯಾವಾಗ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರವೇಶವನ್ನು

ಆಪಲ್‌ ಐಫೋನ್‌ ಬಳಕೆದಾರರು ಭಾರತದಲ್ಲಿ ಶೀಘ್ರದಲ್ಲೇ 5G ಸೇವೆಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಭಾರತದ 5Gಗೆ ಸೂಕ್ತವಾದ ಅಪ್ಡೇಟ್‌ ಅನ್ನು iOS 16.2 ನಲ್ಲಿ ನೀಡುವುದಾಗಿ ಆಪಲ್‌ ಹೇಳಿಕೊಂಡಿದೆ. ಇದಕ್ಕಾಗಿ ಈಗಾಗಲೇ iOS 16.2 ಬೀಟಾ ಪರೀಕ್ಷಕರಿಂದ ಉತ್ತಮವಾದ ಪ್ರತಿಕ್ರಿಯೆಯನ್ನು ಕೂಡ ಪಡೆದಿದೆ. ಅಲ್ಲದೆ ಆಪಲ್‌ ಐಫೋನ್‌ ಬಳಕೆದಾರರು ಭಾರತದಲ್ಲಿ ಅತಿವೇಗದ ಡೌನ್‌ಲೋಡ್‌ಗಳು ಮತ್ತು ಅಪ್‌ಲೋಡ್‌ಗಳು, ಉತ್ತಮ ಸ್ಟ್ರೀಮಿಂಗ್ ಮತ್ತು 5G ಯೊಂದಿಗೆ ರಿಯಲ್‌ ಟೈಂ ಕನೆಕ್ಟಿವಿಟಿ ಪಡೆಯುವುದಕ್ಕೆ ಅನುಕೂಲ ಮಾಡಿಕೊಡಲಿದೆ.

ಭಾರತದ

ಭಾರತದ 5G ಸೇವೆ ಮೂಲಕ ಇನ್ನಷ್ಟು ಅತ್ಯುತ್ತಮವಾದ ಅನುಭವವನ್ನು ನೀಡಲು ಆಪಲ್‌ ಕಂಪೆನಿ ಮುಂದಾಗಿದೆ. ಇನ್ನು ಐಫೋನ್‌ನಲ್ಲಿ 5G ಬೆಂಬಲವನ್ನು ಪಡೆಯುವ ಮೂಲಕ ಪ್ರಪಂಚದಾದ್ಯಂತ 70 ಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ 250 ಕ್ಕೂ ಹೆಚ್ಚು ವಾಹಕ ಪಾಲುದಾರಿಕೆಯನ್ನು ಹೊಂದಿದೆ. ಸದ್ಯ ಆಪಲ್‌ ಕಂಪನಿಯು ಐಒಎಸ್ 16.2 ರ ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡಿದೆ, ಇದು 5G ಸೇರಿದಂತೆ ಹಲವು ಫೀಚರ್ಸ್‌ಗಳು ಮತ್ತು ಅಪ್ಡೇಟ್‌ಗಳನ್ನು ಪಡೆದುಕೊಂಡಿದೆ. ಸದ್ಯ ಬೀಟಾ ಪ್ರೋಗ್ರಾಂ ಚಂದಾದಾರರು ಮಾತ್ರ ಇತ್ತೀಚಿನ iOS 16.2 ಅಪ್‌ಡೇಟ್‌ಗೆ ಪ್ರವೇಶವನ್ನು ಪಡೆಯಬಹುದಾಗಿದೆ.

ಭಾರತದಲ್ಲಿ 5G ಬೆಂಬಲಿಸುವ ಆಪಲ್‌ ಐಫೋನ್‌ಗಳ ಪಟ್ಟಿ ಇಲ್ಲಿದೆ

ಭಾರತದಲ್ಲಿ 5G ಬೆಂಬಲಿಸುವ ಆಪಲ್‌ ಐಫೋನ್‌ಗಳ ಪಟ್ಟಿ ಇಲ್ಲಿದೆ

ಐಫೋನ್ 14
ಐಫೋನ್ 14 ಪ್ಲಸ್
ಐಫೋನ್ 14 ಪ್ರೊ
ಐಫೋನ್ 14 ಪ್ರೊ ಮ್ಯಾಕ್ಸ್‌
ಐಫೋನ್ 13
ಐಫೋನ್ 13 ಮಿನಿ
ಐಫೋನ್ 13 ಪ್ರೊ
ಐಫೋನ್ 13 ಪ್ರೊ ಮ್ಯಾಕ್ಸ್‌
ಐಫೋನ್ 12
ಐಫೋನ್ 12 ಮಿನಿ
ಐಫೋನ್ 12 ಪ್ರೊ
ಐಫೋನ್‌ 12 ಪ್ರೊ ಮ್ಯಾಕ್ಸ್‌
ಐಫೋನ್ SE (3ನೇ ತಲೆಮಾರಿನ)

ಐಒಎಸ್

ಇದೀಗ ಐಒಎಸ್ 16.2 ಬೀಟಾ ಅಪ್‌ಡೇಟ್ ಬಿಡುಗಡೆಗೊಂಡಿರುವುದರಿಂದ, ಸದ್ಯದಲ್ಲೇ ಇದರ ಸ್ಥಿರ ಆವೃತ್ತಿ ಎಲ್ಲರಿಗೂ ಲಭ್ಯವಾಗಲಿದೆ. ಆದರಿಂದ ಮುಂದಿನ ದಿನಗಳಲ್ಲಿ ಆಪಲ್‌ ಐಫೋನ್‌ ಬಳಕೆದಾರರು ಭಾರತದ 5G ಬೆಂಬಲ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿದ ನಂತರ ಐಫೋನ್‌ ಬಳಕೆದಾರರು ಸೆಟ್ಟಿಂಗ್ಸ್‌ ಮೆನು > ಸಾಫ್ಟ್‌ವೇರ್ ಅಪ್ಡೇಟ್‌ > ಅಪ್ಡೇಟ್‌ಗಾಗಿ ಪರಿಶೀಲಿಸಿ ಮತ್ತು ಅದನ್ನು ನಿಮ್ಮ ಐಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಬೇಕಾಗುತ್ತದೆ. ಇನ್ನು ಐಫೋನ್‌ನಲ್ಲಿ iOS 16.2 ಅಪ್‌ಡೇಟ್ ಇನ್‌ಸ್ಟಾಲ್‌ ಮಾಡುವಾಗ ಸೂಕ್ತವಾದ ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಮಾಡುವುದನ್ನು ಖಚಿತಪಡಿಸಿಕೊಳ್ಳಿ.

Best Mobiles in India

Read more about:
English summary
Indian iPhone users get to use 5G with the upcoming iOS 16.2

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X